MAP

2020.03.23 Preghiera in famiglia 2020.03.23 Preghiera in famiglia 

ನಮ್ಮ ಕುಟುಂಬಗಳಲ್ಲಿನ ನೋವನ್ನು ಹೋಗಲಾಡಿಸುವುದು

ಮಾರ್ಚ್ ತಿಂಗಳ ಪ್ರಾರ್ಥನಾ ಉದ್ದೇಶದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು, ಕುಟುಂಬಗಳು ಕ್ಷಮೆಯ ಅನುಗ್ರಹವನ್ನು ಪಡೆಯುವ ಮೂಲಕ, ದೇವರು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನೀಡಿರುವ ಆಶೀರ್ವಾದಗಳ ಜೊತೆಗೆ ತಮ್ಮ ನೋವುಗಳನ್ನು ಸೌಖ್ಯಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲಿ ಎಂದು ಪ್ರಾರ್ಥಿಸಲು ನಮ್ಮನ್ನು ಆಹ್ವಾನಿಸುತ್ತಾರೆ.

ಧರ್ಮಗುರು ಗ್ರಾಂಟ್ ತುಂಗೇ ಎಸ್‌ಜೆ

ಮಾರ್ಚ್ ತಿಂಗಳಿನ ವಿಶ್ವಗುರುಗಳ ಪ್ರಾರ್ಥನಾ ಉದ್ದೇಶವು ಬಿಕ್ಕಟ್ಟಿನಲ್ಲಿರುವ ಕುಟುಂಬಗಳ ಬಗ್ಗೆ ಕ್ಷಮೆಯ ಮೂಲಕ, ಚದುರಿಹೋಗಿರುವ ಕುಟುಂಬಗಳು ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನೋವುಗಳನ್ನು ಮರೆತು ಹೋಗುವ ಪ್ರಕ್ರಿಯೆಯ ಮೂಲಕ, ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ದೇವರು ನೀಡಿರುವ ಉಡುಗೊರೆಗಳನ್ನು ಕುಟುಂಬಗಳು ಕಂಡುಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಈ ಪ್ರಾರ್ಥನೆಯೊಂದಿಗೆ ದೇವರು ನಮ್ಮ ಕುಟುಂಬಗಳಲ್ಲಿ ನಮಗೆ ನೀಡಿರುವ ಆಶೀರ್ವಾದಗಳ ವೈವಿಧ್ಯತೆ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳಲು ಆಹ್ವಾನಿಸುತ್ತಿದ್ದಾರೆ. ನಮ್ಮ ಕುಟುಂಬಗಳಲ್ಲಿ ನಮಗೆ ನೀಡಿರುವ ಆಶೀರ್ವಾದಗಳನ್ನು ಗಮನಿಸಲು, ಒಂದು ಪ್ರಬಲ ಮಾರ್ಗವೆಂದರೆ ದೇವರಲ್ಲಿ ಕ್ಷಮೆಯ ಕೃಪೆಯನ್ನು ಕೇಳುವುದು ಎಂದು ಪರಿಗಣಿಸಲು ಇದು ನಮ್ಮನ್ನು ಆಹ್ವಾನಿಸುತ್ತದೆ. ಈ ಕೃಪೆಯ ಮೂಲಕ, ದೇವರ ಸಹಾಯದಿಂದ, ನಾವು ನಮ್ಮನ್ನು ಮತ್ತು ಇತರರನ್ನು ದೇವರಿಂದ ಪ್ರೀತಿಸಲ್ಪಟ್ಟ ಪಾಪಿಗಳಾಗಿ ಅಂಗೀಕರಿಸಲು ಪ್ರಾರಂಭಿಸಬಹುದು.

