MAP

2024.10.19 Sant’Egidio per il Mozambico

ಸಾಮಾಜಿಕ ಸಂವಹನ ಕಚೇರಿಯ ಹೊಸ ಕಾರ್ಯನಿರ್ವಾಹಕ ಕಾರ್ಯದರ್ಶಿಯನ್ನು FABC ಸ್ವಾಗತಿಸುತ್ತದೆ

ಏಷ್ಯಾದ ಆಕಾಶವಾಣಿ ವೆರಿತಾಸ್ ಕಾರ್ಯಕ್ರಮದ ನಿರ್ದೇಶಕರಾದ ಧರ್ಮಗುರು ಜಾನ್ ಮಿ ಶೆನ್ ರವರು, ಧರ್ಮಗುರು ಜಾರ್ಜ್ ಪ್ಲಾಥೋಡಮ್ ಎಸ್‌ಡಿಬಿರವರ ಉತ್ತರಾಧಿಕಾರಿಯಾಗಿ ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಸಾಮಾಜಿಕ ಸಂವಹನದ ಕಚೇರಿಯ ಕಾರ್ಯಕಾರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಧರ್ಮಗುರು ಜಾನ್ ಮಿ ಶೆನ್ ರವರನ್ನು ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ (FABC) ಸಾಮಾಜಿಕ ಸಂವಹನದ ಕಚೇರಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಏಷ್ಯಾದ ಆಕಾಶವಾಣಿ ವೆರಿತಾಸ್ ವರದಿ ಮಾಡಿದೆ.

ಮಾರ್ಚ್ 12 ರಂದು, FABC ನ ಕೇಂದ್ರ ಸಮಿತಿಯು ಧರ್ಮಗುರು ಮಿ ಶೆನ್ ರವರ ನೇಮಕಾತಿಯನ್ನು ಅನುಮೋದಿಸಿತು. ಧರ್ಮಗುರುವು ತಕ್ಷಣವೇ ತನ್ನ ಜವಾಬ್ದಾರಿಯ ಪಾತ್ರವನ್ನು ಪೂರೈಸಲು ಪ್ರಾರಂಭಿಸಿದರು ಮತ್ತು ಅವರ ಅವಧಿಯು ಡಿಸೆಂಬರ್ 31, 2028 ರವರೆಗೆ ಎರಡನೇ ಬಾರಿಯ ಅವಧಿಗೆ ಸೇವೆ ಸಲ್ಲಿಸುವ ಸಾಧ್ಯತೆಯೊಂದಿಗೆ ಮುಂದುವರಿಯುತ್ತದೆ.

ಆಗಸ್ಟ್ 2024ರಿಂದ ಏಷ್ಯಾದ ಆಕಾಶವಾಣಿ ವೆರಿತಾಸ್ ಕಾರ್ಯಕ್ರಮ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಗುರು ಮಿ ಶೆನ್ ರವರು, ಧರ್ಮಗುರು ಜಾರ್ಜ್ ಪ್ಲಾಥೋಡಮ್, ಎಸ್‌ಡಿಬಿರವರ ಉತ್ತರಾಧಿಕಾರಿಯಾಗಿದ್ದಾರೆ, ಇತ್ತೀಚಿನ ವರ್ಷಗಳಲ್ಲಿ ಅವರ ಸೇವೆ ಮತ್ತು ಬದ್ಧತೆಗೆ ಎಫ್‌ಎಬಿಸಿಯ ಧರ್ಮಾಧ್ಯಕ್ಷರುಗಳು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾದಲ್ಲಿ ವಿಶ್ವಾಸವನ್ನು ಹರಡುವುದು
ಜನವರಿ 25, 1980ರಂದು ಜನಿಸಿದ ಜಾನ್ ಮಿ ಶೆನ್ ರವರು ಜೂನ್ 18, 2010ರಂದು ಯಾಜಕ ದೀಕ್ಷೆಯನ್ನು ಸ್ವೀಕರಿಸಿದರು.

