MAP

 Thailand installation Archbishop Francis Xavier Vira Arpondratana bangkok Thailand installation Archbishop Francis Xavier Vira Arpondratana bangkok 

'ಭರವಸೆಯ ಯಾತ್ರಿಕರು': ನವೀಕರಣ ಮತ್ತು ಸುವಾರ್ತಾ ಪ್ರಚಾರಕ್ಕೆ ಬ್ಯಾಂಕಾಕ್‌ನ ಹೊಸ ಮಹಾಧರ್ಮಾಧ್ಯಕ್ಷರು ಕರೆ ನೀಡಿದ್ದಾರೆ

ಮಾರ್ಚ್ 2, ಭಾನುವಾರದಂದು ಮಾತೆ ಮರಿಯಮ್ಮನವರ ಸ್ವರ್ಗಾರೋಹಣ ಪ್ರಧಾನಾಲಯದಲ್ಲಿ ಮಹಾಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕ್ಸೇವಿಯರ್ ವೀರ ಅರ್ಪೋಂಡ್ರತಾನರವರನ್ನು ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷರಾಗಿ ನೇಮಿಸಲಾಯಿತು, ಥೈಲ್ಯಾಂಡ್‌ನ ಕಥೋಲಿಕ ಧರ್ಮಸಭೆಯು ಹೊಸ ನಾಯಕತ್ವವನ್ನು ಆರಂಭಿಸಿದೆ.

ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ - ಥೈಲ್ಯಾಂಡ್, ಲಿಕಾಸ್ ಸುದ್ದಿ

ಬ್ಯಾಂಕಾಕ್‌ನ ಮಹಾಧರ್ಮಕ್ಷೇತ್ರಕ್ಕೆ ಮಹಾಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕ್ಸೇವಿಯರ್ ವೀರಾ ಅರ್ಪೋಂಡ್ರತಾನರವರ ನೇಮಕಾತಿಯು ಒಂದು ನಿರ್ಣಾಯಕ ಸಮಯದಲ್ಲಿ ಬಂದಿದೆ, ಇದು ಥೈಲ್ಯಾಂಡ್‌ನಲ್ಲಿ ಕಥೋಲಿಕ ಧರ್ಮದ ಹೃದಯಭಾಗವಾಗಿ ಕಾರ್ಯನಿರ್ವಹಿಸುವುದಲ್ಲದೆ, ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟ (FABC) ಮತ್ತು ಏಷ್ಯಾದ ಕಾರಿತಾಸ್ ಪ್ರಧಾನ ಕಚೇರಿಯನ್ನು ಸಹ ಹೊಂದಿದೆ – ಇವು ಪ್ರದೇಶದಾದ್ಯಂತ ಧರ್ಮಸಭೆಯ ಧ್ಯೇಯವನ್ನು ರೂಪಿಸುವ ಪ್ರಮುಖ ಸಂಸ್ಥೆಗಳು.

ಅವರು ಅಧಿಕಾರ ವಹಿಸಿಕೊಂಡಂತೆ, ಮಹಾಧರ್ಮಾಧ್ಯಕ್ಷರಾದ ಅರ್ಪೋಂಡ್ರತನರವರು ಸ್ಥಳೀಯ ಪಾಲನಾ-ಸೇವೆಯ ಕರ್ತವ್ಯಗಳನ್ನು ಮತ್ತು ಏಷ್ಯಾದ ಧರ್ಮಸಭೆಯ ಮೇಲೆ ವ್ಯಾಪಕ ಪ್ರಭಾವವನ್ನು ಹೊಂದಿರುವ ಪಾತ್ರಕ್ಕೆ ಹೆಜ್ಜೆ ಹಾಕುತ್ತಾರೆ.

ಬ್ಯಾಂಕಾಕ್‌ನ ಮಹಾಧರ್ಮಕ್ಷೇತ್ರದ ಅಂಗೀಕೃತ ಸ್ವಾಧೀನವು ವಿಶ್ವಗುರು ಫ್ರಾನ್ಸಿಸ್ ರವರ ಅಧಿಕೃತ ಆದೇಶವನ್ನು ಸೂಚಿಸುವ ಪೇಪಲ್ ಅಪೋಸ್ಟೋಲಿಕ್ ನೇಮಕಾತಿ ಪತ್ರದ ಪ್ರಸ್ತುತಿಯಿಂದ ಗುರುತಿಸಲ್ಪಟ್ಟಿದೆ.

