MAP

DRC flags fly in Bukavo following the takeover of the M23 movement DRC flags fly in Bukavo following the takeover of the M23 movement  (AFP or licensors)

ಹೋರಾಟದ ನಡುವೆಯೂ ಡಿಆರ್‌ಸಿ ಧರ್ಮಾಧ್ಯಕ್ಷರುಗಳ ನಿಕಟತೆ

ಡಿಆರ್‌ಸಿಯ ಮೇಲೆ ಸಂಘರ್ಷವು ಪರಿಣಾಮ ಬೀರುತ್ತಲೇ ಇದ್ದು, ನಾಗರಿಕರ ಸಾವುನೋವುಗಳು ದಿನೇ ದಿನೇ ಹೆಚ್ಚುತ್ತಿವೆ, ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಮುದಾಯಗಳಿಗೆ ಧರ್ಮಸಭೆಯ ಬೆಂಬಲ ಮತ್ತು ಭರವಸೆಯ ಮೂಲವಾಗಿ ಉಳಿದಿದೆ.

ಫ್ರಾನ್ಸೆಸ್ಕಾ ಮೆರ್ಲೊ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಪ್ರಾಂತ್ಯಗಳಲ್ಲಿ ಹಿಂಸಾಚಾರ ಹೆಚ್ಚುತ್ತಿರುವಂತೆ, ಬುಟೆಂಬೊ-ಬೆನಿಯ ಧರ್ಮಾಧ್ಯಕ್ಷ ಶ್ರೇಷ್ಠಗುರು ಮೆಲ್ಚಿಸೆಡೆಕ್ ಸಿಕುಲಿ ಪಲುಕುರವರು ಭಕ್ತವಿಶ್ವಾಸಿಗಳಿಗೆ ಭರವಸೆ ಕಳೆದುಕೊಳ್ಳದಂತೆ ಕರೆ ನೀಡಿದ್ದಾರೆ. ಗರಿಗಳ ಭಾನುವಾರದ ದಿವ್ಯ ಬಲಿಪೂಜೆಯ ಸಮಯದಲ್ಲಿ, ಅಲ್ಲಿ ನೆರೆದಿದ್ದವರಿಗೆ ನಮಗೆ ಏನೇ ಸಂಭವಿಸಿದರೂ ನಾವು ಎಂದಿಗೂ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಎಲ್ಲವೂ ಕತ್ತಲೆಯಂತೆ ಕಂಡರೂ, ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ನೆನಪಿಸಿದರು.

ಉತ್ತರ ಕಿವು ಪ್ರದೇಶದಲ್ಲಿನ ಸಂಘರ್ಷದ ಸಂತ್ರಸ್ತರುಗಳೊಂದಿಗೆ ಧರ್ಮಾಧ್ಯಕ್ಷರುಗಳ ಒಗ್ಗಟ್ಟನ್ನು ವ್ಯಕ್ತಪಡಿಸಿದರು. "ಇತಿಹಾಸದಲ್ಲಿ ಕೆಟ್ಟದ್ದಕ್ಕೆ ಅಂತಿಮ ಉತ್ತರ ಇರುವುದಿಲ್ಲ" ಎಂದು ದೃಢಪಡಿಸುತ್ತಾ, ಅವರು ಕ್ರೈಸ್ತರು ಭರವಸೆಯ ಸಾಕ್ಷಿಗಳಾಗಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಈ ಪ್ರದೇಶವು ತೀವ್ರ ಒತ್ತಡದಲ್ಲಿದೆ. ಬುಟೆಂಬೊ ನಗರ ಮತ್ತು ಸುತ್ತಮುತ್ತಲಿನ ಬೆನಿ ಇನ್ನೂ ಸರ್ಕಾರದ ನಿಯಂತ್ರಣದಲ್ಲಿದ್ದರೂ, M23 ಬಂಡಾಯ ಗುಂಪು ಪ್ರಾಂತೀಯ ರಾಜಧಾನಿಯಾದ ಗೋಮಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಏಪ್ರಿಲ್ 11 ಮತ್ತು 12 ರ ನಡುವಿನ ರಾತ್ರಿ, ನಗರದ ಪಶ್ಚಿಮ ಜಿಲ್ಲೆಗಳಲ್ಲಿ ನಡೆದ ಘರ್ಷಣೆಗಳಲ್ಲಿ ಗೋಮಾದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದರು. ಕಾಂಗೋಲೀಸ್ ಸೇನೆ (FARDC) ಮತ್ತು M23 ಬಂಡುಕೋರರು ಇಬ್ಬರೂ ಹಿಂಸಾಚಾರಕ್ಕೆ ಪರಸ್ಪರನ್ನು ದೂಷಿಸಿಕೊಂಡಿದ್ದಾರೆ.

