MAP

Sister Norma Pimentel helping asylum seekers in need Sister Norma Pimentel helping asylum seekers in need  (2021 Getty Images)

ವಿಶ್ವಗುರು ಫ್ರಾನ್ಸಿಸ್ ರವರು 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬುದನ್ನು ಸ್ಮರಿಸಿದ ಸಿಸ್ಟರ್ ನಾರ್ಮಾ ಪಿಮೆಂಟೆಲ್

ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಸಿಸ್ಟರ್ ನಾರ್ಮಾ ಪಿಮೆಂಟೆಲ್ ರವರು ತಮ್ಮ ಆತ್ಮೀಯ ಸ್ನೇಹಿತ ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅಮೇರಿಕದ ಗಡಿಯಲ್ಲಿರುವ ದುರ್ಬಲ ಜನರಿಗೆ ಸಹಾಯ ಮಾಡುವ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಮತ್ತು ಅವರ ಮೇಲಿನ ದೇವರ ಅಪಾರ ಪ್ರೀತಿಯ ಬಗ್ಗೆ ಎಲ್ಲರಿಗೂ ಭರವಸೆ ನೀಡಲು ಅವರ ಹೃದಯಂತರಳಾದ ಮಾತುಗಳನ್ನು ಹೇಳುತ್ತಾರೆ.

ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

"ವಿಶ್ವಗುರು ಫ್ರಾನ್ಸಿಸ್ ರವರು ಮಾನವೀಯತೆಯನ್ನು ಉಳಿಸುವ ಜವಾಬ್ದಾರಿ ಮತ್ತು ಬದ್ಧತೆಯ ಪ್ರಜ್ಞೆಯನ್ನು ನಮಗೆ ನೀಡಿದ್ದಾರೆ, ಕಸದ ಬುಟ್ಟಿಗೆ ಹಾಕಲ್ಪಡುತ್ತಿರುವ, ದೂರ ತಳ್ಳಲ್ಪಡುತ್ತಿರುವ ಅಥವಾ ದೂರ ಸರಿಯುತ್ತಿರುವ ಅನೇಕರ ಪರವಾಗಿ ಮಾತನಾಡಲು ಮತ್ತು 'ಇಲ್ಲ' ಎಂದು ಹೇಳಲು ನಮಗೆ ಅವಕಾಶ ನೀಡಿದ್ದಾರೆ. ನಾವು ಜೀವನವನ್ನು ಗೌರವಿಸುವುದು, ಜನರನ್ನು ಗೌರವಿಸುವುದು ಮತ್ತು ದೇವರು ನಮಗೆ ಕೊಡುವುದನ್ನು ಸ್ವೀಕರಿಸುವವರಿಗೆ ಅರ್ಪಿಸುವುದು ಹೇಗೆ ಎಂದು ತಿಳಿದಿರಬೇಕು. ”

ಮೆಕ್ಸಿಕೋ-ಅಮೇರಿಕದ ಕಥೋಲಿಕ ಸನ್ಯಾಸಿನಿ ಮತ್ತು ಯೇಸುಸಭೆಯ ಧರ್ಮಪ್ರಚಾರಕರ ಸಭೆಯ ಸದಸ್ಯೆ, ಟೆಕ್ಸಾಸ್‌ನ ರಿಯೊ ಗ್ರಾಂಡೆ ಕಣಿವೆಯ ಕಥೋಲಿಕ ಚಾರಿಟೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ನಾರ್ಮಾ ಪಿಮೆಂಟೆಲ್ ರವರು, ಪರಮಪೂಜ್ಯ ತಂದೆಯ ಮರಣದ ನಂತರ ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಮ್ಮ ಕೆಲಸದಲ್ಲಿ, ಸಿಸ್ಟರ್ ನಾರ್ಮಾರವರು ಅಮೇರಿಕ-ಮೆಕ್ಸಿಕೋ ಗಡಿಯಲ್ಲಿ ವಲಸಿಗರಿಗೆ ಮಾನವೀಯ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಆಶ್ರಯ ಪಡೆಯುವ ಸಾವಿರಾರು ವಲಸಿಗರಿಗೆ ತುರ್ತು ಆಶ್ರಯ, ಆಹಾರ, ವೈದ್ಯಕೀಯ ಆರೈಕೆ ಮತ್ತು ಕಾನೂನು ನೆರವು ನೀಡುವುದು ಅವರ ಕೆಲಸದಲ್ಲಿ ಸೇರಿದೆ. ಅಂತಾರಾಷ್ಟ್ರೀಯವಾಗಿ ಸಕ್ರಿಯರಾಗಿದ್ದ ಅವರು, ಮೇ 2024ರಲ್ಲಿ ರೋಮ್‌ನಲ್ಲಿ ನಡೆದ ತಲಿತಾ ಕುಮ್ ಅವರ 2 ನೇ ಸಾರ್ವತ್ರಿಕ ಸಭೆಯಲ್ಲಿ ಪ್ರಮುಖ ಭಾಷಣ ಮಾಡಿದರು, ಮಾನವ ಕಳ್ಳಸಾಗಣೆ ಮತ್ತು ವಲಸಿಗರ ದುಃಸ್ಥಿತಿಯ ಕುರಿತು ತಮ್ಮ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಂಡರು.

