MAP

2021.03.30 Risurrezione Cristo, sepolcro vuoto, Pasqua

ಬರಿದಾದ ಸಮಾಧಿ, ಪ್ರಭು ಕ್ರಿಸ್ತರ ಮೇಲಿನ ಭರವಸೆಯ ಬುನಾದಿ

ಜಾಗರಣೆ ಎಂದರೆ ಎಚ್ಚರದಿಂದಿರುವುದು, ಇದು ರಾತ್ರಿಯ ಪಹರೆ, ಕಾವಲು, ಕಾಯುವಿಕೆಯು ಆಗಬಹುದು. ಸೈನ್ಯದ ಶಿಬಿರಗಳಲ್ಲಿ, ರಾಷ್ಟ್ರಿಯ ಗಡಿಗಲ್ಲಿ ತಮ್ಮ ರಾಷ್ಟ್ರದ ರಕ್ಷಣೆಗಾಗಿ ಸೈನಿಕರು ರಾತ್ರಿ ಇಡೀ ಪಹರೆ ಇರುವುದನ್ನು ನಾವು ನೋಡಿರುತ್ತೆವೆ. ಆದರೆ ಈ ಪಾಸ್ಕ ಜಾಗರಣೆ ಎಂದರೆ ಏನು? ಪ್ರಭು ಯೇಸು ಮರಣದಿಂದ ಪುನರುತ್ಥಾನದೆಡೆಗೆ ಹಾದು ಹೊದದ್ದು. ಸಾವು ಅಂತ್ಯವಲ್ಲ ಕ್ರಿಸ್ತನಲ್ಲಿ ವಿಶ್ವಾಸವಿಟ್ಟವನು ಮರಣಹೊಂದಿದ್ದರೂ ಜೀವಂತವಾಗುತ್ತಾರೆ ಎಂದು ತಿಳಿಸುವ ಹಬ್ಬವೇ ಪಾಸ್ಕ ಹಬ್ಬವಾಗಿದೆ.

ಪ್ರಭು ಯೇಸು ಕ್ರಿಸ್ತರ ಮರಣದ ನಂತರ ಕ್ರೈಸ್ತಧರ್ಮಸಭೆಯು ನಿಧಾನಗತಿಯಲ್ಲಿ ಬೆಳೆಯತೊಡಗಿತು. ಅನೇಕ ಕ್ರೈಸ್ತರು ಯೆಹೂದ್ಯ ಧರ್ಮದಿಂದಲೆ ಬಂದವರಾಗಿದ್ದ ಕಾರಣ ಅನೇಕ ಹಬ್ಬಗಳು ಸಹ ಯೆಹೂದ್ಯರ ಹಿನ್ನೆಲೆಯಿಂದಲೇ ಆಗಮಿಸಿದೆ. ಯೆಹೂದ್ಯರೂ ಸಹ ಪಾಸ್ಕ ಹಬ್ಬವನ್ನು ಆಚರಿಸುತ್ತಿದ್ದರು ಆದರೆ ಅವರ ಈ ಹಬ್ಬ ಇಸ್ರಯೇಲರನ್ನು ದೇವರು ಯಾವ ರೀತಿ ಸಂರಕ್ಷಣೆಯನ್ನು ಮಾಡಿ ಕೆಂಪು ಸಮುದ್ರವನ್ನು ದಾಟಿ ವಾಗ್ದತ್ತ ನಾಡಿಗೆ ಕರೆದೊಯ್ದರು ಎಂದು ದೇವರ ರಕ್ಷಣೆಯನ್ನು ನೆನೆಯುವ ದಿನವಾಗಿದೆ. ಒರ್ವ ವ್ಯಕ್ತಿ ಮರಣಹೊಂದಿದ ನಂತರ ಮರಳಿ ಜೀವಂತಹೊAದಿದ ಘಟನೆಗಳನ್ನು ನಾವು ಬೈಬಲ್‌ನಲ್ಲಿ ಓದಿ ತಿಳಿದಿದ್ದೆವೆ. ಉದಾಹರಣೆಗೆ, ಲಾಜರನ್ನು ಪ್ರಭು ಯೇಸು ಮರಣದಿಂದ ಜೀವಂತವಾಗಿ ಎಬ್ಬಿಸಿದ್ದು, ಪ್ರಾಣಹೋಗಿದ್ದ ಯಾಯಿರನ ಮಗಳನ್ನು ಜೀವಂತವಾಗಿ ಎಬ್ಬಿಸಿದ ಘಟನೆಗಳನ್ನು ನಾವು ನೊಡುತ್ತೇವೆ. ಆದರೆ ಪ್ರಭು ಯೇಸುವಿನ ಪುನರುತ್ಧಾನಕ್ಕೂ ಈ ಎಲ್ಲಾ ಅದ್ಭುತಗಳಿಗೂ ಇರುವ ವ್ಯತ್ಯಾಸವೆನೆಂದರೆ. ಅವರು ಮರಣಹೊಂದಿ ಬದುಕಿದರು ಮರಳಿ ಅವರು ಮೃತಹೊಂದಿದರು. ಆದರೆ ಪ್ರಭು ಯೇಸು ಎಲ್ಲಾ ವಿಜ್ಞಾನ, ತಂತ್ರಜ್ಞಾನಗಳಿಗೂ ಮೀರಿ ಸಾವನ್ನು ಜಯಿಸಿ ಚಿರಕಾಲ ಬಾಳಿದರು. ಈಗಲೂ ಯಾವಾಗಲೂ ನಮ್ಮೊಂದಿಗೆ ಇದ್ದಾರೆ. ಪ್ರಭು ಯೇಸುವಿನ ಪುನರುತ್ಧನದಿಂದ ಹಲವಾರು ಸತ್ಯಗಳು ಅನಾವರಣಗೊಂಡವು

