ಕೈವ್‌ನಲ್ಲಿ ಯುದ್ಧ ಕೈದಿಗಳು ಮತ್ತು ಶಾಂತಿಗಾಗಿ ಧರ್ಮಸಭೆಯು ವಿಶೇಷ ಶಿಲುಬೆ ಹಾದಿಯನ್ನು ಆಚರಿಸಿದರು
ಸ್ವಿಟ್ಲಾನಾ ಡುಖೋವಿಚ್
ಯುದ್ಧಪೀಡಿತ ಉಕ್ರೇನ್‌ನ ಹೃದಯಭಾಗದಲ್ಲಿ, ಏಪ್ರಿಲ್ 11, ಶುಕ್ರವಾರದಂದು ರಾಜಧಾನಿ ಕೈವ್‌ನಲ್ಲಿ ಐತಿಹಾಸಿಕ ಸಂತ ಸೋಫಿಯಾ ಪ್ರಧಾನಾಲಯದ ಮುಂದೆ ವಿಶೇಷವಾದ ಶಿಲುಬೆ ಹಾದಿಯನ್ನು ಆಚರಿಸಲಾಯಿತು.
"ಕೈದಿಗಳಿಗಾಗಿ ಮತ್ತು ಉಕ್ರೇನ್‌ನಲ್ಲಿ ಶಾಂತಿಗಾಗಿ ಶಿಲುಬೆ ಹಾದಿ" ಎಂಬ ಶೀರ್ಷಿಕೆಯ ಈ ಆಚರಣೆಯಲ್ಲಿ ಮಾಜಿ ಯುದ್ಧ ಕೈದಿಗಳು, ಯುದ್ಧ ಅಂಗವಿಕಲರು, ದುಃಖಿತ ಸಂಬಂಧಿಕರು ಮತ್ತು ಕಣ್ಮರೆಯಾದ ಪ್ರೀತಿಪಾತ್ರರ ಸುದ್ದಿಗಾಗಿ ಇನ್ನೂ ಕಾಯುತ್ತಿರುವವರು ಭಾಗವಹಿಸಿದ್ದರು ಮತ್ತು ವಿವಿಧ ಕ್ರೈಸ್ತ ಧರ್ಮದ ಪಂಗಡಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿದರು. ಗ್ರೀಕ್ ಕಥೋಲಿಕರು, ರೋಮನ್ ಕಥೋಲಿಕರು, ಆರ್ಥೊಡಾಕ್ಸ್(ಸನಾತನ) ಮತ್ತು ಪ್ರೊಟೆಸ್ಟಂಟ್.
ಈ ಉಪಕ್ರಮವನ್ನು ಅಂತರರಾಷ್ಟ್ರೀಯ ಮಹಿಳಾ ಚಳುವಳಿಯು ಕುಟುಂಬ ಮೌಲ್ಯಗಳಿಗಾಗಿ ಆಯೋಜಿಸಿತ್ತು.
ಉಕ್ರೇನ್‌ನ ಪ್ರೇಷಿತ ರಾಯಭಾರಿ ಮಹಾಧರ್ಮಾಧ್ಯಕ್ಷರಾದ ವಿಶ್ವಲ್ದಾಸ್ ಕುಲ್ಬೊಕಾಸ್ ರವರು ಈ ವಿಶೇಷ ಶಿಲುಬೆ ಹಾದಿಯ ಪ್ರಾರ್ಥನಾ ವಿಧಿವಿಧಾನದ ಅಧ್ಯಕ್ಷತೆ ವಹಿಸಿದ್ದರು ಮತ್ತು ವ್ಯಾಟಿಕನ್ ಸುದ್ದಿಯೊಂದಿಗೆ ಭಾವನಾತ್ಮಕವಾಗಿ ಅಗಾಧ ಮತ್ತು ಆಧ್ಯಾತ್ಮಿಕವಾಗಿ ಅರ್ಥಪೂರ್ಣ ಎಂದು ವಿವರಿಸಿದ ಈ ಉಪಕ್ರಮದ ಮಹತ್ವದ ಕುರಿತು ಪ್ರತಿಬಿಂಬಿಸಿದರು.