ಸಂದರ್ಶನದಲ್ಲಿ, ಟೈಮ್ ನಿಯತಕಾಲಿಕೆಯ 2020ರ ಪತ್ರಿಕೆಗಳಲ್ಲಿ 100ರಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟ ಸಿಸ್ಟರ್ ಪಿಮೆಂಟೆಲ್, ಉತ್ತಮ ಸ್ನೇಹಿತರಾದ ವಿಶ್ವಗುರು ಫ್ರಾನ್ಸಿಸ್ ರವರು ತನ್ನ ಶ್ರೇಷ್ಠ ಸಲಹೆಗಾರರಲ್ಲಿ ಒಬ್ಬರಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಪ್ರಶ್ನೆ: ಸಿಸ್ಟರ್ ನಾರ್ಮಾರವರು, ಪರಮಪೂಜ್ಯ ತಂದೆಯ ಮರಣವನ್ನು ಶೋಕಿಸುತ್ತಿರುವ ಅನೇಕ ಜನರು ಇದ್ದಾರೆ, ಆದರೆ ನೀವು ವಿಶ್ವಗುರು ಫ್ರಾನ್ಸಿಸ್ ರವರೊಂದಿಗೆ ಸ್ವಲ್ಪ ವಿಶೇಷ ಸ್ನೇಹವನ್ನು ಹೊಂದಿದ್ದೀರಿ. ಅವರ ನಿಧನದ ಈ ಸಮಯದಲ್ಲಿ, ನಿಮ್ಮೊಂದಿಗಿರುವ ಅವರ ನೆನಪುಗಳು ಯಾವುವು?
ಈ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಇದು ನಿಜಕ್ಕೂ ತುಂಬಾ ದುಃಖದ ಸಮಯ, ಮತ್ತು ಅವರ ನಿಧನವು ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಏಕೆಂದರೆ ಅವರು ನಮಗೆಲ್ಲರಿಗೂ, ವಿಶೇಷವಾಗಿ ನನ್ನ ಜೀವನದಲ್ಲಿ ಅದ್ಭುತ ಉಪಸ್ಥಿತಿಯಾಗಿದ್ದರು. ಅವರು ಅಲ್ಲಿ ಬಹಳ ಸುಂದರವಾಗಿದ್ದರು, ನನ್ನನ್ನು ಪ್ರತ್ಯೇಕವಾಗಿರಿಸಿದರು, ದಕ್ಷಿಣ ಟೆಕ್ಸಾಸ್‌ನಲ್ಲಿ, ಅನೇಕರು ಒಟ್ಟಾಗಿ ಬಂದ ಕೆಲಸವನ್ನು ಗುರುತಿಸಿದರು ಮತ್ತು ಗಡಿಯಲ್ಲಿ ನಮ್ಮ ಸಮುದಾಯಕ್ಕೆ ಆಗಮಿಸುತ್ತಿದ್ದ ಅನೇಕ ವಲಸೆ ಕುಟುಂಬಗಳನ್ನು ಸ್ವಾಗತಿಸಿದರು. ಅವರು ಅದನ್ನು ನೋಡಿ, ಒಪ್ಪಿಕೊಂಡು, ಧನ್ಯವಾದ ಹೇಳಲು ಬಯಸಿದರು, ಧನ್ಯವಾದ ಮಾತ್ರವಲ್ಲ, ವಾಸ್ತವವಾಗಿ ನನಗೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದರು. 'ನಿಮಗೆ ತುಂಬಾ ಸಂತೋಷವಾಗಿದೆ.'... 'ನೀವು ಮಾಡುತ್ತಿರುವುದನ್ನು ಮುಂದುವರಿಸಿ'... 'ನೀವು ಅದ್ಭುತ'... 'ದಯವಿಟ್ಟು 'ನೀವು ಮಾಡುತ್ತಿರುವುದನ್ನು ಮುಂದುವರೆಸಿ.' ನೀವು ಬಯಸಿದರೆ… ಅದು ನನಗೆ ನ್ಯಾಯವೆನಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ನನ್ನ ಜೀವನದಲ್ಲಿ ಅವರ ಉಪಸ್ಥಿತಿಯು ಧೈರ್ಯವನ್ನು ಹೊಂದಲು, ಅದ್ಭುತ ಸ್ಫೂರ್ತಿಯಾಗಿತ್ತು. ಅವರ ಧೈರ್ಯದ ಮಾತುಗಳು, ಅವರ ಉಪಸ್ಥಿತಿ, ಜನರನ್ನು ಮುನ್ನಡೆಸುವ ಅವರ ನಾಯಕತ್ವ, ಧ್ವನಿಯಿಲ್ಲದವರಿಗೆ ಅವರು ಧ್ವನಿಯಾಗಿ ಮುಂದುವರಿಯುವ ಮೂಲಕ ಅವರು ನೋವು ಅನುಭವಿಸುತ್ತಿರುವ ದುರ್ಬಲ, ಮುಗ್ಧ, ಅತ್ಯಂತ ದುರ್ಬಲ ಜನರನ್ನು ಮುಂಚೂಣಿಗೆ ತರುತ್ತಾರೆ, ಇದರಿಂದ ಜನರು, ದುರ್ಬಲರನ್ನು ನೋಡಬಹುದು ಮತ್ತು ಅವರನ್ನು ಸ್ವೀಕರಿಸಬಹುದು, ಅವರಿಗೆ ಧ್ವನಿ ನೀಡಬಹುದು. ವಿಶ್ವಗುರು ಫ್ರಾನ್ಸಿಸ್ ರವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ಯಾವಾಗಲೂ ವಿಶೇಷವಾಗಿ ಆದ್ಯತೆ ನೀಡಿ ಸಂಭಾಷಿಸಿದ ವಿಷಯವಿದು.

