ಕಾರ್ಡಿನಲ್ ಹೊಲೆರಿಚ್: ವಿಶ್ವಗುರು ಫ್ರಾನ್ಸಿಸ್ ರವರು ಒಬ್ಬ ತಂದೆಯಾಗಿದ್ದರು, ಜೀವಂತ ಉದಾಹರಣೆ
ಫ್ರಾನ್ಸೆಸ್ಕಾ ಮೆರ್ಲೊ
ಕಾರ್ಡಿನಲ್ ಜೀನ್-ಕ್ಲೌಡ್ ಹೊಲೆರಿಚ್ ರವರು ಲಕ್ಸೆಂಬರ್ಗ್‌ನ ಜೈಲು ಪ್ರಾರ್ಥನಾ ಮಂದಿರದಲ್ಲಿ ಬಲಿಪೂಜೆಯನ್ನು ಮುಗಿಸಿದ್ದರು, ಅಲ್ಲಿ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ, ಆಗ ಅವರಿಗೆ ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯಿತು.
ಕಣ್ಣೀರು ಬರುತ್ತಿತ್ತು, ಎಂದು ಕಾರ್ಡಿನಲ್ ಹೊಲೆರಿಚ್ ರವರು ನೆನಪಿಸಿಕೊಳ್ಳುತ್ತಾರೆ, "ನನಗೆ ಅದು ತಂದೆಯನ್ನು ಕಳೆದುಕೊಂಡಂತೆ ಇತ್ತು.
ವ್ಯಾಟಿಕನ್ ಸುದ್ಧಿಯ ಆಲಿವಿಯರ್ ಬೊನ್ನೆಲ್ ರವರೊಂದಿಗೆ ಮಾತನಾಡಿದ ಕಾರ್ಡಿನಲ್ ಹೊಲೆರಿಚ್ ರವರು, ಬಡವರು ಮತ್ತು ಅಂಚಿನಲ್ಲಿರುವವರಿಗೆ ಯಾವಾಗಲೂ ಸಮಯ ಕಂಡುಕೊಂಡ ವಿಶ್ವಗುರು ಫ್ರಾನ್ಸಿಸ್ ರವರನ್ನು "ಕ್ರಿಸ್ತರಂತೆ ವರ್ತಿಸುವ, ಎಲ್ಲರಿಗೂ ಮುಕ್ತರಾಗಿರುವ, ತನ್ನ ತಂದೆಯ ಬಗ್ಗೆ ಮಾತನಾಡುವ, ಕರುಣೆಯ ಬಗ್ಗೆ ಮಾತನಾಡುವ" ಒಬ್ಬ ತಂದೆಯಾಗಿದ್ದರು ಎಂದು ಬಣ್ಣಿಸಿದರು.
"ಅವರು ನಿಜವಾಗಿಯೂ ಪ್ರಭುಯೇಸು ಕ್ರಿಸ್ತರಿಗೆ ಸಾಕ್ಷಿ ನೀಡಿದರು" ಎಂದು ಲಕ್ಸೆಂಬರ್ಗ್‌ನ ಕಾರ್ಡಿನಲ್ ಮಹಾಧರ್ಮಾಧ್ಯಕ್ಷರು ತಮ್ಮ ಮಾತುಗಳನ್ನು ಮುಂದುವರಿಸಿದರು, "ನಮ್ಮ ಕಾಲದಲ್ಲಿ, ನಮ್ಮ ಕಾಲದ ಜನರಿಗೆ ನಾವು ಸುವಾರ್ತೆಯನ್ನು ಹೇಗೆ ಸಾರಬಹುದು ಎಂಬುದನ್ನು ತೋರಿಸಿದರು".
