MAP

Holy Fire ceremony at the Church of the Holy Sepulchre in Jerusalem Holy Fire ceremony at the Church of the Holy Sepulchre in Jerusalem  (ANSA)

ಪವಿತ್ರ ನಾಡಿಗಾಗಿ ಶುಭ ಶುಕ್ರವಾರದ ಸಂಗ್ರಹಕ್ಕೆ ಕೊಡುಗೆ ನೀಡಲು ಕ್ರೈಸ್ತರಿಗೆ ಮನವಿ

ಧರ್ಮಸಭೆಯು ಈಸ್ಟರ್ ಆಚರಿಸಲು ಸಿದ್ಧತೆ ನಡೆಸುತ್ತಿರುವಂತೆಯೇ, ಯುದ್ಧದಿಂದ ಹಾನಿಗೊಳಗಾದ ಪ್ರದೇಶದ ಕ್ರೈಸ್ತ ಸಮುದಾಯಗಳಿಗೆ ಭರವಸೆ ನೀಡಲು ಸಹಾಯ ಮಾಡಲು ವಾರ್ಷಿಕ ಶುಭ ಶುಕ್ರವಾರದ ಸಂಗ್ರಹಕ್ಕೆ ಉದಾರವಾಗಿ ಕೊಡುಗೆ ನೀಡುವಂತೆ ಪವಿತ್ರ ನಾಡಿನ ಪಾಲಕರಾದ ಫ್ರಾನ್ಸಿಸ್ಕನ್ ಕಸ್ಟಡಿ ರವರು ವಿಶ್ವಾದ್ಯಂತ ಕ್ರೈಸ್ತರನ್ನು ಒತ್ತಾಯಿಸುತ್ತದೆ.

ಲಿಸಾ ಝೆಂಗಾರಿನಿ

ಶುಭ ಶುಕ್ರವಾರದಂದು, ಪವಿತ್ರ ನಾಡಿನಲ್ಲಿ ಕ್ರೈಸ್ತ ಸಮುದಾಯ ಮತ್ತು ಪರಂಪರೆಯನ್ನು ಬೆಂಬಲಿಸಲು ಹಾಗೂ ಸಂರಕ್ಷಿಸಲು ಸಮರ್ಪಿತವಾಗಿರುವ ಫ್ರಾನ್ಸಿಸ್ಕನ್ನರ ಕೆಲಸವನ್ನು ಬೆಂಬಲಿಸಲು ಸಾರ್ವತ್ರಿಕ ಧರ್ಮಸಭೆಯು ಸಾಂಪ್ರದಾಯಿಕ ಶುಭ ಶುಕ್ರವಾರದ ಸಂಗ್ರಹಕ್ಕಾಗಿ ಒಂದಾಗುತ್ತದೆ.

ಶತಮಾನಗಳಷ್ಟು ಹಳೆಯದಾದ ಈ ಸಂಪ್ರದಾಯವು ಈ ಪ್ರದೇಶದ ಕ್ರೈಸ್ತರೊಂದಿಗೆ ಒಗ್ಗಟ್ಟಿನ ಅಭಿವ್ಯಕ್ತಿಯಾಗಿದೆ, ಅವರು ಈ ವಿಶ್ವಾದ್ಯಂತ ಸಂಗ್ರಹದಿಂದ ಬರುವ ಸಹಾಯವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

ಇದರ ಆದಾಯವು ಇಸ್ರಯೇಲ್, ಪ್ಯಾಲಸ್ತೀನ್, ಸಿರಿಯಾ, ಲೆಬನಾನ್, ಜೋರ್ಡಾನ್, ಸೈಪ್ರಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುವ ಪವಿತ್ರ ನಾಡಿನ ಕಸ್ಟಡಿ ಧ್ಯೇಯವನ್ನು ಬೆಂಬಲಿಸುತ್ತದೆ, ಜೊತೆಗೆ ಈಜಿಪ್ಟ್, ಎರಿಟ್ರಿಯಾ, ಇಥಿಯೋಪಿಯಾ, ಇರಾನ್, ಇರಾಕ್ ಮತ್ತು ಟರ್ಕಿಯಂತಹ ಪೂರ್ವ ಕ್ರೈಸ್ತ ಸಮುದಾಯಗಳು ಇರುವ ದೇಶಗಳಲ್ಲೂ ಕಾರ್ಯನಿರ್ವಹಿಸುತ್ತದೆ.

