MAP

Palm Sunday procession at Church of the Holy Sepulchre in Jerusalem Palm Sunday procession at Church of the Holy Sepulchre in Jerusalem  (ANSA)

ಮೂರನೇ ಥಿಯೋಫಿಲೋಸ್: ಏಕತೆ ಮತ್ತು ಶಾಂತಿಗೆ ಸಂಭಾಷಣೆಯೇ ಏಕೈಕ ಮಾರ್ಗ

ಜೆರುಸಲೇಮ್‌ನ ಸನಾತನ ಧರ್ಮದ ಪಿತಾಮಹ ಮೂರನೇ ಥಿಯೋಫಿಲೋಸ್‌ ರವರು, ಪೂರ್ವ ಮತ್ತು ಪಶ್ಚಿಮದ ಕ್ರೈಸ್ತರಿಗೆ ಒಂದೇ ದಿನ ಬರುವ ಈಸ್ಟರ್ 2025ರ ಆಚರಣೆಯ ಬಗ್ಗೆ ಧ್ಯಾನಿಸಲು ಕರೆ ನೀಡುತ್ತಾರೆ. ಪವಿತ್ರ ನಾಡಿನಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸಾಧಿಸಲು ಒಟ್ಟಾಗಿ ನಡೆಯಲು ಅವರು ಒತ್ತಾಯಿಸುತ್ತಾರೆ. ಅವರು ಬರೆಯುತ್ತಾರೆ, "ಒಂದು ಉತ್ತಮ ಅಡಿಪಾಯ ಹಾಕಲಾಗಿದೆ ಆದರೆ ಶಾಂತಿ ಮತ್ತು ಭದ್ರತೆಯನ್ನು ಸಾಧಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ದೇವರ ದೈವಾನುಗ್ರಹದಲ್ಲಿ ವಿಶ್ವಾಸವಿಟ್ಟು, ಖಾಲಿ ಸಮಾಧಿಯಲ್ಲಿ ನಮಗೆ ನೀಡಲಾಗಿರುವ ಅಜೇಯ ಭರವಸೆಯಲ್ಲಿ ನವೀಕೃತರಾಗಿ ನಾವು ಈ ಕಾರ್ಯದಲ್ಲಿ ಮುಂದುವರಿಯುತ್ತೇವೆ."

ಜೆರುಸಲೇಮ್‌ನ ಪಿತೃಪ್ರಧಾನ ಪರಮಪೂಜ್ಯರಾದ 3ನೇ ಥಿಯೋಫಿಲೋಸ್‌ ರವರು, ಈಸ್ಟರ್ ನ್ನು ಒಟ್ಟಿಗೆ ಆಚರಿಸುವ ಬಗ್ಗೆ

ಈ ವರ್ಷ ಪೂರ್ವ ಮತ್ತು ಪಶ್ಚಿಮದ ಕ್ರೈಸ್ತರು ಒಂದೇ ದಿನ ಈಸ್ಟರ್ ಹಬ್ಬವನ್ನು ಆಚರಿಸುತ್ತಾರೆ. ಈ ಜೋಡಣೆಯನ್ನು ನಾವು ಸುಮಾರು ಒಂದು ದಶಕದವರೆಗೆ ಮತ್ತೆ ನೋಡಲಾಗುವುದಿಲ್ಲ, ಆದ್ದರಿಂದ ಅದರ ಮಹತ್ವವನ್ನು ಧ್ಯಾನಿಸುವುದು ಅತಿಮುಖ್ಯವಾಗಿದೆ, ವಿಶೇಷವಾಗಿ ಪವಿತ್ರ ನಾಡಿನಲ್ಲಿರುವ ಕ್ರೈಸ್ತರಿಗೆ ಅದರ ಮಹತ್ವವನ್ನು ಧ್ಯಾನಿಸುವುದು ಅತಿಮುಖ್ಯವಾಗಿದೆ.