ಪ್ರಶ್ನೆ: ಈ ಪ್ರಾರ್ಥನೆಯ ಕ್ಷಣ ಹೇಗೆ ಸೃಷ್ಟಿಯಾಯಿತು ಮತ್ತು ಈ ಐತಿಹಾಸಿಕ ಸಂದರ್ಭದಲ್ಲಿ ಇದರ ಅರ್ಥವೇನು?
ಮಹಾಧರ್ಮಾಧ್ಯಕ್ಷರಾದ ಕುಲ್ಬೊಕಾಸ್ ರವರು. ಇದು "ಕುಟುಂಬ ಮೌಲ್ಯಗಳಿಗಾಗಿ ಅಂತರರಾಷ್ಟ್ರೀಯ ಮಹಿಳಾ ಚಳುವಳಿ" ಆಯೋಜಿಸಿದ ಅತ್ಯಂತ ಹೃದಯಸ್ಪರ್ಶಿ ಉಪಕ್ರಮವಾಗಿತ್ತು. ಈ ಯುದ್ಧದ ಸಮಯದಲ್ಲಿ ಪ್ರತಿಯೊಂದು ಕುಟುಂಬವು ಯಾರನ್ನಾದರೂ ಕಳೆದುಕೊಂಡಿದ್ದರೆ ಅಥವಾ ಯುದ್ಧ ಕೈದಿಯನ್ನು ಅಥವಾ ಮಾಜಿ ಕೈದಿಯನ್ನು, ಅಥವಾ ಯಾರಾದರೂ ಗಾಯಗೊಂಡಿದ್ದಾರೆ ಅಥವಾ ಯುದ್ಧ ಭೂಮಿಯಲ್ಲಿ ಯಾರನ್ನಾದರೂ ಹೊಂದಿದೆ." ಹಾಗಾಗಿ ಹೆಚ್ಚಿನ ಕುಟುಂಬಗಳು, ಅವರುಗಳನ್ನು ಹುಡುಕದಿದ್ದರೂ ಸಹ, ಯುದ್ಧದಲ್ಲಿ ತಮ್ಮನ್ನು ಕಂಡುಕೊಂಡರು. ಈ ಆಂದೋಲನವು ಸಾರ್ವತ್ರಿಕ ಶಿಲುಬೆ ಹಾದಿಯನ್ನು ಆಯೋಜಿಸಿತು, ಅದು ನನಗೆ ಒಂದು ಸುಂದರ ಕ್ಷಣವಾಗಿತ್ತು. ಸುಂದರವಾಗಿರುವುದಕ್ಕಿಂತ ಹೆಚ್ಚಾಗಿ, ಅದು ಅರ್ಥಪೂರ್ಣವಾಗಿತ್ತು ಏಕೆಂದರೆ ಉಕ್ರೇನ್‌ನ ರಾಷ್ಟ್ರೀಯ ಪವಿತ್ರ ಸ್ಥಳವಾದ ಕೈವ್‌ನಲ್ಲಿರುವ ಪ್ರಾಚೀನ ಸಂತ ಸೋಫಿಯಾ ಪ್ರಧಾನಾಲಯದ ಸುತ್ತಲೂ ವಿವಿಧ ಧರ್ಮಸಭೆಗಳ ಪ್ರತಿನಿಧಿಗಳು ಒಟ್ಟುಗೂಡಿದರು: ಗ್ರೀಕ್ ಕಥೊಲಿಕರು, ರೋಮನ್ ಕಥೊಲಿಕರು, ಆರ್ಥೊಡಾಕ್ಸ್ ಧರ್ಮಸಭೆಗಳ ಯಾಜಕರುಗಳು, ಪ್ರೊಟೆಸ್ಟಂಟ್‌ಗಳು ಮತ್ತು ಇತರ ಧರ್ಮಸಭೆಗಳ ಪ್ರತಿನಿಧಿಗಳು ಒಟ್ಟುಗೂಡಿದ್ದರು. ಈ ಘಟನೆಯು ಯುದ್ಧಭೂಮಿಯಲ್ಲಿ ಬಿದ್ದಿದ್ದ ತಮ್ಮ ಪ್ರೀತಿಪಾತ್ರರಿಗಾಗಿ ದುಃಖಿಸುತ್ತಿರುವ ತಾಯಂದಿರು ಮತ್ತು