2015 ರಿಂದ 2025 ರವರೆಗೆ ನೈಜೀರಿಯಾದಲ್ಲಿ 145 ಯಾಜಕರ ಅಪಹರಣವಾಗಿದೆ
ಲಿಸಾ ಝೆಂಗಾರಿನಿ
ಕಳೆದ ದಶಕದಲ್ಲಿ ನೈಜೀರಿಯಾದ ಕಥೋಲಿಕ ಧರ್ಮಸಭೆಯು ತನ್ನ ಯಾಜಕರನ್ನು, ಗುರುವಿದ್ಯಾಮಂದಿರದ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಅಪಹರಣಗಳ ಆತಂಕಕಾರಿ ಅಲೆಯನ್ನು ಕಂಡಿದೆ, ಆದರೆ ಇವೆಲ್ಲವೂ ಕೇವಲ ಸುಲಿಗೆಗಾಗಿ ಅಪಹರಣಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ.
ಕಳೆದ ವಾರ ಫೈಡ್ಸ್ ಏಜೆನ್ಸಿ ಪ್ರಕಟಿಸಿದ ಅಧ್ಯಯನದ ಪ್ರಕಾರ, 2015 ಮತ್ತು 2025ರ ನಡುವೆ ಒಟ್ಟು 145 ಯಾಜಕರನ್ನು ಅಪಹರಿಸಲಾಗಿದ್ದು, ಹನ್ನೊಂದು ಮಂದಿ ಯಾಜಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ.
ಇತ್ತೀಚಿನ ಘಟನೆ ಮಾರ್ಚ್ 5 ರಂದು ನಡೆದಿದ್ದು, ಕಡುನಾ ರಾಜ್ಯದ ಕಫಂಚನ್ ಧರ್ಮಕ್ಷೇತ್ರದ ಯಾಜಕರಾದ ಧರ್ಮಗುರು ಸಿಲ್ವೆಸ್ಟರ್ ಒಕೆಚುಕ್ವುರವರನ್ನು ಅಪಹರಿಸಿದ, ಒಂದು ದಿನದ ನಂತರ, ಕೊಲೆ ಮಾಡಲಾಯಿತು ಎಂದು ಎಸಿಐ ಆಫ್ರಿಕಾ ಸಂಸ್ಥೆಯು ವರದಿ ಮಾಡಿದೆ.
ಎರಡು ದಿನಗಳ ಹಿಂದೆ ಎಡೋ ರಾಜ್ಯದ ಔಚಿ ಧರ್ಮಕ್ಷೇತ್ರದಲ್ಲಿ, ಗುರುವಿದ್ಯಾಮಂದಿರದ ವಿದ್ಯಾರ್ಥಿ ಆಂಡ್ರ್ಯೂ ಪೀಟರ್ ರವರನ್ನು ಬಂದೂಕುಧಾರಿಗಳು ಅಪಹರಿಸಿ ಕ್ರೂರವಾಗಿ ಕೊಂದು ಹಾಕಿದರು, ಅವರು ಮತ್ತೊಬ್ಬ ಯಾಜಕರಾದ ಧರ್ಮಗುರು ಫಿಲಿಪ್ ಎಕ್ವೆಲಿರವರೊಂದಿಗೆ ಹತ್ತು ದಿನಗಳ ಸೆರೆಯಲ್ಲಿದ್ದವರು ಮಾರ್ಚ್ 13 ರಂದು ಬಿಡುಗಡೆಯಾದರು.