ಈ ವರ್ಷ ಕ್ರಿ.ಶ. 325 ರಲ್ಲಿ ನಡೆದ ನೈಸಿಯಾ ಮಹಾ ಪರಿಷತ್ತಿನ 1700 ನೇ ವಾರ್ಷಿಕೋತ್ಸವವೂ ಆಗಿದೆ, ಆಗ ನಮ್ಮ ಹಂಚಿಕೆಯ ವಿಶ್ವಾಸದ ಆಧಾರವನ್ನು ಈ ಪರಿಷತ್ತು ಘೋಷಿಸಿದ ವಿಶ್ವಾಸ ಪತ್ರದಲ್ಲಿ ಸ್ಪಷ್ಟಪಡಿಸಲಾಯಿತು.

ಪವಿತ್ರ ನಾಡಿಲ್ಲಿರುವ ಪೂರ್ವ ಮತ್ತು ಪಶ್ಚಿಮ ಕ್ರೈಸ್ತರಿಗೆ, ಈ ಸಂತೋಷದಾಯಕ ಆಚರಣೆಗಳ ವರ್ಷದಲ್ಲಿ, ನಾವು ನಮ್ಮ ಜೀವನದಲ್ಲಿ ನಾಲ್ಕು ಸಾಮಾನ್ಯ ಅಂಶಗಳನ್ನು ಹಂಚಿಕೊಳ್ಳುತ್ತೇವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.

ನಾವು ಈಸ್ಟರ್‌ ಹಬ್ಬದ ಸಾಮಾನ್ಯ ದಿನಾಂಕವನ್ನು ಹಂಚಿಕೊಳ್ಳುತ್ತೇವೆ. ಧರ್ಮಸಭೆಯ ಸಾಕ್ಷಿಗೆ ಇದು ಅತ್ಯಂತ ಮಹತ್ವದ್ದಾಗಿದೆ, ಇದರಿಂದ ಎಲ್ಲರೂ ಒಟ್ಟಾಗಿ ಈಸ್ಟರ್‌ ಹಬ್ಬವನ್ನು ಆಚರಿಸಬಹುದು, ಮತ್ತು ನಮ್ಮ ಹಬ್ಬಗಳ ಹಬ್ಬದ ಆಚರಣೆಯಲ್ಲಿ ಇತರರು ನಮ್ಮ ಸಾಮಾನ್ಯ ರಕ್ಷಣಾ ಯೋಜನೆಯನ್ನು ಮತ್ತು ನಮ್ಮ ಸಾಮಾನ್ಯ ಮಾನವ ಹಣೆಬರಹವನ್ನು ಕಾಣಬಹುದು. ಈ ಮಹಾನ್ ಹಬ್ಬವನ್ನು ನಾವು ಯಾವಾಗಲೂ ಒಟ್ಟಿಗೆ ಆಚರಿಸಲು, ಪ್ರತಿ ವರ್ಷ ಈಸ್ಟರ್‌ ಹಬ್ಬದ ಸಾಮಾನ್ಯ ದಿನಾಂಕವನ್ನು ಸ್ಥಾಪಿಸುವ ಪ್ರಯಾಣಕ್ಕೆ ನಾವು ಬದ್ಧರಾಗಿದ್ದೇವೆ.