ಹೆಂಡತಿಯರೊಂದಿಗೆ ಹೋಗಲು ಬಯಸುವ ಜನರನ್ನು ಒಟ್ಟುಗೂಡಿಸಿತು ಅಥವಾ ಗಾಯಗೊಂಡು ಜೈಲಿನಲ್ಲಿದ್ದ ಸಂಬಂಧಿಕರೊಂದಿಗೆ ವ್ಯವಹರಿಸಿತು. ಅವರು ಪವಿತ್ರ ವಾರವನ್ನು, ಪ್ರಾರ್ಥನೆಯಲ್ಲಿ ಯೇಸುವಿನೊಂದಿಗೆ ಪ್ರಾರಂಭಿಸಲು ಬಯಸಿದ್ದರು, ತಮ್ಮ ಅನುಭವ ಮತ್ತು ನೋವನ್ನು ವಿಮೋಚಕರಾದ ಯೇಸುವಿನ ಅನುಭವದೊಂದಿಗೆ ಸೇರಿಸಲು ಮತ್ತು ಒಟ್ಟಾಗಿ ಕ್ರೈಸ್ತಧರ್ಮದ ಪ್ರಾರ್ಥನೆಗಳನ್ನು ಸಲ್ಲಿಸಲು ಬಯಸಿದ್ದರು.
ಪ್ರಶ್ನೆ: ಈ ಪ್ರಾರ್ಥನೆಯನ್ನು ನೀವು ಮುನ್ನಡೆಸುವುದರ ಅರ್ಥವೇನು?
ಮಹಾಧರ್ಮಾಧ್ಯಕ್ಷರಾದ ಕುಲ್ಬೊಕಾಸ್ ರವರು. ಈ ಉಪಕ್ರಮ ನಡೆಯುತ್ತಿದೆ ಎಂದು ತಿಳಿದು ನನಗೆ ಈಗಾಗಲೇ ತುಂಬಾ ನೋವುಂಟಾಗಿತ್ತು, ಆದರೆ ಅದು ಸಂಭವಿಸಿದಾಗ, ಎಲ್ಲಾ ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳ ಪಠ್ಯಗಳನ್ನು ಮತ್ತು ಯೇಸುವಿನ ಯಾತನೆಗಳನ್ನು ಪ್ರತಿಬಿಂಬಿಸುವ ಅನುಭವಗಳನ್ನು ವೈಯಕ್ತಿಕವಾಗಿ ಅನುಭವಿಸುವ ಜನರು ಓದಿದ್ದರಿಂದ ನಾನು ಕಣ್ಣೀರು ಹಾಕಿದೆ. ಉದಾಹರಣೆಗೆ, ಯೇಸುವಿನ ನ್ಯಾಯ ತೀರ್ಪಿನ ಕುರಿತಾದ ಮೊದಲನೆಯ ಸ್ಥಳದ ಸಮಯದಲ್ಲಿ, ಕಾಲು ಮತ್ತು ತೋಳನ್ನು ಕತ್ತರಿಸಿದ ಮಾಜಿ ಯುದ್ಧ ಕೈದಿಯೊಬ್ಬರು ಶಿಲುಬೆಯನ್ನು ಹೊತ್ತುಕೊಂಡ ಚಿಂತನೆಯನ್ನು ಓದಿದರು.
ಎರಡನೇ ಸ್ಥಳ, ಯೇಸು ಶಿಲುಬೆಯನ್ನು ಎತ್ತಿಕೊಳ್ಳುವಾಗ, ಹಿಂದಿನ ಕೈದಿಯೊಬ್ಬನ ಹೆಂಡತಿ ಓದಿದಳು, ಏಕೆಂದರೆ ಪ್ರತಿಯೊಬ್ಬ ಹೆಂಡತಿಗೂ, ಪ್ರತಿಯೊಬ್ಬ ತಾಯಿಗೂ ಅದು ಯಾತನೆ (ಒಂದು ಶಿಲುಬೆ).
