ಮಿಲಾನಿನ ಯುವಕ: ಕಾರ್ಲೋ ಅಕ್ಯುಟಿಸ್
ಕೀಲ್ಸ್ ಗುಸ್ಸಿ
ಮಿಲಾನಿನ ಯುವಕ, 15 ನೇ ವಯಸ್ಸಿನಲ್ಲಿ ಮರಣಹೊಂದಿದ ಮತ್ತು ಈಗ ಅಸ್ಸಿಸಿಯಲ್ಲಿ ತನ್ನ ಸ್ವೆಟ್‌ಶರ್ಟ್/ಅಂಗಿ ಮತ್ತು ಸ್ನೀಕರ್‌ಗಳಲ್ಲಿ/ಕ್ರೀಡಾ ಬೂಟುಗಳೊಂದಿಗೆ ಸಮಾಧಿ ಮಾಡಿದ ಕಥೆಯು ವಿಶ್ವದಾದ್ಯಂತ ತ್ವರಿತವಾಗಿ ಹರಡಿತು. ಅವರ ದೈನಂದಿನದ ದೈವಾರಾಧನಾ ವಿಧಿಯ ಹುಡುಕಾಟವು ಪವಾಡಗಳಿಗೆ ಮೀಸಲಾಗಿರುವ ಅವರ ವೆಬ್‌ಸೈಟ್‌ಗೆ, ಜನರು ತಾವು ಸಂಬಂಧಿಸಬಹುದಾದ ಯಾವುದನ್ನಾದರೂ ಹುಡುಕಲು ಸಾಧ್ಯವಾಗುತ್ತದೆ ಎಂದು ತೋರುತ್ತಿದೆ.
ಆದರೂ, ಜನರು ಅವರಿಗೆ ನೀಡಿದ ಈ ಪ್ರಸಿದ್ಧ ಶೀರ್ಷಿಕೆಗಳನ್ನು ಮೀರಿ, ಸ್ನೀಕರ್ಸ್‌ನಲ್ಲಿ ಸಂತ ಅಥವಾ ದೇವರ ಪ್ರಭಾವ ಕಾಣಬಹುದಾಗಿದೆ. ಹೊಸ ಸಾಕ್ಷ್ಯಚಿತ್ರವು ಯುವ ಕಾರ್ಲೋ ಅಕ್ಯುಟಿಸ್‌ನರವರ ಜೀವನದ ಮೇಲೆ ಬೆಳಕನ್ನು ಬೆಳಗಿಸಲು ಶ್ರಮಿಸುತ್ತದೆ.
ಸಂತರೂ ಮನುಷ್ಯರಾಗಿದ್ದರು
ವ್ಯಾಟಿಕನ್ ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ʻದಿ ಬಾಯ್ ಫ್ರಮ್ ಮಿಲನ್ʼ ಎಂಬ ಸಾಕ್ಷ್ಯಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಎಡ್ಮಂಡೊ ರೆಯೆಸ್ ರವರು, ಕಾರ್ಲೋರವರ ತಾಯಿ ಆಂತೋನಿಯಾರವರೊಂದಿಗಿನ ಸಂದರ್ಶನವನ್ನು ಚಿತ್ರೀಕರಿಸುತ್ತಿರುವಾಗ ಸಿಬ್ಬಂದಿಗೆ ಅವರನ್ನು ಸಂತರ ಪದವಿಗೇರಿಸುವ ಸುದ್ದಿ ನಿಮಗೆ ಹೇಗೆ ಬಂದಿತು ಎಂಬುದನ್ನು ವಿವರಿಸುತ್ತಾರೆ. "ನೀವು ಆಗಾಗ್ಗೆ ಸಂತರ ತಾಯಿಯೊಂದಿಗೆ ಮಾತನಾಡಲು ಬರುವುದಿಲ್ಲ,ಎಂದು ರೆಯೆಸ್ ರವರು ಉದ್ಗರಿಸುತ್ತಾರೆ, ಆ ಕ್ಷಣದಲ್ಲಿ ಪವಿತ್ರ ಪೀಠಾಧಿಕಾರಿಯಿಂದ ಕರೆಯನ್ನು ಸ್ವೀಕರಿಸಿದರು ಮತ್ತು ಅದನ್ನು ಸಿಬ್ಬಂದಿಯೊಂದಿಗೆ ಹಂಚಿಕೊಂಡರು.
ಕಾರ್ಲೋರವರನ್ನು ಈಗಾಗಲೇ ಸಂತರ ಮತ್ತು ಶೀಘ್ರದಲ್ಲೇ ಸಂತರ ಕಥೆಗಳನ್ನು ವಿವರಿಸುವ ಸಾಕ್ಷ್ಯಚಿತ್ರ ಸರಣಿಯಲ್ಲಿ ಮುಂದಿನ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಈ ಅಂಗೀಕೃತ ವ್ಯಕ್ತಿಗಳನ್ನು ಸಾಮಾನ್ಯವಾಗಿ ವೀರರಾಗಿ ಚಿತ್ರಿಸಲಾಗಿದ್ದರೂ, ಈ ಯೋಜನೆಯ ಹಿಂದಿನ ಕಲ್ಪನೆಯು ವಿಭಿನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಎಂದು ರೆಯೆಸ್ ರವರು ಹಂಚಿಕೊಳ್ಳುತ್ತಾರೆ.