2024ರಲ್ಲಿ ಝಾಕ್ಸಿಯಾನ್‌ನ ಚೈನಾ ಧರ್ಮಕ್ಷೇತ್ರದ ಯಾಜಕ, ಫಿಲಿಪೈನ್‌ನ ರಾಜಧಾನಿ ಮನಿಲಾದ ಸಂತ ತೋಮಸ್ ರವರ ವಿಶ್ವವಿದ್ಯಾಲಯದಿಂದ ಪವಿತ್ರ ದೈವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಿದರು, ಪ್ರಮುಖವಾಗಿ ಸಾಮಾಜಿಕ ಮತ್ತು ಪಾಲನಾ ಸಂವಹನದಲ್ಲಿ ಡಾಕ್ಟರೇಟ್ ಪದವಿ ಪಡೆದರು.

ಏಷ್ಯಾದ ಆಕಾಶವಾಣಿ ವೆರಿತಾಸ್ ಪ್ರಕಾರ, ಧರ್ಮಗುರುವು 2010 ರಿಂದ 2012 ರವರೆಗೆ ತಮ್ಮ ತಾಯ್ನಾಡಿನ ಧರ್ಮಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು, ಈ ಸಮಯದಲ್ಲಿ ಅವರು ಚೈನಾದ ಮುಖ್ಯ ಭೂಭಾಗದಲ್ಲಿ 'ಲಿಟಲ್ ರಾಕ್ ಸ್ಕ್ರಿಪ್ಚರ್ ಸ್ಟಡಿ ಪ್ರೋಗ್ರಾಂ' ಎಂಬ ಬೈಬಲ್ ಅಧ್ಯಯನದ ಆಂದೋಲನವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು ಮತ್ತು 2012 ರಿಂದ 2018 ರವರೆಗೆ ಅವರು ರಾಡ್ ಮನಿಯೊಲಾ ಏಷ್ಯಾದಲ್ಲಿ ಮ್ಯಾಂಡರಿಟಾ ಸೇವೆಯ ಸಂಯೋಜಕರಾಗಿದ್ದರು.

ಇದಲ್ಲದೆ, ಈಗ-ಎಫ್‌ಎಬಿಸಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಸುಮಾರು ಒಂದು ದಶಕವನ್ನು ಸಂತ ತೋಮಸ್ ರವರ ವಿಶ್ವವಿದ್ಯಾಲಯದಲ್ಲಿ, ಅದರ ಸಾಮಾಜಿಕ ಮತ್ತು ಪಾಲನಾ ಸಂವಹನ ಕಾರ್ಯಕ್ರಮಕ್ಕಾಗಿ ಸಹ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

FABCಯು ಏಷ್ಯಾದಲ್ಲಿ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಸ್ವಯಂಪ್ರೇರಿತ ಸಂಘವಾಗಿದೆ, ಇದನ್ನು ಪವಿತ್ರ ಪೀಠಾಧಿಕಾರಿಯ ಅನುಮೋದನೆಯೊಂದಿಗೆ ಸ್ಥಾಪಿಸಲಾಗಿದೆ. ಏಷ್ಯಾದಲ್ಲಿ ಧರ್ಮಸಭೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ಅದರ ಸದಸ್ಯರಲ್ಲಿ ಒಗ್ಗಟ್ಟು ಮತ್ತು ಸಹ-ಜವಾಬ್ದಾರಿಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ. ಫೆಡರೇಶನ್‌ನ ನಿರ್ಧಾರಗಳು ಕಾನೂನು ಬದ್ಧದ ಬಲವಿಲ್ಲದೆ ಇವೆ; ಅವರ ಸ್ವೀಕಾರವು ಸಾಮೂಹಿಕ ಜವಾಬ್ದಾರಿಯ ಅಭಿವ್ಯಕ್ತಿಯಾಗಿದೆ.
 

24 ಮಾರ್ಚ್ 2025, 12:31