ರಕ್ತಸಿಕ್ತ ಗರಿಗಳ ಭಾನುವಾರ: 'ದೇವರ ಕರುಣೆ ನಮ್ಮ ಮೇಲೆ ಇರಲಿ'
ಫ್ರಾನ್ಸೆಸ್ಕಾ ಸಬಟಿನೆಲ್ಲಿ ಮತ್ತು ಲಿಸಾ ಜೆಂಗಾರಿನಿ
ಏಪ್ರಿಲ್ 13, ಗರಿಗಳ ಭಾನುವಾರ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮತ್ತೊಂದು ಭಯಾನಕ ಅಧ್ಯಾಯವನ್ನು ಗುರುತಿಸಿತು.
ಪವಿತ್ರ ಮತ್ತು ಶಾಂತಿಯುತ ಪೂಜಾ ದಿನವಾಗಿರಬೇಕಾದ ದಿನದಂದು, ಈಶಾನ್ಯ ಉಕ್ರೇನ್‌ನ ಸುಮಿ ನಗರದಲ್ಲಿ ದುರಂತ ಸಂಭವಿಸಿತು, ಗರಿಗಳ ಭಾನುವಾರ ಕ್ರೂರ ಕ್ಷಿಪಣಿ ದಾಳಿಯು, ಪೂಜಾ ದಿನವನ್ನು ಶೋಕ ಮತ್ತು ವಿನಾಶದ ದಿನವನ್ನಾಗಿ ಪರಿವರ್ತಿಸಿತು.
ರಷ್ಯಾದ ಗಡಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಸುಮಿ, ಬೆಳಿಗ್ಗೆ 10 ಗಂಟೆ ಸುಮಾರಿಗೆ ಎರಡು ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರ ಕೇಂದ್ರದಲ್ಲಿ ಬಿದ್ದಾಗ, ಭಕ್ತಾಧಿಗಳು ದೇವಾಲಯಕ್ಕೆ ತೆರಳುತ್ತಿದ್ದಾಗ ಮಾರಕ ಕ್ಷಿಪಣಿ ದಾಳಿಯ ಸ್ಥಳವಾಯಿತು.
ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪವಿತ್ರ ವಾರದ ಆರಂಭವನ್ನು ಆಚರಿಸಲು ತಯಾರಿ ನಡೆಸುತ್ತಿದ್ದ ಸಂತ್ರಸ್ತರುಗಳು, ಹತ್ಯಾಕಾಂಡದಲ್ಲಿ ಸಿಲುಕಿಕೊಂಡರು.
ನಮ್ಮ ರಕ್ಷಣೆಗೋಸ್ಕರ ದೇವರ ಕಡೆಗೆ ತಿರುಗುವುದನ್ನು ಬಿಟ್ಟು ಬೇರೇನೂ ಉಳಿದಿಲ್ಲ
ಉಕ್ರೇನ್‌ನ ಪ್ರೇಷಿತ ರಾಯಭಾರಿಯಾದ ಮಹಾಧರ್ಮಾಧ್ಯಕ್ಷರಾದ ಕುಲ್ಬೊಕಾಸ್, ವ್ಯಾಟಿಕನ್ ಸುದ್ದಿಗೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ, ಇಂತಹ ಅರ್ಥಹೀನ ಹಿಂಸಾಚಾರದ ಮುಖಾಂತರ ಅಸಹಾಯಕತೆಯ ಭಾವನೆಯನ್ನು ವ್ಯಕ್ತಪಡಿಸಿದರು.
ಈ ವರ್ಷ, ಈಸ್ಟರ್, ಗ್ರೆಗೋರಿಯನ್ ಮತ್ತು ಜೂಲಿಯನ್ ಎರಡೂ ಮುಖ್ಯ ಪಂಚಾಂಗಗಳ ಪ್ರಕಾರ ಒಂದೇ ದಿನಾಂಕದಂದು ಬರುತ್ತದೆ. ಕ್ರೈಸ್ತರ ಆಚರಣೆಯ ಈ ಕ್ಷಣದಲ್ಲಿ, ದಾಳಿಯು ಇನ್ನಷ್ಟು ಸಾಂಕೇತಿಕವಾಗುತ್ತದೆ, ಈಗಾಗಲೇ ಮುತ್ತಿಗೆ ಹಾಕಲ್ಪಟ್ಟ ರಾಷ್ಟ್ರದ ಹೃದಯ ಭಾಗಕ್ಕೆ ಹೊಡೆತ ನೀಡುತ್ತದೆ ಎಂದು ವ್ಯಾಟಿಕನ್ ರಾಯಭಾರಿಯು ಗಮನಿಸಿದರು.