ಯೇಸುವಿನ ಮರಣದ ಸ್ಥಳದಲ್ಲಿ, ಯುದ್ದದಲ್ಲಿ ಅಥವಾ ಯುದ್ಧ ಭೂಮಿಯಲ್ಲಿ ಬಿದ್ದವರನ್ನು ಹೆಚ್ಚಾಗಿ ನೋಡುವ ಮಿಲಿಟರಿ ವೈದ್ಯರನ್ನು ಒಳಗೊಂಡಿತ್ತು. ನಾನು ನನ್ನ ಹೃದಯದಲ್ಲಿ ಯೋಚಿಸಿದೆ: ನಾವು ಜೀವನದಲ್ಲಿ ಅಂತಹ ಅನುಭವಗಳನ್ನು ಪಡೆದಾಗ, ಅದು ಈಗಾಗಲೇ ಯೇಸುವಿನ ಪೂಜ್ಯಯಾತನೆಯನ್ನು ಹೋಲುತ್ತದೆ, ಮತ್ತು ನಾವು ಅವುಗಳನ್ನು ಪ್ರಾರ್ಥನೆಯಲ್ಲಿ ಯೇಸುವಿನೊಂದಿಗೆ ಒಂದುಗೂಡಿಸಿದಾಗ ಅಥವಾ ಕನಿಷ್ಠ ಪ್ರಯತ್ನಿಸಿದಾಗ ಅದು ಒಂದು ಅತ್ಯಂತ ದೊಡ್ಡ ವಿಷಯವಾಗುತ್ತದೆ. ಆದ್ದರಿಂದ ಈ ಮಾನವ ಮತ್ತು ಆಧ್ಯಾತ್ಮಿಕ ಆಯಾಮ, ಒಗ್ಗೂಡಿ, ನಿಜವಾಗಿಯೂ ಚಲಿಸುತ್ತಿತ್ತು. ಓದುಗರು ಮಾತ್ರವಲ್ಲದೆ ಎಲ್ಲಾ ಹಾಜರಿದ್ದವರು ಮತ್ತು ಬಹುಶಃ 200–300 ಜನರು ಇದ್ದಿರಬಹುದು. ಕಣ್ಣೀರು ಹಾಕುತ್ತಿರುವ ಶಿಲುಬೆ ಹಾದಿಯನ್ನು ವೀಕ್ಷಿಸುವುದು ಅಪರೂಪ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಯುದ್ಧಕ್ಕಾಗಿ ಸುರಿಸುತ್ತಿದ್ದ ಈ ಕಣ್ಣೀರು ಯೇಸುವಿನ ಕಣ್ಣೀರಿನೊಂದಿಗೆ ಸೇರಿಕೊಂಡಿತು. ಶಾಂತಿಗಾಗಿ, ಎಲ್ಲಾ ಕೈದಿಗಳ ಬಿಡುಗಡೆಗಾಗಿ ಮತ್ತು ಅವರ ಕುಟುಂಬಗಳಿಗೆ ಸಾಂತ್ವನಕ್ಕಾಗಿ ಮಾಡುವ ಜಂಟಿ ಪ್ರಾರ್ಥನೆಯಾಗಿತ್ತು.
ಪ್ರಶ್ನೆ: ಯೇಸುವಿನ ಯಾತನೆಯ ಅನುಭವದಲ್ಲಿ ಪಾಲ್ಗೊಳ್ಳುವುದರ ಅರ್ಥವೇನು?
ವಿಶ್ವಾಸದ ಮೂಲಕ ಒಬ್ಬರ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಯೇಸುವಿನೊಂದಿಗೆ ಅಳಲು ವೈಯಕ್ತಿಕ ಅನುಭವವು ಯೇಸುವಿನ ಯಾತನೆಯನ್ನು ಕನಿಷ್ಠ ಭಾಗಶಃ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಅನೇಕ ಅತೀಂದ್ರಿಯರು ಇದನ್ನು ಹೇಳುತ್ತಾರೆ ಮತ್ತು ಇದನ್ನು ಬೆಂಬಲಿಸುವ ರೋಗಿಗಳಿಂದ ಅನೇಕ ಸಾಕ್ಷ್ಯಗಳಿವೆ. ಆದರೆ ಅದಕ್ಕೂ ಮೀರಿ, ನಾವು ವಿಶ್ವಾಸದ ಮೂಲಕ ನಮ್ಮ ಸ್ವಂತ ಶರೀರದಲ್ಲಿ ಬಳಲುತ್ತಿರುವಾಗ, ಅದು ಕೃಪೆಯಾಗುತ್ತದೆ.