ನೈಜೀರಿಯಾದಲ್ಲಿ ಅಪಹರಣಗಳು: ಪ್ರಮುಖ ಮತ್ತು ದೀರ್ಘಕಾಲದ ಸಮಸ್ಯೆ
ತೈಲ ಸಮೃದ್ಧ ನೈಜರ್ ಡೆಲ್ಟಾದಲ್ಲಿ ವಿದೇಶಿ ತೈಲ ಕಾರ್ಯನಿರ್ವಾಹಕರನ್ನು ಸಶಸ್ತ್ರ ಗುಂಪುಗಳು ಅಪಹರಿಸಲು ಪ್ರಾರಂಭಿಸಿದಾಗಿನಿಂದ, ತಮ್ಮ ಸಮುದಾಯಗಳಲ್ಲಿನ ತೈಲ ಮಾಲಿನ್ಯದ ಬಗ್ಗೆ ಅವರ ಕಳವಳಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಒಂದು ಮಾರ್ಗವಾಗಿ, ತೊಂಬತ್ತರ ದಶಕದಿಂದಲೂ ನೈಜೀರಿಯಾದಲ್ಲಿ ಅಪಹರಣಗಳು ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ.
2009 ರಿಂದ, ಇಸ್ಲಾಂ ಧರ್ಮದ ಬೊಕೊ ಹರಾಮ್ ದಂಗೆಕೋರರು ಹಲವಾರು ಅಪಹರಣಗಳಿಗೆ ಕಾರಣರಾಗಿದ್ದಾರೆ, ವಿಶೇಷವಾಗಿ ನೈಜೀರಿಯಾದ ಈಶಾನ್ಯ ಮತ್ತು ವಾಯುವ್ಯದಲ್ಲಿ, ಶಾಲಾ ಮಕ್ಕಳ ಸಾಮೂಹಿಕ ಅಪಹರಣಗಳು ಸೇರಿದಂತೆ ಇತರ ಹಲವಾರು ಅಪಹರಣಗಳಿಗೆ ಕಾರಣರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಒತ್ತೆಯಾಳುಗಳನ್ನು ತೆಗೆದುಕೊಳ್ಳುವುದು ಒಂದು ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮವಾಗಿದೆ. 2011ರಲ್ಲಿ ಸುಲಿಗೆಗಾಗಿ ಅಪಹರಣವು ವ್ಯಾಪಕವಾಗಿ ಹರಡಿತು, ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ, ಎಲ್ಲಾ 36 ರಾಜ್ಯಗಳು ಮತ್ತು ರಾಜಧಾನಿ ಅಬುಜಾದಲ್ಲಿ ಸುಲಿಗೆಗಾಗಿ ಅಪಹರಣವು ವ್ಯಾಪಕವಾಗಿ ಹರಡಿತು.
ಜುಲೈ 2022 ಮತ್ತು ಜೂನ್ 2023ರ ನಡುವೆ, 582 ಅಪಹರಣ ಪ್ರಕರಣಗಳಲ್ಲಿ 3,620 ಜನರನ್ನು ಅಪಹರಿಸಲಾಗಿದ್ದು, ಸುಮಾರು 5 ಬಿಲಿಯನ್ ನೈರಾ (ಸುಮಾರು $3.88 ಮಿಲಿಯನ್) ಸುಲಿಗೆಯನ್ನು ಪಾವತಿಸಲಾಗಿದೆ. ಉದ್ಯಮಿಗಳ ಜೊತೆಗೆ, ಮತ್ತು ಸಾಧಾರಣವಾಗಿ ಧರ್ಮಸಭೆಯ ಶ್ರೀಮಂತ ಸಿಬ್ಬಂದಿ ಎಂದು ಭಾವಿಸಲಾದವರನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗುತ್ತಿದೆ.
