MAP

Vincent LeVien, his wife Bridget, and their children, Sophia and Vincent Junior Vincent LeVien, his wife Bridget, and their children, Sophia and Vincent Junior  (Vincent LeVien )

ಕಾರ್ಲೊ ಅಕ್ಯುಟಿಸ್‌ರವರಿಗಾಗಿ ರೋಮ್‌ನಲ್ಲಿರುವ ನ್ಯೂಯಾರ್ಕ್ ಕುಟುಂಬವು ವಿಶ್ವಗುರುವಿನ ಅಂತ್ಯಕ್ರಿಯೆಯಲ್ಲಿ ವಿಶ್ವಾಸವನ್ನು ನವೀಕರಿಸುತ್ತದೆ

ವಿನ್ಸೆಂಟ್ ಲೆವಿಯೆನ್, ಅವರ ಪತ್ನಿ ಬ್ರಿಡ್ಜೆಟ್, ಅವರ ಮಕ್ಕಳಾದ ಸೋಫಿಯಾ ಮತ್ತು ಕಿರಿಯ ವಿನ್ಸೆಂಟ್, ಕಾರ್ಲೊ ಅಕ್ಯುಟಿಸ್‌ರವರ ಸಂತ ಪದವಿ ಪ್ರದಾನಕ್ಕಾಗಿ ರೋಮ್‌ಗೆ ಪ್ರಯಾಣಿಸುತ್ತಿದ್ದರು, ಆದರೆ, ಅವರು ವ್ಯಾಟಿಕನ್ ಸುದ್ಧಿಗೆ ಹೇಳುವ ಪ್ರಕಾರ, ಅಸಂಖ್ಯಾತ ಜನರ ಜೀವನದಲ್ಲಿ ಶಾಶ್ವತವಾದ ಛಾಪನ್ನು ಬಿಟ್ಟ ದಿವಂಗತ ವಿಶ್ವಗುರುವನ್ನು ನೆನಪಿಸಿಕೊಳ್ಳುತ್ತಿದ್ದೇವೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಏಪ್ರಿಲ್ 27 ರಂದು ಪೂಜ್ಯ ಕಾರ್ಲೊ ಅಕ್ಯುಟಿಸ್‌ರವರ ಸಂತ ಪದವಿ ಪ್ರದಾನ ಸಮಾರಂಭಕ್ಕಾಗಿ ನ್ಯೂಯಾರ್ಕ್‌ನ ಒಂದು ಕುಟುಂಬ ರೋಮ್‌ಗೆ ಪ್ರಯಾಣಿಸಲು ಸಿದ್ಧವಾದಾಗ, ಅವರು ತಮ್ಮನ್ನು ತಾವು ತುಂಬಾ ವಿಭಿನ್ನ ಸನ್ನಿವೇಶದಲ್ಲಿ ಕಂಡುಕೊಂಡರು.

ಪೇವ್ ದಿ ವೇ ಫೌಂಡೇಶನ್‌ನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯೂಯಾರ್ಕರ್ ವಿನ್ಸೆಂಟ್ ಲೆವಿಯೆನ್, ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವವನ್ನು ವಿವರಿಸಿದರು, ಯೋಜನೆಗಳ ಬದಲಾವಣೆಯ ಹೊರತಾಗಿಯೂ, ಇತಿಹಾಸದ ಈ ಮಹತ್ವದ ಕ್ಷಣದಲ್ಲಿ ತಾವು ಪ್ರೀತಿಸುವ ಮತ್ತು ಅರಿತಿದಿದ್ದ ವಿಶ್ವಗುರುವಿಗಾಗಿ ಇಲ್ಲಿ ಹಾಜರಿರುವ ನಾವು ಧನ್ಯರು ಎಂದು ಹಂಚಿಕೊಂಡರು.

ಲೆವಿಯೆನ್ ರವರು ಒಂದು ದಶಕಕ್ಕೂ ಹೆಚ್ಚು ಕಾಲ ಡಿಸೇಲ್ಸ್ ಮಾಧ್ಯಮ ಗುಂಪಿನ ಮತ್ತು ಬ್ರೂಕ್ಲಿನ್ ಧರ್ಮಕ್ಷೇತ್ರಕ್ಕೆ ವಿದೇಶಾಂಗ ವ್ಯವಹಾರಗಳ ನಿರ್ದೇಶಕರಾಗಿದ್ದಾರೆ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ನ್ಯೂಯಾರ್ಕ್ ಭೇಟಿಗಾಗಿ ಸ್ಥಳೀಯ ಲಾಜಿಸ್ಟಿಕಲ್ ವ್ಯವಸ್ಥೆಗಳಿಗೆ ಜವಾಬ್ದಾರರಾಗಿರುವ ತಂಡದ ಭಾಗವಾಗಿದ್ದರು.

