MAP

The Way Forward 2025 - An Ecclesial Gathering Fratelli tutti: Cultivating the Politics of Communion and Compassion The Way Forward 2025 - An Ecclesial Gathering Fratelli tutti: Cultivating the Politics of Communion and Compassion 

ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯವು ಅಮೇರಿಕದಲ್ಲಿ ವಿಶ್ವಗುರುವಿನ ದಾರ್ಶನಿಕತೆಯನ್ನು ಹರಡಲು ಮೀಸಲಾದ ಸಮ್ಮೇಳನವನ್ನು ಆಯೋಜಿಸುತ್ತದೆ

ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದ ಮೈಕೆಲ್ ಪಿ. ಮರ್ಫಿರವರು, ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ 'ಮುಂದಕ್ಕೆ ಸಾಗುವ' ಧರ್ಮಸಭೆಯ ಧರ್ಮಾಧ್ಯಕ್ಷರುಗಳ ಸಭೆಯ ಕುರಿತು ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾ, ವಿಶ್ವಗುರು ಫ್ರಾನ್ಸಿಸ್ ರವರು ಕಲ್ಪಿಸಿಕೊಂಡ ರೀತಿಯಲ್ಲಿ ವ್ಯಾಟಿಕನ್ IIರ ದೃಷ್ಟಿಕೋನವನ್ನು ಆಧರಿಸಿ, ಅಮೇರಿಕದ ಧರ್ಮಸಭೆಗೆ ಸಹಾಯಕವಾದ ಸಂಭಾಷಣೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಿದ್ದರು.

ಜೋಸೆಫ್ ಟುಲ್ಲೊಚ್

ಐದು ಕಾರ್ಡಿನಲ್‌ಗಳು ಸೇರಿದಂತೆ ಎಂಬತ್ತೆಂಟು "ಸಾರ್ವಜನಿಕ ಮುಖಿ ಕಥೋಲಿಕರು"(public-facing Catholics) ಕಳೆದ ವಾರದ ಕೊನೆಯಲ್ಲಿ ನ್ಯೂಯಾರ್ಕ್‌ನಲ್ಲಿ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯವು ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನಕ್ಕಾಗಿ ಒಟ್ಟುಗೂಡಿದರು.

ವಿಶ್ವಗುರು ಫ್ರಾನ್ಸಿಸ್ ರವರ 2020ರ ವಿಶ್ವಪರಿ ಪತ್ರ ಫ್ರಾಟೆಲ್ಲಿ ಟುಟ್ಟಿಗೆ ಸಮರ್ಪಿತವಾದ ʻಧರ್ಮಸಭೆಗೆ ಸಂಬಂಧಪಟ್ಟ ಒಕ್ಕೂಟವು', ವಿಶ್ವಗುರುಗಳ ಚಿಂತನೆ ಮತ್ತು ಸೇವೆಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ವಾರ್ಷಿಕ ಸಮ್ಮೇಳನಗಳ ಸರಣಿಯಲ್ಲಿ ನಾಲ್ಕನೆಯದಾಗಿದೆ.

ದಿ ವೇ ಫಾರ್ವರ್ಡ್' ಎಂಬ ಶೀರ್ಷಿಕೆಯ ಈ ಸರಣಿ ಸಭೆಗಳನ್ನು ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯ, ಲೊಯೊಲಾ ವಿಶ್ವವಿದ್ಯಾಲಯ ಚಿಕಾಗೋ, ಬೋಸ್ಟನ್ ಕಾಲೇಜು ಮತ್ತು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ಆಯೋಜಿಸಿವೆ.

ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾದ ಲೊಯೊಲಾದ ಮೈಕೆಲ್ ಪಿ. ಮರ್ಫಿರವರು, ಈ ವರ್ಷದ ಕಾರ್ಯಕ್ರಮದ ಕುರಿತು ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿದರು.

ಅಮೇರಿಕಾದಲ್ಲಿ ವಿಶ್ವಗುರುಗಳ ಧಾರ್ಶನಿಕತೆಯನ್ನು ಹರಡುವುದು
ವಿಶ್ವಗುರು ಫ್ರಾನ್ಸಿಸ್ ರವರು ಕಲ್ಪಿಸಿಕೊಳ್ಳುವ ರೀತಿಯಲ್ಲಿ ವ್ಯಾಟಿಕನ್ IIರ ಧಾರ್ಶನಿಕತೆಯಲ್ಲಿ ಬೇರೂರಿರುವ ಅಮೇರಿಕದ ಧರ್ಮಸಭೆಗೆ ಸಹಾಯಕವಾದ ಸಂಭಾಷಣೆಗಳನ್ನು ಆಯೋಜಿಸುವುದು ಸಮ್ಮೇಳನದ ಗುರಿಯಾಗಿದೆ ಎಂದು ಮರ್ಫಿರವರು ಹೇಳಿದರು.

ಇದನ್ನು ಗಮನದಲ್ಲಿಟ್ಟುಕೊಂಡು, ಸಮ್ಮೇಳನವು ಮಾರ್ಚ್ 12 ರಿಂದ 14 ರವರೆಗೆ ಮೂರು ದಿನಗಳ ಸರಣಿ ಮಾತುಕತೆಗಾಗಿ ಐದು ಕಾರ್ಡಿನಲ್‌ಗಳು ಸೇರಿದಂತೆ ಎಂಬತ್ತೆಂಟು ಕಥೋಲಿಕ ಧರ್ಮಾಧ್ಯಕ್ಷರುಗಳು, ದೈವಶಾಸ್ತ್ರಜ್ಞರು, ಪತ್ರಕರ್ತರು, ಲೋಕೋಪಕಾರಿಗಳು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಕಥೋಲಿಕರು ಒಟ್ಟುಗೂಡಿದರು.