ನನ್ನ ಜೀವನದಲ್ಲಿ ಅವರ ಉಪಸ್ಥಿತಿ ಇರುವುದು ತುಂಬಾ ಉತ್ತೇಜನಕಾರಿಯಾಗಿತ್ತು, ನಾನು ಇನ್ನೂ ಹೆಚ್ಚಿನದನ್ನು ಮಾಡುತ್ತೇನೆ ಮತ್ತು ಅವರ ಮಾದರಿಯನ್ನು ಅನುಸರಿಸುತ್ತೇನೆ ಎಂದು ನಾನು ನಂಬುತ್ತೇನೆ. ಅವರು ಯಾವಾಗಲೂ ತುಂಬಾ ವಿನಮ್ರರಾಗಿದ್ದರು ಮತ್ತು ಇಂದಿನ ನಮ್ಮ ಜಗತ್ತಿನ ಅತ್ಯಂತ ಮುಗ್ಧ ಮತ್ತು ದುರ್ಬಲ ಜನರಿಗೆ, ಬಡವರಿಗೆ ದಯೆ ತೋರುತ್ತಿದ್ದರು ಮತ್ತು ಅವರ ರಕ್ಷಣೆಗೆ ಸದಾ ಸಿದ್ದರಾಗಿದ್ದರು. ಇಂದು ನಮ್ಮ ಜಗತ್ತಿನಲ್ಲಿ ನೋವು ಅನುಭವಿಸುತ್ತಿರುವ ಅತ್ಯಂತ ದುರ್ಬಲ, ಮುಗ್ಧ ಜನರ ಜೀವವನ್ನು ರಕ್ಷಿಸಲು ಮತ್ತು ಆ ದುರ್ಬಲ ಜನರ ಪರವಾಗಿ ಧ್ವನಿಯೆತ್ತಲು ಮತ್ತು ತಮ್ಮ ಕೈಲಾದಷ್ಟು ಪ್ರಯತ್ನಿಸಲು ನಿರಂತರ ಪ್ರೋತ್ಸಾಹವನ್ನು ನಾನು ಅವರಲ್ಲಿ ಕಂಡೆ.