ಫ್ರಾನ್ಸಿಸ್ಕನ್ ಸನ್ಯಾಸಿಗಳು ಈ ಪ್ರದೇಶಗಳಲ್ಲಿ ಶತಮಾನಗಳಿಂದ ಸಕ್ರಿಯರಾಗಿದ್ದಾರೆ, ಕ್ರೈಸ್ತರ ಜಗತ್ತಿಗೆ ಅಮೂಲ್ಯವಾದ ಪರಂಪರೆಯನ್ನು ಪ್ರತಿನಿಧಿಸುವ ಡಜನ್ಗಟ್ಟಲೆ ಇತರ ದೇವಾಲಯಗಳೊಂದಿಗೆ ಪವಿತ್ರ ಸ್ಥಳಗಳ ರಕ್ಷಕರಾಗಿ ಮಾತ್ರವಲ್ಲದೆ, ಶಿಕ್ಷಕರು, ಆರೋಗ್ಯ ಮತ್ತು ಮಾನವೀಯ ಪೂರೈಕೆದಾರರು ಮತ್ತು ಶಾಂತಿಯ ಪ್ರತಿಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಪವಿತ್ರ ನಾಡಿನಲ್ಲಿ ಭರವಸೆ ನೀಡಲು ಮತ್ತು ಶಾಂತಿಯನ್ನು ಬಿತ್ತಲು ಸಹಾಯ ಮಾಡಿ
"ಭರವಸೆ ನೀಡಿ, ಶಾಂತಿಯನ್ನು ಬಿತ್ತಿರಿ" ಎಂಬ ಕಾರ್ಯಕ್ರಮದಡಿಯಲ್ಲಿ, ಈ ವರ್ಷದ ಈಸ್ಟರ್ ಅಭಿಯಾನವು ವಿಶೇಷವಾಗಿ ತುರ್ತು ಸ್ವರೂಪವನ್ನು ಪಡೆದುಕೊಂಡಿದೆ, ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಈ ಪ್ರದೇಶದ ಜನರು ಎದುರಿಸುತ್ತಿರುವ ಕಷ್ಟಗಳನ್ನು ಗಮನಿಸಿದರೆ, ಪವಿತ್ರ ನಾಡಿನ ಕಸ್ಟೋಸ್ ಆಫ್ಮ್ ಕ್ಯಾಪ್ ಫಾದರ್ ಫ್ರಾನ್ಸೆಸ್ಕೊ ಪ್ಯಾಟನ್ ರವರು ಬೂದಿಬುಧವಾರದಂದು ಪ್ರಾರಂಭಿಸಿದ ಮನವಿಯಲ್ಲಿ ನೆನಪಿಸಿಕೊಂಡರು.

"ಕಳೆದ ವರ್ಷದ ಅನುಭವವು ನಮಗೆಲ್ಲರಿಗೂ ನಿಜವಾಗಿಯೂ ಕಷ್ಟಕರವಾಗಿತ್ತು" ಎಂದು ಫ್ರಾನ್ಸಿಸ್ಕನ್ ಫ್ರೈಯರ್ ಹೇಳಿದರು. ಯುದ್ಧವು ನಗರಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ, ಉದ್ಯೋಗ ಕಳೆದುಕೊಂಡ ಕುಟುಂಬಗಳು, ಮಕ್ಕಳು ಮತ್ತು ಕುಟುಂಬವನ್ನು ಪ್ರಾರಂಭಿಸುವ ಕನಸನ್ನು ಮುಂದೂಡಲು ಒತ್ತಾಯಿಸಲ್ಪಟ್ಟ ಅನೇಕ ಯುವ ದಂಪತಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ಪವಿತ್ರ ನಾಡಿನಲ್ಲಿರುವ ಕ್ರೈಸ್ತ ಸಮುದಾಯಗಳಿಗೆ ಕಸ್ಟಡಿಯ ಮಹತ್ವದ ಕೆಲಸ
ಕಸ್ಟಡಿಯಲ್ಲಿ ಪ್ರಸ್ತುತ 30ಕ್ಕೂ ಹೆಚ್ಚು ದೇಶಗಳಿಂದ 270 ಧರ್ಮಪ್ರಚಾರಕರಿದ್ದಾರೆ. ಈ ಸನ್ಯಾಸಿಗಳು 55 ದೇವಾಲಯಗಳು, 22 ಧರ್ಮಕೇಂದ್ರಗಳು, ಯಾತ್ರಿಕರಿಗೆ 6 ಮನೆಗಳು, ರೋಗಿಗಳು ಮತ್ತು ಅನಾಥರಿಗೆ 5 ಮನೆಗಳನ್ನು ನೋಡಿಕೊಳ್ಳುತ್ತಾರೆ, 12,000 ವಿದ್ಯಾರ್ಥಿಗಳೊಂದಿಗೆ 15 ಶಾಲೆಗಳನ್ನು ನಡೆಸುತ್ತಾರೆ, 500ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡುತ್ತಾರೆ ಮತ್ತು 3 ಶೈಕ್ಷಣಿಕ ಸಂಸ್ಥೆಗಳನ್ನು ನಿರ್ವಹಿಸುತ್ತಾರೆ.

