ಸಂಕಷ್ಟ ಮತ್ತು ಭರವಸೆಯ ನಡುವೆ ಪವಿತ್ರ ನಾಡಿನಲ್ಲಿ ಈಸ್ಟರ್ ಆಚರಣೆಗಳು
ಲಿಸಾ ಝೆಂಗಾರಿನಿ
ಪವಿತ್ರ ನಾಡಿಲ್ಲಿರುವ ಕ್ರೈಸ್ತರು ಸತತ ಎರಡನೇ ವರ್ಷವೂ ಈಸ್ಟರ್ ಆಚರಿಸಲಿದ್ದಾರೆ, ನಡೆಯುತ್ತಿರುವ ಹಿಂಸಾಚಾರ ಮತ್ತು ಸಂಘರ್ಷದ ನಡುವೆಯೂ, ಅವರ ಚಲನೆಯ ಸ್ವಾತಂತ್ರ್ಯದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ನಡುವೆಯೂ ಎರಡನೇ ವರ್ಷವೂ ಈಸ್ಟರ್ ಹಬ್ಬವನ್ನುಆಚರಿಸಲಿದ್ದಾರೆ.
ಪಶ್ಚಿಮ ದಂಡೆಯಲ್ಲಿ ಕ್ರೈಸ್ತರಿಗೆ ಕೇವಲ 6,000 ಪರವಾನಗಿಗಳನ್ನು ನೀಡಲಾಗಿದೆ
ಈಸ್ಟರ್ ಹಬ್ಬದ ಸಮಯದಲ್ಲಿ, ಇಸ್ರಯೇಲ್ ಅಧಿಕಾರಿಗಳು ಸಾಮಾನ್ಯವಾಗಿ ಪಶ್ಚಿಮ ದಂಡೆಯಲ್ಲಿರುವ ಪ್ಯಾಲಸ್ತೀನಿಯದ ಕ್ರೈಸ್ತರಿಗೆ ಜೆರುಸಲೇಮ್‌ಗೆ ಭೇಟಿ ನೀಡಲು ವಿಶೇಷ ಪರವಾನಗಿಗಳನ್ನು ನೀಡುತ್ತಾರೆ. ಆದಾಗ್ಯೂ, ಈ ನಿರ್ಣಾಯಕ ಧಾರ್ಮಿಕ ಅವಧಿಯಲ್ಲಿ ಪವಿತ್ರ ಸ್ಥಳಗಳಲ್ಲಿ ತಮ್ಮ ವಿಶ್ವಾಸವನ್ನು ಆಚರಿಸಲು ಬಯಸುವ ಸುಮಾರು 50,000 ಪ್ಯಾಲಸ್ತೀನಿಯದ ಕ್ರೈಸ್ತರು ಇದ್ದರೂ ಸಹ ಈ ವರ್ಷ ಕೇವಲ 6,000 ಪರವಾನಗಿಗಳನ್ನು ಮಾತ್ರ ನೀಡಲಾಗಿದೆ, ಅದು ಕೇವಲ ಒಂದು ವಾರಕ್ಕೆ ಮಾತ್ರ ಮಾನ್ಯವಾಗಿದೆ.
ಈಸ್ಟರ್ ಮತ್ತು ಪೆಸಾಚ್‌ನ ಕಾಕತಾಳೀಯತೆ ಸಂವಾದವನ್ನು ಪುನರಾರಂಭಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸಬೇಕು.
ಈ ವರ್ಷದ ಧಾರ್ಮಿಕ ಪಂಚಾಂಗವು ಈ ವೈರುಧ್ಯಗಳನ್ನು ಇನ್ನಷ್ಟು ಹೃದಯಸ್ಪರ್ಶಿಯಾಗಿಸುತ್ತಿದೆ, ಏಕೆಂದರೆ ಈಸ್ಟರ್ (ಕಥೊಲಿಕರು ಮತ್ತು ಆರ್ಥೊಡಾಕ್ಸ್/ಸನಾತನ ಧರ್ಮಸಭೇಯ ಕ್ರೈಸ್ತರು ಜಂಟಿಯಾಗಿ ಆಚರಿಸುತ್ತಾರೆ) ಮತ್ತು ಯೆಹೂದ್ಯದವರ ಪಾಸ್ಖ ಹಬ್ಬವು ಒಂದೇ ದಿನ, ಏಪ್ರಿಲ್ 20 ರಂದು ಬರುತ್ತಿವೆ. ಪವಿತ್ರ ನಾಡಿನ ಈ ದುರಂತ ಕ್ಷಣದಲ್ಲಿ, ಈ ಅಪರೂಪದ ಕಾಕತಾಳೀಯವು ಸಂವಾದ ಮತ್ತು ಪರಸ್ಪರ ಗೌರವಕ್ಕೆ ಪ್ರಬಲ ಅವಕಾಶವಾಗಿ ಕಾರ್ಯನಿರ್ವಹಿಸಬೇಕು ಎಂದು ಫಾದರ್ ಫಾಲ್ಟಾಸ್ ರವರು ವಾದಿಸಿದರು. ಪವಿತ್ರ ಸ್ಥಳಗಳ ಸೌಂದರ್ಯವನ್ನು ಕಣ್ಣ ಮುಂದೆ ಇಟ್ಟುಕೊಂಡು ಹಿಂಸೆಗೆ ಒಗ್ಗಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈಸ್ಟರ್ ಆಚರಣೆಯಲ್ಲಿ ಭಾಗವಹಿಸುವ ಬಯಕೆ ಭಯಕ್ಕಿಂತ ಬಲವಾಗಿದೆ