ಹೊಸ ಮಹಾಧರ್ಮಾಧ್ಯಕ್ಷರನ್ನು ಪ್ರಧಾನಾಲಯದಲ್ಲಿ (ಧರ್ಮಾಧ್ಯಕ್ಷರ ಕುರ್ಚಿಯಲ್ಲಿ) ಕೂರಿಸುವುದರೊಂದಿಗೆ ಈ ಪ್ರತಿಷ್ಠಾಪನೆಯು ಕೊನೆಗೊಂಡಿತು, ಇದು ಥೈಲ್ಯಾಂಡ್‌ನ ಅತ್ಯಂತ ಐತಿಹಾಸಿಕ ಮಹತ್ವದ ಮಹಾಧರ್ಮಕ್ಷೇತ್ರಗಳಲ್ಲಿ ಒಂದಾದ ಅವರ ನಾಯಕತ್ವವನ್ನು ದೃಢಪಡಿಸುವ ಸಾಂಕೇತಿಕ ಕ್ರಿಯೆಯಾಗಿದೆ.

ಪವಿತ್ರ ದೈವಾರಾಧನಾ ವಿಧಿಯ ಆಚರಣೆಯ ಮೊದಲು, ಧರ್ಮಕ್ಷೇತ್ರದ ಯಾಜಕರು ತಮ್ಮ ಹೊಸ ಮಹಾಧರ್ಮಾಧ್ಯಕ್ಷರಿಗೆ ತಮ್ಮ ಗೌರವ ಮತ್ತು ವಿಧೇಯತೆಯನ್ನು ಪುನರುಚ್ಚರಿಸಿದರು. ಅವರು ಮತ್ತು ಮಹಾಧರ್ಮಕ್ಷೇತ್ರದಲ್ಲಿರುವ ಧಾರ್ಮಿಕ ಸಭೆಗಳ ಪ್ರತಿನಿಧಿಗಳು ಅವರ ಧರ್ಮಾಧ್ಯಕ್ಷೀಯ ಉಂಗುರವನ್ನು ಚುಂಬಿಸುವ ಮೂಲಕ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಲು ಸಾಲಾಗಿ ನಿಂತರು.

ಸಮಾರಂಭದಲ್ಲಿ ಥೈಲ್ಯಾಂಡ್‌ನ ಇಬ್ಬರು ಕಾರ್ಡಿನಲ್‌ಗಳು, ದೇಶಾದ್ಯಂತದ ಧರ್ಮಾಧ್ಯಕ್ಷರುಗಳು, ಯಾಜಕರು, ಧಾರ್ಮಿಕ ಮತ್ತು ಕಥೊಲಿಕ ಭಕ್ತವಿಶ್ವಾಸಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಥೈಲ್ಯಾಂಡ್‌ನ ಪ್ರಮುಖ ಧರ್ಮಗಳಾದ ಬೌದ್ಧಧರ್ಮ, ಇಸ್ಲಾಂ, ಕ್ರೈಸ್ತ ಧರ್ಮ, ಬ್ರಾಹ್ಮಣ-ಹಿಂದೂ ಧರ್ಮ ಮತ್ತು ಸಿಖ್ ಧರ್ಮದ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲರೂ, ಪವಿತ್ರ ದೈವಾರಾಧನಾ ವಿಧಿಯ ಆಚರಣೆಯ ಕೊನೆಯಲ್ಲಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ಥೈಲ್ಯಾಂಡ್‌ನ ಪ್ರೇಷಿತ ರಾಯಭಾರಿಯಾದ ಮಹಾಧರ್ಮಾಧ್ಯಕ್ಷರಾದ ಪೀಟರ್ ಬ್ರಿಯಾನ್ ವೆಲ್ಸ್ ರವರು ಪವಿತ್ರ ಪೀಠಾಧಿಕಾರಿಯ ಪರವಾಗಿ ಅಭಿನಂದನಾ ಸಂದೇಶವನ್ನು ನೀಡಿ, ಥೈಲ್ಯಾಂಡ್‌ನ ಧರ್ಮಸಭೆಗೆ ಈ ಸಂದರ್ಭದ ಮಹತ್ವವನ್ನು ಒಪ್ಪಿಕೊಂಡರು, ಈ ಸಂತೋಷದಾಯಕ ಸಂದರ್ಭವು ಥೈಲ್ಯಾಂಡ್‌ನ ಧರ್ಮಸಭೆಯ ಮತ್ತು ಬ್ಯಾಂಕಾಕ್‌ನ ಮಹಾಧರ್ಮಕ್ಷೇತ್ರಕ್ಕೆ ಆಶೀರ್ವಾದವಾಗಿದೆ, ಏಕೆಂದರೆ ಅವರ ತಾಯ್ನಾಡಿನ ಮಕ್ಕಳಲ್ಲಿ, ಒಬ್ಬರು ಧರ್ಮಸಭೆಯ ಕುರುಬನ ಪಾತ್ರವನ್ನು ವಹಿಸುತ್ತಾರೆ.

