MAP

Fr. Francesco Patton, Custos of the Holy Land Fr. Francesco Patton, Custos of the Holy Land  (EPA)

ಪವಿತ್ರ ನಾಡಿನ ಪಾಲನೆಯು ಈಸ್ಟರ್ ತರುವ ಭರವಸೆಯನ್ನು ನೆನಪಿಸಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸುತ್ತದೆ

ಪವಿತ್ರ ನಾಡಿನ ಪಾಲಕರಾದ ಫಾ. ಫ್ರಾನ್ಸೆಸ್ಕೊ ಪ್ಯಾಟನ್ ರವರು, ಪ್ರಭುಯೇಸುವಿನ ಪುನರುತ್ಥಾನವನ್ನು ಮಹಾನ್ ಭರವಸೆಯಿಂದ ಆಚರಿಸಲು ಮತ್ತು ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಭೂಕಂಪಗಳು, ಆರ್ಥಿಕ ಬಿಕ್ಕಟ್ಟುಗಳು ಮತ್ತು ವಿಪತ್ತುಗಳ ಬಗ್ಗೆ ಮಾತನಾಡುವ, ನಾವು ವಾಸಿಸುತ್ತಿರುವ ಸನ್ನಿವೇಶಗಳ ಭಾರವಾದ ಕಲ್ಲಿನ ಕೆಳಗೆ ಪುಡಿಪುಡಿಯಾಗುವುದನ್ನು ತಪ್ಪಿಸಲು ಭಕ್ತವಿಶ್ವಾಸಿಗಳನ್ನು ಆಹ್ವಾನಿಸುತ್ತಾರೆ.

ಫಾದರ್‌ ಫ್ರಾನ್ಸೆಸ್ಕೊ ಪ್ಯಾಟನ್, OFM

ಈ ಒಂಬತ್ತು ವರ್ಷಗಳಲ್ಲಿ ಪ್ರಭುಯೇಸುವಿನ ಪುನರುತ್ಥಾನ ಮತ್ತು ಅವರ ಮೊದಲ ದರ್ಶನಗಳನ್ನು ನೆನಪಿಸುವ ಸ್ಥಳಗಳಿಂದ ನಿಮಗೆ ಈಸ್ಟರ್ ಶುಭಾಶಯಗಳನ್ನು ಸಲ್ಲಿಸಲು ನನಗೆ ಸಂತೋಷ ಮತ್ತು ಸವಲತ್ತು ಸಿಕ್ಕಿದೆ: ಖಾಲಿ ಸಮಾಧಿ ಮತ್ತು ಹತ್ತಿರದ ಪ್ರಾರ್ಥನಾ ಮಂದಿರಗಳು, ಅವರ ತಾಯಿ, ಮೇರಿ ಮಗ್ಡಲೀನ್ ಮತ್ತು ಮಹಿಳೆಯರೊಂದಿಗಿನ ಭೇಟಿಯನ್ನು; ಪ್ರಭುಯೇಸು ರೊಟ್ಟಿ ಮುರಿಯುವಾಗ ತನ್ನನ್ನು ತಾನು ಗುರುತಿಸಿಕೊಳ್ಳುವ ಎಮ್ಮೌಸ್; ಈಸ್ಟರ್ ಸಂಜೆ ಮತ್ತು ಮೇಲಿನ ಕೊಟ್ಟಡಿಯಲ್ಲಿ ಎಂಟು ದಿನಗಳ ನಂತರ ಶಿಷ್ಯರಿಗೆ ಅವನು ಕಾಣಿಸಿಕೊಳ್ಳುವ ಸಂಗತಿಗಳನ್ನು ನೆನಪಿಸುತ್ತದೆ.

ಈ ವರ್ಷ ನಾನು ನಿಮಗೆ ಮತ್ತೊಂದು ವಿಶೇಷ ಸ್ಥಳದಿಂದ ನನ್ನ ಶುಭಾಶಯಗಳನ್ನು, ಅಂದರೆ ಕಪೆರ್ನೌಮ್ ನಿಂದ ದೂರದಲ್ಲಿರುವ ಗಲಿಲೀಯ ಸಮುದ್ರದ ತೀರದಲ್ಲಿರುವ, ತಬ್ಘಾ, ಅಷ್ಟಭಾಗ್ಯಗಳ ಪರ್ವತ ಮತ್ತು ಮಗ್ದಲದಿಂದ ಶುಭಾಶಯಗಳನ್ನು ಅರ್ಪಿಸಲು ಬಯಸುತ್ತೇನೆ.