ಅವರ ಪ್ರಕಾರ ಸಂತರನ್ನು "ಮನುಷ್ಯರನ್ನಾಗಿ ತೋರಿಸಲು ಬಯಸಿದ್ದರು, ಅವರನ್ನು ಮಾನವೀಕರಿಸಲು ಅಲ್ಲ, ಅವರು ಸಹ ಎಲ್ಲರಂತೆಯೇ ಬದುಕಿದ, ಕನಸು ಕಂಡ, ನಕ್ಕು ನಲಿದಾಡಿದ, ಅಳುವ ಮತ್ತು ಸಾಪೇಕ್ಷ ವ್ಯಕ್ತಿಗಳಾಗಿ ತೋರಿಸಲು" ಎಂದು ಅವರು ಹೇಳುತ್ತಾರೆ. ಆದ್ದರಿಂದ, ವೀಕ್ಷಕರೆ ಪಾವಿತ್ರ್ಯವು ಕೆಲವರಿಗೆ ಮಾತ್ರ ಅಲ್ಲ ಆದರೆ ಎಲ್ಲರಿಗೂ ಇರುತ್ತದೆ.
ತಾಯಿ, ಶಿಕ್ಷಕ ಮತ್ತು ವೈದ್ಯರು
ಇಟಾಲಿಯದ ಈ ಹದಿಹರೆಯದ ಸಂತನ ಪುಸ್ತಕಗಳು ಮತ್ತು ಇವರಿಗೆ ಸಂಬಂದಿಸಿದ ಕನಿಷ್ಠ ಒಂದು ಚಲನಚಿತ್ರವನ್ನು ಮಾಡಲಾಗಿದ್ದರೂ, ಈ ಸಾಕ್ಷ್ಯಚಿತ್ರವು ಆತನ ಕಥೆಯನ್ನು ಮೂರು ವಿಭಿನ್ನ ದೃಷ್ಟಿಕೋನಗಳಿಂದ ಹೇಳುತ್ತದೆ: ಅವನ ತಾಯಿ, ಅವನ ಶಿಕ್ಷಕ ಮತ್ತು ಅವನ ವೈದ್ಯರು. ಪ್ರತಿಯೊಂದನ್ನು ಆಯ್ಕೆಮಾಡಲಾಗಿದೆ ಏಕೆಂದರೆ ಅವರು ಕಾರ್ಲೋರವರ ಜೀವನದಲ್ಲಿ ಅವರ ಕೊಡುಗೆಯ ಒಂದು ನಿರ್ದಿಷ್ಟ ಅಂಶವನ್ನು ನೋಡುತ್ತಾರೆ.
ಮನೆಯಲ್ಲಿ ವಾಸಿಸುವ ಕಾರ್ಲೋರರು ತಮ್ಮ ದೈನಂದಿನದ ಅನಿಸಿಕೆಗಳನ್ನು ಹಾಗೂ ಒಳನೋಟಗಳನ್ನು ನೈಸರ್ಗಿಕ ಆಯ್ಕೆಯಾಗಿದ್ದ ಆತನ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಸಾಕ್ಷ್ಯಚಿತ್ರದಲ್ಲಿನ ಎರಡನೇ ವ್ಯಕ್ತಿ ಕಾರ್ಲೋನನ್ನು ತನ್ನ ಸ್ನೇಹಿತರೊಂದಿಗೆ ಮತ್ತು ಪೋಷಕರ ಮಾರ್ಗದರ್ಶನದಿಂದ ದೂರ ನೋಡುತ್ತಿದ್ದ-ಫ್ಯಾಬ್ರಿಜಿಯೋ ಜಗ್ಗಿಯಾ ಕಾರ್ಲೋರವರ ಪ್ರೌಢಶಾಲಾ ಧರ್ಮದ ಶಿಕ್ಷಕರಾಗಿದ್ದರು.
