MAP

The College of Cardinals gathered for the fifth Novemdiales Mass for the late MAP Francis The College of Cardinals gathered for the fifth Novemdiales Mass for the late MAP Francis  (AFP or licensors)

'ಕಾರ್ಡಿನಲ್‌ಗಳಿಗೆ, ಪ್ರತಿಯೊಬ್ಬರ ವಿನಮ್ರ ಮತ್ತು ಪ್ರಾರ್ಥನೆಗಳು ಬೇಕು'

ಕಾರ್ಡಿನಲ್ಸ್ ಗಳ ಒಕ್ಕೂಟ ಮುಂದಿನ ವಿಶ್ವಗುರುವಿಗಾಗಿ ಎಲ್ಲಾ ಕಥೊಲಿಕರಿಂದ ಪ್ರಾರ್ಥನೆಗಳನ್ನು ಕೋರುತ್ತಿರುವಾಗ, ಡೊಮಿನಿಕನ್ ಧರ್ಮಗುರುವಾದ ಸಿಲ್ವೈನ್ ಡೆಟಾಕ್ ರವರು ಧರ್ಮಸಭೆಯ ಪ್ರಾರ್ಥನೆಯ ಶಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ, ವಿಶೇಷವಾಗಿ ಪವಿತ್ರಾತ್ಮವು ಹೊಸ ದಿಗಂತಗಳನ್ನು ತೆರೆಯಲು ಪ್ರಯತ್ನಿಸುವ ಕ್ಷಣಗಳಲ್ಲಿ ಧರ್ಮಸಭೆಯ ಪ್ರಾರ್ಥನೆಯ ಶಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ.

ಡೆಲ್ಫಿನ್ ಅಲೈರ್

"ನನಗಾಗಿ ಪ್ರಾರ್ಥಿಸಲು ಮರೆಯಬೇಡಿ" ಎಂಬ ಮಾತುಗಳೊಂದಿಗೆ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಯಾವಾಗಲೂ ತಮ್ಮ ಬೋಧನೆಗಳನ್ನು ಮತ್ತು ವಿವಿಧ ಭಾಷಣಗಳನ್ನು ಮುಗಿಸುತ್ತಿದ್ದರು.

ಸಮಾವೇಶ ಪ್ರಾರಂಭವಾಗುವ ಏಳು ದಿನಗಳ ಮುಂಚೆ, ಮೇ 1ರ ಮುನ್ನಾದಿನ ಮತ್ತುಮಾತೆ ಮೇರಿಯ ತಿಂಗಳ ಆರಂಭದಲ್ಲಿ, ಕಾರ್ಡಿನಲ್ಸ್ ಒಕ್ಕೂಟವು ಮುಂದಿನ ವಿಶ್ವಗುರುವನ್ನು ಆಯ್ಕೆ ಮಾಡುವಲ್ಲಿ ತಮ್ಮ ವಿವೇಚನೆಗಾಗಿ ಪ್ರಾರ್ಥಿಸಲು ಭಕ್ತವಿಶ್ವಾಸಿಗಳನ್ನು ಆಹ್ವಾನಿಸುವ ಘೋಷಣೆಯನ್ನು ಬಿಡುಗಡೆ ಮಾಡಿತು.

ಸೆದೆ ವೆಕ್ಯಾಂತೆ ಅಥವಾ ಇಂಟರ್ರೆಗ್ನಮ್ ಅವಧಿಯಲ್ಲಿ ಅಪೋಸ್ಟೋಲಿಕ್ ಸೇವಾಧಿಕಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಡಿನಲ್ಸ್, ಪ್ರಾರ್ಥನೆಯನ್ನು "ಕ್ರಿಸ್ತರ ಒಂದೇ ದೇಹದಲ್ಲಿ ಎಲ್ಲಾ ಸದಸ್ಯರ ಏಕತೆಯನ್ನು ಬೆಳೆಸುವ" ಸಾಮರ್ಥ್ಯವಿರುವ "ನಿಜವಾದ ಶಕ್ತಿ" ಎಂದು ವಿವರಿಸುತ್ತಾರೆ.

ರೋಮ್ ಮತ್ತು ಟೌಲೌಸ್‌ನಲ್ಲಿ ಫ್ರೆಂಚ್ ಮೂಲದ ದೈವಶಾಸ್ತ್ರದ ಪ್ರಾಧ್ಯಾಪಕರಾದ ಧರ್ಮಗುರು ಸಿಲ್ವೈನ್ ಡೆಟೋಕ್, OP, ಕಾರ್ಡಿನಲ್ಸ್‌ನ ಆಹ್ವಾನ ಮತ್ತು ಸಾರ್ವತ್ರಿಕ ಧರ್ಮಸಭೆಯ ಪ್ರಾರ್ಥನೆಗಾಗಿ ಅವರ ಅಗತ್ಯತೆಯ ಬಗ್ಗೆ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿದರು.