ಪ್ರಭುಯೇಸುವು ಮಗ್ದಲದ ಮರಿಯಳನ್ನು ತಾನು ಎದ್ದಿದ್ದೇನೆಂದೂ, ಅವರಗಿಂತ ಮುಂಚಿತವಾಗಿಯೇ ಗಲಿಲಾಯಕ್ಕೆ ಹೋಗುತ್ತಿದ್ದೇನೆಂದೂ, ಅಲ್ಲಿ ಅವರು ತನ್ನನ್ನು ಮತ್ತೆ ಭೇಟಿಯಾಗುತ್ತಾರೆಂದೂ, ಮೂರು ವರ್ಷಗಳ ಹಿಂದೆಯೇ ಎಲ್ಲವೂ ಆರಂಭವಾದ ಸ್ಥಳದಿಂದಲೇ ತಿಳಿಸುವಂತೆ ಕೇಳಿಕೊಂಡರು.

ಸರೋವರದ ದಡದಲ್ಲಿರುವ ತಬ್ಘಾದಲ್ಲಿ, ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದ ಮತ್ತು ಪ್ರಭುಯೇಸುವಿನ ಮರಣದಿಂದ ಭಯಭೀತರಾಗಿದ್ದ ಹಾಗೂ ತಮ್ಮ ದೈವಕರೆಯನ್ನು ಮುಂದೂಡಿದಂತೆ ಕಂಡ ಪೇತ್ರ ಮತ್ತು ಇತರ ಆರು ಶಿಷ್ಯರಿಗೆ ಯೇಸು ಕಾಣಿಸಿಕೊಳ್ಳುತ್ತಾರೆ. ತಬ್ಘಾದಲ್ಲಿ, ಪುನರುತ್ಥಾನಗೊಂಡ ಯೇಸು ಭಾನುವಾರ ಮುಂಜಾನೆ ಇನ್ನೂ ಕತ್ತಲಾಗಿದ್ದಗಲೇ ಕಾಣಿಸಿಕೊಳ್ಳುತ್ತಾರೆ.

ಪುನರುತ್ಥಾನಗೊಂಡವರು ಕಾಣಿಸಿಕೊಂಡು ಮತ್ತೊಮ್ಮೆ ಮೀನು ಹಿಡಿಯಲು ಕೇಳುತ್ತಾರೆ, ಆದರೆ ಈಗ ಮೀನುಗಾರಿಕೆ ನಿರರ್ಥಕವೆಂದು ತೋರುತ್ತದೆ. ಅಂದರೆ, ಆತನು ನಮ್ಮನ್ನು ಮತ್ತೊಮ್ಮೆ ಮತ್ತು ಕೊನೆಯವರೆಗೂ ವಿಶ್ವಾಸಿಸುವಂತೆ ಕೇಳುತ್ತಾರೆ. ಏಕೆಂದರೆ ಆತನು ಮಾತ್ರ ನಮ್ಮ ವೈಫಲ್ಯಗಳನ್ನು ಹಿಮ್ಮೆಟ್ಟಿಸಲು ಮತ್ತು ನಮ್ಮ ಶೂನ್ಯತೆಯನ್ನು ತುಂಬಲು ಸಮರ್ಥನಾಗಿದ್ದಾರೆ.

ನಾವು ಈಸ್ಟರ್ ಆಚರಿಸಲು ಬಯಸಿದರೆ, ಅದನ್ನು ಸಂಪೂರ್ಣವಾಗಿ ಆಚರಿಸಲು ಬಯಸಿದರೆ, ನಾವು ಕೂಡ ಖಾಲಿ ಸಮಾಧಿಯಲ್ಲಿ ಬಂಧಿಯಾಗಿ ಉಳಿಯದಿರಲು ಕಲಿಯಬೇಕು. ಪುನರುತ್ಥಾನಗೊಂಡ ಯೇಸು ನಮ್ಮ ಮುಂದೆ ಬರುತ್ತಾರೆ ಮತ್ತು ನಮ್ಮ ಮುಂದೆ ನಡೆಯುತ್ತಾರೆ.

