MAP

Copyright Santuario di Lourdes - copertura delle poste della basilica del Rosario Copyright Santuario di Lourdes - copertura delle poste della basilica del Rosario  (pierre Vincent)

ಲೂರ್ದುನಗರ ಪುಣ್ಯಕ್ಷೇತ್ರದ ಮಹಾದೇವಾಲಯದ ಬಾಗಿಲುಗಳು ರೂಪನಿಕ್ ಮೊಸಾಯಿಕ್ಸ್ ನ್ನು ಒಳಗೊಂಡಿವೆ

ಮಾರ್ಕೊ ರುಪ್ನಿಕ್ ರಚಿಸಿದ ದೇವಾಲಯದ ಎರಡು ಬದಿಯ ಬಾಗಿಲುಗಳ ಮೇಲೆ ಮೊಸಾಯಿಕ್‌ಗಳನ್ನು ಹಾಕಲಾಗಿದೆ. ಲೂರ್ದುನಗರದ ಟಾರ್ಬೆಸ್ ಎಟ್ ನ ಧರ್ಮಾಧ್ಯಕ್ಷರು ಜೀನ್-ಮಾರ್ಕ್ ಮೈಕಾಸ್ ರವರು, ಎರಡು ದೊಡ್ಡ ಪ್ರಧಾನ ಬಾಗಿಲುಗಳ ಮೇಲೆ ಮೊಸಾಯಿಕ್‌ಗಳನ್ನು ಕೆಲವೇ ದಿನಗಳಲ್ಲಿ ಹಾಕಿ ಮುಚ್ಚಲಾಗುವುದು ಎಂದು ಘೋಷಿಸಿದರು.

ವ್ಯಾಟಿಕನ್ ಸುದ್ಧಿ

ಲೂರ್ದುನಗರದ ಮಾತೆ ಮರಿಯಮ್ಮನವರ ಪುಣ್ಯಕ್ಷೇತ್ರದಲ್ಲಿ ಫ್ರೆಂಚ್ ಧರ್ಮಾಧ್ಯಕ್ಷರುಗಳ ಪೂರ್ಣ ಸಭೆಯ ಮುನ್ನಾದಿನದಂದು, ಧರ್ಮಾಧ್ಯಕ್ಷರಾದ ಜೀನ್-ಮಾರ್ಕ್ ಮೈಕಾಸ್ ರವರು ಹಲವಾರು ಧಾರ್ಮಿಕ ಮಹಿಳೆಯರಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಮಾಜಿ ಜೆಸ್ವಿಟ್ ಮಾರ್ಕೊ ರುಪ್ನಿಕ್ ರವರ ಮೊಸಾಯಿಕ್‌ಗಳನ್ನು ಒಳಗೊಂಡಿರುವ ಮಹಾದೇವಾಲಯದ ಬಾಗಿಲುಗಳು-ಪ್ರವೇಶ ದ್ವಾರಗಳನ್ನು ಅಲ್ಯೂಮಿನಿಯಂ ಫಲಕಗಳಿಂದ ಹಾಕಿ ಮುಚ್ಚಲಾಗುವುದು ಎಂದು ಘೋಷಿಸಿದರು.

ಈ ಕ್ರಮವು, ಲೂರ್ದುನಗರದ ಟಾರ್ಬೆಸ್ ಎಟ್ ನ ಧರ್ಮಾಧ್ಯಕ್ಷ ಜೀನ್-ಮಾರ್ಕ್ ಮೈಕಾಸ್ ರವರ ಪ್ರಕಾರ, "ಪ್ರಸ್ತುತ ಅದರ ಮಿತಿಯನ್ನು ದಾಟಲು ಸಾಧ್ಯವಿಲ್ಲ ಎಂದು ಭಾವಿಸುವವರಿಗೆ ಮಹಾದೇವಾಲಯಕ್ಕೆ ಪ್ರವೇಶವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಇದನ್ನು "ಹೊಸ ಸಾಂಕೇತಿಕ ಹೆಜ್ಜೆ" ಎಂದು ವಿವರಿಸಿದ ಧರ್ಮಾಧ್ಯಕ್ಷರಾದ ಮೈಕಾಸ್ ರವರು ಸೋಮವಾರ, ಮಾರ್ಚ್ 31ರಂದು ಪುಣ್ಯಕ್ಷೇತ್ರದ ಜಾಲತಾಣದಲ್ಲಿ ಪ್ರಕಟವಾದ ಹೇಳಿಕೆಯ ಮೂಲಕ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ. ಪವಿತ್ರ ವರ್ಷದ ಭಾಗವಾಗಿ, ಅವರು ಲೂರ್ದುನಗರದ ಪುಣ್ಯಕ್ಷೇತ್ರದ ಧರ್ಮಕ್ಷೇತ್ರದಲ್ಲಿ (ಟಾರ್ಬೆಸ್ ನ ಪ್ರಧಾನಾಲಯದ ಜೊತೆಗೆ) ಜೂಬಿಲಿ ವರ್ಷವನ್ನು ಆಚರಿಸಬಹುದಾದ ಮತ್ತು ಪೂರ್ಣ ಭೋಗವನ್ನು ಪಡೆಯಬಹುದಾದ ಎರಡು ಸ್ಥಳಗಳಲ್ಲಿ ಒಂದಾಗಿ ಗೊತ್ತುಪಡಿಸುವ ಆದೇಶವನ್ನು ಹೊರಡಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಇದನ್ನು ಗಮನಿಸಿದರೆ, "ಮಹಾದೇವಾಲಯದ ಪ್ರವೇಶ ದ್ವಾರಗಳ ಮೂಲಕ ಹಾದುಹೋಗುವುದು ಈ ಕ್ಷಣದ ಸಾಂಕೇತಿಕ ಮಹತ್ವವನ್ನು ಪ್ರತಿಬಿಂಬಿಸಬೇಕು" ಎಂದು ನಾನು ಪರಿಗಣಿಸಿದ್ದೇನೆ.