ಕಾರ್ಲೋ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ವಿಷಯಗಳು, ಝಗ್ಗಿಯಾರವರನ್ನು ವಿಭಿನ್ನವಾಗಿ ನೋಡಲು ಸಾಧ್ಯವಾಯಿತು" ಎಂದು ರೆಯೆಸ್ ಗಮನಸೆಳೆದರು ಮತ್ತು ಕಾರ್ಲೋನನ್ನು ದೈನಂದಿನ ಹದಿಹರೆಯದವನಂತೆ ಚಿತ್ರಿಸಿದ ಆ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕಾರ್ಲೋರವರು ಶಾಲೆಯಲ್ಲಿ ನೀಡಿದ ಕಾರ್ಯಯೋಜನೆಗಳನ್ನು ಮಾಡದೆ ಬಂದಾಗ ಜಗ್ಗಿಯಾರವರು ಏಕೆ ಎಂದು ಕೇಳಿದಾಗ, ಕಾರ್ಲೋರವರು ಮಾಡಲು ಹೆಚ್ಚು ಮುಖ್ಯವಾದ ಕೆಲಸಗಳಿದ್ದವು ಎಂದು ಹೇಳುತ್ತಿದ್ದರು. ಹದಿಹರೆಯದವರ ಮರಣ ಮತ್ತು ಬಡವರ ಆರೈಕೆಯಲ್ಲಿ ಅವರ ಕೆಲಸವು ಬೆಳಕಿಗೆ ಬಂದ ನಂತರವೇ ಕಾರ್ಲೋರವರ ಉತ್ತರದ ಅರ್ಥವನ್ನು ಝಗ್ಗಿಯಾರವರು ಅರ್ಥಮಾಡಿಕೊಂಡರು.
ಕಾರ್ಲೋ ಅವರ ಪ್ರಗತಿಯು ದೇವರಿಗೆ ಹತ್ತಿರ ಮತ್ತು ಹತ್ತಿರವಾಗುವುದನ್ನು ನಾವು ನೋಡಲು ಬಯಸಿದ್ದೇವೆ. ಲ್ಯುಕೇಮಿಯಾ ರೋಗನಿರ್ಣಯ ಮಾಡಿದ ನಂತರ ಮತ್ತು ಕೀಮೋಥೆರಪಿಯ ಮೂಲಕ ಬದುಕಿದ ನಂತರ ಆಕೆಯು ಕಾರ್ಲೋರವರ ಜೀವನವನ್ನು ನೋಡುತ್ತಾಳೆ. ವೈದ್ಯ ಮರ್ಸಿಡಿಸ್ ಈ ಸವಾಲಿನ ಸಮಯದಲ್ಲಿ "ಆತನು ಹೇಗೆ ನರಳಿದನು ಮತ್ತುಆತನು ಹೇಗೆ ಎಲ್ಲವನ್ನೂ ಪ್ರಭುವಿಗೆ ಅರ್ಪಿಸುತ್ತಿದ್ದನು ಮತ್ತು ದೇವರೊಂದಿಗಿನ ಆತನ ಸಂಬಂಧದಿಂದ ಬಂದ ಶಾಂತಿಯನ್ನು ಅವಳು ನೋಡಿದಳು".
ಅವರನ್ನು ಒಬ್ಬ ತಂತ್ರಜ್ಞಾನ -ಪ್ರೇಮಿ ಮತ್ತು ಸ್ನೀಕರ್ ಧರಿಸಿರುವ ಹದಿಹರೆಯದವರಿಗಿಂತ ಹೆಚ್ಚಾಗಿ, ಎಲ್ಲಾ ಸ್ಟೀರಿಯೊಟೈಪ್‌ಗಳ ಕೆಳಗೆ ಕಾರ್ಲೋರವರನ್ನು ನೋಡಲು ಸಾಕ್ಷ್ಯಚಿತ್ರವು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ರೆಯೆಸ್ ರವರು ಹೇಳುತ್ತಾರೆ. "ಸಾಕ್ಷ್ಯಚಿತ್ರದ ಬಗ್ಗೆ ಸುಂದರವಾದ ವಿಷಯವೆಂದರೆ ಅದು ಕಾರ್ಲೋರವರ ಜೀವನದ ಸಾರಕ್ಕೆ ಹತ್ತಿರವಾಗಿ ಚಿತ್ರಿಸುತ್ತದೆ: ಪರಮಪ್ರಸಾದದ ಮೇಲಿನ ಆತನ ಪ್ರೀತಿ, ಬಡವರ ಮೇಲಿನ ಅವನ ಪ್ರೀತಿ ಮತ್ತು ಅಗತ್ಯವಿರುವ ಎಲ್ಲ ಜನರಲ್ಲಿ ಕ್ರಿಸ್ತರನ್ನು ನೋಡುತ್ತಿದ್ದರು. ಅವರು ನಮ್ಮ ಕಾಲದಲ್ಲಿ ವಾಸಿಸುತ್ತಿದ್ದರು ... ಮತ್ತು ಕಾರ್ಲೋರವರ ಜೀವನವನ್ನು ನೋಡುವ ಮೂಲಕ, ದೇವರು ನಮಗೆ ಸ್ಫೂರ್ತಿ ನೀಡುವುದರ ಮೂಲಕ ನಾವು ಸಹ ದೇವರಿಂದ ಪವಿತ್ರತೆಗೆ ಕರೆಯಲ್ಪಟ್ಟಿದ್ದೇವೆ ಎಂದು ಪರಿಗಣಿಸಬೇಕಾಗಿದೆ.