ಈಸ್ಟರ್ ಜಾಗರಣೆಯಲ್ಲಿ ಕಾರ್ಡಿನಲ್ ಬೊರವರು: ದೇವರು ನಮ್ಮ ಸಂಕಟದೊಂದಿಗೆ ಇರುವುದಕ್ಕಾಗಿ ಆನಂದಿಸಿರಿ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಯುದ್ಧದ ಬೂದಿಯ ಕೆಳಗೆ, ಸ್ಥಳಾಂತರ, ವಿನಾಶಕಾರಿ ನೈಸರ್ಗಿಕ ವಿಕೋಪಗಳು ಮತ್ತು ದುಃಖದ ನಡುವೆ, ಖಾಲಿ ಸಮಾಧಿಯಿಂದ ಪ್ರತಿಧ್ವನಿಸುವ ದಿಟ್ಟ ಸತ್ಯವನ್ನು ನಾವು ಘೋಷಿಸುತ್ತೇವೆ: “ಕಲ್ಲು ಉರುಳಿಸಲ್ಪಟ್ಟಿದೆ. ಪ್ರಭುದೇವರು ಪುನರುತ್ಥಾನ ಹೊಂದಿದ್ದಾರೆ (ಎದ್ದಿದ್ದಾನೆ) ಮತ್ತು ಭರವಸೆ ಜೀವಂತವಾಗಿದೆ!”
ಯಾಂಗೂನ್‌ನ ಮಹಾಧರ್ಮಾಧ್ಯಕ್ಷರು ಮತ್ತು ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು ಈಸ್ಟರ್ ಜಾಗರಣೆಗಾಗಿ ತಮ್ಮ ಪ್ರಬೋಧನೆಯಲ್ಲಿ ಇದನ್ನು ವ್ಯಕ್ತಪಡಿಸಿದರು.
ನಮ್ಮಗೆಲ್ಲರಿಗೂ ಈಸ್ಟರ್ ಹಬ್ಬದ ಶುಭಾಶಯಗಳು. ಇದು ಭರವಸೆಯ ಮಹತ್ವದ ದಿನ, ಸೌಖ್ಯದಾಯಕದ ಉತ್ತಮ ದಿನ ಎಂದು ಮ್ಯಾನ್ಮಾರ್‌ನ ಕಾರ್ಡಿನಲ್ ರವರು ಒತ್ತಿ ಹೇಳಿದರು, "ಈ ಭರವಸೆಯ ಜೂಬಿಲಿ ವರ್ಷದಲ್ಲಿ, ನಾವು ದುಃಖಕ್ಕೆ ಅಪರಿಚಿತರಾಗಿ ಅಲ್ಲ, ಆದರೆ ದುಃಖದಲ್ಲಿ ದೀಕ್ಷಾಸ್ನಾನ ಪಡೆದ ಜನರಾಗಿ, ಆದರೆ ಪುನರುತ್ಥಾನದ ಬೆಂಕಿಯಲ್ಲಿ ಹೊಸದಾಗಿ ಜನಿಸಿದ ಜನರಾಗಿ ಒಟ್ಟುಗೂಡುತ್ತೇವೆ ಎಂದು ಅವರು ಹೇಳಿದರು.
ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಮಾರ್ಚ್ 28 ರಂದು ಮ್ಯಾನ್ಮಾರ್ ನ್ನು ಅಪ್ಪಳಿಸಿದ 7.7 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,726ಕ್ಕೆ ತಲುಪಿದ್ದು, 5,105ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 129 ಜನರು ಇನ್ನೂ ಕಾಣೆಯಾಗಿದ್ದಾರೆ. ನಿರಂತರದ ಭೂಕಂಪಗಳು ಮತ್ತು ಅಗತ್ಯ ಸಂಪನ್ಮೂಲಗಳ ಕೊರತೆಯಿಂದಾಗಿ ಚೇತರಿಕೆ ಪ್ರಯತ್ನಗಳು ತೀವ್ರವಾಗಿ ಅಡ್ಡಿಯಾಗುತ್ತಿವೆ, ಇದರಿಂದಾಗಿ ಅನೇಕ ಪ್ರದೇಶಗಳು ಶುದ್ಧ ನೀರು, ವಿದ್ಯುತ್ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೇವೆಗಳಿಲ್ಲದೆ ಉಳಿದಿವೆ ಮತ್ತು ಬಳಲುತ್ತಿರುವ ದೇಶದ ಮೇಲೆ ಪರಿಣಾಮ ಬೀರುವ ಇತರ ಬಿಕ್ಕಟ್ಟುಗಳು ಇನ್ನಷ್ಟು ಜಟಿಲವಾಗಿವೆ.
