ಜೆಸ್ವಿಟ್ ಪ್ರಧಾನ ಅಧಿಕಾರಿ- ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು 'ದೇವತಾ ಮನುಷ್ಯ'
ಡೆವಿನ್ ವ್ಯಾಟ್ಕಿನ್ಸ್
"ದೀರ್ಘಾವಧಿಯ ಜೀವನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ವ್ಯಕ್ತಿಯ ಹಲವು ಅಂಶಗಳಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು 'ದೇವತಾ ಮನುಷ್ಯ' ಎಂಬುದನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ."
ಏಪ್ರಿಲ್ 26ರ ಗುರುವಾರ ವ್ಯಾಟಿಕನ್ ಬಳಿಯ ಜೆಸ್ವಿಟ್ ಕ್ಯೂರಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಸ್ವಿಟ್, ಯೇಸು ಸಭೆಯ ಶ್ರೇಷ್ಠ ಅಧಿಕಾರಿ ಫಾದರ್ ಆರ್ಟುರೊ ಸೋಸಾ ಎಸ್ಜೆರವರು, ದಿವಂಗತ ವಿಶ್ವಗುರುಗಳ ಜೀವನದ ಸಂಕ್ಷಿಪ್ತ ಸಾರಾಂಶವನ್ನು ನೀಡಿದರು.
ಅವರು ಅರ್ಜೆಂಟೀನಾದಲ್ಲಿ ಜನಿಸಿದ ಜೆಸ್ವಿಟ್ ವಿಶ್ವಗುರುವಿಗೆ, ಅವರ ಯೇಸು ಸಭೆಯಿಂದ "ಕೃತಜ್ಞತಾಪೂರ್ವಕ ಸ್ಮರಣೆ"ಯನ್ನು ವ್ಯಕ್ತಪಡಿಸಿದರು.
"ಜನರೊಂದಿಗಿನ ಅವರ ಸಂಬಂಧ ಮತ್ತು ಅವರು ಬದುಕಿದ ಪ್ರತಿಯೊಂದು ಸನ್ನಿವೇಶದಲ್ಲಿನ ಪರಿಸ್ಥಿತಿಯು ಅವರ ಆಧ್ಯಾತ್ಮಿಕ ಅನುಭವದ ಗುರುತಿಸುವಿಕೆಯಿಂದ ಮಾತ್ರ ಆಳವಾಗಿ ಗ್ರಹಿಸಲ್ಪಡುತ್ತದೆ" ಎಂದು ಫಾದರ್ ಸೋಸಾರವರು ಹೇಳಿದರು.
ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಯಾವಾಗಲೂ ದೇವರ ಚಿತ್ತವನ್ನು ಕಾರ್ಯಾಚರಣೆಗೆ ತರಲು ಪ್ರಯತ್ನಿಸಿದರು, ಇದರಿಂದಾಗಿ ಅವರು "ಈ ಜಗತ್ತನ್ನು ಎಲ್ಲಾ ಮಾನವರಿಗೆ ಯೋಗ್ಯವಾದ ಮನೆಯನ್ನಾಗಿ ಮಾಡಲು ಮಾನವೀಯತೆಯ ಪರಿವರ್ತನೆಗೆ" ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.
ವಿಶ್ವಗುರು ತಮ್ಮ ಸಾಧನೆಯನ್ನು ಇತರ ಜನರ ನಿಯಮಗಳಿಂದ ಅಳೆಯಲು ಪ್ರಯತ್ನಿಸಲಿಲ್ಲ, ಬದಲಿಗೆ ಯೇಸುವಿನ ಸುವಾರ್ತೆಯನ್ನು ಅಳವಡಿಸಿಕೊಂಡು ಎಲ್ಲಾ ಜನರನ್ನು ಸಂತರಾಗಲು ಆಹ್ವಾನಿಸಿದರು ಎಂದು ಫಾದರ್ ಸೋಸಾರವರು ಹೇಳಿದರು.
"ಒಬ್ಬರಿಗೊಬ್ಬರು ಆಲಿಸುವುದು, ವಾಸ್ತವದ ಸಂಕೀರ್ಣತೆಯೊಂದಿಗೆ ಸಂವಾದ ನಡೆಸುವುದು, ಕಾಲದ ಚಿಹ್ನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಮತ್ತು ಪ್ರಾರ್ಥನೆಯಲ್ಲಿ, ತನ್ನ ಪ್ರಭುವಿನ ಪರಿಚಯದೊಂದಿಗೆ, ಯಾವುದೇ ನಿರ್ದಿಷ್ಟ ಕ್ಷಣದಲ್ಲಿ ಯಾವುದು ಹೆಚ್ಚು ಸೂಕ್ತ ಎಂಬುದನ್ನು ವಿವೇಚಿಸುವುದು ಮುಖ್ಯವಾಗಿತ್ತು" ಎಂದು ಅವರು ಹೇಳಿದರು.
ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಎಲ್ಲಾ ಜನರು ಗೌರವಾನ್ವಿತ ಜೀವನವನ್ನು ನಡೆಸಬೇಕು ಮತ್ತು ಜಗತ್ತು ನಿಜವಾಗಿಯೂ, “ನಾವೆಲ್ಲರೂ ಸಹೋದರ ಸಹೋದರಿಯರಂತೆ ಬದುಕಬಹುದಾದ ಸಾಮಾನ್ಯ ಮನೆ”ಯಾಗಬೇಕೆಂದು ಕನಸು ಕಂಡಿದ್ದರು.
ಕೊನೆಯಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ, ಜೆಸ್ವಿಟ್‌ಗಳು ಕೈಗೊಳ್ಳಬೇಕಾದ ಧ್ಯೇಯದ ಕುರಿತು ವಿಶ್ವಗುರುವಿಗೆ ವಿಧೇಯತೆಯ ನಾಲ್ಕನೇ ಪ್ರತಿಜ್ಞೆಯನ್ನು ನಿಷ್ಠೆಯಿಂದ ಪೂರೈಸುತ್ತಾರೆ ಎಂದು ಜೆಸ್ವಿಟ್, ಯೇಸು ಸಭೆಯ ಶ್ರೇಷ್ಠ ಅಧಿಕಾರಿ ನೆನಪಿಸಿಕೊಂಡರು.
"ಹೊಸ ವಿಶ್ವಗುರು ಆಯ್ಕೆಯಾದ ತಕ್ಷಣ, ನಾವು 450 ವರ್ಷಗಳಿಗೂ ಹೆಚ್ಚು ಕಾಲ ಮಾಡಿದಂತೆ, ನಾವು ನಮ್ಮನ್ನು ಅವರ ಸೇವೆಗೆ ಲಭ್ಯವಾಗುವಂತೆ ಮಾಡುತ್ತೇವೆ" ಎಂದು ಫಾದರ್ ಸೋಸಾರವರು ಹೇಳಿದರು.