MAP

Orient News cover Orient News cover 

ಪೂರ್ವ ಧರ್ಮಸಭೆಗಳಿಂದ ಸುದ್ದಿ – ಏಪ್ರಿಲ್ 9, 2025

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರವು, ಲೌವ್ರೆ ಡಿ'ಓರಿಯಂಟ್ ಸಹಯೋಗದೊಂದಿಗೆ ನಿರ್ಮಿಸಲ್ಪಟ್ಟವು: ಲೌವ್ರೆ ಐಕಾನ್ ಸಮ್ಮೇಳನವನ್ನು ಆಯೋಜಿಸುತ್ತದೆ, ಉಕ್ರೇನಿನ ಮೇಲೆ ನಿರಂತರ ಬಾಂಬ್ ದಾಳಿ, ಬೈಜಾಂಟೈನಲ್ಲಿ ತಪಸ್ಸುಕಾಲದ ಐದನೇ ಭಾನುವಾರವನ್ನು ಆಚರಿಸುತ್ತಿದೆ.

ಪೂರ್ವ ಧರ್ಮಸಭೆಗಳಿಂದ ಈ ವಾರದ ಸುದ್ದಿಗಳು:

ಲೌವ್ರೆ ವಸ್ತುಸಂಗ್ರಹಾಲಯವು ಐಕಾನ್‌ಗಳ (ಪ್ರತಿಮೆ) ಕುರಿತು ಸಮ್ಮೇಳನವನ್ನು ಆಯೋಜಿಸುತ್ತದೆ
ಏಪ್ರಿಲ್ 7 ರಿಂದ 9 ರವರೆಗೆ, ಪ್ಯಾರಿಸ್‌ನಲ್ಲಿ ಲೌವ್ರೆ ವಸ್ತುಸಂಗ್ರಹಾಲಯವು 'ಮಾಂಸ ಮತ್ತು ಚಿನ್ನದಲ್ಲಿ' ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸಿತು. ಐಕಾನ್‌ಗಳ ಮೇಲಿನ ದೃಷ್ಟಿಕೋನಗಳು. ಈ ಕಾರ್ಯಕ್ರಮವು ಲೆಬನಾನ್‌ನಲ್ಲಿ ಜೋಡಿಸಲಾದ ಮತ್ತು ಪೂರ್ವ ಯುರೋಪ್ ಮತ್ತು ಲೆವಂಟ್‌ನ 272 ಐಕಾನ್‌ಗಳನ್ನು ಒಳಗೊಂಡಿರುವ ಪ್ರತಿಷ್ಠಿತ ಅಬೌ ಅಡಾಲ್ ಸಂಗ್ರಹದ ವಸ್ತುಸಂಗ್ರಹಾಲಯಕ್ಕೆ ಆಗಮನದೊಂದಿಗೆ ಹೊಂದಿಕೆಯಾಗುತ್ತದೆ. ಈ ಸಂದರ್ಭಕ್ಕಾಗಿ ಪ್ಯಾರಿಸ್‌ಗೆ ಆಹ್ವಾನಿಸಲ್ಪಟ್ಟ ಅಲೆಪ್ಪೊದ ಇಬ್ಬರು ಕಲಾವಿದರು, ಸಿರಿಯಾದಲ್ಲಿನ ಯುದ್ಧದ ಸಮಯದಲ್ಲಿ ಹಾನಿಗೊಳಗಾದ ಐಕಾನ್‌ಗಳನ್ನು ಪುನಃಸ್ಥಾಪಿಸುವ ತಮ್ಮ ಅನುಭವವನ್ನು ಹಾಗೂ ಪ್ಯಾರಿಸ್‌ನ ನೊಟ್ರೆ-ಡೇಮ್ ಪ್ರಧಾನಾಲಯದಲ್ಲಿನ ಪೂರ್ವ ಕ್ರೈಸ್ತರಿಗೆ ಮೀಸಲಾಗಿರುವ ಪ್ರಾರ್ಥನಾ ಮಂದಿರದಲ್ಲಿನ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡರು.