1. ಸಾವಿಗೆ ಸೋಲಾಯಿತು: ಆದಾಮನಿಂದ ಈ ಲೋಕಕ್ಕೆ ಸಾವು ಪ್ರವೇಶಗೊಂಡರೆ ಎರಡನೆಯ ಆದಾಮನಿಂದ ಅದು ಪ್ರಭು ಯೇಸುವಿನಿಂದ ನಿತ್ಯಜೀವವನ್ನು ಪಡೆಯುವೆವು ಎಂದು ಸಾಬಿತಾಯಿತು.

2. ಧರ್ಮಸಭೆಗೆ ಸಾಕ್ಷಿ ನೀಡುವಂತಾಯಿತು: ಆದಿ ಧರ್ಮಸಭೆಯ ಪ್ರೇಷಿತರು ಪ್ರಪಂಚದ ಎಲ್ಲೆಡೆಹೋಗಿ ಕ್ರಿಸ್ತನ ಸಾಕ್ಷಿ ನೀಡಲಾಯಿತು.

3. ಬಲಿಪೂಜೆಗೆ ನಿಜವಾದ ಅರ್ಥ ನೀಡಿತು: ನಮ್ಮ ದೇವರು ಮೃತ್ಯು ಹೊಂದಿದ ದೇವರಲ್ಲ ಬದಲಿಗೆ ಸಾವನ್ನು ಜಯಿಸುವ ಜೀವಂತ ದೇವರು ಹಾಗು ಪ್ರತಿದಿನ ಬಲಿಪೂಜೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷರಸದ ಮೂಲಕ ಆ ಕ್ರಿಸ್ತನನ್ನು ಕಾಣುವ ಭಾಗ್ಯ ದೊರಕಿತು.

4. ದೇವರು ಪರಾಕ್ರಮಿ ಎಂದು ನಿರೂಪಿಸಲಾಯಿತು: ದೇವರಿಂದ ಯಾವುದೂ ಅಸಾಧ್ಯವಿಲ್ಲ ಎಲ್ಲವೂ ಸಾಧ್ಯ ಎಂದು ನಿರೂಪಿಸಿತು. ಆ ಕ್ರಿಸ್ತನಲ್ಲಿ ವಿಶ್ವಾಸವಿದ್ದರೆ ದೊಡ್ಡ ಬಿರುಗಾಳಿಯು ತುಂತುರು ಹನಿಯಾಗುವುದು ಎಂದು ಸಾಬೀತುಪಡಿಸಿತು.

ಈ ಪಾಸ್ಕ ತ್ರಿದಿನಗಳು ಪ್ರತಿಯೊಬ್ಬ ಕ್ರೈಸ್ತನು ಕ್ರಿಸ್ತನ ಪ್ರೀತಿಯನ್ನು ಆಳವಾಗಿ ಧ್ಯಾನ ಮಾಡುವ ದಿನಗಳಾಗಿವೆ. ಅವರ ಪ್ರೀತಿಯ ಫಲವಾಗಿಯೇ ದೇವರು ಈ ಲೋಕಕ್ಕೆ ಅವರ ಮಗನ್ನು ತ್ಯಾಗಮಾಡಲು ಹಿಂದೆ ಮುಂದೆ ನೋಡಲಿಲ್ಲ. ಆ ಪ್ರೀತಿಯನ್ನು ನಾವು ಅನುಭವಿಸಿ ಪರರಿಗೆ ಹಂಚುವ ಸಾಧನಗಳಾಗೋಣ.

16 ಏಪ್ರಿಲ್ 2025, 11:32