ವಿನ್ಸೆಂಟ್, ಅವರ ಪತ್ನಿ ಬ್ರಿಡ್ಜೆಟ್, ಅವರ ಮಕ್ಕಳಾದ ಸೋಫಿಯಾ ರೋಸ್ ಮತ್ತು ಕಿರಿಯ ವಿನ್ಸೆಂಟ್ ಲೆವಿಯೆನ್, ತಮ್ಮ ಊರಿನಿಂದ ನಿಗದಿತ ನಿರ್ಗಮನದ ಹಿಂದಿನ ದಿನ ವಿಶ್ವಗುರುಗಳು ನಿಧನರಾದ ಸುದ್ದಿಯನ್ನು ತಿಳಿದುಕೊಂಡಿದ್ದರು, ಆದರೆ ಅವರ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ. ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಮನವರಿಕೆ ಮಾಡಿಕೊಂಡರು, ಆದರೂ ಊಹಿಸಿದ್ದಕ್ಕಿಂತ ವಿಭಿನ್ನ ರೀತಿಯಲ್ಲಿ, ಮಂಗಳವಾರ ರೋಮ್‌ಗೆ ಬಂದರು.

ಅವರು ವಿಶ್ವಗುರುಗಳಿಗೆ ಗೌರವ ಸಲ್ಲಿಸಿದರು ಮತ್ತು ದಿವಂಗತ ಪೂಜ್ಯ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು, ಆದರೆ ಪೂಜ್ಯ ಕಾರ್ಲೊ ಸಮಾಧಿಯ ಮುಂದೆ ಪ್ರಾರ್ಥಿಸುವ ಕಾರಣದಿಂದ, ಅವರು ಅಸ್ಸಿಸಿಗೆ ಪ್ರಯಾಣಿಸಿದರು.

ಸೋಮವಾರ ಬೆಳಿಗ್ಗೆ ಜಗತ್ತು ಎಚ್ಚರಗೊಂಡಂತೆ, ನಾವು ಒಳ್ಳೆಯ ಈಸ್ಟರ್ ನಂತರ ಎಚ್ಚರಗೊಂಡೆವು ಎಂದು ಅವರು ನೆನಪಿಸಿಕೊಂಡರು, "ನಾನು ಎದ್ದೆ ಮತ್ತು ನನ್ನ ಫೋನ್ ಶಬ್ದವು ಪದೇ ಪದೇ ಕರೆಯಾಗುತ್ತಿರುವ ಕಾರಣ ಸ್ವಲ್ಪ ಬೇಗನೆ ಎದ್ದೆವು, ಏಕೆಂದರೆ ನಾನು ಸೋಮವಾರ ಮಧ್ಯಾಹ್ನ ಅಲ್ಲಿಂದ ಹೊರಡುವ ಯೋಜನೆ ಹೊಂದಿದ್ದೆವು, ಆದರೆ ಮುಖ್ಯವಾದ ಸುದ್ಧಿಯ ಕರೆಗಳು ಬರುತ್ತಿದ್ದವು" ಎಂದು ಹೇಳಿದರು.

ಆದರೆ ನಾನು ಮತ್ತು ನನ್ನ ಹೆಂಡತಿ, ನಾವು ಮೊದಲು ಹೇಳಿದ್ದು 'ಖಂಡಿತವಾಗಿಯೂ ಅಲ್ಲ' ಎಂದು, ನಾವು ಪರಸ್ಪರ ಮಾತನಾಡಿಕೊಂಡವು "ಇದು ದೈವಿಕ ಹಸ್ತಕ್ಷೇಪ. ಇದು ದೈವಿ ವಿಧಿ ಮತ್ತು ನಾವು ಈ ಅಲ್ಲಿಗೆ ಹೋಗಲೇಬೇಕು ಎಂದು ನಿರ್ಧೆರಿಸಿದೆವು."

