MAP

 PS118 Suor Albertina Maria Pauletti al muro di Tijuana - photo Marco Palombi PS118 Suor Albertina Maria Pauletti al muro di Tijuana - photo Marco Palombi  (Marco Palombi)

ಮೆಕ್ಸಿಕೋದಲ್ಲಿ ಸ್ಕಾಲಾಬ್ರಿನಿಯನ್ ಸಿಸ್ಟರ್‌ಗಳ ʻಗಡಿನಾಡು ವರ್ಚಸ್ಸು'

ʻಇನ್ಸ್ಟಿಟ್ಯೂಟೊ ಮಾಡ್ರೆ ಅಸುಂಟಾ' ಆಶ್ರಯದ ನಿರ್ದೇಶಕಿ ಸಿಸ್ಟರ್ ಆಲ್ಬರ್ಟಿನಾ ಪೌಲೆಟ್ಟಿರವರು, ಅಮೇರಿಕದ ಗಡಿಯಲ್ಲಿರುವ ಮೆಕ್ಸಿಕೋದ ಟಿಜುವಾನಾದಲ್ಲಿ ವಲಸೆ ಬಂದ ಮಹಿಳೆಯರು ಮತ್ತು ಮಕ್ಕಳೊಂದಿಗಿನ ತಮ್ಮ ಕೆಲಸವನ್ನು ವಿವರಿಸುತ್ತಾರೆ. "ನಾವು ಎಷ್ಟು ಕಾಲದವರೆಗೆ ಹೀಗೆ ಗೋಡೆಗಳನ್ನು ನಿರ್ಮಿಸುತ್ತಲೇ ಇರುತ್ತೇವೆ?"

ರಾಬರ್ಟೊ ಪಗ್ಲಿಯಾಲೊಂಗಾ

ಅವರದು ಯಾವಾಗಲೂ "ಗಡಿನಾಡು ವರ್ಚಸ್ಸು" - ಇತರರ ಮೇಲಿನ ಪ್ರೀತಿಯಲ್ಲಿ ಆಳವಾಗಿ ಬೇರೂರಿರುವ ಧರ್ಮಪ್ರಚಾರಕರ ದೈವಕರೆಯಾಗಿದೆ. ಇದು ಸ್ಥಾಪನೆಯಾದಾಗಿನಿಂದ, ಈ ಧ್ಯೇಯವು ವಲಸಿಗರು ಮತ್ತು ನಿರಾಶ್ರಿತರ ಸೇವೆಯ ಕಡೆಗೆ ನಿರ್ದೇಶಿಸಲ್ಪಟ್ಟಿದೆ, ಅವರು ಯುದ್ಧಗಳು, ಹಸಿವು, ಹಿಂಸೆ, ಕಿರುಕುಳ ಅಥವಾ ಅನಿಶ್ಚಿತ ಜೀವನ ಪರಿಸ್ಥಿತಿಗಳಿಂದ ಪಲಾಯನ ಮಾಡುವವರನ್ನು ಸ್ವಾಗತಿಸಲು, ರಕ್ಷಿಸಲು, ಕಾಪಾಡಲು ಮತ್ತು ಕಾಳಜಿ ವಹಿಸಲು, ಅವರಿಗೆ ನೆರವು ನೀಡುವ ಪ್ರಪಂಚದ ಮೂಲೆಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ಸಂತ ಚಾರ್ಲ್ಸ್ ಬೊರೊಮಿಯೊರವರ ಧರ್ಮಪ್ರಚಾರಕ ಸಹೋದರಿಗಳಾದ, ಸ್ಕೇಲಾಬ್ರಿನಿಯದವರು, ಸಂಚಾರದಲ್ಲಿರುವ ಅಥವಾ ಚಲನೆಯಲ್ಲಿರುವ ಜನರು ಕೇವಲ ಗಮನ ಹರಿಸಲು ಅಥವಾ ಕಾಳಜಿ ವಹಿಸಲು, ಅವರು "ವಸ್ತುಗಳಲ್ಲ" ಬದಲಿಗೆ ಜೊತೆ, ಜೊತೆಯಲ್ಲಿ ನಡೆಯುವ "ಪ್ರಜೆಗಳು", ಅವರ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುತ್ತಾರೆ.