ಪ್ರಶ್ನೆ: ಈ ಕ್ಷಣದಲ್ಲಿ ಎಲ್ಲಾ ಭಕ್ತವಿಶ್ವಾಸಿಗಳ ಸಾಮೂಹಿಕ ಪ್ರಾರ್ಥನೆಯು ಧರ್ಮಸಭೆಯ ಐಕ್ಯತೆಯನ್ನು ಹೇಗೆ ಬೆಳೆಸುತ್ತದೆ?
ಧರ್ಮಸಭೆಯನ್ನು ಜೀವಂತಗೊಳಿಸುವ ಪವಿತ್ರಾತ್ಮದಲ್ಲಿ ಏಕತೆಯು ತನ್ನ ಮೂಲವನ್ನು ಕಂಡುಕೊಳ್ಳುತ್ತದೆ. ಪವಿತ್ರಾತ್ಮರು ಧರ್ಮಸಭೆಯಲ್ಲಿ ಇಲ್ಲದಿದ್ದರೆ, ನಾವು ಒಂದು ರೀತಿಯ NGOಗಳು ಆಗಿರುತ್ತಿದ್ದೆವು. ವಿಶ್ವಗುರು ಫ್ರಾನ್ಸಿಸ್ ರವರು ಇದನ್ನು ಆಗಾಗ್ಗೆ ಒತ್ತಿ ಹೇಳುತ್ತಿದ್ದರು.

ಹೆಚ್ಚೆಂದರೆ, ಒಳ್ಳೆಯದನ್ನು ಮಾಡುವ ಸರ್ಕಾರೇತರ ಸಂಸ್ಥೆ; ಕೆಟ್ಟದ್ದಾದರೆ, ಅದು ಮಾಡುವುದಿಲ್ಲ. ಆದರೆ ಇನ್ನೇನೂ ಇರುವುದಿಲ್ಲ, ನಾವು ಭೇದಿಸಲು ಸಾಧ್ಯವಾಗದ ಒಂದು ರೀತಿಯ ಗಾಜಿನ ಛಾವಣಿ.

ಪವಿತ್ರಾತ್ಮರೇ ನಮ್ಮನ್ನು ಮೇಲಿನ ಸ್ವರ್ಗಲೋಕದೆಡೆಗೆ ಕಡೆಗೆ, ಪ್ರಭುದೇವರ ಲೋಕದ ಕಡೆಗೆ, ದೇವರ ಲೋಕದ ಕಡೆಗೆ ಸೆಳೆಯುವವರಾಗಿದ್ದಾರೆ. ಧರ್ಮಸಭೆಗೆ ಅದರ ಏಕತೆಯನ್ನು ನೀಡುವವರೇ ಅವರು. ನಾವು ಪ್ರಾರ್ಥಿಸುವಾಗ, ಆ ಏಕತೆಯನ್ನು ಸ್ವೀಕರಿಸಲು ನಾವು ನಮ್ಮನ್ನುಆವರಿಸಲು ನಮ್ಮನ್ನು ನಾವು ಆ ಪವಿತ್ರಾತ್ಮರಿಗೆ ನಮ್ಮ ಜೀವನವನ್ನು ತೆರೆದಿಡುತ್ತೇವೆ.

ಪೇತ್ರರ ಹೊಸ ಉತ್ತರಾಧಿಕಾರಿಯ ಚುನಾವಣೆಯ ಘಟನೆಯನ್ನು ನಾವು ಲೌಕಿಕ ಮನೋಭಾವದಿಂದ, ಅಂದರೆ, ತೀರಾ ಮಾನವೀಯವಾದ, ವ್ಯಾಖ್ಯಾನ ಮತ್ತು ಹರಟೆಯಿಂದ ತುಂಬಿರುವ ಮನೋಭಾವದಿಂದ, ಸಮೀಪಿಸಿದರೆ, ಈ ಘಟನೆಯು ನಂಬಿಕೆಯಿಂದ ಸ್ವೀಕರಿಸಲು ನಮ್ಮನ್ನು ಆಹ್ವಾನಿಸುವ ಅಲೌಕಿಕ ಆಯಾಮವನ್ನು ನಾವು ಕಳೆದುಕೊಳ್ಳುವ ಅಪಾಯವಿದೆ.