ವಿಶ್ವಗುರು ಫ್ರಾನ್ಸಿಸ್ ರವರ ನ್ಯೂಯಾರ್ಕ್ ಭೇಟಿ
2015 ರಲ್ಲಿ, ವಿನ್ಸೆಂಟ್ ರವರು, ವಿಶ್ವಗುರು ಫ್ರಾನ್ಸಿಸ್ ರವರು ನ್ಯೂಯಾರ್ಕ್‌ಗೆ ಬಂದಾಗ ಅವರನ್ನು ಭೇಟಿ ಮಾಡುವ ಗೌರವವನ್ನು ಪಡೆದರು ಮತ್ತು ನಗರದಾದ್ಯಂತ ವಿಶ್ವಗುರುಗಳ ಚಲನವಲನಗಳನ್ನು ಸಂಘಟಿಸುವ ಮತ್ತು ಸುಗಮಗೊಳಿಸುವ ಕಾರ್ಯವನ್ನು ವಹಿಸಲಾದ ತಂಡದ ಭಾಗವಾಗಿದ್ದರು. ಸಂತ ಪ್ಯಾಟ್ರಿಕ್ ಪ್ರಧಾನಾಲಯ, ಗ್ರೌಂಡ್ ಝೀರೋ, ವಿಶ್ವಸಂಸ್ಥೆ, ಹಾರ್ಲೆಮ್‌ನಲ್ಲಿರುವ ಶಾಲೆ ಮತ್ತು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ಗೆ ಪೂಜ್ಯ ತಂದೆಯ ಭೇಟಿ ನೀಡಿದುದ್ದಕ್ಕೂ ಅವರು ಅಲ್ಲೇ ಇದ್ದುದನ್ನು ಅವರು ನೆನಪಿಸಿಕೊಂಡರು.

"ಗ್ಯಾರಿ ಕ್ರುಪ್ ಮತ್ತು ಪೇವ್ ದಿ ವೇ ಫೌಂಡೇಶನ್ ರವರನ್ನು ಹಲವಾರು ಬಾರಿ ಪ್ರೇಕ್ಷಕರಲ್ಲಿ ಭೇಟಿಯಾಗಿ ಅವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಹಂಚಿಕೊಂಡಿದ್ದರಿಂದ ನಾನು ಧನ್ಯನಾಗಿದ್ದೇನೆ. ಅವರು ಯಾವಾಗಲೂ 'ನನಗಾಗಿ ಪ್ರಾರ್ಥಿಸಿ' ಎಂದು ಹೇಳುತ್ತಿದ್ದರು" ಎಂದು ಅವರು ನೆನಪಿಸಿಕೊಂಡರು. "ಆ ಸಂವಹನ," "ಆ ಕಣ್ಣಿನ ಸಂಪರ್ಕ," ಮತ್ತು ಆ "ವಿನಮ್ರತೆ"ಯಿಂದ, "ನೀವು ಅವರನ್ನು ವೈಯಕ್ತಿಕವಾಗಿ ತಿಳಿದಿದ್ದೀರಿ ಎಂದು ನಿಮಗೆ ಅನಿಸಿತು" ಎಂದು ಅವರು ಹೇಳಿದರು.

ವಿಶ್ವಗುರು ಫ್ರಾನ್ಸಿಸ್ ರವರು ಎಲ್ಲಾ ಜನರೊಂದಿಗೆ ಎಷ್ಟು "ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅವರು ಆಶ್ಚರ್ಯಚಕಿತರಾದರು, ರೋಗಿಗಳಿಗೆ, ಅತ್ಯಂತ ನಿರ್ಗತಿಕರಿಗೆ ಮತ್ತು ಅಂಚಿನಲ್ಲಿರುವವರಿಗೆ, "ಅವರಿಗೆ ಸಹಾಯ ಮಾಡಲು ಅವರು ಸದಾ ಸಿದ್ಧರಿದ್ದರು" ಎಂದು ಗಮನಿಸಿದರು.

ವಿಶ್ವಗುರು ಫ್ರಾನ್ಸಿಸ್ ರವರ ಮೇಲಿನ ಪ್ರೀತಿಯ ಸುರಿಮಳೆ
"ಪ್ರತಿಯೊಬ್ಬರೂ ಅವರಿಗೆ ಮುಖ್ಯ ಎಂದು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ" ಎಂದು ಅವರು ಗಮನಿಸಿದರು, ಅದು "ಪ್ರಮುಖರಾಗಿರುವ ಯಾರಾದರೂ ಅಥವಾ ಪ್ರಾಮುಖ್ಯತೆಯಿಲ್ಲದ ಯಾರಾದರೂ" ಅಂದರೆ, ಎಲ್ಲರೂ ಮುಖ್ಯವಾದವರು ಎಂದು ಹೇಳಿದರು.

