ಫಾದರ್ ರೊಮೆನೆಲ್ಲಿ: ಶಾಂತಿಗಾಗಿ ವಿಶ್ವಗುರು ಫ್ರಾನ್ಸಿಸ್ ರವರ ಮನವಿ ಆಲಿಸ್ಪಡಲಿ
ರಾಬರ್ಟೊ ಸೆಟೆರಾ ಮತ್ತು ಬೆನೆಡೆಟ್ಟಾ ಕ್ಯಾಪೆಲ್ಲಿ
ಗಾಜಾದ ನಗರದ ಗಾಜಾದಲ್ಲಿರುವ ಪವಿತ್ರ ಕುಟುಂಬ ದೇವಾಲಯದಲ್ಲಿ ಆಶ್ರಯ ಪಡೆದಿರುವ ಪುಟ್ಟ ಕ್ರೈಸ್ತ ಸಮುದಾಯಕ್ಕೆ, ವಿಶ್ವಗುರು ಫ್ರಾನ್ಸಿಸ್ ರವರು 18 ತಿಂಗಳಿಗೂ ಹೆಚ್ಚು ಕಾಲ ಸಂಕಷ್ಟದಲ್ಲಿದ್ದ ತನ್ನ ಮಕ್ಕಳನ್ನು ಹತ್ತಿರದಿಂದ ಹಿಂಬಾಲಿಸಿದ ತಂದೆಯಂತಿದ್ದರು. ಜೆಮೆಲ್ಲಿ ಆಸ್ಪತ್ರೆಯಲ್ಲಿ ದೀರ್ಘಕಾಲ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಸಹ, ಅವರು ಬಹುತೇಕ ಪ್ರತಿ ರಾತ್ರಿಯೂ ತಮ್ಮ ಧ್ವನಿಯ ಮೂಲಕ ಸಾಂತ್ವನ ನೀಡುವ ಮೂಲಕ ತಮ್ಮ ನಿಕಟತೆಯನ್ನು ತೋರಿಸಿದರು.
ದಿವಂಗತ ವಿಶ್ವಗುರುವು, ಅವರ ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸಲು, ಅವರು ಊಟ ಮಾಡಿದ್ದಾರಾ ಎಂದು ಕೇಳಲು ಮತ್ತು ಇಸ್ರಯೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದ ಮುಗ್ಧ ಸಂತ್ರಸ್ತರುಗಳಾದ ಮಕ್ಕಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದು ಹೇಳಲು ಸಮಯ ತೆಗೆದುಕೊಂಡರು. ಈ ಫೋನ್ ಕರೆಗಳು ಯಾವಾಗಲೂ ಪ್ರಾರ್ಥನೆಯ ಆಹ್ವಾನದೊಂದಿಗೆ ಕೊನೆಗೊಳ್ಳುತ್ತಿದ್ದವು, ಯುದ್ಧದ ವಾತಾವರಣದಲ್ಲಿ ಇದು ಅತ್ಯಂತ ಸುರಕ್ಷಿತ ಆಶ್ರಯವಾಗಿತ್ತು.
ಸಾರ್ವತ್ರಿಕ ಐಕಮತ್ಯ
ವಿಶ್ವಗುರುವಿನ ಮರಣದ ಘೋಷಣೆಯ ನಂತರ, ವ್ಯಾಟಿಕನ್ ಮಾಧ್ಯಮವು ಗಾಜಾದಲ್ಲಿರುವ ಧರ್ಮಕೇಂದ್ರದ ಧರ್ಮಗುರು ಫಾದರ್ ಗೇಬ್ರಿಯಲ್ ರೊಮೆನೆಲ್ಲಿರವರನ್ನು ಸಂಪರ್ಕಿಸಿತು: “ನಾವು ಈ ವರ್ಷ ಪವಿತ್ರ ಈಸ್ಟರ್ ನ್ನು ಒಟ್ಟಿಗೆ ಆಚರಿಸಿದ್ದರಿಂದ, ಗ್ರೀಕ್ ಧರ್ಮಾಧ್ಯಕ್ಷರಾದ ಅಲೆಕ್ಸಿಯೊಸ್ ಮತ್ತು ಧರ್ಮಕೇಂದ್ರದ ಧರ್ಮಗುರುವನ್ನು ಸ್ವಾಗತಿಸಲು ನಾವು ಸೇಂಟ್ ಪೋರ್ಫೈರಿಯಸ್‌ನ ಗ್ರೀಕ್ ಆರ್ಥೊಡಾಕ್ಸ್ ಧರ್ಮಸಭೆಗೆ ಭೇಟಿ ನೀಡುತ್ತಿದ್ದೆವು” ಎಂದು ಅವರು ಹೇಳಿದರು, “ತಕ್ಷಣ, ನಾವು ಪ್ರಾರ್ಥನೆಯಲ್ಲಿ ಒಟ್ಟುಗೂಡಿದೆವು, ಗಾಜಾದಿಂದ ಉದ್ಭವಿಸಿದ ಜಂಟಿ ಪ್ರಾರ್ಥನೆ, ಇದು ಬಹುಶಃ ವಿಶ್ವಗುರು ಫ್ರಾನ್ಸಿಸ್ ರವರಿಂದ ಪಾಲಿಸಬೇಕಾದ ಉಡುಗೊರೆಯಾಗಿದೆ.