ಚಿಯಾಂಗ್ ಮಾಯ್ ನ ಧರ್ಮಾಧ್ಯಕ್ಷರಾಗಿದ್ದ, ಮಹಾಧರ್ಮಾಧ್ಯಕ್ಷರಾದ ಅರ್ಪೋಂಡ್ರತನರವರ ಸಮರ್ಪಣೆ ಮತ್ತು ಸೇವೆಯನ್ನು ಪ್ರೇಷಿತ ರಾಯಭಾರಿಯು ಶ್ಲಾಘಿಸಿದರು, ಬಡವರು ಮತ್ತು ದೀನದಲಿತರಿಗೆ ಅವರ ಬದ್ಧತೆಯನ್ನು ಎತ್ತಿ ತೋರಿಸಿದರು.

ನಿಮ್ಮ ಅನುಭವಗಳು ನಿಮ್ಮನ್ನು ಮುಂದಿನ ಜವಾಬ್ದಾರಿಗಳಿಗೆ ಚೆನ್ನಾಗಿ ಸಿದ್ಧಪಡಿಸಿವೆ ಎಂದು ಅವರು ಫಿಲಿಪ್ಪಿಯವರಿಗೆ ಬರೆದ ಪತ್ರದ ವಾಕ್ಯವನ್ನು 2:13 ಉಲ್ಲೇಖಿಸುವುದರೊಂದಿಗೆ ಹೊಸ ಧರ್ಮಾಧ್ಯಕ್ಷರಿಗೆ ಪ್ರೋತ್ಸಾಹಿಸಿದರು: ಏಕೆಂದರೆ ದೈವಚಿತ್ತವನ್ನು ನೀವು ವೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪೇರಣೆಯನ್ನೂ ಸತ್ಫಲವನ್ನೂ ನೀಡುತ್ತಾರೆ. ಅವರು ತಮ್ಮ ಹೆಸರಿನಿಂದ ಕರೆಯಲ್ಪಟ್ಟ ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರ ಧರ್ಮಪ್ರಚಾರಕ ಉತ್ಸಾಹವನ್ನು ಅನುಸರಿಸಲು ಸಹ ಅವರನ್ನು ಒತ್ತಾಯಿಸಿದರು.

ಹೊಸದಾಗಿ ನೇಮಕಗೊಂಡ ಬ್ಯಾಂಕಾಕ್‌ನ ಮಹಾಧರ್ಮಾಧ್ಯಕ್ಷರು, ಬ್ಯಾಂಕಾಕ್ ಮಹಾಧರ್ಮಕ್ಷೇತ್ರದ ದೀರ್ಘ ಇತಿಹಾಸ ಮತ್ತು ಅದರ ಧ್ಯೇಯವನ್ನು ಮುಂದುವರಿಸುವಲ್ಲಿ ಅವರ ಸವಲತ್ತಿಗೆ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯಿಸಿದರು. ವಿಶೇಷವಾಗಿ ಈ ಪವಿತ್ರ ವರ್ಷದಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.

ಚಿಯಾಂಗ್ ಮಾಯ್‌ನಲ್ಲಿ ತಮ್ಮ 15 ವರ್ಷಗಳನ್ನು ನೆನಪಿಸಿಕೊಳ್ಳುತ್ತಾ, ಮಹಾಧರ್ಮಾಧ್ಯಕ್ಷರಾದ ಅರ್ಪೋಂಡ್ರತಾನರವರು COVID-19 ಸಾಂಕ್ರಾಮಿಕ ಮತ್ತು ತೀವ್ರ ಪ್ರವಾಹದಂತಹ ಸವಾಲುಗಳ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಯಾಜಕರಿಗೆ, ಧಾರ್ಮಿಕರು ಮತ್ತು ಭಕ್ತವಿಶ್ವಾಸಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಲಕ್ಸ್ ಮುಂಡಿಯ ಪ್ರಧಾನ ಗುರುವಿದ್ಯಾಮಂದಿರದಲ್ಲಿ ಧರ್ಮೋಪದೇಶ ಅಧ್ಯಯನ ಮಾಡುವ ಭಕ್ವಿಶ್ವಾಸಿಗಳಿಗೆ, ವಿಶೇಷವಾಗಿ ಯುವಕರು ಮತ್ತು ಧಾರ್ಮಿಕ ಸಹೋದರಿಯರಿಗೆ ಬೆಂಬಲ ಸೇರಿದಂತೆ ಧರ್ಮೋಪದೇಶ ರಚನೆಯಲ್ಲಿನ ತಮ್ಮ ಕೆಲಸವನ್ನು ಕುರಿತು ಪ್ರಶಂಸಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಇತರ ಧರ್ಮಗಳ ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು, ಥೈಲ್ಯಾಂಡ್‌ನಲ್ಲಿ ನ್ಯಾಯಯುತ ಮತ್ತು ಶಾಂತಿಯುತ ಸಮಾಜವನ್ನು ಬೆಳೆಸುವಲ್ಲಿ ಅಂತರ್-ಧರ್ಮೀಯ ಸ್ನೇಹದ ಮಹತ್ವವನ್ನು ಒತ್ತಿ ಹೇಳಿದರು.

ಧರ್ಮಸಭೆಗೆ ಸೇವೆಯ ಜೀವನ
ನೇಮಕವಾಗುವ ಮೊದಲು, ಮಹಾಧರ್ಮಾಧ್ಯಕ್ಷರಾದ ಅರ್ಪೋಂಡ್ರತಾನರವರು ಬ್ಯಾಂಕಾಕ್‌ನ ಪ್ರೇಷಿತ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು ಮತ್ತು 2009 ರಿಂದ ಚಿಯಾಂಗ್ ಮಾಯ್‌ನ ಧರ್ಮಾಧ್ಯಕ್ಷರಾಗಿ ತಮ್ಮ ಪಾಲನಾ ಸೇವೆಯನ್ನು ಮುಂದುವರೆಸಿದರು.

ಬ್ಯಾಂಕಾಕ್‌ನ ಸಂತ ಫ್ರಾನ್ಸಿಸ್ ಕ್ಸೇವಿಯರ್ ಧರ್ಮಕೇಂದ್ರದಲ್ಲಿ ಜನಿಸಿದ ಅವರು 1981ರಲ್ಲಿ ಆಗಿನ ಮಹಾಧರ್ಮಾಧ್ಯಕ್ಷರಾದ ಮೈಕೆಲ್ ಮಿಚೈ ಕಿಟ್‌ಬಂಚುರವರಿಂದ ಯಾಜಕ ದೀಕ್ಷೆ ಪಡೆದರು. ವರ್ಷಗಳಲ್ಲಿ, ಅವರು ಸಂತ ಜೋಸೆಫ್ಸ್ ಕಿರು ಗುರುವಿದ್ಯಾಮಂದಿರದ ಉಪ ಮೇಲ್ವಿಚಾರಕರಾಗಿ, ಧರ್ಮಕ್ಷೇತ್ರದ ಧಾರ್ಮಿಕ ಶಿಕ್ಷಣ ಕೇಂದ್ರದ ನಿರ್ದೇಶಕ ಮತ್ತು ಥೈಲ್ಯಾಂಡ್‌ನ ಕಥೋಲಿಕ ಧರ್ಮಾಧ್ಯಕ್ಷರರುಗಳ ಸಮ್ಮೇಳನದ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಪಾಲನಾ ಸೇವೆ ಮತ್ತು ಶೈಕ್ಷಣಿಕ ಪಾತ್ರಗಳನ್ನು ನಿರ್ವಹಿಸಿದರು.