ವಿಚಾರಗಳಿಗಿಂತ ವಾಸ್ತವಿಕತೆ
ಸಮ್ಮೇಳನದಲ್ಲಿ ಕಥೋಲಿಕ ದೈವಶಾಸ್ತ್ರಜ್ಞರು ನೀಡಿದ ಅನೇಕ ಭಾಷಣಗಳು, “ಫ್ರಾಟೆಲ್ಲಿ ಟುಟ್ಟಿ ಇನ್ ಆನ್ ಎಕ್ಲೆಸಿಯಲ್ ಕಾನ್ಟೆಕ್ಸ್ಟ್” ನಿಂದ “ಆತ್ಮಸಾಕ್ಷಿ ಮತ್ತು ವಿವೇಕಯುತ ತೀರ್ಪುಗಳ ರಚನೆ” ವರೆಗಿನ ಶೈಕ್ಷಣಿಕ ವಿಷಯಗಳಿಗೆ ಮೀಸಲಾಗಿದ್ದವು.

ಆದಾಗ್ಯೂ, ತಮ್ಮ ಧ್ಯೇಯಗಳನ್ನು "ಮೋಡಗಳಲ್ಲಿ" ಇರಿಸುವುದು ನಮ್ಮ ಗುರಿಯಲ್ಲ ಎಂದು ಮರ್ಫಿರವರು ಒತ್ತಿ ಹೇಳಿದರು.

ವಿಶ್ವಗುರು ಫ್ರಾನ್ಸಿಸ್ ರವರು ಯಾವಾಗಲೂ 'ವಾಸ್ತವವು ಕಲ್ಪನೆಗಳಿಗಿಂತ ದೊಡ್ಡದು' ಎಂದು ಹೇಳುತ್ತಿರುತ್ತಾರೆ ಎಂದು ಮರ್ಫಿರವರು ಗಮನಿಸಿದರು. ಆಲೋಚನೆಗಳು ಮುಖ್ಯವಲ್ಲ ಎಂದು ನಾವು ಹೇಳುತ್ತಿಲ್ಲ, ಆದರೆ ಕಲ್ಪನೆಗಳು ಮತ್ತು ಬದುಕಿನ ಅನುಭವಗಳು ಎಲ್ಲಿ ಸಂಧಿಸುತ್ತವೆ ಎಂಬುದನ್ನು ನೋಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸಮ್ಮೇಳನದಲ್ಲಿ ಅವರು ಹೇಳಿದರು.

ಇದರರ್ಥ ಸಮ್ಮೇಳನದ ಪ್ರಮುಖ ಗಮನವು ನಿರ್ದಿಷ್ಟ ಫಲಿತಾಂಶಗಳ ಮೇಲೆ ಇರುತ್ತದೆ ಮತ್ತು ಆಯೋಜಕರು ವಾರ್ಷಿಕ ಸಮ್ಮೇಳನಗಳ ನಡುವೆ ಸಭೆ ಸೇರಿ ಅನುಷ್ಠಾನದ ಬಗ್ಗೆ ಚರ್ಚಿಸುತ್ತಾರೆ.

ಕಳೆದ ವರ್ಷದ ಲೌಡಾಟೊ ಸಿ ಕುರಿತ ಸಮ್ಮೇಳನವು, ಅಮೆರಿಕದ ಯುವ ವಯಸ್ಕರಿಗೆ ಪರಿಸರ ರಚನೆ ಕಾರ್ಯಕ್ರಮವಾದ ಕಾಮನ್ ಹೋಮ್ ಕಾರ್ಪ್ಸ್ ರಚನೆಗೆ ಕಾರಣವಾಯಿತು ಮತ್ತು ದೇಶಾದ್ಯಂತ ಕಥೋಲಿಕ ಸಂಸ್ಥೆಗಳಲ್ಲಿ ಸುಸ್ಥಿರತೆ ಅಧಿಕಾರಿಗಳಿಗೆ ಹಣಕಾಸು ಒದಗಿಸಲು ಯೋಜಿಸಿದೆ ಎಂದು ಮರ್ಫಿರವರು ಹೇಳಿದರು.

ಸಮ್ಮೇಳನದ ಮತ್ತೊಂದು ಪ್ರಮುಖ ಗುರಿ, "ಧರ್ಮಾಧ್ಯಕ್ಷರುಗಳಿಗೆ ಸೇವೆ ಸಲ್ಲಿಸುವುದು" ಎಂದು ಮರ್ಫಿರವರು ಹೇಳಿದರು.

ಇಂದು, ಧರ್ಮಾಧ್ಯಕ್ಷರುಗಳು "ಬೆಂಕಿ ನಂದಿಸುವಲ್ಲಿ" ತುಂಬಾ ಕಾರ್ಯನಿರತರಾಗಿರುವುದರಿಂದ ಅವರಿಗೆ ಅಧ್ಯಯನ ಮತ್ತು ಚಿಂತನೆಗೆ ಹೆಚ್ಚು ಸಮಯವಿಲ್ಲ ಹಾಗೂ ಅವರಲ್ಲಿ ಅನೇಕರು ಸಮ್ಮೇಳನವನ್ನು "ಒಂದು ರೀತಿಯ ರಚನೆ ಕಾರ್ಯ" ಎಂದು ನೋಡುವ ಕಾರಣಕ್ಕಾಗಿಯೇ ಈ ಸಮ್ಮೇಳನವನ್ನು ಮೆಚ್ಚಿದರು ಎಂದು ಅವರು ಒತ್ತಿ ಹೇಳಿದರು.
 

19 ಮಾರ್ಚ್ 2025, 14:06