ಪ್ಯಾಲಸ್ತೀನಿನಲ್ಲಿ, ಸನ್ಯಾಸಿಗಳು ಶಾಂತಿಯನ್ನು ಬೆಳೆಸಲು ಮತ್ತು ಶಿಕ್ಷಣವನ್ನು ಒದಗಿಸಲು ದೈನಂದಿನ ಕಲಹಗಳ ನಡುವೆ ಕೆಲಸ ಮಾಡುತ್ತಾರೆ, ಆದರೆ ಇಸ್ರಯೇಲ್‌ನಲ್ಲಿ, ದುರ್ಬಲವಾದ ಕ್ರೈಸ್ತ ಸಮುದಾಯಗಳನ್ನು ಸಂರಕ್ಷಿಸಲು ವಸತಿ ಬೆಂಬಲವನ್ನು ಅವರ ಪ್ರಯತ್ನಗಳು ಒಳಗೊಂಡಿವೆ. ಜೋರ್ಡಾನ್‌ನಲ್ಲಿ, ಅವರು ವಲಸೆ ಬಂದ ಜನರಿಗೆ ಸಹಾನುಭೂತಿ ಮತ್ತು ಸಹಾಯದಿಂದ ಸೇವೆ ಸಲ್ಲಿಸುತ್ತಾರೆ.

ಲೆಬನಾನ್‌ನಲ್ಲಿ ಯುವಕರು, ಕುಟುಂಬಗಳು ಮತ್ತು ಶಿಕ್ಷಣದ ಮೇಲೆ ಅವರು ಗಮನಹರಿಸುವುದು ಕ್ರೈಸ್ತ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಒಂದು ದಶಕ್ಕೂ ಹೆಚ್ಚು ಕಾಲ ನಡೆದ ಯುದ್ಧವು ಸಮಾಜವನ್ನು ಛಿದ್ರಗೊಳಿಸಿರುವ ಸಿರಿಯಾದಲ್ಲಿ, ಆಹಾರ, ಔಷಧ ಮತ್ತು ಶಸ್ತ್ರಚಿಕಿತ್ಸೆಯ ಬೆಂಬಲವನ್ನು ಒದಗಿಸುವ ಅವರ ಮಾನವೀಯ ಕೆಲಸವು ಅತ್ಯಂತ ಮಹತ್ವದ್ದಾಗಿದೆ.

ಶುಭ ಶುಕ್ರವಾರದ ಸಂಗ್ರಹದ ಆದಾಯದ 65% ನ್ನು ಕಸ್ಟಡಿ ಪಡೆಯುತ್ತದೆ, ಉಳಿದ 35% ನ್ನು ಪೂರ್ವ ಧರ್ಮಸಭೆಗಳ ಡಿಕ್ಯಾಸ್ಟರಿಗೆ ಹಂಚಲಾಗುತ್ತದೆ, ಇದು ನಿಧಿಯ ವಿತರಣೆಯನ್ನು ನಿರ್ವಹಿಸುತ್ತದೆ.
 

19 ಏಪ್ರಿಲ್ 2025, 16:54