ಪ್ರಭುವಿನ ದಿನದ ಚಿಂತನೆಗಳು: ಗಾಯಗಳು, ಸಂದೇಹಗಳು ಮತ್ತು ದೈವಿಕ ಅಡಚಣೆಗಳು
ವಿಶ್ವಗುರು ಫ್ರಾನ್ಸಿಸ್ ರವರ ಸ್ಮರಣಾರ್ಥವಾಗಿ
ಜೆನ್ನಿ ಕ್ರಾಸ್ಕಾ
ಈ ದೈವಿ ಕರುಣೆಯ ಭಾನುವಾರದಂದು, ಧರ್ಮಸಭೆಯು ಭಾರವಾದ ಹೃದಯಗಳು ಮತ್ತು ಭರವಸೆಯ ಆತ್ಮಗಳೊಂದಿಗೆ ಪುನರುತ್ಥಾನದ ಬೆಳಕಿನಲ್ಲಿ ಒಂದು ಗೂಡುತ್ತದೆ. ಯೋವಾನ್ನರ ಶುಭಸಂದೇಶವು ನಮ್ಮನ್ನು ಬೀಗ ಹಾಕಿದ ಒಂದು ಕೋಣೆಗೆ ಕರೆದೊಯ್ಯುತ್ತದೆ, ಅಲ್ಲಿ ಗೊಂದಲಗೊಂಡ ಮತ್ತು ಭಯದಿಂದ ತುಂಬಿದ ಶಿಷ್ಯರು ಪುನರುತ್ಥಾನಗೊಂಡ ಕ್ರಿಸ್ತರನ್ನು ಭೇಟಿಯಾಗುತ್ತಾರೆ. "ನಿಮಗೆ ಶಾಂತಿ ಸಿಗಲಿ" ಎಂದು ಹೇಳುವ ಅವರ ಈ ವಾಕ್ಯವು ಅಥವಾ ಪದಗಳು, ಭಯ, ವೈಫಲ್ಯ ಮತ್ತು ಸಂದೇಹವನ್ನು ಅವರಿಂದ ನಿರ್ಮೂಲ ಮಾಡುವ ಪದಗಳಾಗಿವೆ. ಈ ಶಾಂತಿಯು, ಈ ದೈವಿ ಕರುಣೆಯೇ ಪುನರುತ್ಥಾನಗೊಂಡ ಪ್ರಭು ಯೇಸು ಕ್ರಿಸ್ತರು ತನ್ನ ಧರ್ಮಸಭೆಗೆ ನೀಡಿದ ಮೊದಲ ಕೊಡುಗೆಯಾಗಿದೆ.
ಇಂದು, ನಾವು ಈ ಶುಭಸಂದೇಶವನ್ನು ಧ್ಯಾನಿಸುವಾಗ, ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ನೆರಳಿನಲ್ಲಿ ನಾವು ಹಾಗೆ ಮಾಡುತ್ತೇವೆ, ಒಬ್ಬ ಸಾಧಾರಣ ಕುರುಬನು ಪ್ರಭುವಿನಂತೆ ಸೇವೆ ಸಲ್ಲಿಸಿದರು, ಭಯದಲ್ಲಿ ಸಿಲುಕಿರುವ ಲೋಕಕ್ಕೆ ನಿರಂತರವಾಗಿ ಶಾಂತಿಯನ್ನು ಹೇಳುತ್ತಿದ್ದ ಒಬ್ಬ ಉತ್ತಮ ಕುರುಬರಾಗಿದ್ದರು. ಅವರ ವಿಶ್ವಗುರುವಿನ ಹುದ್ದೆಯನ್ನು ಅನೇಕ ವಿಷಯಗಳಿಗಾಗಿ ಸ್ಮರಿಸಲಾಗುವುದು, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರ ಕರುಣೆಯ ಅಚಲ ಘೋಷಣೆಗಾಗಿ ಸ್ಮರಿಸಲಾಗುವುದು. ಅವರು ದೈವಿ ಕರುಣೆಯನ್ನು ಜೀವನದಲ್ಲಿ ಬದುಕಿ ತೋರಿಸಿದರು. ಬಡವರನ್ನು ಅಪ್ಪಿಕೊಳ್ಳುವುದಾಗಲಿ, ಅಂಚಿನಲ್ಲಿದ್ದವರನ್ನು ಧರ್ಮಸಭೆಗೆ ಆಹ್ವಾನಿಸುವುದಾಗಲಿ, ಅಥವಾ ಗಾಯಗೊಂಡು ಮರೆತುಹೋದವರಿಗೆ ಪ್ರೀತಿಯ ಮೃದುತ್ವವದ ಕಾಳಜಿಯನ್ನು ನೀಡುವುದಾಗಲಿ, ವಿಶ್ವಗುರು ಫ್ರಾನ್ಸಿಸ್ ರವರು ಕ್ರಿಸ್ತರ ಸಹಾನುಭೂತಿಯನ್ನು ಉಸಿರಾಡುತ್ತಿರುವ ಧರ್ಮಸಭೆಗೆ ಸಾಕ್ಷಿಯಾದರು.