ಸ್ಥಳೀಯ ಮೂಲಗಳ ಪ್ರಕಾರ, ಸರ್ಕಾರಿ ಪರ ವಜಲೆಂಡೋ ಮಿಲಿಟಿಯ ಸದಸ್ಯರು ನಗರದ ಕೆಲವು ಭಾಗಗಳನ್ನು ಮರಳಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಹೋರಾಟ ಪ್ರಾರಂಭವಾಯಿತು. ಈ ಸಶಸ್ತ್ರ ಗುಂಪುಗಳ ನಿಯಂತ್ರಣ, ವಿಶೇಷವಾಗಿ ವಜಲೆಂಡೋ, ಉತ್ತರ ಮತ್ತು ದಕ್ಷಿಣ ಕಿವು ಎರಡರಲ್ಲೂ ಒಂದು ಕಳವಳಕಾರಿ ವಿಷಯವಾಗಿ ಉಳಿದಿದೆ.

ಫೆಬ್ರವರಿ ಮಧ್ಯದಲ್ಲಿ M23 ಬುಕಾವುವನ್ನು ವಶಪಡಿಸಿಕೊಂಡ ದಕ್ಷಿಣ ಕಿವುವಿನಲ್ಲಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಗರಿಕರು ಹೆಚ್ಚು ಚಿಂತಿತರಾಗಿದ್ದಾರೆ. ಸ್ಥಳೀಯ ನಾಗರಿಕ ಸಮಾಜ ಸಂಸ್ಥೆ ACMEJ (ಅಸೋಸಿಯೇಷನ್ ಅಗೇನ್ಸ್ಟ್ ಇವಿಲ್ ಅಂಡ್ ಫಾರ್ ದಿ ಸಪೋರ್ಟ್ ಆಫ್ ಯೂತ್) ವರದಿಯ ಪ್ರಕಾರ, ಸರ್ಕಾರಿ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ಜನರು, ವಿವೇಚನಾರಹಿತ ಗುಂಡಿನ ದಾಳಿಯ ಪ್ರಕರಣಗಳಿಂದಾಗಿ, ವಜಲೆಂಡೋ ಮಿಲಿಟಿಯಾಗಳು ಮತ್ತು ಸರ್ಕಾರಿ ಸೈನಿಕರ ಉಪಸ್ಥಿತಿಗೆ ಭಯಪಡುತ್ತಾರೆ.

ಸಂಘರ್ಷದ ಸಂಕೀರ್ಣತೆ ಮತ್ತು ಅದು ಉಂಟುಮಾಡುವ ಸಂಕಟಗಳ ಹೊರತಾಗಿಯೂ, ಧರ್ಮಾಧ್ಯಕ್ಷರಾದ ಸಿಕುಲಿಯವರ ಸಂದೇಶವು ಅನೇಕರು ಪರಿತ್ಯಕ್ತರಾಗಿದ್ದಾರೆಂದು ಭಾವಿಸುವ ಪ್ರದೇಶದ ಜನರಿಗೆ, ಧರ್ಮಸಭೆಯು ತನ್ನ ಸಮುದಾಯಗಳ ಜೊತೆಗೆ ನಿಂತಿದೆ, ಕೇವಲ ಮಾತುಗಳನ್ನು ನೀಡುವುದಿಲ್ಲ, ಆದರೆ ಬೆಂಬಲ ಮತ್ತು ಪ್ರೋತ್ಸಾಹದ ನಿರಂತರ ಉಪಸ್ಥಿತಿಯನ್ನು ನೀಡುತ್ತದೆ ಎಂಬುದನ್ನು ನೆನಪಿಸುತ್ತದೆ.
 

15 ಏಪ್ರಿಲ್ 2025, 11:39