ಇರಾಕ್‌ನ ಕುರ್ದಿಸ್ತಾನದಲ್ಲಿ ಕ್ರೈಸ್ತರು ಗರಿಗಳ ಭಾನುವಾರದ ಮೆರವಣಿಗೆಗಾಗಿ ಒಟ್ಟುಗೂಡುತ್ತಾರೆ
ವ್ಯಾಟಿಕನ್ ಸುದ್ದಿ
ಇರಾಕ್‌ನ ಕುರ್ದಿಸ್ತಾನ್ ಪ್ರದೇಶದ ಎರ್ಬಿಲ್‌ನ ಉಪನಗರವಾದ ಅಂಕವಾದಲ್ಲಿನ ಕ್ರೈಸ್ತ ಭಕ್ತವಿಶ್ವಾಸಿಗಳು, ಏಪ್ರಿಲ್ 12ರ ಶನಿವಾರದಂದು, ವಾರ್ಷಿಕ ಗರಿಗಳ ಭಾನುವಾರದ ಮೆರವಣಿಗೆಯ ಸಮಯದಲ್ಲಿ ವಿಶ್ವಾಸ ಮತ್ತು ಕ್ರೈಸ್ತ ಧರ್ಮದ ಏಕತೆಗೆ ಸಾಕ್ಷಿಯಾಗಲು ಒಟ್ಟುಗೂಡಿದರು.
ಎರ್ಬಿಲ್‌ನ ಚಾಲ್ಡಿಯನ ಕಥೋಲಿಕ ಮಹಾಧರ್ಮಕ್ಷೇತ್ರದ ಧರ್ಮೋಪದೇಶ ಸಮಿತಿಯು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು "ಮಹೋನ್ನತನಿಗೆ ಹೊಸಾನ್ನ, ಪ್ರಭುವಿನ ಹೆಸರಿನಲ್ಲಿ ಬರುವವರು ಧನ್ಯರು" ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಹಂಚಿಕೊಂಡ ವಿಶ್ವಾಸ ಮತ್ತು ಸಾಮಾನ್ಯ ಸಾಕ್ಷಿಯಲ್ಲಿ ಬೇರೂರಿರುವ ಆಚರಣೆಯಲ್ಲಿ ನೂರಾರು ಮಂದಿ ಭಕ್ತಾಧಿಗಳು ಭಾಗವಹಿಸುವವರನ್ನು ಆಕರ್ಷಿಸಿತು, ವಿವಿಧ ಕ್ರೈಸ್ತ ಧರ್ಮದ ಪಂಗಡಗಳ ನಾಯಕರು ಮತ್ತು ನಿಷ್ಠಾವಂತರನ್ನು ದೈವಾರಾಧನಾ ವಿಧಿಯ ಮೂಲಕ ಏಕತೆಯ ಕ್ರಿಯೆಯಲ್ಲಿ ಒಟ್ಟುಗೂಡಿಸಿತು, ಇದು ಮಾರ್ ಎಲಿಯಾ ದೇಗುಲದಲ್ಲಿ ಪ್ರಾರ್ಥನೆಯಲ್ಲಿ ಕೊನೆಗೊಂಡಿತು.
ಮೆರವಣಿಗೆಯು ಪೂರ್ವದ ಅಸ್ಸಿರಿಯದ ದೇವಾಲಯವಾದ ಸಂತ ಸ್ನಾನಿಕ ಯೋವಾನ್ನರ ಪಿತೃಪ್ರಧಾನ ಪ್ರಧಾನಾಲಯದಲ್ಲಿ ಪ್ರಾರಂಭವಾಯಿತು ಮತ್ತು ಚಾಲ್ಡಿಯನ್ ಕಥೊಲಿಕ ಭಕ್ತರ ಪವಿತ್ರ ಸ್ಥಳವಾದ ಮಾರ್ ಎಲಿಯಾ ಐತಿಹಾಸಿಕ ದೇವಾಲಯದ ಕಡೆಗೆ ಸಾಗಿತು. ಈ ಕಾರ್ಯಕ್ರಮದ ನೇತೃತ್ವವನ್ನು, ಅಸ್ಸಿರಿಯ ಧರ್ಮಸಭೆಯ ಪೂರ್ವ ಪಿತೃಪ್ರಧಾನ ಪರಮಪೂಜ್ಯರಾದ ಮೂರನೇ ಮಾರ್ ಆವಾ, ಎರ್ಬಿಲ್‌ನ ಚಾಲ್ಡಿಯದ ಕಥೋಲಿಕ ಮಹಾಧರ್ಮಾಧ್ಯಕ್ಷರು, ಮಹಾಧರ್ಮಾಧ್ಯಕ್ಷರಾದ ಬಶರ್ ವಾರ್ದಾರವರು, ಸಿರಿಯಾದ ಸನಾತನ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ನಿಕೋಡೆಮಸ್ ದಾವೂದ್ ಶರಾಫ್ ರವರು ಮತ್ತು ಸಿರಿಯಾದ ಕಥೋಲಿಕ ಧರ್ಮಸಭೆಯ ಮಹಾಧರ್ಮಾಧ್ಯಕ್ಷರಾದ ನಥಾನೇಲ್ ನಿಜಾರ್ ಅಗಮ್ ರವರು ಸೇರಿದಂತೆ ಉನ್ನತ ಶ್ರೇಣಿಯ ಧರ್ಮಸಭೆಯ ಪ್ರಧಾನ ನಾಯಕರು