ಅದೇ ಸಮಯದಲ್ಲಿ, ಕಾರ್ಡಿನಲ್ ಬೊರವರು ವಿಶ್ವಾಸದಿಂದ ಸಂತೋಷಪಡುತ್ತಾರೆ ಮತ್ತು ದೇವರು ತಮ್ಮ ಜನರ ಕಷ್ಟ-ನೋವುಗಳನ್ನು ಹೇಗೆ ನೋಡುತ್ತಾರೆ, ಕೇಳುತ್ತಾರೆ ಮತ್ತು ಅವರೊಂದಿಗೆ ಹೇಗೆ ವಾಸಿಸುತ್ತಾರೆ ಎಂಬುದನ್ನು ನೆನಪಿಸುತ್ತಾರೆ.
ದೇವರು ನಮ್ಮ ಸಂಕಟದಲ್ಲಿ ಜೊತೆಗಿರುತ್ತಾರೆ
"ಸುಡುವ ಪೊದೆಯಿಂದ ರಕ್ತಸಿಕ್ತವಾದ ಶಿಲುಬೆಯವರೆಗೆ," ಅವರು ಹೇಳಿದರು, "ಧರ್ಮಗ್ರಂಥವು ನಮಗೆ ಒಂದು ಪ್ರಬಲ ಸತ್ಯವನ್ನು ಹೇಳುತ್ತದೆ: ನಮ್ಮ ದೇವರು ದೂರ ಮಾಡುವವರಲ್ಲ. ಅವರು ಬಡವರ ಅಳಲಿನ ಕೂಗನ್ನು ಕೇಳಿಸಿಕೊಳ್ಳುತ್ತಾರೆ. ಅವರು ದಮನಿತರ ಯಾತನೆಯನ್ನು ತಿಳಿದಿದ್ದಾರೆ. ಮ್ಯಾನ್ಮಾರ್‌ನ ಗಾಯಗೊಂಡ ಮಣ್ಣಿನ ಮೇಲೆ ಬೀಳುವ ಪ್ರತಿಯೊಂದು ಕಣ್ಣೀರ ಹನಿಯನ್ನು ಅವರು ನೋಡುತ್ತಾರೆ.
ದೇವರು, ಬಳಲುತ್ತಿರುವ ಜನರ ವಿಮೋಚನೆಯ ಅನ್ವೇಷಣೆಯಲ್ಲಿ ಅವರೊಂದಿಗೆ ಇರುತ್ತಾನೆ ಎಂದು ಅವರು ಒತ್ತಿ ಹೇಳುತ್ತಾರೆ.
ದೇವರು ಜನರ ನೋವಿನಿಂದ ತುಂಬಾ ದೂರವೇನು ಇಲ್ಲ ಅಥವಾ ಜನರ ನೋವಿನ ಮೇಲೆ ಆಸೀನರಾಗಿಲ್ಲ. ಅವರು ಉದಾಸೀನತೆಯ ಮುಸುಕಿನ ಹಿಂದೆ ಸರಿಯುವ ದೇವರಲ್ಲ. ಇಲ್ಲ, ಅವರು ಬದಲಿಗೆ, ಅವರು ಬೆಂಕಿಗೆ, ದುಃಖಕ್ಕೆ, ಶಿಬಿರಗಳಿಗೆ ಮತ್ತು ಮಾನವ ಸಂಘರ್ಷಗಳಿಗೆ ಇಳಿದು ವಿಮೋಚನೆ ಮತ್ತು ಶಾಂತಿಯನ್ನು ತರುವ ದೇವರು" ಎಂದು ಒತ್ತಿ ಹೇಳಿದರು.
