ಜೋರ್ಡಾನ್ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ ಪವಿತ್ರ ನಾಡಿನ ತೀರ್ಥಯಾತ್ರೆಯ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತದೆ.
ಧರ್ಮಗುರು ರಿಫತ್ ಬೇಡರ್
2000ರಲ್ಲಿ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ ಜೋರ್ಡಾನ್‌ಗೆ ಪ್ರೇಷಿತ ಭೇಟಿ ನೀಡುವ ಪ್ರಯಾಣದ ನೆನಪು ಇನ್ನೂ ಎದ್ದುಕಾಣುತ್ತದೆ. ಆ ಸಮಯದಲ್ಲಿ ನಾನು ಸ್ಥಳೀಯ ಕಥೋಲಿಕ ಧರ್ಮಸಭೆಯ ವಕ್ತಾರನಾಗಿ ಕೆಲಸ ಮಾಡುತ್ತಿದ್ದೆ ಮತ್ತು ಮಹತ್ವದ ಜೂಬಿಲಿ ವರ್ಷದಲ್ಲಿ ಮಹಾನ್ ವ್ಯಕ್ತಿಯಾದ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಲ್ ರವರ ಭೇಟಿಯು ಅಗಾಧ ಮಹತ್ವವನ್ನು ಅನುಭವಿಸಿದೆ. ಭೇಟಿಯ ಸಂಕೇತವಾಗಿ, ಮಾರ್ಚ್ 20-21 ರಂದು ಜೋರ್ಡಾನ್‌ನಲ್ಲಿ ನಾವು ಐತಿಹಾಸಿಕ ಮತ್ತು ಪವಿತ್ರವಾದ ಭೇಟಿಯ ದಿನವನ್ನಾಗಿ ಆನಂದಿಸಿದೆವು.
ಈ ಭೇಟಿಯು ಪ್ರಭುಯೇಸು ಕ್ರಿಸ್ತರ ದ್ವಿಶತಮಾನೋತ್ಸವದ ಜಾಗತಿಕ ಸ್ಮರಣಾರ್ಥವಾಗಿತ್ತು. ಆ ವರ್ಷ ಪವಿತ್ರ ನಾಡಿಗೆ ಭೇಟಿ ನೀಡದೆ "ಬೈಪಾಸ್" ಮಾಡಲು ಪವಿತ್ರ ವಿಶ್ವಗುರು ಬಯಸಲಿಲ್ಲ, 1964ರಲ್ಲಿ ವಿಶ್ವಗುರು ಸಂತ ಆರನೇಯ ಜಾನ್ ಪೌಲ್ ರವರ ಭೇಟಿಗೆ ಮುಂಚಿತವಾಗಿಯೇ ಅವರನ್ನು ಮಾರ್ಕಾ ವಿಮಾನ ನಿಲ್ದಾಣದಲ್ಲಿ ದಿವಂಗತರಾದ ರಾಜ ಹುಸೇನ್ ಇಬ್ನ್ ತಲಾಲ್ ರವರು ಸ್ವಾಗತಿಸಿದರು, ಅವರು ತಮ್ಮ ಹೆಲಿಕಾಪ್ಟರ್‌ನಿಂದ ಬೆತ್ಲೆಹೇಮ್, ಜೆರುಸಲೇಮ್ ಮತ್ತು ನಬ್ಲಸ್‌ಗೆ ವಿಶ್ವಗುರುಗಳನ್ನು ಸಾಂಭ್ರಮಿಕ ಮೆರವಣಿಗೆಯೊಂದಿಗೆ ಕರೆದುಕೊಂಡು ಹೋದರು.
ಆದರೆ 1964 ಮತ್ತು 2000ರ ನಡುವೆ, ಹಲವಾರು ಘಟನೆಗಳು ನಡೆದವು, ಮುಖ್ಯವಾಗಿ ಪಶ್ಚಿಮ ದಂಡೆ ಮತ್ತು ಜೆರುಸಲೇಮ್‌ನ ಇಸ್ರಯೇಲ್ ಆಕ್ರಮಣವು ಸಾಮಾನ್ಯ ಮನಸ್ಥಿತಿಯನ್ನು ಮುಚ್ಚಿತು. 2000ದ ಜೂಬಿಲಿ ವರ್ಷವನ್ನು ಆಚರಿಸಲು ಧರ್ಮಸಭೆಯ ಸಿದ್ಧತೆಗಳ ಪರಾಕಾಷ್ಠೆಯನ್ನು ಗುರುತಿಸಲು ವಿಶ್ವಗುರು ಬಯಸದಿದ್ದರೆ ಅವರ ಪವಿತ್ರ ನಾಡಿನ ಭೇಟಿಯನ್ನು ಮುಂದೂಡಲಾಗುತ್ತಿತ್ತು. ಅವರು ಮೊದಲಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದರು ಮತ್ತು ನಂತರ ಜೋರ್ಡಾನ್, ಪ್ಯಾಲಸ್ತೀನ್‌ಗೆ ಬಂದರು, ಪ್ರಭುಯೇಸು ಕ್ರಿಸ್ತರ ಸ್ವರ್ಗಾರೋಹಣದ ನಂತರ ಅಪೊಸ್ತಲರ ಹೆಜ್ಜೆಗುರುತುಗಳನ್ನು ಅನುಸರಿಸಿ ಸಿರಿಯಾಕ್ಕೆ ಭೇಟಿ ನೀಡಿದರು ಮತ್ತು ನಂತರ ಗ್ರೀಸ್‌ಗೆ ಭೇಟಿ ನೀಡಿದರು.