ವಹಿಸಿದ್ದರು. ಅವರೊಂದಿಗೆ ಯಾಜಕರು, ಧರ್ಮಾಧಿಕಾರಿಗಳು, ಧರ್ಮೋಪದೇಶಕರುಗಳು ಮತ್ತು ಕುರ್ದಿಸ್ತಾನ್ ಪ್ರಾದೇಶಿಕ ಸರ್ಕಾರದ ಪ್ರತಿನಿಧಿಗಳು ಎಲ್ಲರೂ ಪ್ರಾರ್ಥನೆ ಮತ್ತು ಮಹೋನ್ನತ ಗೀತೆಯ ಹಾಡಿನಲ್ಲಿ ಒಗ್ಗಟ್ಟಾಗಿ ಸೇರಿಕೊಂಡರು. ಮೆರವಣಿಗೆಯು ಧರಮೋಪದೇಶಕರು ಕಾರ್ಯಕ್ರಮಗಳಲ್ಲಿ ದಾಖಲಾದ ಮಕ್ಕಳ ಸಕ್ರಿಯ ಭಾಗವಹಿಸುವಿಕೆಯಿಂದ ಗುರುತಿಸಲ್ಪಟ್ಟಿತು, ಅವರಲ್ಲಿ ಅನೇಕರು ಭಕ್ತವಿಶ್ವಾಸಿಗಳು ಸ್ತುತಿಸ್ತೋತ್ರಗಳ ಮೂಲಕ ಮೆರವಣಿಗೆ ಮುನ್ನಡೆಸಿದರು, ತಾಳೆ ಮರ ಮತ್ತು ಆಲಿವ್ ಕೊಂಬೆಗಳನ್ನು ಹೊತ್ತೊಯ್ದರು, ಇದು ಶಾಂತಿ, ಭರವಸೆ ಮತ್ತು ಜೆರುಸಲೇಮ್‌ಗೆ ಕ್ರಿಸ್ತರ ವಿಜಯೋತ್ಸವದ ಪ್ರವೇಶದ ಸಂಕೇತಗಳು ಎಂದು ಸೂಚಿಸುತ್ತವೆ.
ಮಾರ್ ಎಲಿಯಾ ದೇವಾಲಯಕ್ಕೆ ಆಗಮಿಸಿದ ನಂತರ, ಭಕ್ತವಿಶ್ವಾಸಿಗಳು ಮುಕ್ತಾಯದ ಪ್ರಾರ್ಥನಾ ವಿಧಿಗಳಿಗಾಗಿ ಒಟ್ಟುಗೂಡಿದರು,ಕ್ರೈಸ್ತರ ಸಹಭಾಗಿತ್ವದ ಉಡುಗೊರೆ ಮತ್ತು ಅವರ ಮಧ್ಯದಲ್ಲಿ ಕ್ರಿಸ್ತರ ನಿರಂತರ ಉಪಸ್ಥಿತಿಗಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಸತತ 14ನೇ ವರ್ಷದಲ್ಲಿರುವ ಈ ಮೆರವಣಿಗೆ, ಅಂಕಾವಾದಲ್ಲಿನ ಕ್ರೈಸ್ತ ಸಮುದಾಯದ ಜೀವನದಲ್ಲಿ ಒಂದು ಮೂಲಾಧಾರವಾಗಿದೆ, ನವೀಕರಣ, ಗುರುತು ಮತ್ತು ಅಂತರಧರ್ಮಸಭೆಯ ಸಹಯೋಗದ ವಾರ್ಷಿಕ ಕ್ಷಣವಾಗಿತ್ತು.
ಈ ಕ್ರೈಸ್ತ ಧರ್ಮದ ಕಾರ್ಯಕ್ರಮದ ಸಂದರ್ಭದಲ್ಲಿ ಕಂಡುಬಂದ ಏಕತೆಯು ಈ ಪ್ರದೇಶದ ಧರ್ಮಸಭೆಗಳ ನಡುವಿನ ಸಹಕಾರಕ್ಕೆ ವಿಶಾಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಮಿತಿ ಗಮನಿಸಿದೆ. ಕುರ್ದಿಸ್ತಾನ್ ಪ್ರಾದೇಶಿಕ ಸರ್ಕಾರದ ಬೆಂಬಲದೊಂದಿಗೆ, ಈ ಮೆರವಣಿಗೆಯು ಎರ್ಬಿಲ್‌ನಲ್ಲಿ ಕ್ರೈಸ್ತರ ಜೀವನದ ಸ್ವಾತಂತ್ರ್ಯ ಮತ್ತು ಚೈತನ್ಯವನ್ನು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಧಾರ್ಮಿಕ ಅಭಿವ್ಯಕ್ತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಅದು ಹೇಳಿದೆ. ಮೆರವಣಿಗೆಯ ನಂತರ ಪ್ರತಿ ಧರ್ಮಕೇಂದ್ರದಲ್ಲಿ ಗರಿಗಳ ಭಾನುವಾರದ ದೈವಾರಾಧನಾ ವಿಧಿಯ ಪ್ರಾರ್ಥನೆಗಳು ಮುಂದುವರೆದವು.