MAP

Copertina video infos orient 21 marzo 2025 Copertina video infos orient 21 marzo 2025 

ಪೂರ್ವ ಧರ್ಮಸಭೆಗಳಿಂದ ಸುದ್ದಿ - 21 ಮಾರ್ಚ್ 2025

ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಯು, ಎಲ್'ಔವ್ರೆ ಡಿ'ಓರಿಯಂಟ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ: ಗಾಜಾದ ಧರ್ಮಕೇಂದ್ರದ ಧರ್ಮಗುರು ಶಾಂತಿಗಾಗಿ ಕರೆ ನೀಡುತ್ತಾರೆ, ಉಕ್ರೇನಿಯ ಮತ್ತು ಅಮೇರಿಕದ ಧರ್ಮಸಭೆಯ ನಾಯಕರು ಕೈವ್‌ನಲ್ಲಿ ಭೇಟಿಯಾಗುತ್ತಾರೆ ಮತ್ತು ತಪಸ್ಸುಕಾಲದ ಸಿದ್ಧತೆಗಳು ಮುಂದುವರಿಯುತ್ತದೆ.

ಈ ವಾರದ ಪೂರ್ವದ ಸುದ್ದಿ ಸಮಾಚಾರಗಳು

ಗಾಜಾ ಧರ್ಮಕೇಂದ್ರದ ಧರ್ಮಗುರು ಶಾಂತಿಗಾಗಿ ಕರೆ ನೀಡುತ್ತಾರೆ

ಗಾಜಾದಲ್ಲಿ, ನಿರಂತರ ಬಾಂಬ್ ದಾಳಿಗೆ ಒಳಗಾಗಿ, ಕ್ರೈಸ್ತ ಸಮುದಾಯವು ಪ್ರಾರ್ಥನೆ ಮತ್ತು ಭಯದ ನಡುವೆ ನಲುಗುತ್ತಿದೆ. ಧರ್ಮಕೇಂದ್ರದ ಧರ್ಮಗುರು ರೊಮೇಲಿಯವರು ಶಾಂತಿಗಾಗಿ ಹೃದಯಂತರಾಳದಿಂದ ಎಲ್ಲರಿಗೂ ಕರೆ ನೀಡಿದ್ದಾರೆ.

ಟೆರ್ರೆ ಸೇಂಟ್ ಮಾಸಪತ್ರಿಕೆಗೆ ಬರೆದ ಸಂದೇಶದಲ್ಲಿ, ಅವರು "ಕೇವಲ ಕದನ ವಿರಾಮವಲ್ಲ, ಆದರೆ ಈ ಯುದ್ಧಕ್ಕೆ ಅಂತ್ಯ ಹಾಡಲು ಮತ್ತು ಇಡೀ ಪವಿತ್ರ ನಾಡಿಗೆ ಶಾಂತಿಯ ಅವಧಿಯ ಆರಂಭಕ್ಕಾಗಿ" ಮನವಿ ಮಾಡುತ್ತಾರೆ.

ಮಾರ್ಚ್ 17ರ ರಾತ್ರಿ ಮತ್ತೆ ಆರಂಭವಾದ ಯುದ್ಧವು 400ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಎರಡು ತಿಂಗಳ ಕದನ ವಿರಾಮ ಕೊನೆಗೊಂಡಿದೆ. ಮದರ್ ತೆರೇಸಾರ ಸಹೋದರಿಯರು ನೋಡಿಕೊಳ್ಳುತ್ತಿರುವ ಅನಾರೋಗ್ಯ ಪೀಡಿತರು ಮತ್ತು ಅಂಗವಿಕಲ ಮಕ್ಕಳು ಸೇರಿದಂತೆ ನಿರಾಶ್ರಿತರಿಗೆ ನೀಡಲಾಗುತ್ತಿರುವ ಸಹಾಯ ಮತ್ತು ನಿಷ್ಠಾವಂತರ ನೋವುಗಳ ಬಗ್ಗೆ ಧರ್ಮಗುರು ಮಾತನಾಡುತ್ತಾರೆ. ವಿಶ್ವ ಧರ್ಮಸಭೆಯ ಪರಿಷತ್ತು ಮತ್ತು ಅಂತರರಾಷ್ಟ್ರೀಯ ಕಾರಿತಾಸ್‌ ಈ ಉಲ್ಬಣವನ್ನು ಖಂಡಿಸಿವೆ ಮತ್ತು ಅತ್ಯಂತ ದುರ್ಬಲರ ರಕ್ಷಣೆಗೆ ಕರೆ ನೀಡಿವೆ.