ನೈಜೀರಿಯಾದ ಯಾಜಕರಿಗೆ ಅತ್ಯಂತ ಮಾರಕ ರಾಜ್ಯವಾಗಿರುವ ಕಡುನಾ
ಫೈಡ್ಸ್ ಏಜೆನ್ಸಿಯ ವರದಿಯ ಪ್ರಕಾರ, ಒವೆರಿ, ಒನಿತ್ಶಾ ಮತ್ತು ಕಡುನಾದಂತಹ ಕೆಲವು ರಾಜ್ಯಗಳಲ್ಲಿ ಈ ವಿದ್ಯಮಾನವು ವಿಶೇಷವಾಗಿ ತೀವ್ರವಾಗಿದೆ, ಒವೆರಿಯಲ್ಲಿ ಅತಿ ಹೆಚ್ಚು 47 ಅಪಹರಣ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಸಂಖ್ಯೆಯ ಅಪಹರಣಗಳ ಹೊರತಾಗಿಯೂ, ಅಪಹರಿಸಲ್ಪಟ್ಟ ಹೆಚ್ಚಿನ ಯಾಜಕರನ್ನು ಪೊಲೀಸ್ ರಕ್ಷಣಾ ಕಾರ್ಯಾಚರಣೆಗಳ ಮೂಲಕ ಅಥವಾ ಸುಲಿಗೆ ಪಾವತಿಗಳ ಮೂಲಕ ಬಿಡುಗಡೆ ಮಾಡಲಾಯಿತು. ಕಡುನಾ ಅತ್ಯಂತ ಮಾರಕ ರಾಜ್ಯವಾಗಿ ಹೊರಹೊಮ್ಮುತ್ತಿದೆ, 24 ಯಾಜಕರನ್ನು ಅಪಹರಿಸಿ ಏಳು ಮಂದಿಯನ್ನು ಕೊಂದು ಹಾಕಿದ್ದಾರೆ. ಹೆಚ್ಚುತ್ತಿರುವ ಸಾವಿನ ಸಂಖ್ಯೆಯು ಭಯೋತ್ಪಾದಕ ಚಟುವಟಿಕೆ, ದಂಗೆಕೋರ, ಹಿಂಸಾಚಾರ ಮತ್ತು ಹೆಚ್ಚಿದ ಧಾರ್ಮಿಕ ಉದ್ವಿಗ್ನತೆಗಳ ಉಪಸ್ಥಿತಿಯನ್ನು ಸೂಚಿಸುತ್ತದೆ, ಈ ಪ್ರದೇಶಗಳು ಯಾಜಕರಿಗೆ ಹೆಚ್ಚು ಅಪಾಯಕಾರಿ ಪ್ರದೇಶವಾಗಿದೆ.
ಅತಿ ಹೆಚ್ಚು ಸಾವುನೋವು ಸಂಭವಿಸಿದ ಇತರ ನೈಜೀರಿಯಾದ ರಾಜ್ಯಗಳಲ್ಲಿ ಅಬುಜಾವೂ ಸಹ ಸೇರಿದೆ, ಅಲ್ಲಿ ಇಬ್ಬರು ಯಾಜಕರು ಕೊಲ್ಲಲ್ಪಟ್ಟಿದ್ದಾರೆ, ನಂತರ ಬೆನಿನ್‌ನಲ್ಲಿ ಒಬ್ಬ ಯಾಜಕನನ್ನು ಮತ್ತು ಒನಿತ್ಶಾದಲ್ಲಿ ಒಬ್ಬ ಯಾಜಕನನ್ನು ಕೊಂದು ಹಾಕಿದ್ದಾರೆ. ಇನ್ನೂ ಕಾಣೆಯಾಗಿರುವ ಅಪಹರಿಸಲ್ಪಟ್ಟ ಯಾಜಕರು ನೈಜೀರಿಯಾದ ಪ್ರಾಂತ್ಯಗಳನ್ನು, ವರದಿಯು ಪಟ್ಟಿ ಮಾಡಿದೆ. ಇವುಗಳಲ್ಲಿ ಕಡುನಾ, ಬೆನಿನ್ ಮತ್ತು ಒವೆರಿ ಪ್ರದೇಶಗಳು ಸೇರಿವೆ.