ಇನ್ನೊಂದು ಅಂಶವೆಂದರೆ, ಆ ಕ್ಷಣದಲ್ಲಿ, ಬೇರೆಯವರು ನಿಮ್ಮನ್ನು ಅರ್ಥಮಾಡಿಕೊಳ್ಳುವ ಅಥವಾ ಜೊತೆಯಲ್ಲಿ ಬರುವ ಅಗತ್ಯವಿಲ್ಲ, ಏಕೆಂದರೆ ನೀವು ಶಿಲುಬೆಯೊಂದಿಗೆ ಜೀವಿಸುತ್ತಿದ್ದೀರಿ, ಶಿಲುಬೆಯು ನಿಮ್ಮೊಂದಿಗಿದೆ. ಆ ಕ್ಷಣದಲ್ಲಿ, ನೀವು ಮತ್ತು ದೇವರು ಮಾತ್ರ ಅದುವೇ ಅನುಗ್ರಹ.
ಪ್ರಶ್ನೆ: ಈ ವರ್ಷ ಎಲ್ಲಾ ಪಂಗಡಗಳು ಪವಿತ್ರ ವಾರ ಮತ್ತು ಈಸ್ಟರ್ ನ್ನು ಒಂದೇ ದಿನ ಆಚರಿಸುತ್ತವೆ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈ ವರ್ಷ ಈಸ್ಟರ್, ಎರಡೂ ಪ್ರಮುಖ ಪಂಚಾಂಗಗಳ ಪ್ರಕಾರ - ಗ್ರೆಗೋರಿಯನ್ ಮತ್ತು ಜೂಲಿಯನ್ - ಒಂದೇ ದಿನಾಂಕದಂದು ಬಂದಿರುವುದರಿಂದ, ವಿಷಯಗಳು ಹೆಚ್ಚು ಸುಲಭವಾಯಿತು. ಇದು ನನಗೆ ಸಂತೋಷದ ಸಂಗತಿ, ನಾನು ಅದನ್ನು ಅನೇಕ ಕಥೊಲಿಕ ಸಹೋದರರು ಮತ್ತು ಆರ್ಥೊಡಾಕ್ಸ್/ಸನಾತನ ಮತ್ತು ಪ್ರೊಟೆಸ್ಟಂಟ್ ಸಹೋದರರ ಮುಖಗಳಲ್ಲಿ ನೋಡುತ್ತೇನೆ. ಈಸ್ಟರ್ ನ್ನು ಒಟ್ಟಿಗೆ ಆಚರಿಸುವುದು ಸಂತೋಷ ಮತ್ತು ವಾಸ್ತವವಾಗಿ, ಶಿಲುಬೆ ಹಾದಿಯ ಪ್ರಾರ್ಥನೆಯ ಸಮಯದಲ್ಲಿ, ಕೈದಿಗಳು ಮತ್ತು ಶಾಂತಿಗಾಗಿ ಉದ್ದೇಶಗಳ ಜೊತೆಗೆ, ನನ್ನ ಹೃದಯದಲ್ಲಿ ಇದನ್ನೂ ಸಹ ಇತ್ತು: ನಾನುವಿಶ್ವಗುರು ಫ್ರಾನ್ಸಿಸ್‌ಗಾಗಿ ಪ್ರಾರ್ಥಿಸುತ್ತಿದ್ದೆ ಮತ್ತು ಎಲ್ಲಾ ಕ್ರೈಸ್ತ ಧರ್ಮಸಭೆಗಳು ಮತ್ತು ಸಮುದಾಯಗಳಲ್ಲಿ ಈಸ್ಟರ್ ಆಚರಣೆಯನ್ನು ಸಾಧ್ಯವಾದಷ್ಟು ಬೇಗ ಏಕೀಕರಿಸುವ ಮಾರ್ಗವನ್ನು ಕಂಡುಕೊಳ್ಳಲು ದೇವರು ನಮಗೆ ಅನುಗ್ರಹವನ್ನು ನೀಡಲಿ.