ಇಟಲಿಯಲ್ಲಿ 700 ಅಫ್ಘಾನ್ ನಿರಾಶ್ರಿತರನ್ನು ಸ್ವಾಗತಿಸಲು ಸಂತ ಎಜಿಡಿಯೊ ಸಮುದಾಯವು ಸಹಾಯ ಮಾಡಿದೆ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಇಟಾಲಿಯದ ಸರ್ಕಾರ ಹಾಗೂ ಇಟಾಲಿಯ ಮೂಲದ ಅಂತರರಾಷ್ಟ್ರೀಯ ಸಂಘಗಳ ಸಹಯೋಗದೊಂದಿಗೆ, ಸಂತ ಎಜಿಡಿಯೊ ಸಮುದಾಯದ ದೀರ್ಘಕಾಲದ 'ಮಾನವೀಯ ಕಾರಿಡಾರ್‌ಗಳ ' ಕಾರ್ಯಕ್ರಮದ ಹೊಸ ಒಪ್ಪಂದಕ್ಕೆ ಧನ್ಯವಾದಗಳು, ಅಪಾರ ಸಂಕಷ್ಟದ ನಂತರ 700 ಆಫ್ಘಾನಿನ ನಿರಾಶ್ರಿತರನ್ನು ಇಟಲಿಗೆ ಸ್ವಾಗತಿಸಲಾಗುವುದು.
ಸಮುದಾಯವು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಅದರ ಅಧ್ಯಕ್ಷ ಮಾರ್ಕೊ ಇಂಪಾಗ್ಲಿಯಾಝೊರವರು, ಆಗಸ್ಟ್ 2021ರಲ್ಲಿ ಕಾಬೂಲ್‌ನಿಂದ ಸಾಮೂಹಿಕ ವಲಸೆಯ ನಂತರ ಬಹಳ ಸಂಕಷ್ಟದಲ್ಲಿ ತಮ್ಮ ದೇಶದಿಂದ ಪಲಾಯನ ಮಾಡಬೇಕಾಯಿತು ಮತ್ತು ಪುನರ್ವಸತಿಗಾಗಿ ಕಾಯುತ್ತಿರುವಾಗ ಅಂತರರಾಷ್ಟ್ರೀಯ ಸಮುದಾಯದಿಂದ ಮರೆತುಹೋಗಿದ್ದ ಆಫ್ಘಾನಿನ ಜನರಿಗೆ, ಇದು ಅಂತಿಮವಾಗಿ ಭರವಸೆಯ ಸಂಕೇತವಾಗಿದೆ ಎಂದು ಗಮನಿಸಿದರು.
ಒಟ್ಟಾರೆಯಾಗಿ, ಸಂತ ಎಜಿಡಿಯೊವು ವಿವಿಧ ಸಂಸ್ಥೆಗಳೊಂದಿಗೆ ಸೇರಿ ಉತ್ತೇಜಿಸಿದ 'ಮಾನವೀಯ ಕಾರಿಡಾರ್‌ಗಳ' ಉಪಕ್ರಮವು 8,200 ನಿರಾಶ್ರಿತರನ್ನು ಯುರೋಪಿಗೆ ಸುರಕ್ಷಿತವಾಗಿ ತಲುಪಲು ಅವಕಾಶ ಮಾಡಿಕೊಟ್ಟಿದೆ.
ಈ ಯೋಜನೆಯು ಸಂಪೂರ್ಣವಾಗಿ ಸ್ವಯಂ-ನಿಧಿಯಿಂದ ನಡೆಸಲ್ಪಡುತ್ತಿದ್ದು, ವ್ಯಾಪಕವಾದ ಆತಿಥ್ಯ ಜಾಲದ ಮೂಲಕ ಇದನ್ನು ಕೈಗೊಳ್ಳಲಾಗುತ್ತದೆ, ಇದನ್ನು ಇಟಾಲಿಯದ ಅನೇಕ ನಾಗರಿಕರ ಉದಾರತೆಯಿಂದ ಬೆಂಬಲಿಸಲಾಗುತ್ತದೆ ಹಾಗೂ ಭದ್ರತೆಯೊಂದಿಗೆ ಒಗ್ಗಟ್ಟನ್ನು ಸಂಯೋಜಿಸುವ ಯಶಸ್ವಿ ಮಾದರಿಯನ್ನು ಪ್ರತಿನಿಧಿಸುತ್ತದೆ.
