ಇಂದು ದೇವರ ಧ್ಯೇಯ: ವರ್ಬೈಟ್ಸ್ ರೋಮ್ ಸಮ್ಮೇಳನದ 150ನೇ ವಾರ್ಷಿಕೋತ್ಸವ
ಜೋಸೆಫ್ ಟುಲೋಚ್
ದೈವಶಾಸ್ತ್ರಜ್ಞರು, ಧರ್ಮಪ್ರಚಾರಕರು, ಕಾರ್ಯಕರ್ತರು ಮತ್ತು ವಿದ್ವಾಂಸರು ಈ ವಾರ ರೋಮ್‌ನಲ್ಲಿ ಸೊಸೈಟಿ ಆಫ್ ದಿ ಡಿವೈನ್ ವರ್ಡ್‌ನ 150 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಮ್ಮೇಳನಕ್ಕಾಗಿ ಒಟ್ಟುಗೂಡಿದ್ದಾರೆ.
ಅರ್ನಾಲ್ಡ್ ಜಾನ್ಸೆನ್ ಎಂಬ ಒಬ್ಬ ಯುವ ಜರ್ಮನ್ ಯಾಜಕನಿಂದ 1875ರಲ್ಲಿಈ ಸಮಾಜವು ಸ್ಥಾಪಿಸಲಾಯಿತು, ಸಮಾಜವು ಈಗ 5,700ಕ್ಕೂ ಹೆಚ್ಚು ಧರ್ಮಪ್ರಚಾರಕರಿಗೆ ನೆಲೆಯಾಗಿದೆ ('ವರ್ಬೈಟ್ಸ್' ಎಂದು ಕರೆಯಲಾಗುತ್ತದೆ), ಮತ್ತು ಈ ಸಮಾಜದ ಕಾರ್ಯಾಚರಣೆಯು 79 ವಿವಿಧ ದೇಶಗಳಲ್ಲಿ ಸಕ್ರಿಯವಾಗಿದೆ.
27 ರಿಂದ ಮಾರ್ಚ್ 29 ರವರೆಗೆ ನಡೆಯುತ್ತಿರುವ ಸಮ್ಮೇಳನವು ಇಂದಿನ ಜಗತ್ತಿನಲ್ಲಿ 'ಮಿಸ್ಸಿಯೊ ದೇಯಿ' ಅಥವಾ ʼದೇವರ ಧ್ಯೇಯʼದ ಮೇಲೆ ಕೇಂದ್ರೀಕೃತವಾಗಿದೆ.
ಇಂದು ದೇವರ ಧ್ಯೇಯ
ಸಮ್ಮೇಳನದ ಗುರಿ, ಮುಖ್ಯ ಭಾಷಣವನ್ನು ನೀಡಿದ ಅಮೇರಿಕದ ದೈವ ವಾಕ್ಯದ ಧರ್ಮಪ್ರಚಾರಕ ಮತ್ತು ದೈವಶಾಸ್ತ್ರಜ್ಞರಾದ ಧರ್ಮಗುರು ಸ್ಟೀಫನ್ ಬೆವನ್ಸ್ ರವರು ವಿವರಿಸಿದರು, ಇಂದಿನ ಧ್ಯೇಯ ಏನು? ಮತ್ತು ನಾವು ಹೇಗೆ ಮುಂದುವರಿಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು.
ಈ ನಿಟ್ಟಿನಲ್ಲಿ, ಸಮ್ಮೇಳನವು 'ಮಿಸ್ಸಿಯೊ ದೇಯಿ' ಅಥವಾ ʼದೇವರ ಧ್ಯೇಯʼ ನಿರ್ದಿಷ್ಟವಾಗಿ ನಾಲ್ಕು ಅಂಶಗಳನ್ನು ಅಧ್ಯಯನ ಮಾಡುತ್ತಿದೆ: 'ಗಾಯಗಳನ್ನು ಗುಣಪಡಿಸುವುದು', 'ಆಧುನಿಕೋತ್ತರದಿಂದ ಸವಾಲು', 'ಸಂಸ್ಕೃತಿಗಳಿಂದ ಕಲಿಯುವುದು' ಮತ್ತು 'ಧರ್ಮಗಳಿಂದ ಪ್ರೇರಿತ'.
ಈ ಅಂಶಗಳಲ್ಲಿ ಕೊನೆಯದನ್ನು ವಿವರಿಸುತ್ತಾ, "ದೇವರು ಧರ್ಮಸಭೆಯ ಗಡಿಯ ಹೊರಗೆ ಕೆಲಸ ಮಾಡುತ್ತಿದ್ದಾನೆ" ಎಂದು ಧರ್ಮಗುರು ಬೆವನ್ಸ್ ರವರು ಒತ್ತಿ ಹೇಳಿದರು.
