MAP

2025.04.25 Card. Vincent Nichols Basilica Vaticana 2025.04.25 Card. Vincent Nichols Basilica Vaticana 

ಕಾರ್ಡಿನಲ್ ನಿಕೋಲ್ಸ್: ವಿಶ್ವಗುರು ಫ್ರಾನ್ಸಿಸ್ ರವರ ಸೇವಾಧಿಕಾರವನ್ನು ಅರ್ಥಮಾಡಿಕೊಳ್ಳಲು 'ಡೈಲೆಕ್ಸಿಟ್ ನೋಸ್' ಕೀಲಿಕೈ

ವೆಸ್ಟ್‌ಮಿನಿಸ್ಟರ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ವಿನ್ಸೆಂಟ್ ನಿಕೋಲ್ಸ್ ರವರು ವ್ಯಾಟಿಕನ್ ಸುದ್ಧಿಗೆ, ದಿವಂಗತ ವಿಶ್ವಗುರುಗಳ ಸೇವೆಯ ನಿರ್ಣಾಯಕ ಪಾತ್ರದ ಬಗ್ಗೆ ವೈಯಕ್ತಿಕ ಪ್ರತಿಬಿಂಬವನ್ನು ನೀಡುತ್ತಾರೆ: ದೇವರೊಂದಿಗಿನ ಸಂಬಂಧದಲ್ಲಿ ಆಳವಾಗಿ ಬೇರೂರಿರುವ ಸಂತೋಷ ಮತ್ತು ಭರವಸೆ.

ಡೊರೊಟಾ ಅಬ್ದೆಲ್ಮೌಲಾ-ವಿಯೆಟ್

"ವಿಶ್ವಗುರು ಫ್ರಾನ್ಸಿಸ್ ರವರ ಬಗ್ಗೆ ನನ್ನ ನೆನಪುಗಳು ಯಾವಾಗಲೂ ಅವರ ಮುಖದ ಸುತ್ತ ಕೇಂದ್ರೀಕೃತವಾಗಿರುತ್ತವೆ. ಅವರು ಯಾವಾಗಲೂ ನಗುವಿನೊಂದಿಗೆ ಸಂತೋಷವನ್ನು ಹೊರಸೂಸುತ್ತಿದ್ದ ವ್ಯಕ್ತಿಯಾಗಿದ್ದರು" ಎಂದು ವೆಸ್ಟ್‌ಮಿನಿಸ್ಟರ್‌ನ ಮಹಾಧರ್ಮಾಧ್ಯಕ್ಷರು ವಿಶ್ವಗುರು ಫ್ರಾನ್ಸಿಸ್ ರವರನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ. "ಇದು ತನ್ನದೇ ಆದ ಸಂತೋಷ ಅಥವಾ ಆಶಾವಾದವಲ್ಲ" ಆದರೆ "ಕ್ರಿಸ್ತರೊಂದಿಗೆ ನಾವು ಹೊಂದಿರುವ ಆ ಮೊದಲ ಸಂಬಂಧದ ತೆರೆಯುವಿಕೆ" ಎಂದು ಅವರು ಒತ್ತಿ ಹೇಳುತ್ತಾರೆ.

"ನನಗೆ ಹೊಳೆಯುವ ಇನ್ನೊಂದು ವಿಷಯವೆಂದರೆ ಅವರು ಯಾವಾಗಲೂ ಜನರ ಜೀವನದಲ್ಲಿ ಭರವಸೆಯ ಭಾವನೆಯನ್ನು ತಿಳಿಸಲು ಮತ್ತು ಬಲಪಡಿಸಲು ಬಯಸುತ್ತಿದ್ದರು" ಎಂದು ಅವರು ಹೇಳುತ್ತಾರೆ. "ಯಾರಾದರೂ ಯಾವುದೇ ತೊಂದರೆಗಳಿಗೆ ಸಿಲುಕಿದರೂ, ದೇವರ ಕರುಣೆ ಇದೆ ಎಂದು ಅರ್ಥಮಾಡಿಸುವ ಮೂಲಕ ನಾವು ತೊಂದರೆಗಳನ್ನು ಮೀರಿ ಜೀವನವನ್ನು ನೋಡಬೇಕೆಂದು ಬಯಸುತ್ತಾರೆ."