ಅವರು ರೋಮ್‌ನ ಸೇಲ್ಸಿಯನ್ ವಿಶ್ವವಿದ್ಯಾಲಯದಲ್ಲಿ ಯುವ ಪಾಲನಾ ಸೇವೆ ಮತ್ತು ಧರ್ಮೋಪದೇಶದ ಧಾರ್ಮಿಕ ಶಿಕ್ಷಣದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಿದರು.

ಬ್ಯಾಂಕಾಕ್‌ನ ಧರ್ಮಕ್ಷೇತ್ರದ, ಮೂಲತಃ 1662ರಲ್ಲಿ ಸಿಯಾಮ್‌ನ ಪ್ರೇಷಿತ ಧರ್ಮಪ್ರಾಂತ್ಯವನ್ನು ಸ್ಥಾಪಿಸಲ್ಪಟ್ಟಿತು, ಇದು 122,000ಕ್ಕೂ ಹೆಚ್ಚು ಕಥೋಲಿಕರಿಗೆ ಸೇವೆ ಸಲ್ಲಿಸುತ್ತದೆ, ಇದು ಥೈಲ್ಯಾಂಡ್‌ನ ಪ್ರಧಾನ ಬೌದ್ಧ ಜನಸಂಖ್ಯೆಯ ಕೇವಲ 0.9% ರಷ್ಟಿದೆ. 11 ಪ್ರಾಂತ್ಯಗಳನ್ನು ಒಳಗೊಂಡ ಇದು ಆರು ಸಹಾಯಕ ಧರ್ಮಪ್ರಾಂತ್ಯದ ಧರ್ಮಕ್ಷೇತ್ರಗಳನ್ನು ಒಳಗೊಂಡಿದೆ: ಅವು ಚಂತಬುರಿ, ಚಿಯಾಂಗ್ ಮಾಯ್, ಚಿಯಾಂಗ್ ರೈ, ನಖೋನ್ ಸಾವನ್, ರಚ್ಚಬುರಿ ಮತ್ತು ಸೂರತ್ ಥಾನಿ.

ಮಹಾಧರಮಾಧ್ಯಕ್ಷರಾದ ವೀರಾ ಅರ್ಪೋಂಡ್ರತನರವರು ಈ ಹೊಸ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆ, ಅವರು ಕಥೋಲಿಕ ಸಮುದಾಯದ ವಿಶ್ವಾಸ ಮತ್ತು ಐಕ್ಯತೆಯನ್ನು ಬಲಪಡಿಸಲು ಬದ್ಧರಾಗಿರುವ ಸೇವಾ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತಾರೆ. ಆಳವಾದ ಪಾಲನಾಸೇವೆಯ ಹೃದಯ ಮತ್ತು ಸುವಾರ್ತಾಬೋಧನೆಯ ಉತ್ಸಾಹದೊಂದಿಗೆ, ಅವರ ನಾಯಕತ್ವವು ಥೈಲ್ಯಾಂಡ್‌ನಲ್ಲಿ ಧರ್ಮಸಭೆಗೆ ವಿಶ್ವಾಸ, ಭರವಸೆ ಮತ್ತು ಧರ್ಮಪ್ರಚಾರಕ ಶಿಷ್ಯರಾಗಿ ಹಂಚಿಕೆಯ ಪ್ರಯಾಣದಲ್ಲಿ ಬೇರೂರಿರುವ ಹೊಸ ಅಧ್ಯಾಯವನ್ನು ಗುರುತಿಸುತ್ತದೆ.
 

03 ಮಾರ್ಚ್ 2025, 13:56