ಪವಿತ್ರಾತ್ಮರು ನಮ್ಮನ್ನು ಪರಸ್ಪರ ಸಾಮರಸ್ಯಕ್ಕೆ ತರುವ ವಾಹಕರಾಗಿದ್ದು, ಈ ಸರ್ವಾನುಮತದ ಪ್ರಾರ್ಥನೆಯಲ್ಲಿ ನಮ್ಮನ್ನು ಒಂದುಗೂಡಿಸುತ್ತದೆ. ಮೇಲಿನ ಕೋಣೆಯಲ್ಲಿ ಅಪೊಸ್ತಲರು, ಅವರಿಗಾಗಿ, ಅವರಲ್ಲಿ ಮತ್ತು ಅವರ ಮೂಲಕ ಪವಿತ್ರಾತ್ಮದ ಕೆಲಸವನ್ನು ಸ್ವಾಗತಿಸಲು ಒಂದೇ ಹೃದಯದಿಂದ ಪ್ರಾರ್ಥಿಸುತ್ತಿರುವುದನ್ನು ನಾವು ನೆನಪಿಸಿಕೊಳ್ಳುತ್ತೇವೆ.

ಈಗ ರೋಮ್‌ನಲ್ಲಿ ಒಟ್ಟುಗೂಡಿರುವ ಅಪೊಸ್ತಲರ ಉತ್ತರಾಧಿಕಾರಿಗಳು ಇದೇ ಪ್ರಕ್ರಿಯೆಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ನಾಯಕನನ್ನು ಆಯ್ಕೆ ಮಾಡುವುದು ಕೇವಲ ಮಾನವ ವಿಷಯವಲ್ಲ. ಇದು ನಮ್ಮನ್ನು ಮೀರಿಸುವ ದೈವೀ ಕಾರ್ಯವಾಗಿದೆ, ನಮ್ಮ ಮೇಲಿನಿಂದ, ನಮ್ಮಾಚೆಗೆ ಬರುವ ಕೆಲಸಕ್ಕೆ ಹೃದಯದ ತೆರೆಯುವಿಕೆ ಅವಶ್ಯಕತೆಯಿದೆ. ನಾವು ಈ ಅಲೌಕಿಕ ಕೆಲಸವನ್ನು ಸ್ವೀಕರಿಸುತ್ತಿದ್ದೇವೆಯೇ? ಅದು ಕಾರ್ಯಾಚರಣೆಯಾಗಲು ನಾವು ಸಿದ್ಧರಿದ್ದೇವೆಯೇ?
ಪ್ರಾರ್ಥನೆಗೆ ಕರೆ ನೀಡುವಾಗ, ಕಾರ್ಡಿನಲ್ಸ್ ಧರ್ಮಸಭೆಯ ಜೀವಂತ ದೇಹದ ಪೌಲೀನ್ ರೂಪಕವನ್ನು ಬಳಸುತ್ತಾರೆ. ಧರ್ಮಸಭೆಯು ಒಂದು ಜೀವಂತ ದೇಹ. ಪ್ರಸ್ತುತ ಕಾರ್ಡಿನಲ್ಸ್ ಒಕ್ಕೂಟದಿಂದ ಶ್ರೇಷ್ಠ ರೀತಿಯಲ್ಲಿ ಪ್ರತಿನಿಧಿಸಲ್ಪಡುವ ಧರ್ಮಸಭೆಯ ಮ್ಯಾಜಿಸ್ಟೀರಿಯಂನ ಒಂದು ಪ್ರಮುಖ ಅಂಗವಾಗಿದೆ. ಪ್ರಮುಖ ಅಂಗಗಳೆಂದರೆ ದೇಹವಲ್ಲ, ಆದರೆ ಅವು ಅದರ ಸೇವೆಯಲ್ಲಿವೆ.