"ಅವರು ನಿರಾಶ್ರಿತ ವ್ಯಕ್ತಿ ಮತ್ತು ಏನೂ ಇಲ್ಲದ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು "ರಾಜರು ಮತ್ತು ಅಧ್ಯಕ್ಷರು" ಎಂದು ಅವರು ಗಮನಿಸಿದರು.

ವಿಶ್ವಗುರು ಫ್ರಾನ್ಸಿಸ್ ರವರು "ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡಿದ್ದಾರೆ" ಎಂದು ಅವರು ಹೇಳಿದರು.

2022 ರಲ್ಲಿ ನ್ಯೂಯಾರ್ಕ್ ನಗರದಾದ್ಯಂತ ಪೂಜ್ಯ ಕಾರ್ಲೊ ಅವಶೇಷವನ್ನು ಕೊಂಡೊಯ್ಯುವ ಗೌರವವನ್ನು ಪಡೆದ ನಂತರ, ಕಾರ್ಲೊ ಅಕ್ಯುಟಿಸ್ ರವರ ಸಂತ ಪದವಿ ಪ್ರದಾನಕ್ಕಾಗಿ ಲೆವಿಯೆನ್ ರವರನ್ನು ಆಹ್ವಾನಿಸಲಾಯಿತು.

'ಕಾರ್ಲೋ ಜನರನ್ನು ಮತ್ತು ಜೀವನವನ್ನು ಎಲ್ಲಾ ಹಂತಗಳಲ್ಲಿ ಸ್ಪರ್ಶಿಸುತ್ತದೆ'
"ಕಾರ್ಲೋ," ರವರು ಸೂಚಿಸಿದರು, "ಮಕ್ಕಳಿಂದ ಹಿಡಿದು ಸಹಸ್ರಮಾನಗಳ ವಯಸ್ಕರವರೆಗೆ ಎಲ್ಲರ ಜೀವನದ ಹಂತಗಳನ್ನು ಮುಟ್ಟುತ್ತಾರೆ."

ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಾದ್ಯಂತ ಸೇಂಟ್ ಪ್ಯಾಟ್ರಿಕ್ ಪ್ರಧಾನಾಲಯದಲ್ಲಿಲ್ಲಿ ಪ್ರಾರಂಭವಾಗುವ ಬೃಹತ್ ಪರಮಪ್ರಸಾದದ ಮೆರವಣಿಗೆಗೆ ತಾನು ವೈಯಕ್ತಿಕವಾಗಿ ಹೇಗೆ ಸಹಾಯ ಮಾಡಿದೆ ಎಂಬುದನ್ನು ಲೆವಿಯನ್ ರವರು ವಿವರಿಸಿದರು. "ಆ ಮೆರವಣಿಗೆಯ ಭಾಗವಾಗಿ ನಾವು ಪುನೀತರಾದ ಕಾರ್ಲೊ ಅಕ್ಯುಟಿಸ್ ರವರನ್ನು ಹೊಂದಿದ್ದೆವು" ಎಂದು ಅವರು ಹೇಳಿದರು, "ಇದು ಎಷ್ಟೋ ಜನರಿಗೆ ಸ್ಫೂರ್ತಿ ನೀಡಿತು" ಎಂದು ಅವರು ಪ್ರತಿಬಿಂಬಿಸಿದರು.

ನನ್ನ ಮಗಳು ಸೋಫಿಯಾ 13 ವರ್ಷ ವಯಸ್ಸಿನವಳಾಗಿದ್ದು, ಪ್ರೌಢಶಾಲೆಗೆ ಹೋಗುತ್ತಿದ್ದಾಳೆ ಮತ್ತು ನನ್ನ ಮಗ ಕಿರಿಯ ವಿನ್ಸೆಂಟ್ 11 ವರ್ಷ ವಯಸ್ಸಿನವನಾಗಿದ್ದಾನೆ, ಮತ್ತು ಅವರು ಎಲ್ಲವನ್ನೂ ವೀಕ್ಷಿಸಿ ಇದರ ಪಾವಿತ್ರತ್ಯೆಯನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ" ಎಂದು ವಿನ್ಸೆಂಟ್ ರವರು ಹೇಳಿದರು.
 

29 ಏಪ್ರಿಲ್ 2025, 07:50