ನಾವು ನೈಸೀಯಾ ವಿಶ್ವಾಸದಲ್ಲಿ ಸಾಮಾನ್ಯ ವಿಶ್ವಾಸವನ್ನು ಹಂಚಿಕೊಳ್ಳುತ್ತೇವೆ. ಶತಮಾನಗಳಿಂದ ಈ ನಂಬಿಕೆಯಲ್ಲಿ ಕೆಲವು ಮಾರ್ಪಾಡುಗಳು ಕಂಡುಬಂದಿದ್ದರೂ, ತ್ರಯೇಕ ದೇವರ ನೈಸೀಯ ವಿಶ್ವಾಸವು ಮತ್ತು ದೇವರ ಶಾಶ್ವತ ಆದಿಪದಗಳ ಅವತಾರದಲ್ಲಿ ವಿಶ್ವಾಸವಿಡುವ ಎಲ್ಲರನ್ನು ಒಂದುಗೂಡಿಸುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ನಮ್ಮ ವಿಶ್ವಾಸದ ಪೂರ್ಣ ಹೇಳಿಕೆಯಲ್ಲಿ ನಮ್ಮನ್ನು ಇನ್ನೂ ವಿಭಜಿಸುವ ಭಿನ್ನಾಭಿಪ್ರಾಯಗಳನ್ನು ಒಟ್ಟಾಗಿ ನಿವಾರಿಸಲು ನಾವು ನಮ್ಮ ಹಂಚಿಕೆಯ ದೈವಶಾಸ್ತ್ರದ ಸಂವಾದಕ್ಕೆ ಬದ್ಧರಾಗಿದ್ದೇವೆ.

ನಾವು ಸಾಮಾನ್ಯ ಪಾನಪಾತ್ರೆಯ ಪ್ರಯಾಣವನ್ನು ಹಂಚಿಕೊಳ್ಳುತ್ತೇವೆ, ಇದು ಪೂರ್ಣ ಪರಮಪ್ರಸಾದದ ಸಹಭಾಗಿತ್ವದ ಪ್ರಯಾಣವಾಗಿದೆ, ಅಂತಿಮವಾಗಿ ನಾವು ಕ್ರಿಸ್ತರ ದೇಹ ಮತ್ತು ರಕ್ತದ ಪವಿತ್ರ ಮತ್ತು ಜೀವ ನೀಡುವ ಪವಿತ್ರ ರಹಸ್ಯಗಳಲ್ಲಿ ಒಟ್ಟಿಗೆ ಪಾಲ್ಗೊಳ್ಳಬಹುದು. ನಮ್ಮ ಐಕ್ಯತೆಯು ಕ್ರಿಸ್ತರು ನಮಗಾಗಿ ಅನುಭವಿಸಿದ ಯಾತನೆಯ ಹಿಂದಿನ ರಾತ್ರಿಯ ಪ್ರಾರ್ಥನೆ ಸ್ವಂತ ಪ್ರಾರ್ಥನೆಯಾಗಿದೆ, ಮತ್ತು ದೈವಿಕ ರಹಸ್ಯಗಳ ಆಚರಣೆಯಲ್ಲಿ ನಮ್ಮನ್ನು ಒಟ್ಟುಗೂಡಿಸುವ ಸಾರ್ವತ್ರಿಕ ತೀರ್ಥಯಾತ್ರೆಗೆ ನಾವು ಬದ್ಧರಾಗಿರುತ್ತೇವೆ.

ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ನಮ್ಮ ಧರ್ಮಸಭೆಗಳ ಮುಖ್ಯಸ್ಥರಾಗಿ, ನಾವು ಶಾಂತಿಗಾಗಿ ಸಾಮಾನ್ಯ ಧ್ವನಿಯನ್ನು ಹಂಚಿಕೊಳ್ಳುತ್ತೇವೆ. ನಮ್ಮ ಪ್ರದೇಶದಲ್ಲಿ, ಸಿರಿಯಾ, ಲೆಬನಾನ್ ಮತ್ತು ಗಾಜಾದಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ ಮತ್ತು ಎಲ್ಲಾ ಹಿಂಸಾಚಾರ ಮತ್ತು ದ್ವೇಷವನ್ನು ಕೊನೆಗೊಳಿಸಲು, ಮಾನವೀಯ ನೆರವಿನ ತಕ್ಷಣದ ಮತ್ತು ಅಡೆತಡೆಯಿಲ್ಲದ ವಿತರಣೆಗೆ ಮತ್ತು ಎಲ್ಲಾ ಸೆರೆಯಾಳುಗಳ ಬಿಡುಗಡೆಗೆ ನಾವು ಕರೆ ನೀಡಿದ್ದೇವೆ.
 

19 ಏಪ್ರಿಲ್ 2025, 16:51