ಈ ತಿಂಗಳಿನ ಸುಂದರವಾದ ಪ್ರಾರ್ಥನೆಯನ್ನು ವಿಶ್ವಗುರು ಫ್ರಾನ್ಸಿಸ್ ರವರ ಸಿನೊಡಲ್ ನಂತರದ ಪ್ರೇಷಿತ ಪ್ರಬೋಧನೆಯಾದ ʻಅಮೋರಿಸ್ ಲೆಟಿಟಿಯಾʼದಲ್ಲಿ ಕುಟುಂಬದ ಬಗ್ಗೆ ಅವರ ಸ್ವಂತ ಚಿಂತನೆಗಳ ಬೆಳಕಿನಲ್ಲಿ ಕಾಣಬಹುದು. ನಾಲ್ಕನೇ ಅಧ್ಯಾಯದಲ್ಲಿ, 1 ಕೊರಿಂಥ 13ರಲ್ಲಿ ಸಂತ ಪೌಲನ ಪ್ರೀತಿಯ ಭವ್ಯವಾದ ಸ್ತೋತ್ರವು ಕುಟುಂಬಗಳಿಗೆ ಹೇಗೆ ಅನ್ವಯಿಸುತ್ತದೆ ಎಂಬುದರ ಕುರಿತು ಅವರು ನಮಗೆ ಒಂದು ಚಿಂತನೆಯನ್ನು ನೀಡುತ್ತಾರೆ.

ಪ್ರೀತಿಯು ಕೆರಳಿಸುವಂಥದ್ದಲ್ಲ ಮತ್ತು ತಪ್ಪುಗಳ ದಾಖಲೆಯನ್ನು ಇಟ್ಟುಕೊಳ್ಳುವುದಿಲ್ಲ ಎಂದು ಸಂತ ಪೌಲರು ಹೇಳುತ್ತಾರೆ. ಕುಟುಂಬಗಳಲ್ಲಿ ಇತರರ ದೌರ್ಬಲ್ಯಗಳು ಮತ್ತು ದೋಷಗಳಿಗೆ ಕಠೋರವಾಗಿ ಪ್ರತಿಕ್ರಿಯಿಸದಿರುವುದು ಎಷ್ಟು ಮುಖ್ಯ ಎಂಬುದನ್ನು ವಿಶ್ವಗುರು ಫ್ರಾನ್ಸಿಸ್ ರವರು ಚಿಂತಿಸುತ್ತಾರೆ. ನಮ್ಮ ಹೃದಯದಲ್ಲಿ ನೋವು ನೆಲೆಸಲು ನಾವು ಬಿಡಬಾರದು, ಆ ನೋವು ನಮ್ಮ ಹೃದಯದಲ್ಲಿ ಬೇರೂರಲು ಮತ್ತು ಬೆಳೆಯಲು ಬಿಡಬಾರದು. ನಾವು ಮನುಷ್ಯರಾಗಿರುವುದರಿಂದ, ಇತರರಿಂದ, ವಿಶೇಷವಾಗಿ ನಮ್ಮ ಕುಟುಂಬಗಳಲ್ಲಿ ನಮಗೆ ನೋವುಂಟಾದಾಗ ನಾವು ಸೂಕ್ಷ್ಮವಾಗಿ ಪ್ರತಿಕ್ರಿಯಿಸಬಹುದು. ಆದರೆ ವಿಶ್ವಗುರು ಫ್ರಾನ್ಸಿಸ್ ರವರು ಹೇಳುವಂತೆ, ಸಂತ ಪೌಲರು ಆ ನೋವನ್ನು ಬಿಟ್ಟುಬಿಡಲು, ಅದು ನಮ್ಮ ಹೃದಯದಲ್ಲಿ ಹುದುಗಲು ಬಿಡಬೇಡಿ ಎಂದು ನಮ್ಮನ್ನು ಆಹ್ವಾನಿಸುತ್ತಾನೆ. ನಮ್ಮ ಕೋಪದ ಮೇಲೆ ಸೂರ್ಯನ ಮುಳುಗಲು ಬಿಡಬೇಡಿ. ದಿನ ಮುಗಿಯುವ ಮೊದಲು, ನಾವು ಪ್ರತಿದಿನ ಅನುಭವಿಸಬಹುದಾದ ಅಸಮಾಧಾನಗಳ ಹೊರತಾಗಿಯೂ, ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾವು ನಮ್ಮ ಕುಟುಂಬದ ಸದಸ್ಯರುಗಳನ್ನು ಭೇಟಿ ಮಾಡಲು ಪ್ರಯತ್ನಿಸಬಹುದು.