ಪ್ರಶ್ನೆ: ಸಿಸ್ಟರ್, ನೀವು ಬಯಸಿದರೆ, ನಿಮ್ಮ ಕೆಲಸದ ಬಗ್ಗೆ, ವಿಶ್ವಗುರು ಫ್ರಾನ್ಸಿಸ್ ರವರು ಇನ್ನೂ ಮುಂದೆ ನಿಮ್ಮೊಂದಿಗೆ, ನಿಮ್ಮ ಸೇವೆಯಲ್ಲಿ ಮೇಲಿನಿಂದ ಜೊತೆಗಿರುತ್ತಾರೆ ಎಂದು ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ವಿವರಿಸಬಹುದೇ?
ನಾನು ದಕ್ಷಿಣ ಟೆಕ್ಸಾಸ್‌ನಲ್ಲಿ ಅಮೇರಿಕ ಮತ್ತು ಮೆಕ್ಸಿಕೋದ ಗಡಿಯಲ್ಲಿದ್ದೇನೆ ಮತ್ತು ನಾನು ಇಲ್ಲಿ ಗಡಿಯಲ್ಲಿರುವುದರಿಂದ, ಪ್ರಪಂಚದ ಎಲ್ಲೆಡೆಯಿಂದ, ವಿಶೇಷವಾಗಿ ಇಲ್ಲಿಗೆ ಮಧ್ಯ ಅಮೇರಿಕದಿಂದ ವಲಸೆ ಬರುವ ಅನೇಕ ಕುಟುಂಬಗಳಿವೆ. ಇದು ಗ್ವಾಟೆಮಾಲಾ, ಹೊಂಡುರಾಸ್ ಮತ್ತು ಸಾಲ್ವದಾರ್‌ನಂತಹ ಮಧ್ಯ ಅಮೇರಿಕದ ಅನೇಕ ದೇಶಗಳೊಂದಿಗೆ ಪ್ರಾರಂಭವಾಯಿತು, ಹೀಗೆ ಅದು ಪ್ರಪಂಚದ ಇತರ ಭಾಗಗಳಿಂದ ಬಂದ ಅನೇಕ ಜನರಿಗೆ ನೆರವಾಗುವ ಕಾರ್ಯ ಮುಂದುವರಿಯಿತು.

ಆದರೆ ಇದು ವಾರಗಟ್ಟಲೆ ಮತ್ತು ಬಹುಶಃ ತಿಂಗಳುಗಳ ದೀರ್ಘ ಪ್ರಯಾಣದ ನಂತರ ಜನರು ಬರುತ್ತಿದ್ದ ಸ್ಥಳವಾಗಿತ್ತು. ಅವರು ಗಡಿಯನ್ನು ತಲುಪುವ ಹೊತ್ತಿಗೆ, ಅವರು ಸಹಾಯದ ಅಗತ್ಯವಿರುವ ಅತ್ಯಂತ ದುಃಖಕರ ಸ್ಥಿತಿಯಲ್ಲಿರುತ್ತಿದ್ದರು ಮತ್ತು ಅವರು ಅಮೇರಿಕಗೆ ಪ್ರವೇಶಿಸಿದಾಗ, ಅವರನ್ನು ಸತ್ಕರಿಸಲು ಗಡಿ ಗಸ್ತು ಇರುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ಅವರಿಗೆ ತಮ್ಮ ಪ್ರಯಾಣವನ್ನು ಮುಂದುವರಿಸಲು ಮತ್ತು ಅವರ ಸ್ಥಾನಮಾನವನ್ನು ಕಾನೂನುಬದ್ಧಗೊಳಿಸಲು ಹಾಗೂ ಕನಿಷ್ಠ ಆ ಕೆಲಸ ಮಾಡಲು ಅನುಮತಿ ನೀಡಲಾಯಿತು, ಅವರನ್ನು ಗಡಿ ಗಸ್ತು ನಮ್ಮ ಬಳಿಗೆ ಕರೆತರಲಾಯಿತು.

ಹಾಗಾಗಿ, ನಮ್ಮ ಸಮುದಾಯದ ನಾವೆಲ್ಲರೂ ಅವರನ್ನು ಸ್ವಾಗತಿಸಿ ಚಪ್ಪಾಳೆ ತಟ್ಟುವ ಮೂಲಕ ಸುರಕ್ಷಿತ ಸ್ಥಳಕ್ಕೆ ಪ್ರವೇಶಿಸುವಂತೆ ಮಾಡುವ ಒಂದು ಪ್ರತಿಕ್ರಿಯೆಯನ್ನು ನಾನು ಸಂಘಟಿಸಲು ಸಾಧ್ಯವಾಯಿತು, ಅಲ್ಲಿ ಅವರನ್ನು ನಗು ಮತ್ತು ಅಪ್ಪುಗೆಯಿಂದ ಸ್ವಾಗತಿಸಲಾಯಿತು.