ವಿಶ್ವಗುರು ಫ್ರಾನ್ಸಿಸ್ ರವರ, ವಿಶ್ವಗುರು ಸೇವೆಯ ಶಾಶ್ವತ ಪರಂಪರೆಯ ಬಗ್ಗೆ ಕೇಳಿದಾಗ, ಕಾರ್ಡಿನಲ್ ಹೊಲೆರಿಚ್ ರವರು ಅವರ ಬಗ್ಗೆ ಮಾತನಾಡಲು ಅನೇಕ ವಿಷಯಗಳಿವೆ ಎಂದು ಗಮನಿಸಿದರು. ಪರಿಸರ ಪರಿವರ್ತನೆಗಾಗಿ ವಿಶ್ವಗುರುಗಳ ತುರ್ತು ಮನವಿ, ವಿಶೇಷವಾಗಿ ಅತ್ಯಂತ ದುರ್ಬಲರ ಸಲುವಾಗಿ ಮತ್ತು ಬಡವರು ಹಾಗೂ ಸಿನೊಡಲಿಟಿಗಾಗಿ ಅವರ ಅವಿಶ್ರಾಂತ ಭಕ್ತಿ ಹೀಗೆ ಅನೇಕ ವಿಷಯಗಳಿವೆ.
"ನಾನು ವಿಶೇಷವಾಗಿ ಸಿನೊಡ್ ಬಗ್ಗೆ ಯೋಚಿಸುತ್ತೇನೆ" ಎಂದು ಕಾರ್ಡಿನಲ್ ಗಮನಿಸಿದರು. "ಏಕೆಂದರೆ ಕಾರ್ಡಿನಲ್ ಗ್ರೆಚ್ ಮತ್ತು ನಾನು, ಸಿದ್ಧತೆಯ ಸಮಯದಲ್ಲಿ... ನಮಗೆ ಯಾವಾಗಲೂ ಅವರಿಂದ ತುಂಬಾ ಪ್ರೋತ್ಸಾಹ ಸಿಕ್ಕಿತು."
ತಮ್ಮ ಆಸ್ಪತ್ರೆಯ ಹಾಸಿಗೆಯಿಂದಲೂ, ವಿಶ್ವಗುರು ಫ್ರಾನ್ಸಿಸ್ ರವರು ಈ ಪ್ರಯಾಣಕ್ಕೆ ನಿಷ್ಠರಾಗಿದ್ದರು. ನಾವು ಪ್ರವೇಶಿಸಿರುವ ಸಿನೊಡಲ್ ನಂತರದ ಅವಧಿಗೆ, ಸಿನೊಡ್ ನ್ನು ವಾಸ್ತವಿಕಗೊಳಿಸುವ ದಾಖಲೆಗೆ ಅವರು ಸಹಿ ಹಾಕಿದರು. "ನನಗೆ, ಅದು ಒಂದು ಒಡಂಬಡಿಕೆಯಂತೆ, ಪರಂಪರೆಯಂತೆ ಕಂಡಿತು" ಎಂದು ಕಾರ್ಡಿನಲ್ ಹೊಲೆರಿಚ್ ರವರು ಹೇಳಿದರು.
"ನಮ್ಮ ಧರ್ಮಸಭೆಯು ಸಕ್ರಿಯೆಯಿಂದ ಕೂಡಿದ್ದು, ಕ್ರಿಸ್ತರಿಗೆ ವಿಧೇಯರಾಗಿರಲು ಮತ್ತು ಈ ಕಾಲ ಬದಲಾವಣೆಯ ಅವಧಿಯಲ್ಲಿ ಧರ್ಮಪ್ರಚಾರಕ ಧರ್ಮಸಭೆಯಾಗಲು, ಸಿನೊಡಾಲಿಟಿ ಬಗ್ಗೆ ಕಾಳಜಿ ವಹಿಸಲು" ವಿಶ್ವಗುರು ಫ್ರಾನ್ಸಿಸ್ ರವರು ನಮಗೆ ಕರೆ ನೀಡಿದ್ದಾರೆ ಎಂದು ಕಾರ್ಡಿನಲ್ ಹೊಲೆರಿಚ್ ರವರು ತೀರ್ಮಾನಿಸಿದರು.