ಡೈಲೆಕ್ಸಿಟ್ ನೋಸ್

ವಿಶ್ವಗುರು ಫ್ರಾನ್ಸಿಸ್ ರವರ ಹಲವಾರು ಪಠ್ಯಗಳಲ್ಲಿ, ಕಾರ್ಡಿನಲ್ ನಿಕೋಲ್ಸ್ ರವರ ಅಂತಿಮ ವಿಶ್ವ ಪರಿಪತ್ರವಾದ ಡೈಲೆಕ್ಸಿಟ್ ನೋಸ್ ನ್ನು ಅತ್ಯಂತ ಬಹಿರಂಗಪಡಿಸುವ ಗ್ರಂಥವೆಂದು ಪ್ರತ್ಯೇಕಿಸುತ್ತಾರೆ: "ಅವರು ಕಲಿಸಿದ ಮತ್ತು ಮಾಡಿದ ಉಳಿದೆಲ್ಲ ಕಾರ್ಯಗಳೆಲ್ಲವೂ ವಾಸ್ತವವಾಗಿ ಅದರ ಮೇಲೆ ಆಧಾರಿತವಾಗಿದೆ ಎಂದು ನಾನು ಭಾವಿಸುತ್ತೇನೆ. ವೆಸ್ಟ್‌ಮಿನಿಸ್ಟರ್‌ನ ಮಹಾಧರ್ಮಾಧ್ಯಕ್ಷರಿಗೆ, ವಿಶ್ವ ಪರಿಪತ್ರವು "ಶಿಷ್ಯ ಮತ್ತು ಯೇಸುವಿನ ನಡುವಿನ ಹೃದಯದಿಂದ ಹೃದಯದ ಸಂಬಂಧ" ವಿಶ್ವಗುರು ಫ್ರಾನ್ಸಿಸ್ ರವರ ಆಳವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಅವರು ತಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದ ಪಠ್ಯದ ಒಂದು ಭಾಗವನ್ನು ನೆನಪಿಸಿಕೊಳ್ಳುತ್ತಾರೆ, ಅದು ಪ್ರತಿಯೊಬ್ಬರ ಹೆಸರು ಪ್ರಭುದೇವರ ಹೃದಯದಲ್ಲಿ ಕೆತ್ತಲ್ಪಟ್ಟಿದೆ ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ (ಡೈಲೆಕ್ಸಿಟ್ ಸಂಖ್ಯೆ, 115). "ಯೇಸುವಿನ ಹೆಸರು ನನ್ನ ಹೃದಯದಲ್ಲಿ ಬರೆಯಲ್ಪಟ್ಟಿರಬಹುದು ಎಂದು ನನಗೆ ಅರ್ಥವಾಗುತ್ತದೆ, ಆದರೆ ಇನ್ನೊಂದು ರೀತಿಯಲ್ಲಿ ಅದು ಇನ್ನೂ ಹೆಚ್ಚು ಆಶ್ಚರ್ಯಕರವಾಗಿದೆ." ಆ ಆಶ್ಚರ್ಯಕರ ಸತ್ಯವೇ "ಆನಂದಕ್ಕೆ ಕಾರಣವಾಗುತ್ತದೆ. ಮತ್ತು ಅದುವೇ ಭರವಸೆಗೆ ಕಾರಣವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಫ್ರಾಟೆಲ್ಲಿ ಟುಟ್ಟಿ

ವಿಶ್ವಗುರು ಫ್ರಾನ್ಸಿಸ್ ರವರ ಕ್ರಿಸ್ತ-ಕೇಂದ್ರಿತ ಆಧ್ಯಾತ್ಮಿಕತೆಯು ಅವರ ವಿಶಾಲ ಸಾಮಾಜಿಕ ಮತ್ತು ನೈತಿಕ ದೃಷ್ಟಿಕೋನಕ್ಕೆ ಕಾರಣವಾಯಿತು ಎಂದು ಕಾರ್ಡಿನಲ್ ನಿಕೋಲ್ಸ್ ರವರು ಹೇಳುತ್ತಾರೆ. ವಿಶ್ವಗುರುವಿನ ವಿಶ್ವ ಪರಿಪತ್ರ ಫ್ರಾಟೆಲ್ಲಿ ಟುಟ್ಟಿಯನ್ನು ಉಲ್ಲೇಖಿಸುತ್ತಾ, ಅದು ಮಾನವ ವ್ಯಕ್ತಿಯ ರೂಪಾಂತರಗೊಂಡ ದೃಷ್ಟಿಕೋನವನ್ನು ಹೇಗೆ ಆಹ್ವಾನಿಸುತ್ತದೆ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ: "ನಾವು ಒಬ್ಬರನ್ನೊಬ್ಬರು ಸಹೋದರ ಮತ್ತು ಸಹೋದರಿಯಾಗಿ ಮಾತ್ರವಲ್ಲ, ನಾನು ಯಾರೇ ಆಗಿರಲಿ ಕ್ರಿಸ್ತರನ್ನು ನನ್ನ ಬಳಿಗೆ ತರುವ ವ್ಯಕ್ತಿಯಾಗಿಯೂ ನೋಡಲು ಪ್ರಾರಂಭಿಸುತ್ತೇವೆ."