ಬಾಂಬ್ ದಾಳಿ ನಿಲ್ಲಬೇಕು
“ನಮ್ಮ ಧರ್ಮಕೇಂದ್ರದ ಮೈದಾನದಲ್ಲಿ,” ಅವರು ಮುಂದುವರಿಸಿದರು, “ನಾವು ವಿಶ್ವಗುರು ಫ್ರಾನ್ಸಿಸ್‌ಗಾಗಿ ಪ್ರಾರ್ಥಿಸುವುದನ್ನು ಮತ್ತು ಅವರ ವ್ಯಕ್ತಿತ್ವದ ಮಹಾನ್ ಕೊಡುಗೆಗಾಗಿ ದೇವರನ್ನು ಸ್ತುತಿಸುವುದನ್ನು ಮುಂದುವರಿಸುತ್ತೇವೆ. ವಿಶ್ವಗುರು ಫ್ರಾನ್ಸಿಸ್ ರವರು ಒಬ್ಬ ಉತ್ತಮ ಕುರುಬರಾಗಿದ್ದರು, ನಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಸಣ್ಣ ಸಮುದಾಯವನ್ನು ಪ್ರೀತಿಸುತ್ತಿದ್ದರು - ಶಾಂತಿಗಾಗಿ ಪ್ರಾರ್ಥಿಸುತ್ತಿದ್ದರು ಮತ್ತು ಅದರ ಪ್ರತಿಫಲಕ್ಕಾಗಿ ಶ್ರಮಿಸುತ್ತಿದ್ದರು.
ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು ನೀಡಿದ ಕೊನೆಯ ಮನವಿ ಸೇರಿದಂತೆ ಅವರು ಮಾಡಿದ ಮನವಿಗಳು ಆಲಿಸಲ್ಪಡುತ್ತವೆ ಎಂದು ನಾವು ಭಾವಿಸುತ್ತೇವೆ: ಬಾಂಬ್‌ಗಳು ನಿಲ್ಲಲಿ, ಈ ಯುದ್ಧ ಕೊನೆಗೊಳ್ಳಲಿ, ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಜನಸಂಖ್ಯೆಗೆ ಮಾನವೀಯ ನೆರವು ಪುನರಾರಂಭವಾಗಲಿ.
ಕೊನೆಯ ಫೋನ್ ಕರೆ
“ನಾವು ಈಸ್ಟರ್ ಜಾಗರಣೆ ಪ್ರಾರಂಭಿಸುವ ಸ್ವಲ್ಪ ಮೊದಲು, ಶನಿವಾರ ಸಂಜೆ, ನಾವು ಜಪಸರವನ್ನು ಪ್ರಾರ್ಥಿಸುತ್ತಿರುವಾಗ ವಿಶ್ವಗುರು ನಮಗೆ ಕೊನೆಯ ಬಾರಿಗೆ ಕರೆ ಮಾಡಿದರು. ಅವರು ನಮಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದರು, ನಮಗೆ ಆಶೀರ್ವಾದ ನೀಡಿದರು ಮತ್ತು ಅವರ ಪರವಾಗಿ ನಮ್ಮ ಪ್ರಾರ್ಥನೆಗಳಿಗೆ ಧನ್ಯವಾದ ಹೇಳಿದರು. "ಪ್ರಭುದೇವರು ಅವರಿಗೆ ನಿತ್ಯ ವಿಶ್ರಾಂತಿ ನೀಡಲಿ ಎಂದು ನಾವು ಪ್ರಾರ್ಥಿಸೋಣ ಮತ್ತು ಪ್ರಪಂಚದಾದ್ಯಂತದ ಸದ್ಭಾವನೆಯ ಪುರುಷರು ಮತ್ತು ಮಹಿಳೆಯರು ಗಾಜಾ ಹಾಗೂ ಜಗತ್ತಿನಲ್ಲಿ ಶಾಂತಿಗಾಗಿ ಅವರ ನಿರಂತರ ಮತ್ತು ತುರ್ತು ಮನವಿಗಳನ್ನು ಆಲಿಸಲಿ ಎಂದು ಪ್ರಾರ್ಥಿಸೋಣ" ಎಂದು ಪಾದರ್ ರವರು ತಮ್ಮ ಸಂದರ್ಶನವನ್ನು ಮುಕ್ತಾಯಮಾಡಿದರು.