ಅಸಾಧಾರಣವಾದ ಸುಂದರವಾದ ಸಂಗತಿಯೆಂದರೆ, ಅತ್ಯಂತ ನಿರ್ಣಾಯಕವಾದ ಪ್ರಮುಖ ಅಂಗಗಳಲ್ಲಿ ಒಂದು ಈಗ ಇಡೀ ದೇಹಕ್ಕೆ, ಅದರ ಎಲ್ಲಾ ಜೀವಕೋಶಗಳಿಗೆ, "ನಮಗೆ ಎಲ್ಲರೂ ಬೇಕು, ನಮಗೆ ಎಲ್ಲರ ಪ್ರಾರ್ಥನೆ ಬೇಕು" ಎಂದು ಹೇಳುತ್ತಿದೆ. ಪವಿತ್ರಾತ್ಮರು ಧರ್ಮಸಭೆಗಾಗಿ, ಧರ್ಮಸಭೆಯ ಮೂಲಕ, ಧರ್ಮಸಭೆಯಲ್ಲಿ ಸಾಧಿಸಲು ಬಯಸುವ ಕೆಲಸದ ಸುತ್ತಲೂ ನಮಗೆ ಇಡೀ ದೇಹವು ಒಂದಾಗಬೇಕಾಗಿದೆ.

ಪ್ರಶ್ನೆ: ಕಾರ್ಡಿನಲ್ಸ್ ಮುಂದಿರುವ ಕಾರ್ಯದ ತೂಕ ಮತ್ತು ಭವ್ಯತೆಯನ್ನು ಎದುರಿಸುವಾಗ, ದೇವರ ಜನರ ಪ್ರಾರ್ಥನೆಯು ಹೇಗೆ ನಮ್ರತೆಯ ಕ್ರಿಯೆಯಾಗಿದೆ?
ನಿಮ್ಮ ಪ್ರಶ್ನೆಯು ದೈವಾರಾಧನಾ ವಿಧಿಯ ಪಂಚಾಂಗವು ಎಷ್ಟು ಸೂಕ್ತವಾಗಿದೆ ಎಂದು ನನಗೆ ಯೋಚಿಸುವಂತೆ ಮಾಡುತ್ತದೆ. ಯಾವುದೇ ಕಾಕತಾಳೀಯತೆಗಳಿಲ್ಲ. ನಾವು ಈಸ್ಟರ್ ನಂತರದ ದೈವಾರಾಧನಾ ವಿಧಿಯ ಸಾಧಾರಣ ಕಾಲದಲ್ಲಿದ್ದೇವೆ, ಯೇಸುವಿನ ಪುನರುತ್ಥಾನದ ನಂತರ ಅಪೊಸ್ತಲರು ಇನ್ನೂ ಒಂದು ರೀತಿಯ ಗೊಂದಲದಲ್ಲಿದ್ದರು, ಅವರಿಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಅವರು ತಡಕಾಡುತ್ತಿದ್ದರು.

ಪುನರುತ್ಥಾನ ಮತ್ತು ಸ್ವರ್ಗಾರೋಹಣದ ನಂತರ, ಮಾತೆಮೇರಿಯು ಪ್ರೇಷಿತರೊಂದಿಗೆ ಇದ್ದರು. ಮಾತೆಮೇರಿಯು ಅವರೊಂದಿಗೆ ಪ್ರಾರ್ಥಿಸುತ್ತಾರೆ. ಈ ಗುರುವಾರ, ನಾವು ಮಾತೆಮೇರಿಯ ತಿಂಗಳನ್ನು ಪ್ರಾರಂಭಿಸುತ್ತೇವೆ. ಈ ವಿಷಯ ಸಣ್ಣ ವಿಷಯವಲ್ಲ.

ಸರ್ವಾನುಮತದ ಪ್ರಾರ್ಥನೆಯಲ್ಲಿ, ಚಿಕ್ಕವರ ಪ್ರಾರ್ಥನೆ, ವಿನಮ್ರರ ಪ್ರಾರ್ಥನೆಯಲ್ಲಿ, ಒಟ್ಟಾಗಿ ಸೇರುವ ಅಗತ್ಯವನ್ನು ಧರ್ಮಸಭೆಯು ಗ್ರಹಿಸುತ್ತದೆ.