ಯುದ್ಧದಿಂದ ಹಾನಿಗೊಳಗಾದ ಗಾಜಾದಲ್ಲಿ, ಈಸ್ಟರ್ ಆಚರಣೆಗಳು ಸಾವು ಮತ್ತು ವಿನಾಶದ ಆಘಾತದಿಂದ ಮುಚ್ಚಿಹೋಗಿವೆ. ಪವಿತ್ರ ಕುಟುಂಬದ ಲತೀನ್ ದೇವಾಲಯದ ಧರ್ಮಕೇಂದ್ರದ ಗುರುಗಳು, ಫಾದರ್ ಗೇಬ್ರಿಯಲ್ ರೊಮೆನೆಲ್ಲಿರವರು, ಈಸ್ಟರ್ ಹಬ್ಬದ ಆಚರಣೆಯ ತಯಾರಿಯ ಈ ದಿನಗಳ ವಾತಾವರಣದ ಬಗ್ಗೆ ಏಷ್ಯಾ ಸುದ್ದಿಯ ಏಜೆನ್ಸಿಯೊಂದಿಗೆ ಮಾತನಾಡುತ್ತಾ, ಇದು ಕಳೆದ ಕ್ರಿಸ್‌ಮಸ್‌ಗಿಂತ ಸಾಕಷ್ಟು ಭಿನ್ನವಾಗಿದೆ ಎಂದು ಅವರು ವಿವರಿಸಿದರು, ಇಸ್ರಯೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದ ಸಾಧ್ಯತೆಯು ಭರವಸೆಗೆ ಕಾರಣವನ್ನು ನೀಡಿತು.
ಈಗ, ಇಸ್ರಯೇಲ್ ರ ವೈಮಾನಿಕ ದಾಳಿಗಳು ಮತ್ತು ಶೆಲ್ ದಾಳಿಗಳು ಪುನರಾರಂಭಗೊಂಡಿವೆ, ಗರಿಳ ಭಾನುವಾರದಂದು ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಮಾರಕ ದಾಳಿಯೊಂದಿಗೆ ಸಂಭವಿಸಿದಂತೆ, ನಾಗರಿಕರು ಮತ್ತು ಆಸ್ಪತ್ರೆಗಳಂತಹ ಪ್ರಮುಖ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿದೆ.
ಅದೇನೇ ಇದ್ದರೂ, "ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ" ಈಸ್ಟರ್ ಆಚರಣೆಗಳಲ್ಲಿ ಭಾಗವಹಿಸುವ ಬಯಕೆಯು ವಿನಾಶ ಮತ್ತು ಭಯಕ್ಕಿಂತ ಬಲವಾಗಿದೆ ಎಂದು ಫಾದರ್ ರೊಮೆನೆಲ್ಲಿರವರು ಹೇಳಿದರು. ಗರಿಗಳ ಭಾನುವಾರದಂದು ಭಕ್ತಾಧಿಗಳು ಪ್ರಾರ್ಥನೆ, ಮೌನ ಮತ್ತು ಧ್ಯಾನದ ವಾತಾವರಣದಲ್ಲಿ ದಿವ್ಯಬಲಿಪೂಜೆಯನ್ನು ಆಚರಿಸಲು ಒಟ್ಟುಗೂಡಿದರು. ಅವರಲ್ಲಿ ನೆರೆಯ ಸಂತ ಪೋರ್ಫೈರಿಯೊಸ್ ದೇವಾಲಯದಿಂದ ಸ್ಥಳಾಂತರಗೊಂಡ ಅನೇಕ ಗ್ರೀಕ್ ಸನಾತನ ಧರ್ಮಸಭೆಯ ಜನರೂ ಸಹ ಇದ್ದರು.
ಫಾದರ್ ರೊಮೆನೆಲ್ಲಿ: ಪವಿತ್ರ ನಾಡಿನಲ್ಲಿ ಶಾಂತಿಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿ
ಅರ್ಜೆಂಟೀನಾದ ಧರ್ಮಗುರುವು ವಿಶ್ವಾದ್ಯಂತ ಕ್ರೈಸ್ತರಿಗೆ ಶಾಂತಿ, ವೈಯಕ್ತಿಕ ಮತಾಂತರ ಮತ್ತು ಯುದ್ಧದ ಅಂತ್ಯಕ್ಕಾಗಿ ಪ್ರಾರ್ಥಿಸುವುದನ್ನು ಮುಂದುವರಿಸಲು ಹೃತ್ಪೂರ್ವಕ ಮನವಿಯೊಂದಿಗೆ ಸಂದರ್ಶನವನ್ನು ಮುಕ್ತಾಯಗೊಳಿಸುತ್ತಾರೆ: ಎಲ್ಲಾ ಸಂಘರ್ಷಗಳನ್ನು ನಿಲ್ಲಿಸಲು ಸಾಧ್ಯವಿದೆ ಎಂದು ನಾವು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು. ಏಕೆಂದರೆ ಯುದ್ಧವು ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ ಮತ್ತು ಅದು ಹೆಚ್ಚು ಕಾಲ ಇದ್ದಷ್ಟೂ ಅದು ಹೆಚ್ಚು ಹಾನಿ ಮಾಡುತ್ತದೆ ಎಂದು ಅವರು ಹೇಳಿದರು.