ಇಂದಿನ ಶುಭಸಂದೇಶದಲ್ಲಿ, ಯೇಸು ತನ್ನ ಗಾಯಗಳನ್ನು ಶಿಷ್ಯರಿಗೆ ತೋರಿಸುತ್ತಾರೆ. ಅವರು ತನ್ನ ಯಾತನೆಯ ಗುರುತುಗಳನ್ನು ಮರೆಮಾಡುವುದಿಲ್ಲ, ಬದಲಿಗೆ ಅವುಗಳನ್ನು ಪ್ರೀತಿಯ ಚಿಹ್ನೆಗಳಾಗಿ ಪರಿವರ್ತಿಸುತ್ತಾರೆ. ಈ ಗಾಯಗಳಿಂದಲೇ ಅಥವಾ ದರ ಮೂಲಕವೇ ಕರುಣೆ ಹರಿಯುತ್ತದೆ. ಈ ಗಾಯಗಳ ಮೂಲಕವೇ ಸಂತ ಥೋಮಾಸ್ ರವರು ಕ್ರಿಸ್ತರನ್ನು ವಿಶ್ವಾಸಿಸಲು ಪ್ರಾರಂಭಿಸುತ್ತಾನೆ, ವಾದದಿಂದಲ್ಲ, ಆದರೆ ಮುಖಾಮುಖಿಯಾಗಿ ಎದುರುಗೊಂಡು ಅವರನ್ನು ಮತ್ತು ಅವರ ಮಿತಿಯಿಲ್ಲದ ಪ್ರೀತಿ ಹಾಗೂ ಕ್ಷಮೆಯನ್ನು ಅನುಭವಿಸುವುದರ ಮೂಲಕ, ಯೇಸು ಥೋಮಾಸ್ ರವರನ್ನು ಅವನ ಸಂದೇಹದಲ್ಲಿ ಭೇಟಿಯಾಗುತ್ತಾರೆ ಮತ್ತು ಕರುಣೆಯ ಮೂಲಕ ಅವನನ್ನು ವಿಶ್ವಾಸಿಸದತ್ತ ಸೆಳೆಯುತ್ತಾರೆ.
ಕರುಣೆಯು ಎಂದಿಗೂ ಅಮೂರ್ತವಲ್ಲ ಎಂದು ವಿಶ್ವಗುರು ಫ್ರಾನ್ಸಿಸ್ ರವರು ನಮಗೆ ಆಗಾಗ್ಗೆ ನೆನಪಿಸುತ್ತಿದ್ದರು. ಅದಕ್ಕೆ ಒಂದು ಮುಖವಿದೆ, ಆ ಮುಖವೇ, ಯೇಸು ಕ್ರಿಸ್ತರು ಮತ್ತು ಅದಕ್ಕೆ ನಮ್ಮದೇ ಆದ ಕೈಗಳಿವೆ, ಅದು ಬಳಲುತ್ತಿರುವ, ಅನುಮಾನಿಸುವ, ಹೊರಗಿಡಲ್ಪಟ್ಟವರನ್ನು ನಮ್ಮ ನೆರವಿನ ಹಸ್ತಗಳು ಅವರನ್ನು ತಲುಪಬೇಕು. ಈ ರೀತಿಯಾಗಿ, ದೈವಿ ಕರುಣೆಯ ಸಂದೇಶವು ಕೇವಲ ಕ್ಷಮೆಯನ್ನು ಪಡೆಯುವುದರ ಬಗ್ಗೆ ಅಲ್ಲ, ಬದಲಿಗೆ ಜಗತ್ತಿನಲ್ಲಿ ಕರುಣೆಯ ಸಾಧನಗಳಾಗುವುದರ ಬಗ್ಗೆ ಬೋಧಿಸುತ್ತದೆ.