ಟಿಜುವಾನಾದಲ್ಲಿರುವ 'ಇನ್ಸ್ಟಿಟ್ಯೂಟೊ ಮಾಡ್ರೆ ಅಸುಂಟಾ'
ಇಂದು, ಅವರ ಅತ್ಯಂತ ಮಹತ್ವದ ಗಡಿಯಾದ ಟಿಜುವಾನಾ, ಇದು ಮೆಕ್ಸಿಕೋ ಮತ್ತು ಅಮೇರಿಕ ನಡುವಿನ ಗಡಿ ವಲಯವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಕಾರ್ಯಕಾರಿ ಆದೇಶಗಳಿಂದಾಗಿ, ನಗರವು ಮತ್ತೊಮ್ಮೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಕೇಂದ್ರಬಿಂದುವಾಗಿದೆ, ಇದು ಎಲ್ಲಾ ದಾಖಲೆರಹಿತ ವಲಸಿಗರನ್ನು ಅಮೇರಿಕದ ನೆಲದಿಂದ ಹೊರಹಾಕುವಂತೆ ಒತ್ತಾಯಿಸಿತು.

ಈಗ ಈ ಸಮಸ್ಯೆ ದೈನಂದಿನದ ಸುದ್ದಿಯಾಗುತ್ತಿದೆ. ಆದರೆ ನಾವು ಇಲ್ಲೇ, ಈ ಗಡಿನಾಡಿನಲ್ಲಿ, 30 ವರ್ಷಗಳಿಂದ ಇದ್ದೇವೆ. ನಾನು ವೈಯಕ್ತಿಕವಾಗಿ ಐದು ವರ್ಷಗಳಿಂದ ಇಲ್ಲೇ ಇದ್ದೇನೆ ಎಂದು ಸ್ಯಾನ್ ಡಿಯಾಗೋದಿಂದ "ಅವಮಾನದ ಗೋಡೆ" ಎಂದು ಕರೆಯಲ್ಪಡುವ ನಗರವಾದ ಬಾಜಾ ಕ್ಯಾಲಿಫೋರ್ನಿಯಾದ ಟಿಜುವಾನಾದಲ್ಲಿ ಇನ್ಸ್ಟಿಟ್ಯೂಟೊ ಮಾಡ್ರೆ ಅಸುಂಟಾವನ್ನು ನಡೆಸುತ್ತಿರುವ ಸಿಸ್ಟರ್ ಆಲ್ಬರ್ಟಿನಾ ಪೌಲೆಟ್ಟಿರವರು ಹೇಳುತ್ತಾರೆ.

ವಲಸೆ ಬಂದ ಮತ್ತು ನಿರಾಶ್ರಿತ ಮಹಿಳೆಯರು, ಒಂಟಿಯಾಗಿರಲಿ ಅಥವಾ ಮಕ್ಕಳಾಗಿರಲಿ, ದುರ್ಬಲತೆಯ ಸಂದರ್ಭಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವವರಿಗೆ ಸಹಾಯ ಮಾಡಲು ಈ ಸಂಸ್ಥೆಯನ್ನು ರಚಿಸಲಾಗಿದೆ. ಡಿಸೆಂಬರ್ 2024ರಲ್ಲಿ, ಈ ಉಪಕ್ರಮಕ್ಕೆ "ಫೋಸಿವ್(ಪ್ರಥಮ) ಅಂತರಾಷ್ಟ್ರೀಯ ಸ್ವಯಂಸೇವಕ ಪ್ರಶಸ್ತಿ" ನೀಡಲಾಯಿತು.

ಪ್ರಸ್ತುತವಾಗಿ, ಟಿಜುವಾನಾದಲ್ಲಿರುವ ಸಂನ್ಯಾನಿಸಿನಿಯರ ಮನೆಯನ್ನು ಮೂವರು ಸಹೋದರಿಯರು ನಿರ್ವಹಿಸುತ್ತಿದ್ದಾರೆ, ಜೊತೆಗೆ ಮನಶ್ಶಾಸ್ತ್ರಜ್ಞರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಇದ್ದಾರೆ.

ಇಲ್ಲಿಗೆ ಬರುವ ಹೆಚ್ಚಿನ ಮಹಿಳೆಯರು, ಸುಮಾರು 80%, ಮೆಕ್ಸಿಕೋದವರು, ಸಂಘಟಿತ ಅಪರಾಧದ ಹಿಂಸಾಚಾರ, ತೀವ್ರ ಕೌಟುಂಬಿಕ ಸಂಕಷ್ಟ ಅಥವಾ ಗಂಡಂದಿರು ಮತ್ತು ಸಂಬಂಧಿಕರ ದೌರ್ಜನ್ಯದಿಂದ ಪಲಾಯನ ಮಾಡಿದವರಾಗಿರುತ್ತಾರೆ. ಇತರರು ಗ್ವಾಟೆಮಾಲಾ, ಹೊಂಡುರಾಸ್, ಎಲ್ ಸಾಲ್ವಡಾರ್ ಮತ್ತು ವೆನೆಜುವೆಲಾದಿಂದ ಬಂದವರು.