ಯುರೋಪಿನ ಒಕ್ಕೂಟ: ಮತ್ತೊಂದು ಯುದ್ಧ ಅಪರಾಧ
ಭಾನುವಾರ ಸುಮಿ ಮೇಲೆ ನಡೆದ ದಾಳಿಯು ಕೆಲವೇ ದಿನಗಳಲ್ಲಿ ಹೆಚ್ಚಿನ ಸಾವುನೋವುಗಳನ್ನು ಕಂಡ ಅಥವಾ ನೋಡುತ್ತಿರುವ ಎರಡನೇ ದೊಡ್ಡ ಪ್ರಮಾಣದ ದಾಳಿಯಾಗಿದೆ. ಒಂದು ವಾರದ ಹಿಂದೆ, ಉಕ್ರೇನಿಯದ ಅಧ್ಯಕ್ಷರ ತವರು ಪಟ್ಟಣವಾದ ಕ್ರಿವಿ ರಿಹ್ ಮೇಲೆ ಮಾರಕ ಕ್ಷಿಪಣಿ ದಾಳಿ ನಡೆದು ಒಂಬತ್ತು ಮಕ್ಕಳು ಸೇರಿದಂತೆ ಸುಮಾರು 20 ಜನರು ಸಾವನ್ನಪ್ಪಿದ್ದರು.
ಸುಮಿ ಮೇಲೆ ನಡೆದದ್ದು ಭಯಾನಕ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ" ಎಂದು ಅಧ್ಯಕ್ಷ ಝೆಲೆನ್ಸ್ಕಿರವರು ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ. ಶತ್ರು ಕ್ಷಿಪಣಿಗಳು ಸಾಮಾನ್ಯ ನಗರದ ಬೀದಿಯನ್ನು ಹೊಡೆದವು, ಇದರಿಂದ ದೈನಂದಿನ ಜೀವನ: ಮನೆಗಳು, ಶಾಲೆಗಳು, ರಸ್ತೆಯ ಕಾರುಗಳು ಹಾನಿಗೊಳಗಾಗಿವೆ. ಮತ್ತೊಂದು ದುಃಖಕರ ಸಂಗತಿಯೆಂದರೆ ಘಟನೆಯು ಗರಿಗಳ ಭಾನುವಾರದಂದು, ಜೆರುಸಲೇಮ್‌ಗೆ ಪ್ರಭುವಿನ ಪ್ರವೇಶದ ಹಬ್ಬವನ್ನು ಆಚರಿಸಲು, ಜನರು ದೇವಾಲಯಕ್ಕೆ ಹೋಗುವ ದಿನದಂದು ಸಂಭವಿಸಿರುವುದು.
"ಸುಮಿಯಿಂದ ಭಯಾನಕ ದೃಶ್ಯಗಳು" ಎಂದು NATOದ ಹಂಗಾಮಿ ವಕ್ತಾರರಾದ ಆಲಿಸನ್ ಹಾರ್ಟ್ ರವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. "ಹಲವರಿಗೆ ಈ ಪವಿತ್ರ ದಿನದಂದು ನಮ್ಮ ಆಲೋಚನೆಗಳು ಉಕ್ರೇನಿಯದ ಜನರೊಂದಿಗಿವೆ."
ಯುರೋಪಿನ ಒಕ್ಕೂಟದ ರಾಯಭಾರಿ ಕಟಾರಿನಾ ಮಾಥೆರ್ನೋವಾರವರು, ಸುಮಿ ಮೇಲಿನ "ಭಯಾನಕ ರಷ್ಯಾದ ದಾಳಿ"ಯನ್ನು "ಯುದ್ಧ ಅಪರಾಧಗಳ ಸರಣಿಯಲ್ಲಿ, ಇದು ಮತ್ತೊಂದಾಗಿದೆ" ಎಂದು ಹೇಳಿದರು.
ದಾಳಿಯ ನಂತರ ವಿದೇಶಾಂಗ ವ್ಯವಹಾರಗಳಲ್ಲಿ ಯುರೋಪಿನ ಒಕ್ಕೂಟ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಚರ್ಚಿಸಲು ಯುರೋಪಿನ ಒಕ್ಕೂಟದ ವಿದೇಶಾಂಗ ಮಂತ್ರಿಗಳು ಇಂದು ಬೆಳಿಗ್ಗೆ ಲಕ್ಸೆಂಬರ್ಗ್‌ನಲ್ಲಿ ಸಭೆ ಸೇರುತ್ತಿದ್ದಾರೆ. "ರಷ್ಯಾದ ಆಕ್ರಮಣವನ್ನು ತಡೆಯಲು" ಉಕ್ರೇನ್‌ಗೆ ಸಹಾಯ ಮಾಡಲು ನಾಯಕರು ಇನ್ನೇನು ಮಾಡಬಹುದು ಎಂಬುದರ ಕುರಿತು ಚರ್ಚಿಸಲಿದ್ದಾರೆ.