MAP

People walk past debris in the damaged Me Nu Brick monastery in Inwa on the outskirts of Mandalay on April 12, 2025, following the devastating March 28 earthquake People walk past debris in the damaged Me Nu Brick monastery in Inwa on the outskirts of Mandalay on April 12, 2025, following the devastating March 28 earthquake  (AFP or licensors)

ಅವಶೇಷಗಳ ನಡುವೆ ಮ್ಯಾನ್ಮಾರ್‌ನ ದೇವಾಲಯದಲ್ಲಿ ಪವಿತ್ರ ವಾರದ ಆಚರಣೆ

ಯುದ್ಧ ಮತ್ತು ಇತ್ತೀಚಿನ ಭೀಕರ ಭೂಕಂಪದಿಂದಾಗಿ ಮ್ಯಾನ್ಮಾರ್‌ನಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿದ್ದರೂ, ಈ ದೇಶದ ಧರ್ಮಸಭೆಯು, ಈ ಪವಿತ್ರ ವಾರದಲ್ಲಿ ವಿಶ್ವಾಸ ಮತ್ತು ಭರವಸೆಯೊಂದಿಗೆ ಮುಂದುವರಿಯುತ್ತದೆ, ಕುಸಿದ ದೇವಾಲಯಗಳು ಮತ್ತು ಅವಶೇಷಗಳ ನಡುವೆ ಈ ಪವಿತ್ರ ವಾರದ ವಿಶೇಷ ಪ್ರಾರ್ಥನಾ ವಿಧಿಗಳನ್ನು ಆಚರಿಸುತ್ತಾರೆ

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

2021ರ ದಂಗೆಯ ನಂತರ ನಡೆಯುತ್ತಿರುವ ಅಂತರ್ಯುದ್ಧದಿಂದ ಗುರುತಿಸಲ್ಪಟ್ಟ ಆಳವಾದ ಬಿಕ್ಕಟ್ಟನ್ನು ಮ್ಯಾನ್ಮಾರ್ ಎದುರಿಸುತ್ತಿದ್ದರೂ, ಮಾರ್ಚ್ 28 ರಂದು 3,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಭೂಕಂಪದಿಂದ ಮತ್ತಷ್ಟು ಒತ್ತಡಕ್ಕೊಳಗಾಗಿದ್ದರೂ, ಈ ಪವಿತ್ರ ವಾರದಲ್ಲಿ ದೇಶದ ಧರ್ಮಸಭೆಯು ವಿಶ್ವಾಸದೊಂದಿಗೆ ಮುಂದುವರಿಯುತ್ತದೆ ಎಂದು ಪೋಂಟಿಫಿಕಲ್ ಏಜೆನ್ಸಿ ಫೈಡ್ಸ್ ವರದಿ ಮಾಡಿದೆ.

ಪ್ರಧಾನಾಲಯದಲ್ಲಿ ಗರಿಗಳ ಭಾನುವಾರದಂದು ದಿವ್ಯಬಲಿಪೂಜೆ ಆಚರಣೆಯ ಸಂದರ್ಭದಲ್ಲಿ ಯಾಂಗೊನ್‌ನ ಮಹಾಧರ್ಮಾಧ್ಯಕ್ಷರಾದ ಮತ್ತು ರಾಷ್ಟ್ರದ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ಈ ಆಚರಣೆಯು ಶಾಂತಿ, ಸಂತೋಷ ಮತ್ತು ಭರವಸೆಯ ಆಚರಣೆಯಾಗಿದೆ ಎಂದು ನೆನಪಿಸಿಕೊಂಡರು, ಇದಕ್ಕಾಗಿ ಭಕ್ತವಿಶ್ವಾಸಿಗಳು ಸಂತೋಷಪಡಬೇಕು ಎಂದು ಹೇಳಿದರು. ನಮ್ಮ ದೇಶವನ್ನು ಬಾಧಿಸುತ್ತಿರುವ 'ಪಾಲಿಬಿಕ್ಕಟ್ಟಿನʼ ಸಂದರ್ಭದಲ್ಲಿ ನಾವು ಅಳುತ್ತಾ ದೇವರಿಗೆ ಮೊರೆಯಿಡುತ್ತೇವೆ ಮತ್ತು ಕೇಳುತ್ತೇವೆ: ಈ ದುಃಖ ಅಥವಾ ಯಾನೆ ಏಕೆ?" ಅವರು ಒಪ್ಪಿಕೊಂಡರು, ನಮಗೆ ದೇವರ ಉತ್ತರವು ಪುನರುತ್ಥಾನವಾಗಿದೆ ಎಂದು ನಾವು ಇನ್ನೂ ನಂಬಿಕೆಯಿಂದ ತಿಳಿದಿದ್ದೇವೆ.

ಕಷ್ಟಗಳು ಮತ್ತು ಅನಿಶ್ಚಿತತೆಯ ನಡುವೆಯೂ ಕಾರ್ಡಿನಲ್ ರವರು, ಭಕ್ತವಿಶ್ವಾಸಿಗಳನ್ನು, ಯಾವುದೇ ಸಮಯದಲ್ಲೂ, ಯಾವುದೇ ಕಷ್ಟದಲ್ಲೂ ದೇವರಿಗೆ ಅಂಟಿಕೊಳ್ಳುವಂತೆ ಒತ್ತಾಯಿಸಿದರು, ಅವರು ಮಾತ್ರ ಐಕ್ಯತೆಯನ್ನು ಬೆಳೆಸಬಹುದು ಮತ್ತು "ಬೆಳಕಿನಿಂದ ತುಂಬಿದ ಭವಿಷ್ಯವನ್ನು" ನೀಡಬಹುದು ಎಂದು ಸೂಚಿಸಿದರು.