ಮಾರ್ಚ್ 31ರ ಸೋಮವಾರದಂದು, ಜಪಮಾಲೆಯ ಮಹಾದೇವಾಲಯದ ಎರಡು ಬದಿಯ ಬಾಗಿಲುಗಳ ಮೇಲಿನ ಮೊಸಾಯಿಕ್ಸ್ ನ್ನು ಅಲ್ಯೂಮಿನಿಯಂ ಫಲಕಗಳಿಂದ ಹಾಕಿ ಮುಚ್ಚಲಾಗಿದೆ. ಮುಂಬರುವ ದಿನಗಳಲ್ಲಿ ಲೂರ್ದುನಗರದ ತೀರ್ಥಯಾತ್ರೆ ಪ್ರಾರಂಭವಾಗುವ ಮೊದಲು ಎರಡು ದೊಡ್ಡ ಕೇಂದ್ರ ಬಾಗಿಲುಗಳನ್ನು ಮೊಸಾಯಿಕ್ಸ್ ನ್ನು ಅಲ್ಯೂಮಿನಿಯಂ ಫಲಕಗಳಿಂದ ಹಾಕಿ ಮುಚ್ಚಲಾಗುವುದು ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

ಧರ್ಮಾಧ್ಯಕ್ಷರಾದ ಮೈಕಾಸ್ ರವರು ಇದನ್ನು "ಎರಡನೇ ಹಂತ" ಎಂದು ವಿವರಿಸಿದರು, ರಾತ್ರಿಯ ಮೆರವಣಿಗೆಗಳಲ್ಲಿ ಮೊಸಾಯಿಕ್‌ಗಳನ್ನು ಬೆಳಗಿಸುವುದನ್ನು ನಿಲ್ಲಿಸಲು ಜುಲೈ 2ರಂದು ಪೂರ್ವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸದ್ಯಕ್ಕೆ, ಪುಣ್ಯಕ್ಷೇತ್ರದ ವಕ್ತಾರ ಡೇವಿಡ್ ಟೋರ್ಚಾಲಾರವರ ಪ್ರಕಾರ, ಮಹಾದೇವಾಲಯದಲ್ಲಿನ ಇತರ ಮೊಸಾಯಿಕ್‌ಗಳ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಲಾಗಿಲ್ಲ.

ಧರ್ಮಾಧ್ಯಕ್ಷರವರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರನ್ನು ಬೆಂಬಲಿಸಲು ಕಾರ್ಯನಿರತ ಗುಂಪನ್ನು ಸ್ಥಾಪಿಸಲಾಗಿದೆ. ಧರ್ಮಾಧ್ಯಕ್ಷರಾದ ಮೈಕಾಸ್ ರವರು ಹೇಳಿದರು, ಬಾಹ್ಯ ಒತ್ತಡಗಳಿಗೆ ಮಣಿಯುವ ಬದಲು ಎಚ್ಚರಿಕೆಯಿಂದ ಚರ್ಚಿಸಲು ನಾವು ಬಯಸುತ್ತೇವೆ. ನಮ್ಮ ವಿಧಾನವು ಸಂತ್ರಸ್ತರಿಗೆ, ಧರ್ಮಸಭೆಗೆ, ಲೂರ್ದುನಗರಕ್ಕೆ ಮತ್ತು ಜಗತ್ತಿಗೆ ಅದರ ಸಂದೇಶಕ್ಕಾಗಿ ದೀರ್ಘಕಾಲೀನವಾಗಿದೆ.
 

31 ಮಾರ್ಚ್ 2025, 13:42