ಜನಪ್ರಿಯ ಸಂಪ್ರದಾಯದಲ್ಲಿ ವಿನಮ್ರರ ಪ್ರಾರ್ಥನೆಯ ಶಕ್ತಿಯನ್ನು ಎತ್ತಿ ತೋರಿಸುವ ಲೆಕ್ಕವಿಲ್ಲದಷ್ಟು ಉಪಾಖ್ಯಾನಗಳಿವೆ. ಪ್ರವಚನಪೀಠದಲ್ಲಿ ಒಬ್ಬ ಮಹಾನ್ ಧರ್ಮೋಪದೇಶಕನು ಭವ್ಯವಾದ ಪ್ರಬೋಧನೆಯನ್ನು ನೀಡುತ್ತಿರುವಂತೆ, ಜನರು ಮತಾಂತರಗೊಳ್ಳುತ್ತಿದ್ದಾರೆ ಮತ್ತು ಅವನು ತನ್ನ ಬಗ್ಗೆ ಹೆಮ್ಮೆಪಡುತ್ತಾನೆ. ಈ ಎಲ್ಲಾ ಯಶಸ್ಸಿಗೆ ಕಾರಣ ಧರ್ಮಪೀಠದ ಕೆಳಗೆ ತನ್ನ ಜಪಮಾಲೆಯನ್ನು ನಮ್ರತೆಯಿಂದ ಪ್ರಾರ್ಥಿಸುತ್ತಿರುವ ಪುಟ್ಟ ವೃದ್ಧ ಮಹಿಳೆ ಎಂದು ಪವಿತ್ರಾತ್ಮರು ಅವರಿಗೆ ತೋರಿಸುತ್ತದೆ.

ಪುಟ್ಟ ಮಕ್ಕಳ ಪ್ರಾರ್ಥನೆಯು ಧರ್ಮಸಭೆಯನ್ನು ಎತ್ತಿ ಹಿಡಿಯುತ್ತದೆ. ಪವಿತ್ರಾತ್ಮರ ಚಿತ್ತವನ್ನು ನಾವು ಧರ್ಮಸಭೆಗಾಗಿ ಸ್ವೀಕರಿಸಲು ಈ ಪ್ರಾರ್ಥನೆಗೆ ಎಲ್ಲರನ್ನೂ ಒಟ್ಟುಗೂಡಿಸುವುದು ಮುಖ್ಯ. ಇಂದು ಹೃದಯಗಳು ಮೃದುವಾಗಲಿ ಮತ್ತು ಪವಿತ್ರಾತ್ಮರು ಧರ್ಮಸಭೆಗೆ ಏನು ಹೇಳುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಲಿ.

ನಾವೀಗ ಈಸ್ಟರ್ ಕಾಲದಲ್ಲಿದ್ದೇವೆ, ಮತ್ತು ಆರಾಧನಾ ವಿಧಿಯು ಪ್ರಕಟನಾ ಗ್ರಂಥದ ಪುಸ್ತಕವನ್ನು ಧ್ಯಾನಿಸಲು ನಮ್ಮನ್ನು ಆಹ್ವಾನಿಸುತ್ತದೆ. ಪ್ರಕಟನಾ ಗ್ರಂಥದ ಪುಸ್ತಕದ ಆರಂಭದಲ್ಲಿ, ಪುನರುತ್ಥಾನಗೊಂಡ ಯೇಸು ಧರ್ಮಸಭೆಗಳಿಗೆ ಪವಿತ್ರಾತ್ಮರು ಏನು ಹೇಳುತ್ತಿದೆ ಎಂಬುದನ್ನು ಕೇಳಲು ಆಹ್ವಾನಿಸುವ ಅಸಾಧಾರಣ ಭಾಗಗಳಿವೆ.

ಇಂದು ಪವಿತ್ರಾತ್ಮರು ಧರ್ಮಸಭೆಗೆ ಏನು ಹೇಳುತ್ತಿದ್ದಾರೆ? ಎಲ್ಲಾ ಅಡ್ಡ ಪ್ರಶ್ನೆಗಳು ಕೇವಲ ಲೌಕಿಕ ಹರಟೆ. ಪ್ರಶ್ನೆ ಎಂದರೆ ಒಬ್ಬರು ಸಂಪ್ರದಾಯವಾದಿಯಾಗಬೇಕೇ ಅಥವಾ ಪ್ರಗತಿಪರರಾಗಬೇಕೇ ಎಂಬುದು ಅಲ್ಲ.

ಮುಖ್ಯವಾದ ಪ್ರಶ್ನೆಯೆಂದರೆ: ಪವಿತ್ರಾತ್ಮರು ಇಂದು ಅಪೊಸ್ತಲರ ಉತ್ತರಾಧಿಕಾರದ ಮೂಲಕ ಮಾನವೀಯತೆಗಾಗಿ ಏನನ್ನು ಸಾಧಿಸಲು ಬಯಸುತ್ತಾರೆ? ಧರ್ಮಸಭೆಯು ದೇವರಿಗಾಗಿ ಮಾಡಿದ ಮಾನವ ಯೋಜನೆಯಲ್ಲ. ಅದು ಮನುಷ್ಯರೊಳಗಿನಿಂದ ನಿರ್ವಹಿಸುವ ದೇವರ ಕೆಲಸ.
 

01 ಮೇ 2025, 12:59