ಈ ದೃಷ್ಟಿಕೋನವು ಸಮಾಜವನ್ನೇ ಪುನರ್ರೂಪಿಸುತ್ತದೆ ಎಂದು ಅವರು ಸೂಚಿಸುತ್ತಾರೆ: "ನೀವು ಸಮಾಜದ ರಚನೆಯನ್ನು ವಿಭಿನ್ನ ಬೆಳಕಿನಲ್ಲಿ ನೋಡಲು ಪ್ರಾರಂಭಿಸುತ್ತೀರಿ. ಅದು ಸತ್ಯದ ಬಯಕೆ, ಪರಸ್ಪರ ಸೇವೆ ಸಲ್ಲಿಸುವ ಬಯಕೆ ಮತ್ತು ಒಂದು ಕುಟುಂಬ, ಮಾನವ ಕುಟುಂಬ ಎಂಬ ಒಂದು ಮಾದರಿ ಮತ್ತು ಜೀವನದ ವಿಧಾನವಾಗಿರುವ ಸಮಾಜವನ್ನು ನಿರ್ಮಿಸುವ ಬಯಕೆಯೊಂದಿಗೆ ಸಂಬಂಧಿಸಿದೆ. ಈ ಬಯಕೆಯ ಸೇವೆ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ."

ವಿಶ್ವಗುರು ಫ್ರಾನ್ಸಿಸ್ ರವರು ಮತ್ತು ಪರಿಧಿಗಳು

ಫ್ರಾನ್ಸಿಸ್ ರವರನ್ನು "ಪರಿಧಿಗಳ ವಿಶ್ವಗುರು" ಎಂದು ಸ್ಮರಿಸಲಾಗುತ್ತದೆ ಮತ್ತು ಈ ಧ್ಯೇಯ ದೃಢವಾಗಿ, ವಿವಿಧ ಕ್ಷೇತ್ರಗಳಲ್ಲಿ ಒಂದಾದ, ಈ ಮಾನವ ಕಳ್ಳಸಾಗಣೆ ವಿರುದ್ಧದ ಹೋರಾಟವಾಗಿತ್ತು. "ಮಾನವ ಕಳ್ಳಸಾಗಣೆಯನ್ನು ಅವರು ನೋಡಿದ ರೀತಿ ಸಂತ್ರಸ್ತರುಗಳ ದೃಷ್ಟಿಕೋನದಿಂದ ಇತ್ತು" ಎಂದು ಕಾರ್ಡಿನಲ್ ನಿಕೋಲ್ಸ್ ರವರು ಹೇಳುತ್ತಾರೆ, ಆಧುನಿಕ ಗುಲಾಮಗಿರಿಯನ್ನು ತಡೆಗಟ್ಟಲು ಮತ್ತು ಪೊಲೀಸ್ ಹಾಗೂ ಗಡಿ ಅಧಿಕಾರಿಗಳು, ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಮಹಿಳೆಯರ ನಾಯಕರನ್ನು ಒಟ್ಟುಗೂಡಿಸುವ ಮೂಲಕ ಸಂತ್ರಸ್ತರುಗಳಿಗೆ ಸಹಾಯ ಮಾಡಲು 2014ರಲ್ಲಿ ರಚಿಸಲಾದ ಸಾಂತಾ ಮಾರ್ಟಾ ಗುಂಪನ್ನು ಉಲ್ಲೇಖಿಸುತ್ತಾರೆ. ಸಂತ್ರಸ್ತರುಗಳು ಹೆಚ್ಚಾಗಿ ತಮ್ಮ ಭರವಸೆಯನ್ನು ನಂಬುತ್ತಾರೆ. ಮಾನವ ಕಳ್ಳಸಾಗಣೆ ಮಾನವೀಯತೆಯ ದೇಹದಲ್ಲಿ ಒಂದು ಗಂಭೀರ ಗಾಯವಾಗಿದೆ ಮತ್ತು ಆದ್ದರಿಂದ ಅದು ಕ್ರಿಸ್ತರ ದೇಹದಲ್ಲಿ ಒಂದು ಗಾಯವಾಗಿದೆ" ಎಂಬ ವಾಕ್ಯಗಳನ್ನು ಅವರು ಬಳಸಿದರು.

28 ಏಪ್ರಿಲ್ 2025, 10:37