ಅವರು ಸಾಮಾನ್ಯವಾಗಿ ಒಂದೆರಡು ವಾರಗಳವರೆಗೆ, ಗರಿಷ್ಠ ಪಕ್ಷ ಎರಡು ತಿಂಗಳವರೆಗೆ, ಮುಖ್ಯವಾಗಿ ಅವರ ಆಶ್ರಯ ಅರ್ಜಿ ನೇಮಕಾತಿಗಳಿಗಾಗಿ ಕಾಯುತ್ತಿರುವವರೆಗೂ ಇಲ್ಲಿಯೇ ಇರುತ್ತಾರೆ. ಇದೀಗ, ಈ ಅನಿಶ್ಚಿತತೆ ಮತ್ತು ಅಸ್ಥಿರತೆಯು, ಅಪರಾಧಿಗಳು ಮತ್ತು ಶೋಷಕರಿಗೆ ಒಂದು ಉತ್ತಮ ನೆಲೆಯಾಗಿ ಸೃಷ್ಟಿಸುತ್ತದೆ.

'ಅವರನ್ನು ಮನುಷ್ಯರೆಂದು ಪರಿಗಣಿಸಬೇಕು ಎಂದು ನಾವು ಬಯಸುತ್ತೇವೆ'
ಮಾಡ್ರೆ ಅಸುಂಟಾದಲ್ಲಿ, ಕಾಗದಪತ್ರಗಳೊಂದಿಗಿನ ಆಡಳಿತಾತ್ಮಕ ಬೆಂಬಲದಿಂದ ಹಿಡಿದು, ಮಾನಸಿಕ ಸಮಾಲೋಚನೆಯವರೆಗೆ ಪ್ರತಿಯೊಂದು ರೀತಿಯ ಸಹಾಯವನ್ನು ಒದಗಿಸಲಾಗುತ್ತದೆ, ಏಕೆಂದರೆ ಬರುತ್ತಿರವರಲ್ಲಿ ಬಹುತೇಕವಾಗಿ ಎಲ್ಲರೂ ದುರ್ಬಲ ಸ್ಥಿತಿಯಲ್ಲಿದ್ದಾರೆ.

ಜನರು ಕೇಳುವ ದುಃಖಕರ ಕಥೆಗಳು -"ಹೃದಯವಿದ್ರಾವಕ" - ತಮ್ಮ ತಂದೆಯು ತಾಯಿಯನ್ನು ಹೊಡೆಯುವುದನ್ನು ಅಥವಾ ಅಪರಾಧಿಗಳಿಂದ ತಂದೆ ಕೊಲ್ಲಲ್ಪಟ್ಟದ್ದನ್ನು ಕಣ್ಣಾರೆ ನೋಡಿರುವ ಮಕ್ಕಳಿದ್ದಾರೆ. ಕೆಲವರಂತೂ ಸಂಬಂಧಿಕರು ಅಥವಾ ಅವರ ಸ್ವಂತ ಪೋಷಕರಿಂದಲೂ ದೌರ್ಜನ್ಯಕ್ಕೊಳಗಾಗಿದ್ದವರು ಇಲ್ಲಿದ್ದಾರೆ" ಎಂದು ಸಿಸ್ಟರ್‌ ಆಲ್ಬರ್ಟಿನಾರವರು ವಿವರಿಸುತ್ತಾರೆ.

ಸಹೋದರಿಯರು ತಾಯಂದಿರು ತಮ್ಮ ಮಕ್ಕಳೊಂದಿಗೆ ಬಾಂಧವ್ಯ ಬೆಳೆಸಲು ಸಹಾಯ ಮಾಡುತ್ತಾರೆ, ಇದು ಕಷ್ಟಕರವಾದ ಜೀವನ ಪರಿಸ್ಥಿತಿಗಳಿಂದಾಗಿ ಹೆಚ್ಚಾಗಿ ಕಾಣೆಯಾಗುತ್ತಿದೆ.