ಕ್ರೈಸ್ತ ಸಂಪ್ರದಾಯದಲ್ಲಿ ದೇವರು ವಿಶೇಷ ರೀತಿಯಲ್ಲಿ ಪ್ರಸ್ತುತವಾಗಿದ್ದರೂ, ಎಂದು ಬೆವನ್ಸ್ ರವರು ಹೇಳಿದರು, ಇತರ ಧರ್ಮಗಳು ನಮ್ಮ ಸ್ವಂತ ವಿಶ್ವಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಅವರೊಂದಿಗೆ ಸಂವಾದದಲ್ಲಿ, ನಾವು ಕ್ರೈಸ್ತದ ಧರ್ಮದ ಆಳವಾದ ತಿಳುವಳಿಕೆಗೆ ಬರಬಹುದು.
ಗಾಯಗೊಂಡ ಜಗತ್ತನ್ನು ಗುಣಪಡಿಸುವುದು
ವರ್ಬೈಟ್ ಧರ್ಮಪ್ರಚಾರಕರು ಮತ್ತು ಕಥೊಲಿಕ ದೈವಶಾಸ್ತ್ರಜ್ಞರು, ಸಮ್ಮೇಳನದಲ್ಲಿ ಮಾತನಾಡುವವರು ಫಿಲಿಪೈನ್ಸ್‌ನ ಮಾಜಿ ಸೆನೆಟರ್ ಲೀಲಾ ಡಿ ಲಿಮಾ ಮತ್ತು ಘಾನಾದ ಫ್ರಾನ್ಸಿಸ್ಕನ್ ಫ್ರೈರ್ ಮತ್ತು ಸಮುದಾಯ ಸಂಘಟಕ ಜೋಸೆಫ್ ಕ್ವಾಮ್ ಬ್ಲೇರವರು ಸೇರಿದಂತೆ ರಾಜಕೀಯ ಮತ್ತು ಕ್ರಿಯಾಶೀಲತೆಯ ಪ್ರಪಂಚದ ವ್ಯಕ್ತಿಗಳನ್ನು ಒಳಗೊಂಡಿರುತ್ತಾರೆ.
"SVDs [ಮಿಷನರಿಗಳು ಆಫ್ ದಿ ಡಿವೈನ್ ವರ್ಡ್], ನಾವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದೇವೆ" ಎಂದು ಸಮುದಾಯದ ಪ್ರಧಾನ ಸಂವಹನಕಾರ ಸಂಯೋಜಕರಾದ ಧರ್ಮಗುರು ಕಾಸ್ಮಿರ್ ನೇಮಾರವರು ವಿವರಿಸುತ್ತಾರೆ. ಸಮ್ಮೇಳನವು ಅದನ್ನು ಪ್ರತಿಬಿಂಬಿಸಬೇಕೆಂದು ನಾವು ಬಯಸುತ್ತೇವೆ.
ದೈವವಾಕ್ಯದ ಧರ್ಮಪ್ರಚಾರಕರ ಶುಶ್ರೂಷೆಯು ಈ ಎಲ್ಲಾ ವಿಭಿನ್ನ ಅಂಶಗಳನ್ನು ಒಟ್ಟುಗೂಡಿಸುತ್ತದೆ ಎಂದು ಸಂವಹನ ನಿರ್ದೇಶಕರು ಹೇಳಿದರು, ನಾವು ಪರಿಧಿಯಲ್ಲಿರುವವರೊಂದಿಗೆ ಕಷ್ಟಕರ ಸಂದರ್ಭಗಳಲ್ಲಿ ಜನರೊಂದಿಗೆ ಕೆಲಸ ಮಾಡುತ್ತೇವೆ.
"ನಾವು ಆ ಸಂದರ್ಭಗಳಲ್ಲಿ ಗುಣಪಡಿಸುವವರಾಗಿದ್ದೇವೆ" ಎಂದು ಧರ್ಮಗುರು ನೇಮಾರವರು ಹೇಳಿದರು, "ಏಕೆಂದರೆ ಪ್ರಭುಯೇಸು ಒಬ್ಬ ಮಹಾನ್ ವೈದ್ಯರು ಮತ್ತು ದೇವರ ವಾಕ್ಯದ ಅನುಯಾಯಿಗಳಾಗಿ, ನಾವು ಗುಣಪಡಿಸುವ ಧ್ಯೇಯವನ್ನು ಮುಂದುವರಿಸಲು ಬಯಸುತ್ತೇವೆ."