ನಾವು ಈಸ್ಟರ್ ಆಚರಿಸಲು ಬಯಸಿದರೆ, ನಾವು ವಾಸಿಸುವ ಸನ್ನಿವೇಶಗಳ ಭಾರವಾದ ಕಲ್ಲಿನ ಕೆಳಗೆ ನಾವು ನಲುಗಿ ಉಳಿಯಲು ಸಾಧ್ಯವಿಲ್ಲ, ಅವು ವೈಫಲ್ಯ ಮತ್ತು ಸಾವಿನ ಬಗ್ಗೆ ಮಾತನಾಡುತ್ತವೆ: ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಭೂಕಂಪಗಳು, ಆರ್ಥಿಕ ಬಿಕ್ಕಟ್ಟುಗಳು, ನೈಸರ್ಗಿಕ ವಿಕೋಪಗಳು ಮತ್ತು ನಮ್ಮ ಮಾನವ ಅಜಾಗರೂಕತೆಯಿಂದ ಮತ್ತು ಕೆಲವೊಮ್ಮೆ ನಮ್ಮ ಮಾನವ ಕ್ರೌರ್ಯದಿಂದ ಉಂಟಾಗುವ ವಿಪತ್ತುಗಳು.

ಪುನರುತ್ಥಾನಗೊಂಡ ಯೇಸು ಈಗಾಗಲೇ ಇದನ್ನೆಲ್ಲಾ ಜಯಿಸಿ ನಮ್ಮನ್ನು ಕೇಳುತ್ತಾನೆ: "ನೀವು ನನ್ನನ್ನು ಸಂಪೂರ್ಣವಾಗಿ ವಿಶ್ವಾಸಿಸುವಷ್ಟು ಪ್ರೀತಿಸುತ್ತೀರಾ? ನೀವು ನನ್ನೊಂದಿಗೆ ಮತ್ತೆ ನಿಮ್ಮ ಜೀವನವನ್ನು ಪ್ರಾರಂಭಿಸಲು ಸಿದ್ಧರಿದ್ದೀರಾ? ನನ್ನನ್ನು ನಿಮ್ಮ ಜೀವನದ ಕೇಂದ್ರವಾಗಿ ಇರಿಸಲು ನೀವು ಬಯಸುತ್ತೀರಾ?" ಆಗ ಮಾತ್ರ ಆತನು ಮತ್ತೊಮ್ಮೆ ನಮಗೆ ಹೇಳಲು ಸಾಧ್ಯವಾಗುತ್ತದೆ: "ನನ್ನನ್ನು ಅನುಸರಿಸಿ ಮತ್ತು ನಾನು ನಿಮಗೆ ಒಪ್ಪಿಸುವ ಜನರನ್ನು ನೋಡಿಕೊಳ್ಳಿ, ಮತ್ತು ನನ್ನೊಂದಿಗೆ ನಿಮ್ಮ ಜೀವನವನ್ನು ಜೀವಿಸಲು ಕಲಿಯಿರಿ".

ಆಗ ಮಾತ್ರ, ರಾತ್ರಿಯಾಗಿಲ್ಲದಿದ್ದರೂ ಹಗಲಾಗಿರದ ಸಮಯದಲ್ಲಿ ನಾವು ಆತನನ್ನು ಗುರುತಿಸಲು ಸಾಧ್ಯವಾಗುತ್ತದೆ ಮತ್ತು ಆತನಲ್ಲಿ ಭರವಸೆ ಇಡುವುದರಿಂದ ನಾವು ಎಂದಿಗೂ ನಿರಾಸೆಗೊಳ್ಳುವುದಿಲ್ಲ, ಮೋಸ ಹೋಗುವುದಿಲ್ಲ ಅಥವಾ ಗೊಂದಲಕ್ಕೊಳಗಾಗುವುದಿಲ್ಲ ಎಂಬ ಪವಿತ್ರ ಅನುಭವವನ್ನು ನಾವು ನಮ್ಮ ಜೀವನದಲ್ಲಿ ಅನುಭವಿಸುತ್ತೇವೆ ಮತ್ತು ಆತನೊಂದಿಗೆ ಶಾಶ್ವತವಾಗಿ ಈಸ್ಟರ್ ಕಡೆಗೆ ಕಾಲದ ಹಾದಿಯಲ್ಲಿ ನಾವು ಆತ್ಮವಿಶ್ವಾಸದಿಂದ ನಡೆಯಲು ಸಾಧ್ಯವಾಗುತ್ತದೆ.
 

19 ಏಪ್ರಿಲ್ 2025, 16:19