ವಿಶ್ವಗುರು ಫ್ರಾನ್ಸಿಸ್ ರವರ ನಿಧನಕ್ಕೆ ಧರ್ಮಸಭೆಯು ಶೋಕ ವ್ಯಕ್ತಪಡಿಸುತ್ತಿರುವಾಗ, ಕರುಣೆಯು ಶುಭಸಂದೇಶದ ಮತ್ತು ಧರ್ಮಸಭೆಯ ಧ್ಯೇಯದ ಹೃದಯಭಾಗ ಎಂದು ನಮಗೆ ನೆನಪಿಸಲಾಗುತ್ತದೆ. ಅವರ ಅಂತಿಮ ಸಾಕ್ಷಿ, ಸಾವಿನಲ್ಲೂ ಸಹ, ನಮ್ಮನ್ನು ಮತ್ತೆ ಮೂಲಭೂತ ವಿಷಯಗಳಿಗೆ ಮರಳಲು ಆಹ್ವಾನಿಸುತ್ತದೆ: ಕ್ರಿಸ್ತನ ಕಡೆಗೆ, ಸಹಾನುಭೂತಿಗೆ, ಸಮುದಾಯಕ್ಕೆ ಮರಳಲು ಆಹ್ವಾನಿಸುತ್ತದೆ.
ನಾವು ಸಹ ಥೋಮಸ್‌ರಂತೆ - ಕ್ರಿಸ್ತರ ಗಾಯಗಳಿಗೆ ನಮ್ಮ ಕೈಗಳನ್ನು ಇಡಲು ಆಹ್ವಾನಿಸಲ್ಪಟ್ಟಿದ್ದೇವೆ, ಪುರಾವೆಗಾಗಿ ಪರೀಕ್ಷಿಸಲು ಅಲ್ಲ, ಆದರೆ ಗುಣಮುಖರಾಗಲು. ಕುತೂಹಲವನ್ನು ಪರೀಕ್ಷಿಸಿಕೊಂಡು ತೃಪ್ತಿ ಪಡಯುವುಕ್ಕಲ್ಲ, ಬದಲಿಗೆ, ಇನ್ನೂ ಹಚ್ಚು ಆಳವಾಗಿ ವಿಶ್ವಾಸಿಸಲು. "ನನ್ನ ಪ್ರಭು ಮತ್ತು ನನ್ನ ದೇವರು" ಎಂದು ಆತನೊಂದಿಗೆ ಘೋಷಿಸಲು ಮತ್ತು ಆ ತಪ್ಪೊಪ್ಪಿಗೆಯು ನಮ್ಮ ಜೀವನವನ್ನು ರೂಪಿಸಲು ನಮಗೆ ಆಹ್ವಾನ ನೀಡಲಾಗಿದೆ.
ವಿಶ್ವಗುರು ಫ್ರಾನ್ಸಿಸ್ ರವರನ್ನು ನಾವು ಕೃತಜ್ಞತೆಯಿಂದ ಸ್ಮರಿಸೋಣ, ಅವರ ಧೈರ್ಯ, ಮೃದುತ್ವ ಮತ್ತು ದೇವರ ಕರುಣೆಯ ಮೇಲಿನ ಅವರ ಅಚಲ ವಿಶ್ವಾಸಕ್ಕಾಗಿ. ಅವರು ನಿಷ್ಠೆಯಿಂದ ಸೇವೆ ಸಲ್ಲಿಸಿದ ಧರ್ಮಸಭೆ ಬೆಳಗಲು ಸಹಾಯ ಮಾಡಿದ ಹಾದಿಯಲ್ಲಿ ನಾವು ಮುಂದುವರಿಯಲೆಂದು: ಅದು ನಮ್ರತೆ, ಮುಖಾಮುಖಿಯಾಗಿ ಎದುರುಗೊಂಡು, ಪ್ರೀತಿಯಿಂದ ಗುರುತಿಸಲ್ಪಟ್ಟ ಹಾದಿಯಾಗಿದೆ.
ಇಂದು ನಾವು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈಸ್ಟರ್ ಹಬ್ಬದ ಭರವಸೆಯೊಂದಿಗೆ ಪ್ರಾರ್ಥಿಸೋಣ. ಶಿಷ್ಯರ ಮೇಲೆ ಶಾಂತಿಯ ಶ್ವಾಸವನ್ನೂದಿದ ಪುನರುತ್ಥಾನಗೊಂಡ ಪ್ರಭುವು, ಈಗ ತನ್ನ ಸೇವಕನನ್ನು ಅದೇ ಮಾತುಗಳಿಂದ ತನ್ನ ಆಸ್ಥಾನಕ್ಕೆ ಸ್ವಾಗತಿಸುತ್ತಾರೆ: "ನಿಮಗೆ ಶಾಂತಿ ಸಿಗಲಿ."