ಅವಶೇಷಗಳ ಮುಂದೆ ಪವಿತ್ರ ವಾರವನ್ನು ಆಚರಿಸಲಾಯಿತು
ಮಂಡಲೆ ಧರ್ಮಕ್ಷೇತ್ರದಲ್ಲಿ, ವಿಶ್ವಾಸ ಮತ್ತು ಭರವಸೆಯ ಸಂಕೇತವಾಗಿ ಗರಿಗಳ ಭಾನುವಾರದ ದೈವಾರಾಧನಾದ ವಿಧಿಯನ್ನು ಅವಶೇಷಗಳ ನಡುವೆ ಆಚರಿಸಲಾಯಿತು.

ಸಂಪೂರ್ಣವಾಗಿ ನಾಶವಾದ ಧರ್ಮಕ್ಷೇತ್ರದ ಐತಿಹಾಸಿಕ ದೇವಾಲಯವಾದ, ಪ್ರಭುವಿನ ಮಾತೆಯಾದ ಮಾತೆ ಮರಿಯಳ ದೇವಾಲಯ, ಈ ಧರ್ಮಕೇಂದ್ರದ ಗುರುಗಳಾದ ಫಾದರ್ ಜಾನ್ ಕ್ಯಾವ್ ಥು ಯಾರವರು, ಧ್ವಂಸಗೊಂಡ ದೇವಾಲಯಗಳ ಅವಶೇಷಗಳ ಮುಂದೆಯೇ ಸಮುದಾಯವನ್ನು ಒಟ್ಟುಗೂಡಿಸಿದರು.

ದೇವಾಲಯವು ನಾಶವಾಗಿದೆ, ಆದರೆ ದೀಕ್ಷಾಸ್ನಾನ ಪಡೆದವರ ನಂಬಿಕೆ ದೃಢವಾಗಿದೆ ಎಂದು ಅವರು ಒತ್ತಿ ಹೇಳಿದರು, "ಅದು ಬಂಡೆಯ ಮೇಲೆ ಸ್ಥಾಪಿಸಲಾದ ಮನೆಯಂತಿದೆ" ಎಂದು ಒತ್ತಿ ಹೇಳಿದರು.

ಪವಿತ್ರ ವಾರದ ವಿಧಿಗಳನ್ನು ದೇವಾಲಯದ ಹೊರಗೆ ಆಚರಿಸಲಾಗುವುದು ಎಂದು ಮ್ಯಾಂಡಲೆಯ ಯಾಜಕರು ಫೈಡ್ಸ್‌ಗೆ ತಿಳಿಸಿದರು.

ಎಂದಿಗೂ ನಿರಾಸೆಗೊಳ್ಳಬೇಡಿ, ಯೇಸು ನಮ್ಮ ಹತ್ತಿರದಲ್ಲಿದ್ದಾರೆ
ಕಚಿನ್ ರಾಜ್ಯದ ರಾಜಧಾನಿ ಮೈಟ್ಕಿನಾದ ಧರ್ಮಾಧ್ಯಕ್ಷರಾದ ಜಾನ್ ಮುಂಗ್ ನ್ಗಾನ್ ಲಾ ಸ್ಯಾಮ್ ರವರು, ಸಂತ ಕೊಲಂಬನ ದೇವಾಲಯದಲ್ಲಿ ಗರಿಗಳ ಭಾನುವಾರದ ಪವಿತ್ರ ದಿವ್ಯ ಬಲಿಪೂಜೆಯನ್ನು ಆಚರಿಸಿದರು, ಅಲ್ಲಿ ಅವರು ಭಕ್ತವಿಶ್ವಾಸಿಗಳು "ಹತಾಶರಾಗದಂತೆ" ಪ್ರೋತ್ಸಾಹಿಸಿದರು.

ನಾವು ಶಿಲುಬೆಯನ್ನು ನೋಡುವಾಗ ಮತ್ತು ಹೊತ್ತುಕೊಳ್ಳುವಾಗಲೆಲ್ಲಾ, ಪ್ರಭುಯೇಸು ಶಿಲುಬೆಯ ಮೇಲಿದ್ದಾರೆ ಮತ್ತು ನಾವು ಕಷ್ಟದಲ್ಲಿರುವಾಗ ನಮ್ಮ ಮಧ್ಯದಲ್ಲಿ, ಪ್ರಭುಯೇಸು ಯಾವಾಗಲೂ ನಮ್ಮೊಂದಿಗಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ ಎಂದು ಅವರು ಒತ್ತಾಯಿಸಿದರು.

ಕ್ರಿಸ್ತರು "ನಮ್ಮೊಂದಿಗಿದ್ದಾರೆ" ಮತ್ತು ಇಂದು ಬಳಲುತ್ತಿರುವ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಇದ್ದಾರೆ ಎಂದು ಧರ್ಮಾಧ್ಯಕ್ಷರು ಭರವಸೆ ನೀಡಿದರು.
 

15 ಏಪ್ರಿಲ್ 2025, 11:52