ಉಕ್ರೇನಿನ ಮೇಲೆ ನಿರಂತರ ಬಾಂಬ್ ದಾಳಿ
ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾದ ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು, ಕದನ ವಿರಾಮದ ಮಾತುಕತೆಗಳ ಹೊರತಾಗಿಯೂ, ಉಕ್ರೇನಿಯದ ಹಲವಾರು ಪಟ್ಟಣಗಳ ಮೇಲೆ ರಷ್ಯಾವು ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಖಾರ್ಕಿವ್, ಸೌಮಿ ಮತ್ತು ಕ್ರಿವಿ ರಿಹ್ ಮೇಲೆ ನಡೆದ ಮಾರಕ ದಾಳಿಯನ್ನು ಅವರು ಖಂಡಿಸಿದರು, ಅಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ 9 ಮಕ್ಕಳು ಸೇರಿದಂತೆ 19 ನಾಗರಿಕರನ್ನು ಕೊಂದಿದೆ. ರಾಜತಾಂತ್ರಿಕ ಮಾತುಕತೆಗಳು ಮತ್ತು ನೆಲದ ಮೇಲಿನ ಯುದ್ಧದ ವಾಸ್ತವತೆಯ ನಡುವಿನ ಅಂತರದ ವಿರುದ್ಧ ಅವರು ಎಚ್ಚರಿಸಿದರು. ಕೊನೆಯದಾಗಿ, ಮಹಾಧರ್ಮಾಧ್ಯಕ್ಷರು ಆಧ್ಯಾತ್ಮಿಕ ಜಾಗರೂಕತೆಗೆ ಕರೆ ನೀಡಿದರು. ನ್ಯಾಯ ಮತ್ತು ಶಾಂತಿಗಾಗಿ ಪ್ರಾರ್ಥನೆಯ ಮಹತ್ವವನ್ನು ಒತ್ತಿ ಹೇಳಿದರು.

ಬೈಜಾಂಟೈನ್ ತಪಸ್ಸುಕಾಲದ ಐದನೇ ಭಾನುವಾರ
ಈ ಭಾನುವಾರ, ಬೈಜಾಂಟೈನ್ ಧರ್ಮಸಭೆಗಳು ಈಜಿಪ್ಟಿನ ಮಗ್ದಲದ ಮರಿಯಳನ್ನು ಸ್ಮರಿಸಿದವು, ಆಕೆಯು ಮಾಜಿ ವೇಶ್ಯೆಯಾಗಿದ್ದು, ನಂತರ ಸಂತರಾದರು. ಆಕೆಯ ಮಾರ್ಗವು ಮೌನ, ಮರುಭೂಮಿ ಮತ್ತು ಪ್ರಾರ್ಥನೆಯ ಪ್ರಭಾವದಿಂದ ಕೃಪೆಯ ಮಾರ್ಗವಾಯಿತು. ಈ ಭಾನುವಾರ ದೇವರ ಕರುಣೆಯು ಭೂತಕಾಲವನ್ನು ಮೀರಿದೆ ಮತ್ತು ಪ್ರಾಮಾಣಿಕ ಪಶ್ಚಾತ್ತಾಪವು ಯಾವಾಗಲೂ ಪವಿತ್ರತೆಗೆ ದಾರಿ ತೆರೆಯುತ್ತದೆ ಎಂಬುದನ್ನು ನೆನಪಿಸುತ್ತದೆ. ಗರಿಗಳ ಭಾನುವಾರಕ್ಕೆ ಕೇವಲ ಒಂದು ವಾರ ಬಾಕಿ ಇರುವುದರಿಂದ, ಧರ್ಮಸಭೆಯು ಭಕ್ತವಿಶ್ವಾಸಿಗಳನ್ನು ದೇವರ ಪ್ರೀತಿಯಲ್ಲಿ ವಿಶ್ವಾಸವಿಟ್ಟು, ವಿನಮ್ರ ಹೃದಯದಿಂದ ಆತನ ಬಳಿಗೆ ಮರಳಲು ಆಹ್ವಾನಿಸುತ್ತದೆ.
 

09 ಏಪ್ರಿಲ್ 2025, 09:53