ಲಾಗೋಸ್, ಇಬಾಡಾನ್ ಮತ್ತು ಕ್ಯಾಲಬಾರ್‌ನಲ್ಲಿ ಕನಿಷ್ಠ ಪ್ರಕರಣಗಳು ವರದಿಯಾಗಿವೆ
ಇದಕ್ಕೆ ವ್ಯತಿರಿಕ್ತವಾಗಿ, ಲಾಗೋಸ್, ಇಬಾಡಾನ್ ಮತ್ತು ಕ್ಯಾಲಬಾರ್ ರಾಜ್ಯಗಳು ಅಪಹರಣದ ಕನಿಷ್ಠ ಪ್ರಕರಣಗಳನ್ನು ವರದಿ ಮಾಡಿವೆ, ಈ ಪ್ರದೇಶಗಳಲ್ಲಿ ಅಪಹರಿಸಿದ ಎಲ್ಲಾ ಯಾಜಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ನಿರ್ದಿಷ್ಟವಾಗಿ ಲಾಗೋಸ್, ಬಹುಶಃ ಬಲವಾದ ಭದ್ರತಾ ಕ್ರಮಗಳು ಮತ್ತು ಕಡಿಮೆ ಧಾರ್ಮಿಕ ಉಗ್ರಗಾಮಿತ್ವದಿಂದಾಗಿ ಅತ್ಯಂತ ಸುರಕ್ಷಿತವಾಗಿ ಉಳಿದಿದೆ.
ರೆಕೋವಾ: ಸ್ವೀಕಾರಾರ್ಹವಲ್ಲದ ಪ್ರವೃತ್ತಿ
ಕಳೆದ ವಾರ ಬಿಡುಗಡೆ ಮಾಡಿದ ಮತ್ತು ಎಸಿಐ ಆಫ್ರಿಕಾ ಸಂಸ್ಥೆಯು ಉಲ್ಲೇಖಿಸಿದ ಹೇಳಿಕೆಯಲ್ಲಿ, ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (ರೆಕೋವಾ) ಇಡೀ ಪ್ರದೇಶದಲ್ಲಿ ಕಥೋಲಿಕ ಯಾಜಕರ ಅಥವಾ ಗುರುಗಳ, ವಿರುದ್ಧ ನಡೆಸಲಾದ ಹಿಂಸಾಚಾರವನ್ನು "ಕ್ರಮೇಣ ನೆಲೆಗೊಳ್ಳುತ್ತಿರುವ ದುಷ್ಟತನ" ಎಂದು ಬಲವಾಗಿ ಖಂಡಿಸಿತು, ಈ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದು ಗಮನಿಸಿದೆ. ನೈಜೀರಿಯಾವನ್ನು ನಿರ್ದಿಷ್ಟವಾಗಿ ಉಲ್ಲೇಖಿಸುತ್ತಾ, ಒಬ್ಬ ಯಾಜಕ ಅಥವಾ ಧಾರ್ಮಿಕ ವ್ಯಕ್ತಿಯ ಅಪಹರಣದ ಸುದ್ದಿ ಇಲ್ಲದೆ, ಒಂದು ತಿಂಗಳು ಕೂಡ ಕಳೆದಿಲ್ಲ ಎಂದು ಧರ್ಮಾಧ್ಯಕ್ಷರುಗಳು ಗಮನಿಸಿದರು ಮತ್ತು ಅವರ ತಕ್ಷಣದ ಬಿಡುಗಡೆಗಾಗಿ ಪ್ರಾರ್ಥನೆ ಮಾಡಬೇಕೆಂದು ಎಲ್ಲರನ್ನು ಕೇಳಿಕೊಂಡರು. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು, ತಾವು ಎದುರಿಸುತ್ತಿರುವ ಅಪಾಯಗಳ ಹೊರತಾಗಿಯೂ, ಬಡವರು ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ತಮ್ಮ ಧ್ಯೇಯಕ್ಕೆ ಬದ್ಧರಾಗಿರಬೇಕೆಂದು ಅವರು ಒತ್ತಾಯಿಸಿದರು.