ಜೆಆರ್‌ಎಸ್: ವಿಶ್ವಗುರು ಫ್ರಾನ್ಸಿಸ್ ರವರ ಉತ್ಸಾಹದಲ್ಲಿ ಪ್ರಯಾಣವನ್ನು ಮುಂದುವರಿಸುವುದು
ಲಿಂಡಾ ಬೋರ್ಡೋನಿ
ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ನಂತರ, ಅವರನ್ನು ತಿಳಿದವರು ಮತ್ತು ಅತ್ಯಂತ ದುರ್ಬಲರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯುವ ಹಾಗೂ ರಕ್ಷಿಸುವ ಅವರ ಕರೆಯನ್ನು ಸ್ವೀಕರಿಸಿದವರು, ಅವರ ದೃಷ್ಟಿಕೋನ ಮತ್ತು ಅವರು ಒದಗಿಸಿದ ಸ್ಫೂರ್ತಿಗಾಗಿ ಸರ್ವಾನುಮತದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.
ಅವರಲ್ಲಿ, ಜೆಸ್ವಿಟ್ ನಿರಾಶ್ರಿತರ ಸೇವೆಯ (JRS) ಅಂತರರಾಷ್ಟ್ರೀಯ ನಿರ್ದೇಶಕ ಬ್ರದರ್ ಮೈಕೆಲ್ ಸ್ಕೋಫ್ ಎಸ್‌ಜೆರವರು, ನಿರಾಶ್ರಿತರು ಮತ್ತು ಬಲವಂತವಾಗಿ ಸ್ಥಳಾಂತರಗೊಂಡ ಇತರ ವ್ಯಕ್ತಿಗಳ ಹಕ್ಕುಗಳೊಂದಿಗೆ, ಸೇವೆ ಸಲ್ಲಿಸುವ ಮತ್ತು ವಕಾಲತ್ತು ವಹಿಸುವ ಧ್ಯೇಯವನ್ನು ಹೊಂದಿದ್ದಾರೆ. ವ್ಯಾಟಿಕನ್ ಆಕಾಶವಾಣಿ ಜೊತೆ ಮಾತನಾಡಿದ ಅವರು, ವಿಶ್ವಗುರು ಫ್ರಾನ್ಸಿಸ್ ರವರನ್ನು ವಿಘಟನೆ ಮತ್ತು ಉದಾಸೀನತೆಯಿಂದ ಹೆಚ್ಚುತ್ತಿರುವ ಜಗತ್ತಿನಲ್ಲಿ "ಏಕೈಕ ಜಾಗತಿಕ ಧ್ವನಿ" ಯಾಗಿದ್ದರು ಎಂದು ಬಣ್ಣಿಸಿದರು.
"ವಿಶ್ವಗುರು ಫ್ರಾನ್ಸಿಸ್ ರವರು ನಿರಾಶ್ರಿತರಿಗೆ ಜಗತ್ತಿನಲ್ಲಿ ಒಂದು ಸ್ಥಾನವನ್ನು ನೀಡಿ, ಅವರಿಗೆ 'ನೀವು ಮಾನವ ಸಮುದಾಯದ ಭಾಗವಾಗಿದ್ದೀರಿʼ ಎಂದು ಹೇಳಿದರು."