ನಮ್ಮ ಮಕ್ಕಳು ಮತ್ತು ರಾಷ್ಟ್ರಕ್ಕಾಗಿ ಮತ್ತೊಮ್ಮೆ ಕನಸು ಕಾಣುತ್ತಿದ್ದೇವೆ
ಕಾರ್ಡಿನಲ್ ತಮ್ಮ ಬಳಲುತ್ತಿರುವ ಜನರೊಂದಿಗೆ ಕ್ರಿಸ್ತರು ಅವರ ಪಕ್ಕದಲ್ಲಿದ್ದಾರೆ ಮತ್ತು ಅವರ ಗಾಯಗಳೊಗೆ ಪ್ರವೇಶಿಸುತ್ತಾನೆ ಎಂದು ನೆನಪಿಸಿದರು.
ಈ ವರ್ಷ ಈಸ್ಟರ್ ಮತ್ತು ಮ್ಯಾನ್ಮಾರ್ ಹೊಸ ವರ್ಷ ಒಂದೇ ವಾರದಲ್ಲಿ ಬರಲಿವೆ ಎಂದು ಅವರು ನೆನಪಿಸಿದರು.
ಈಸ್ಟರ್ ಮತ್ತು ಹೊಸ ವರ್ಷದ ಸಂಗಮವು "ಕೇವಲ ಕಾಕತಾಳೀಯವಲ್ಲ", ಆದರೆ ಮತ್ತೆ ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ನೀಡಿರುವ ಒಂದು ದೈವಿಕ ಆಹ್ವಾನ, ತುಂಬಾ ನೋವನ್ನು ಅನುಭವಿಸಿದ ಮಣ್ಣಿನಲ್ಲಿ ಶಾಂತಿಯ ಬೀಜಗಳನ್ನು ನೆಡಲು ಮತ್ತು ನಮ್ಮ ಮಕ್ಕಳು, ನಮ್ಮ ನೆರೆಹೊರೆಯವರು, ನಮ್ಮ ರಾಷ್ಟ್ರಕ್ಕಾಗಿ ಮತ್ತೆ ಕನಸು ಕಾಣಲು ನೀಡಿರುವ ಒಂದು ದೈವಿಕ ಆಹ್ವಾನ.
ಪವಿತ್ರ ಆರಂಭ
ನಾವು ವ್ಯಕ್ತಿಗಳಾಗಿ ಮಾತ್ರವಲ್ಲ, ಪುನರ್ನಿರ್ಮಿಸಲು ಸಿದ್ಧವಾದ ಕೈಗಳೊಂದಿಗೆ, ಕ್ಷಮಿಸಲು ತೆರೆದ ಹೃದಯಗಳೊಂದಿಗೆ ಮತ್ತು ನ್ಯಾಯ ಹಾಗೂ ಗುಣಪಡಿಸಲು ಉದಯಿಸುತ್ತಿರುವ ಸೂರ್ಯನ ಮೇಲೆ ಕಣ್ಣುಗಳನ್ನು ನೆಟ್ಟಿರುವ ಜನರಾಗಿ ನಾವು ಎದ್ದೇಳೋಣ" ಎಂದು ಅವರು ಪ್ರೋತ್ಸಾಹಿಸಿದರು.
ಸಮಾಧಿಯಿಂದ ಕಲ್ಲನ್ನು ಉರುಳಿಸಿದರೆ, "ಖಂಡಿತವಾಗಿಯೂ ಎಲ್ಲಾ ದಬ್ಬಾಳಿಕೆಯ ಮತ್ತು ಗುಲಾಮಗಿರಿಯ ಕಲ್ಲುಗಳನ್ನು ಸಹ ನಮ್ಮ ಭೂಮಿಯ ಆತ್ಮದಿಂದಲೂ ಉರುಳಿಸಬಹುದು" ಎಂದು ಕಾರ್ಡಿನಲ್ ಬೊರವರು ತರ್ಕಿಸಿದರು.
ಆದ್ದರಿಂದ, ಕಾರ್ಡಿನಲ್ ಬೊರವರು, "ಮ್ಯಾನ್ಮಾರ್‌ನಲ್ಲಿ 2025ರ ಈಸ್ಟರ್ ಕೇವಲ ಪವಿತ್ರ ದಿನವಾಗಿರದೆ ಪವಿತ್ರ ಆರಂಭವಾಗಲಿ" ಎಂದು ಪ್ರಾರ್ಥಿಸಿದರು.