ಅಮೇರಿಕ ಮತ್ತು ಉಕ್ರೇನಿಯದ ಧರ್ಮಸಭೆಯ ನಾಯಕರು ಕೈವ್‌ನಲ್ಲಿ ಭೇಟಿಯಾಗುತ್ತಾರೆ
ಉಕ್ರೇನ್‌ನಲ್ಲಿನ ಕದನ ವಿರಾಮದ ಮಾತುಕತೆಗಳು ಮುಂದುವರಿದಂತೆ, ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರು, ಶ್ರೇಷ್ಠಗುರು ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು, ಈ ವಾರ ಅಮೇರಿಕದಲ್ಲಿರುವ ಕಥೋಲಿಕ ಧರ್ಮಸಭೆಯ ನಿಯೋಗವನ್ನು ಸ್ವಾಗತಿಸಿದರು.

ಪೂರ್ವ ಯುರೋಪಿನ ನೆರವು ಅಮೇರಿಕದ ಕಚೇರಿಗೆ ಹೊಸದಾಗಿ ನೇಮಕಗೊಂಡ ಮುಖ್ಯಸ್ಥರಾದ ಧರ್ಮಾಧ್ಯಕ್ಷರು ಜೆರಾಲ್ಡ್ ವಿಂಕೆ ನಿಯೋಗದ ನೇತೃತ್ವ ವಹಿಸಿದ್ದರು. ತನ್ನ ಮೊದಲ ಕಾರ್ಯಾಚರಣೆಗಾಗಿ, ಅವರು ಕೈವ್‌ಗೆ ಭೇಟಿ ನೀಡಲು ಆಯ್ಕೆ ಮಾಡಿಕೊಂಡರು, ಅದನ್ನು ಶೆವ್‌ಚುಕ್ ರವರು ಶ್ಲಾಘಿಸಿದರು. ಈ ಅಟ್ಲಾಂಟಿಕ್ ಸಾಗರದ ಒಗ್ಗಟ್ಟು ವಿಶ್ವ ನಾಯಕರಿಗೆ ಉಕ್ರೇನ್ ನ್ನು ನಿರ್ದಿಷ್ಟ ರೀತಿಯಲ್ಲಿ ಬೆಂಬಲಿಸುವುದು ಮತ್ತು ಶಾಂತಿಗಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಎತ್ತಿ ತೋರಿಸಿದರು.

ಕ್ರೈಸ್ತ ಧರ್ಮಸಭೆಯ ಜಗತ್ತಿನಲ್ಲಿ ತಪಸ್ಸುಕಾಲದ ಆಚರಣೆ ಮುಂದುವರಿಯುತ್ತದೆ
ಈ ಭಾನುವಾರ, ಪೂರ್ವ ಧರ್ಮಸಭೆಗಳು ತಮ್ಮ ಸಂಪ್ರದಾಯಗಳು ಮತ್ತು ಪಂಚಾಂಗಗಳ ಪ್ರಕಾರ ತಮ್ಮ ತಪಸ್ಸುಕಾಲದ ಪ್ರಯಾಣವನ್ನು ಮುಂದುವರೆಸಿದವು, ಇದು ದುಂದುಗಾರನ ಮಗನ ಸಾಮತಿಯ ಸ್ಮರಣೆಯಲ್ಲಿ ಅರ್ಮೇನಿಯದ ಧರ್ಮಸಭೆಗಳು ಅನರಾಕಿ ಭಾನುವಾರವನ್ನು ಆಚರಿಸಿದವು. ಈ ಕಥೆಯು ದೇವರ ಅಪರಿಮಿತ ಕರುಣೆಯನ್ನು ಎತ್ತಿ ತೋರಿಸುತ್ತದೆ, ಒಬ್ಬ ಮಗನು ತನ್ನ ಸಂಪಾದನೆಯನ್ನು ಮತ್ತು ಆಸ್ತಿಯನ್ನು ಪೋಲು ಮಾಡಿದ ನಂತರ, ತನ್ನ ತಂದೆಯ ಕ್ಷಮೆಯಲ್ಲಿ ಆಶ್ರಯ ಪಡೆಯಲು ಹಿಂದಿರುಗುತ್ತಾನೆ.

ಬೈಜಾಂಟೈನಿನ ಸಂಪ್ರದಾಯದಲ್ಲಿ, ಭಕ್ತ ವಿಶ್ವಾಸಿಗಳು ಅವಶೇಷಗಳ ಭಾನುವಾರವನ್ನು ಆಚರಿಸುತ್ತಿದ್ದರು, ಈಸ್ಟರ್‌ಗೆ ತಯಾರಿ ನಡೆಸುವಾಗ ವಿಶ್ವಾಸ ಮತ್ತು ಧ್ಯಾನದ ಮನೋಭಾವದಲ್ಲಿ ಒಂದಾಗಿರುವ ಎರಡು ಸಂಪ್ರದಾಯಗಳು. ಇದು ಸಂತರ ಅವಶೇಷಗಳನ್ನು ಆಶೀರ್ವಾದದ ಮೂಲಗಳಾಗಿ ನೋಡಲಾಗುತ್ತದೆ ಎಂಬುದನ್ನು ನೆನಪಿಸುತ್ತದೆ.
 

21 ಮಾರ್ಚ್ 2025, 15:12