ಶಾಂತಿಯ ಪ್ರತಿಪಾದಕ
ಆ ಸಾಕ್ಷಿ, ಬ್ರದರ್ ಮೈಕೆಲ್ ವಿವರಿಸಿದಂತೆ, ವಾಕ್ಚಾತುರ್ಯ ಮಾತ್ರವಲ್ಲದೆ ವಿಶ್ವಗುರುವಿನ ಕಾರ್ಯಗಳಲ್ಲಿ ಆಳವಾಗಿ ಸಾಕಾರಗೊಂಡಿದ್ದರು - ವಲಸಿಗರನ್ನು ಅಪ್ಪಿಕೊಳ್ಳುವುದು, ಅವರಿಗೆ ಮಾತನಾಡಲು ವೇದಿಕೆಯನ್ನು ನೀಡುವುದು ಮತ್ತು ಅವರ ಘನತೆಯನ್ನು ರಕ್ಷಿಸುವುದು. "ಶಾಂತಿಯನ್ನು ಸೃಷ್ಟಿಸಲು ಘನತೆ ಅಗತ್ಯ ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು" ಎಂದು ಅವರು ಹೇಳಿದರು. ಹಾಗಾಗಿ ವಿಶ್ವಗುರು ಫ್ರಾನ್ಸಿಸ್ ರವರಿಂದ ನಾವು ಕಳೆದುಕೊಳ್ಳುತ್ತಿರುವುದು ನಿರಾಶ್ರಿತರ ವಕೀಲರನ್ನು ಮಾತ್ರವಲ್ಲ. ಅದಕ್ಕಿಂತ ಹೆಚ್ಚಾಗಿರುವುದು, ಅದು ನಾವು ಶಾಂತಿಯ ವಕೀಲರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ.
ವೈಯಕ್ತಿಕ ನೆನಪುಗಳು
ದಿವಂಗತ ವಿಶ್ವಗುರುವಿನೊಂದಿಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತಾ, ಬ್ರದರ್ ಮೈಕೆಲ್ ರವರು ತಮ್ಮ ಭೇಟಿಗಳ ಸರಳತೆ ಮತ್ತು ಮಾನವೀಯತೆಯನ್ನು ನೆನಪಿಸಿಕೊಂಡರು. ರೋಮ್‌ನಲ್ಲಿ ಜೆಸ್ವಿಟ್ ಸಮುದಾಯದಲ್ಲಿ ವಾಸಿಸುತ್ತಿದ್ದ ಅವರಿಗೆ, ಅನೌಪಚಾರಿಕ ಭೇಟಿಗಳಿಗಾಗಿ ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ವಾಗತಿಸುವ ಅವಕಾಶ ಸಿಕ್ಕಿತು. ಅವರು ಊಟಕ್ಕೆ ಬರುತ್ತಿದ್ದರು, ನಮ್ಮ ಜೊತೆ ಕಾಫಿ ಕುಡಿಯುತ್ತಿದ್ದರು, ಒಬ್ಬ ಚಿಕ್ಕಪ್ಪ ಅಥವಾ ಸ್ನೇಹಿತನ ಜೊತೆ ಬರುವಂತೆ ಬರುತ್ತಿದ್ದರು."
ನಿರ್ಮಿಸಬೇಕಾದ ಪರಂಪರೆ
ಆಲಿಸುವ, ವಿವೇಚನಾಶೀಲತೆಯ ಮತ್ತು ಸಂಭಾಷಣೆಯ ಮನೋಭಾವವನ್ನೇ ಬ್ರದರ್ ಮೈಕೆಲ್ ಈಗ ಜೆಆರ್‌ಎಸ್‌ನಲ್ಲಿ ತಮ್ಮ ಧ್ಯೇಯದಲ್ಲಿ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ.
"ವಿಶ್ವಗುರು ಫ್ರಾನ್ಸಿಸ್ ರವರು ನಮಗೆ ಮುಕ್ತರಾಗಿರಲು, ಶಾಂತಿಯ ಮೇಲೆ ಕೇಂದ್ರೀಕರಿಸಿ ಜಗತ್ತಿನಲ್ಲಿ ದೇವರ ಚಿತ್ತವನ್ನು ಹುಡುಕಲು ಕಲಿಸಿದರು" ಎಂದು ಅವರು ಹೇಳಿದರು. "ಅದು ನಾವು ನಮ್ಮೊಂದಿಗೆ ತೆಗೆದುಕೊಳ್ಳುವ ಪರಂಪರೆಯಾಗಿದೆ."