ಜೋರ್ಡಾನ್ ದೃಷ್ಟಿಕೋನದಿಂದ, ಯುವ ರಾಜ ಅಬ್ದುಲ್ಲಾ II ತನ್ನ ಅಜ್ಜ, ರಾಷ್ಟ್ರದ ನಿರ್ಮಾತೃ ರಾಜನಾದ ಹುಸೇನ್ ರವರ ನಿಧನದ ನಂತರ ತನ್ನ ಸಾಂವಿಧಾನಿಕ ಅಧಿಕಾರವನ್ನು ವಹಿಸಿಕೊಂಡಿದ್ದರು. ಆದಾಗ್ಯೂ, ನಮ್ಮ ಸಿದ್ಧತೆಗಳ ಪ್ರಗತಿಯು ಶ್ರೇಷ್ಠತೆ, ವಿವೇಕ, ಬುದ್ಧಿವಂತಿಕೆ ಮತ್ತು ಒಳನೋಟದ ಚಿಂತನೆಗಳಿಂದ ಮುಂದುವರೆಯಿತು. ನಂತರ ವಿಶ್ವಗುರು ಬೆನೆಡಿಕ್ಟ್ ರವರನ್ನು ಬರಮಾಡಿಕೊಂಡ ರಾಜ - ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ವಿಶ್ವಗುರು ಫ್ರಾನ್ಸಿಸ್ ರವರನ್ನು ಪ್ರಭುದೇವರು ಅವರನ್ನು ಗುಣಪಡಿಸಲಿ - ಅಮ್ಮನ್ ವಿಮಾನ ನಿಲ್ದಾಣದಲ್ಲಿ ತಮ್ಮ ಸ್ವಾಗತ ಭಾಷಣದಲ್ಲಿ, ಈ ವಿಶ್ವಗುರುಗಳ ಭೇಟಿಯು ನಮಗೆ ಮರೆಯಲಾಗದ ಪ್ರಮುಖ ಸಂಗತಿಗಳನ್ನು ನೆನಪಿಸುತ್ತದೆ: ವಿಶ್ವಾಸದ ಸದ್ಗುಣಗಳು ಮತ್ತು ಶತ್ರುಗಳನ್ನು ಕ್ಷಮಿಸುವ ಪ್ರಮುಖ ಸಂಗತಿಗಳನ್ನು ನೆನಪಿಸುತ್ತದೆ.
ಮರುದಿನ ಬೆಳಿಗ್ಗೆ, ಕರಾಮೆಹ್ ದಿನ ಮತ್ತು ತಾಯಂದಿರ ದಿನವನ್ನು ಗುರುತಿಸಿ, ಒಂದು ಸಾಂಭ್ರಮಿಕ ದಿವ್ಯಬಲಿಪೂಜೆಯ್ನು ಅರ್ಪಿಸಲಾಯಿತು, ಇದನ್ನು ಮೊದಲು ಅಮ್ಮಾನ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ದಿನದ ಕಾರ್ಯಕ್ರಮಗಳನ್ನು ಆಚರಿಸಲಾಯಿತು. ನನಗೆ ನೆನಪಿರುವಂತೆ, ಜೋರ್ಡಾನ್‌ನಾದ್ಯಂತ ಮತ್ತು ನೆರೆಯ ದೇಶಗಳಿಂದ ಬೆಳಗಿನ ಜಾವದಿಂದಲೇ ಆಗಮಿಸಿದ್ದ ಜನರಲ್ಲಿ, ಸುಮಾರು 60,000 ಜನರು ಇದರಲ್ಲಿ ಭಾಗವಹಿಸಿದ್ದರು. ಪವಿತ್ರ ದಿವ್ಯಬಲಿಪೂಜೆಯ ನಂತರ ಅಮ್ಮಾನ್‌ನಲ್ಲಿರುವ ಲತೀನ್ ಧರ್ಮಪ್ರಾಂತ್ಯದಲ್ಲಿ ಅರಬ್ ಪಿತೃಪ್ರಧಾನರು ಮತ್ತು ಧರ್ಮಾಧ್ಯಕ್ಷರುಗಳೊಂದಿಗೆ ಔತಣದ ನಂತರ, ಮೆರವಣಿಗೆ ಮೊದಲ ಬಾರಿಗೆ ದೀಕ್ಷಾಸ್ನಾನದ ಸ್ಥಳಕ್ಕೆ ಹೊರಟಿತು. ನಮ್ಮ ಆಧುನಿಕ ಯುಗದಲ್ಲಿ ಈ ವಿಶಿಷ್ಟ ಸ್ಥಳಕ್ಕೆ ಮೊದಲ ತೀರ್ಥಯಾತ್ರೆಯನ್ನು ವಿಶ್ವಗುರುಗಳ ಉಪಸ್ಥಿತಿಯೊಂದಿಗೆ ಉದ್ಘಾಟಿಸಲಾಯಿತು. ಪ್ರವಾದಿ ಎಲಿಜಾರವರ ಬೆಟ್ಟದಲ್ಲಿ ನಡೆದ ಪ್ರಾರ್ಥನಾ ಕೂಟದಲ್ಲಿ ಒಟ್ಟು 40,000 ಜನರು ಭಾಗವಹಿಸಿ 2,000 ಮೇಣದಬತ್ತಿಗಳನ್ನು ಬೆಳಗಿಸಿ ಪ್ರಾರ್ಥಿಸಿದರು. ಪ್ರಭುಯೇಸು ಕ್ರಿಸ್ತರ ದೀಕ್ಷಾಸ್ನಾನದ ಸ್ಥಳವನ್ನು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮದ ಸ್ಥಳವಾಗಿ ವಿಶ್ವಗುರುಗಳು ಉದ್ಘಾಟಿಸಿದರು.
2014ರಲ್ಲಿ ಪ್ರವೇಶ ದ್ವಾರದ ಮುಂಭಾಗದಲ್ಲಿ ದೀಕ್ಷಾಸ್ನಾನ ಸ್ಥಳದ ಮಾಜಿ ನಿರ್ದೇಶಕ ದಿವಂಗತ ಎಂಜಿನಿಯರ್ ದಿಯಾ ಅಲ್-ಮದನಿ ಅವರು ಮಾರ್ ಎಲಿಯಾಸ್ ಬೆಟ್ಟದ ಮೇಲೆ ಪ್ರಾರ್ಥಿಸುತ್ತಿರುವ ವಿಶ್ವಗುರುಗಳ ಚಿತ್ರದೊಂದಿಗೆ ದೀಕ್ಷಾಸ್ನಾನ ಸ್ಥಳದಲ್ಲಿ ವಿಶ್ವಗುರುಗಳು ಹೇಳಿದ ಕೊನೆಯ ಮಾತುಗಳನ್ನು ನಾನು ಇಲ್ಲಿ ನೆನಪಿಸಿಕೊಳ್ಳುತ್ತೇನೆ, ಅದು ಹೀಗೆ ಹೇಳುತ್ತದೆ: ನನ್ನ ಪ್ರಾರ್ಥನೆಗಳಲ್ಲಿ, ನಾನು ಯಾವಾಗಲೂ ಜೋರ್ಡಾನ್ ಜನರನ್ನು, ಕ್ರೈಸ್ತರನ್ನು ಮತ್ತು ಮುಸ್ಲಿಂ ಧರ್ಮದವರನ್ನು ಮತ್ತು ವಿಶೇಷವಾಗಿ ಅನಾರೋಗ್ಯ ಹಾಗೂ ವೃದ್ಧರನ್ನು ನೆನಪಿಸಿಕೊಳ್ಳುತ್ತೇನೆ. ದೇವರು ಜೋರ್ಡಾನ್, ಜೋರ್ಡಾನಿನ ರಾಜ ಮತ್ತು ಅಲ್ಲಿನ ಜನರನ್ನು ಸದಾ ಆಶೀರ್ವದಿಸಲಿ.
ಕಾಲು ಶತಮಾನದ ನಂತರ, ಅಂದರೆ ವಿಶ್ವಗುರು ದ್ವಿತೀಯ ಜಾನ್ ಪೌಲ್ ರವರ ಪವಿತ್ರ ನಾಡಿನ ಪ್ರೇಷಿತ ಭೇಟಿಯ ಅದ್ಭುತ ಬೆಳ್ಳಿ ಮಹೋತ್ಸವದಲ್ಲಿ, ಅವರ ಪ್ರೇಷಿತ ಪ್ರವಾಸವನ್ನು ನೆನಪಿಸಿಕೊಳ್ಳುವುದು ಎಷ್ಟು ಸುಂದರವಾಗಿದೆ...