ಒಂದು ಆಧ್ಯಾತ್ಮಿಕ ಅಭ್ಯಾಸವೂ ಇಲ್ಲಿದೆ: "ನಾವು 'ಕ್ರೈಸ್ತ ಧರ್ಮದ ಪ್ರಮಾಣಪತ್ರ'ವನ್ನು ಕೇಳುವುದಿಲ್ಲ," ಎಂದು ಅವರು ಫೋನ್‌ನಲ್ಲಿ ನಗುತ್ತಾ ಹೇಳುತ್ತಾರೆ, ಆದರೆ ಅವರಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಅವರ ಜೀವನಕ್ಕೆ ಅರ್ಥವನ್ನು ಹುಡುಕುತ್ತಿದ್ದಾರೆ ಮತ್ತು ದೇವರು ತಮ್ಮ ಜೀವನದಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ನಾವು ನೋಡುತ್ತೇವೆ. ಇದು ಎಲ್ಲರಲ್ಲಿಯೂ ಒಂದೇ: ನಾವು ಪ್ರೀತಿಸಲ್ಪಟ್ಟಿದ್ದೇವಾ ಎಂಬ ಭಾವನೆ ಮತ್ತು ನಾವು ದೇವರ ಯಾವುದೋ ಒಂದು ಉದ್ದೇಶಕ್ಕಾಗಿ ಜೀವಿಸುತ್ತಿದ್ದೇವೆ ಎಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಇಲ್ಲಿ, ನಾವು ಕಾಣಬೇಕಾಗಿರುವುದು ಏನೆಂದರೆ, ಅವರೆಲ್ಲಾ ಜನರು ಎಂದು ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ.

ಸಹೋದರಿಯರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಾರೆ ಮತ್ತು ಅವರಲ್ಲಿ ಈ ನಿಯಮಗಳನ್ನು ಪಾಲಿಸದವರನ್ನು ಹೊರಹೋಗುವಂತೆ ಕೇಳಲಾಗುತ್ತದೆ. ಮನೆ ನಿರ್ವಹಣೆ ಮತ್ತು ಶುಚಿಗೊಳಿಸುವಿಕೆ ಅಥವಾ ಅಡುಗೆ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರೂ ಭಾಗವಹಿಸುತ್ತಾರೆ. ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ, ಆದರೆ ಅದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರೂ ಸಮುದಾಯಕ್ಕೆ ಕೊಡುಗೆ ನೀಡಬೇಕು.

ಅಮೇರಿಕದ ಕಾರ್ಯನಿರ್ವಾಹಕ ಆದೇಶಗಳು ಮತ್ತು ಗಡೀಪಾರು
ಈ ಸಮಯದಲ್ಲಿ, ಧಾರ್ಮಿಕ ಸಹೋದರಿ ವಿವರಿಸುತ್ತಾರೆ, ಸಂಸ್ಥೆಯು ಸುಮಾರು 90 ವಲಸಿಗರ ಸಾಮರ್ಥ್ಯವನ್ನು ಹೊಂದಿದ್ದರೂ, ಕೇವಲ 18 ವಲಸಿಗರಿಗೆ ಮಾತ್ರ ಆಶ್ರಯ ನೀಡುತ್ತದೆ. ಏಕೆಂದರೆ ಮೆಕ್ಸಿಕೋದ ಸರ್ಕಾರವು ಅಮೇರಿಕದಿಂದ ಗಡೀಪಾರು ಮಾಡಲಾದ 2,600 ಜನರಿಗೆ ಸ್ಥಳಾವಕಾಶ ಕಲ್ಪಿಸುವ ಆಶ್ರಯ-ಹೋಟೆಲ್ ನ್ನು ಸ್ಥಾಪಿಸಿದೆ. ಅಲ್ಪಾವಧಿಯ ಸಹಾಯವನ್ನು ಪಡೆದ ನಂತರ, ಈ ವ್ಯಕ್ತಿಗಳು ತಮ್ಮ ಮೂಲ ಸ್ಥಳಗಳಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರವು ಮೆಕ್ಸಿಕೋದ ಪ್ರಜೆಗಳಿಗೆ ಮಾತ್ರ ಜವಾಬ್ದಾರವಾಗಿದೆ ಎಂದು ಹೇಳಿದೆ, ಆದರೆ ವಾಸ್ತವದಲ್ಲಿ, ಇತರ ದೇಶಗಳ ಜನರೂ ಸಹ ಇಲ್ಲಿ ಇದ್ದಾರೆ ಎಂದು ತೋರುತ್ತದೆ.