ಆದರೆ ಇದನ್ನು ಮಾಡಲು ನಮಗೆ ಶಕ್ತಿ ಎಲ್ಲಿಂದ ಸಿಗುತ್ತದೆ? ಕ್ಷಮಿಸಲು ನಮಗೆ ಶಕ್ತಿ ಎಲ್ಲಿಂದ ಸಿಗುತ್ತದೆ? ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಎಷ್ಟು ಪ್ರೀತಿಸುತ್ತಾರೆಂದು ಪರಿಗಣಿಸಲು ವಿಶ್ವಗುರು ಫ್ರಾನ್ಸಿಸ್ ರವರು ನಮ್ಮನ್ನು ಆಹ್ವಾನಿಸುತ್ತಾರೆ. ನಾವು ಪಾಪಿಗಳಾಗಿದ್ದಾಗಲೂ ಈ ಪ್ರೀತಿ ಎಂದಿಗೂ ಕಡಿಮೆಯಾಗದು ಹಾಗೂ ನಶಿಸಿಹೋಗದು. ದೇವರ ಆ ಪ್ರೀತಿ ನಮಗಾಗಿ ಎಷ್ಟು ಆಳವಾಗಿದೆ ಎಂದು ನಾವು ಆಲೋಚಿಸಿದರೆ, ಇತರರನ್ನೂ ಸಹ ಪ್ರೀತಿಯ ಪಾಪಿಗಳಾಗಿ ನೋಡುವ ಅನುಗ್ರಹವನ್ನು ನಮಗೆ ನೀಡಲಾಗುತ್ತದೆ. ನಮ್ಮನ್ನು ಸಹಾನುಭೂತಿಯ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಮೂಲಕ, ನಮ್ಮ ಕುಟುಂಬದಲ್ಲಿ ಇತರರನ್ನು ಸಹಾನುಭೂತಿಯ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಮತ್ತು ಸ್ವೀಕರಿಸಬಹುದು. ಅದಕ್ಕಾಗಿಯೇ ಸಂತ ಪೌಲರು ಪ್ರೀತಿ ತಾಳ್ಮೆ, ದಯೆಯು, ಎಂದಿಗೂ ತಪ್ಪುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಬಹುದು.

ನಾವೆಲ್ಲರೂ ಈ ತಿಂಗಳು ಪವಿತ್ರ ತಂದೆಯೊಂದಿಗೆ, ನಮ್ಮನ್ನು ಕ್ಷಮಿಸುವ ದೇವರ ಪ್ರೀತಿಯನ್ನು ಅನುಭವಿಸಲು, ಪಾಪಿಗಳಾದ ನಮ್ಮ ಪಾಪಗಳನ್ನು ದೇವರು ಕ್ಷಮಿಸುವಂತೆ, ನಾವು ಇತರರ ತಪ್ಪುಗಳನ್ನು ಕ್ಷಮಿಸುವ ಈ ಅನುಗ್ರಹಕ್ಕಾಗಿ ಪ್ರಾರ್ಥಿಸೋಣ. ಆ ಪ್ರೀತಿಯನ್ನು ನಾವು ನಮ್ಮೊಳಗೆ ಆಳವಾಗಿ ಸೇರಿಸಿಕೊಳ್ಳುತ್ತಾ, ನಮ್ಮ ಕುಟುಂಬದಲ್ಲಿರುವ ಇತರರನ್ನು ಕ್ಷಮಿಸಲು ನಮಗೆ ಸಹಾಯ ಮಾಡುವಂತೆ ದೇವರನ್ನು ಪ್ರಾರ್ಥನೆಯಲ್ಲಿ ಕೇಳೋಣ, ಅವರ ತಪ್ಪುಗಳು ಮತ್ತು ವೈಫಲ್ಯಗಳನ್ನು ಮೀರಿ, ದೇವರು ಅವರ ಮೂಲಕ ನಮಗೆ ತರುತ್ತಿರುವ ಉಡುಗೊರೆಗಳನ್ನು ನೋಡೋಣ.
 

04 ಮಾರ್ಚ್ 2025, 15:36