ಇದಲ್ಲದೆ, ಆಫ್ಘಾನ್ ನಿರಾಶ್ರಿತರಿಗೆ ಸುಲಭ ಪ್ರವೇಶಕ್ಕೆ ಸಹಾಯ ಮಾಡುವ ಈ ಒಪ್ಪಂದವು ವಿಶೇಷವಾಗಿ ಮಹತ್ವದ್ದಾಗಿದೆ ಎಂದು ಶ್ರೀ ಇಂಪಾಗ್ಲಿಯಾಝೊರವರು ಸೂಚಿಸಿದರು, ಏಕೆಂದರೆ ಇದು ಇತಿಹಾಸದಲ್ಲಿ ರಾಷ್ಟ್ರಗಳ ನಡುವೆ ಯುದ್ಧಗಳು ಮತ್ತು ಉದ್ವಿಗ್ನತೆಗಳು ಹೆಚ್ಚಾಗುತ್ತಿರುವಾಗ ಬಂದಿದೆ. ನಿರಾಶ್ರಿತರನ್ನು ಸ್ವಾಗತಿಸಲು ಮತ್ತು ಸಂಯೋಜಿಸಲು ಮಾದರಿಯಾಗಿ ಮಾನವೀಯ ಕಾರಿಡಾರ್‌ಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಟಲಿಯದ ಆಂತರಿಕ ಸೇವಾ ಕಾರ್ಯದಲ್ಲಿ ಸೋಮವಾರ ಮಧ್ಯಾಹ್ನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸಮುದಾಯದ ಅಧ್ಯಕ್ಷರು ಈ ಹೇಳಿಕೆಗಳನ್ನು ನೀಡಿದರು. ಈ ಒಪ್ಪಂದವು ಇಟಲಿ ಮತ್ತು ನಿರ್ದಿಷ್ಟವಾಗಿ ಅದರ ಆಂತರಿಕ ಹಾಗೂ ವಿದೇಶಾಂಗ ವ್ಯವಹಾರಗಳ ಸೇವಾಕಾರ್ಯಗಳು, ಇಟಾಲಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನ, ಸಂತ ಎಜಿಡಿಯೊ, ಹಾಗೆಯೇ ಧರ್ಮಸಭೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘಗಳ ನಡುವೆ ಆಗಿದೆ.
ಈ ಒಪ್ಪಂದವು ನವೆಂಬರ್ 2021ರಲ್ಲಿ ಈಗಾಗಲೇ ಸಹಿ ಹಾಕಲಾದ ಒಪ್ಪಂದಕ್ಕೆ ಒಂದು ಅನುಬಂಧವಾಗಿದೆ, ಇದು 812 ಅಫ್ಘಾನ್ ನಾಗರಿಕರ ಆಗಮನವನ್ನು ಸಕ್ರಿಯಗೊಳಿಸಿತು, ನಂತರ ಅವರನ್ನು ಸಂಘಗಳು ಸ್ವಾಗತಿಸಿ ಸಂಯೋಜಿಸಿದವು.
ಇಟಲಿಯು ಈಗಾಗಲೇ 338 ವ್ಯಕ್ತಿಗಳಿಗೆ ಪ್ರವೇಶವನ್ನು ನೀಡಿದೆ ಮತ್ತು ಒಪ್ಪಂದವು ಅಧಿಕೃತಗೊಂಡ ನಂತರ, ಹೆಚ್ಚುವರಿ 362 ನಿರಾಶ್ರಿತರ ಪ್ರವೇಶದ ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕ ಮತ್ತು ಜುಲೈ ನಡುವೆ ಉಳಿದ ನಿರಾಶ್ರಿತರು ಆಗಮಿಸಲು ಅವಕಾಶ ನೀಡಲಾಗುವುದು.