ಅಧ್ಯಕ್ಷ ಟ್ರಂಪ್ ರವರ ಕಾರ್ಯಕಾರಿ ಆದೇಶವು ಮತ್ತೊಂದು ಪ್ರಮುಖ ಹಿನ್ನಡೆಯನ್ನುಂಟು ಮಾಡಿತು, ಇದು ಅನೇಕ NGOಗಳು (ಸರ್ಕಾರೇತರ) ಮತ್ತು ಸಂಸ್ಥೆಗಳಿಗೆ ಮಾನವೀಯ ನಿಧಿಯನ್ನು ಕಡಿತಗೊಳಿಸಿತು, ಅವುಗಳ ಕೆಲಸವನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಿತು. ಇದರ ಪರಿಣಾಮವಾಗಿ, ನಮಗೆ ಅವರ ಬೆಂಬಲವೂ ಸಹ ಸಿಗುತ್ತಿಲ್ಲ.

ವಲಸೆಯು ಒಂದು ಮುಖ್ಯ ಸಮಸ್ಯೆಯಾದಾಗ, ನಾನು ನನ್ನನ್ನು ಪ್ರಶ್ನಿಸಿಕೊಳ್ಳುತ್ತೇನೆ ಎಂದು ಸಿಸ್ಟರ್ ಆಲ್ಬರ್ಟಿನಾರವರು ಹೇಳುತ್ತಾರೆ, ನಾವು ಎಷ್ಟು ಕಾಲದವರೆಗೆ ಗೋಡೆಗಳನ್ನು ನಿರ್ಮಿಸುತ್ತಲೇ ಇರುತ್ತೇವೆ? ನಮ್ಮ ಸಂಸ್ಥಾಪಕರು ಹೇಲುತ್ತಿದ್ದೇನೆಂದರೆ, ವಲಸಿಗರಿಗೆ ಮನೆ ಎಂದರೆ ಅವರಿಗೆ ಅನ್ನ ನೀಡುವ ಭೂಮಿ ಎಂದು ಹೇಳುತ್ತಿದ್ದರು.

ಸ್ಕಾಲಾಬ್ರಿನಿಯದ ಸಿಸ್ಟರ್‌ಗಳ ದೀರ್ಘ ಇತಿಹಾಸ
ಸ್ಕಾಲಾಬ್ರಿನಿಯದ ಸಿಸ್ಟರ್‌ಗಳಿಗೆ ದೀರ್ಘ ಇತಿಹಾಸವಿದೆ. 1895ರಲ್ಲಿ ಜಿಯೋವಾನಿ ಬಟಿಸ್ಟಾ ಸ್ಕಾಲಾಬ್ರಿನಿದಲ್ಲಿ ಸ್ಥಾಪಿಸಿದ ಅವರು, ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಲತೀನ್ ಅಮೇರಿಕಾದಲ್ಲಿ ಮಾತ್ರವಲ್ಲದೆ ಅದರಾಚೆಗೂ ಸಂಸ್ಥೆಗಳ ವಿಶಾಲ ಜಾಲವನ್ನು ಸ್ಥಾಪಿಸಿದ್ದಾರೆ. ಇಂದು, ಅವರು 27 ದೇಶಗಳಲ್ಲಿ 111 ಧರ್ಮಪ್ರಚಾರಕ ಸಂಸ್ಥೆಗಳನ್ನು ಹೊಂದಿದ್ದು, 400ಕ್ಕೂ ಹೆಚ್ಚು ಧಾರ್ಮಿಕ ಸಹೋದರಿಯರನ್ನು ಹೊಂದಿದ್ದಾರೆ.

"ನಮಗೆ, ಕೆಲಸ ಮತ್ತು ಪ್ರಾರ್ಥನೆ ಒಂದೇ," ಎಂದು ಸಿಸ್ಟರ್ ಆಲ್ಬರ್ಟಿನಾರವರು ತೀರ್ಮಾನಿಸುತ್ತಾರೆ. ಓರಾ ಎಟ್ ಲ್ಯಾಬೋರಾ - ೧,೫೦೦ ವರ್ಷಗಳ ಹಿಂದೆ ಸಂತ ಬೆನೆಡಿಕ್ಟ್ ರವರು ಕಲಿಸಿದಂತೆ "ಪ್ರಾರ್ಥನೆ ಮಾಡಿ ಮತ್ತು ಕೆಲಸ ಮಾಡಿ" - ಈ ತತ್ವವನ್ನು ವರ್ತಮಾನಕ್ಕೆ ಅನ್ವಯಿಸಲಾಗಿದೆ, ಬಳಲುತ್ತಿರುವ ಮಾನವೀಯತೆಯು ಭರವಸೆಯ ಸಂಕೇತಕ್ಕಾಗಿ ಕಾಯುತ್ತಿರುವ ಸ್ಥಳಗಳಲ್ಲಿ ಇವರ ಸೇವೆ ಸ್ಮರಣೀಯವಾದದ್ದು.
 

10 ಮಾರ್ಚ್ 2025, 11:06