ನಾವು ಇದನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ ಮತ್ತು ವಿಶ್ವಗುರು ಫ್ರಾನ್ಸಿಸ್ ರವರು ನಮ್ಮನ್ನು ವಾಸ್ತವವಾಗಿ ಗುರುತಿಸಿದಾಗಿನಿಂದ, ಅಮೇರಿಕ ಮತ್ತು ಮೆಕ್ಸಿಕೋದ ಗಡಿಯಲ್ಲಿ ಈ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದೇವೆ.

ಪ್ರಶ್ನೆ: ಸಹೋದರಿ, ಅದು ಒಂದು ರೀತಿಯಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ ಪರಂಪರೆಯ ಸುಂದರವಾದ ಸಾರಾಂಶವಾಗಿತ್ತು. ಅವರ ಪ್ರಭಾವದ ಬಗ್ಗೆ, ವಿಶೇಷವಾಗಿ ಪರಮಪೂಜ್ಯ ತಂದೆಯು ತಮ್ಮ ವಿಶ್ವಗುರುವಿನ ಸೇವೆಯುದ್ದಕ್ಕೂ ಧಾರ್ಮಿಕ ಸಹೋದರಿಯರನ್ನು ಹೇಗೆ ಗುರುತಿಸಿದ್ದಾರೆ ಮತ್ತು ಅದ್ಯಾತ್ಮಿಕವಾಗಿ ಮೇಲಕ್ಕೆತ್ತಿದ್ದಾರೆ ಎಂಬುದರ ಬಗ್ಗೆ ನೀವು ಏನನ್ನಾದರೂ ಹೇಳಲು ಬಯಸುತ್ತೀರಾ?
ನಿಮಗೆ ಗೊತ್ತಾ, ವಿಶ್ವಗುರು ಫ್ರಾನ್ಸಿಸ್ ರವರು ಪ್ರಪಂಚದಾದ್ಯಂತ, ವಿಶೇಷವಾಗಿ ಅಮೇರಿಕದಲ್ಲಿ ಧಾರ್ಮಿಕ ಕಾರ್ಯಗಳ ಕೆಲಸವನ್ನು ಬಹಳ ಬೇಗನೆ ಗುರುತಿಸಿದರು. ನಾವು ಮಾಡುತ್ತಿರುವ ಕೆಲಸವನ್ನು ಗುರುತಿಸಿದ ವಿಶ್ವಗುರು ಫ್ರಾನ್ಸಿಸ್ ರವರು ಸಹೋದರಿಯರನ್ನು ಗುರುತಿಸಿದರು, ಅವರ ಸೇವೆಯನ್ನು ಗುರುತಿಸಿ, 'ಧನ್ಯವಾದಗಳು ಸಹೋದರಿಯರೇ' ಎಂದು ಹೇಳಿದರು. ಜನರೊಂದಿಗೆ ಇದ್ದು, ನಮ್ಮ ಸಮುದಾಯಗಳಲ್ಲಿ ಬದಲಾವಣೆ ತಂದಿದ್ದಕ್ಕಾಗಿ ನೀವು ಮಾಡುತ್ತಿರುವ ಅದ್ಭುತ ಸೇವೆಗಾಗಿ ಧನ್ಯವಾದಗಳು, ದೇವರು ಅವರನ್ನು ಪ್ರೀತಿಸುತ್ತಾರೆ ಎಂದು ಅವರಿಗೆ ತೋರಿಸುತ್ತಿದ್ದೀರಿ...' ನಿಮಗೆ ಧನ್ಯವಾದಗಳು ಎಂದು ಹೇಳಿದರು.

ಪ್ರಪಂಚದಾದ್ಯಂತದ ಮಹಿಳೆಯರನ್ನು ಪರಮಪೂಜ್ಯ ತಂದೆಯು ಬಹಳ ಸುಂದರವಾದ ರೀತಿಯಲ್ಲಿ ಗುರುತಿಸಿ, ನೋಡಿದ್ದಾರೆ, ಅವರು ನಮಗೆ ಧರ್ಮಸಭೆಯಲ್ಲಿ ಒಂದು ವಿಶೇಷ ಸ್ಥಾನವನ್ನು ನೀಡಿದ್ದಾರೆ ಮತ್ತು ಆದ್ದರಿಂದ ಅವರನ್ನು ನಮ್ಮ ಪರಮಪೂಜ್ಯ ತಂದೆಯಾಗಿ ಪಡೆದಿರುವ ನಾವು ತುಂಬಾ ಧನ್ಯರು ಎಂದು ನಾನು ಭಾವಿಸುತ್ತೇನೆ.
 

23 ಏಪ್ರಿಲ್ 2025, 10:40