ತಪಸ್ಸುಕಾಲದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಿರುವ ಯುರೋಪಿನ ಧರ್ಮಾಧ್ಯಕ್ಷರುಗಳು
ಲಿಂಡಾ ಬೋರ್ಡೋನಿ
ವಿಬೂತಿ ಬುಧವಾರದಿಂದ ಮತ್ತು ಇಡೀ ತಪಸ್ಸುಕಾಲದಲ್ಲಿ, ಯುರೋಪಿನ ಧರ್ಮಸಭೆಯು ಶಾಂತಿಗಾಗಿ ಪ್ರಾರ್ಥಿಸಲು ಪರಮಪ್ರಸಾದದ ಬಲಿಪೀಠದ ಸುತ್ತಲೂ ಒಟ್ಟುಗೂಡುತ್ತದೆ.
ಬುಧವಾರ ಹೇಳಿಕೆಯಲ್ಲಿ, ಯುರೋಪಿನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಮಂಡಳಿಯ (CCEE) ಈ ಉಪಕ್ರಮವು ಎಲ್ಲಾ ಮಂಡಳಿಯ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ವಿವರಿಸಿದೆ.
ಉಕ್ರೇನ್ ಮತ್ತು ಪವಿತ್ರ ನಾಡಿನ ಶಾಂತಿಗಾಗಿ
ಪ್ರತಿಯೊಬ್ಬ ಸದಸ್ಯರು "ಯುದ್ಧದ ಸಂತ್ರಸ್ತರುಗಳಿಗಾಗಿ ಪ್ರಾರ್ಥಿಸುವ ಮತ್ತು ದೇವರಲ್ಲಿ, ವಿಶೇಷವಾಗಿ ಉಕ್ರೇನ್ ಮತ್ತು ಪವಿತ್ರ ನಾಡಿನಲ್ಲಿ ನ್ಯಾಯಯುತ ಮತ್ತು ಸುಸ್ಥಿರ ಶಾಂತಿ" ಯನ್ನು ಕೋರುವ ಉದ್ದೇಶದಿಂದ ಕನಿಷ್ಠ ಪಕ್ಷ ಒಂದು ಪವಿತ್ರ ದೈವಾರಾಧನಾ ವಿಧಿಯನ್ನು ಆಯೋಜಿಸಲು ಮತ್ತು ಆಚರಿಸಲು ಬದ್ಧರಾಗಿರುವ ರೀತಿಯಲ್ಲಿ ಇದನ್ನು ರಚಿಸಲಾಗಿದೆ ಎಂದು ಅದು ಹೇಳಿದೆ.
ವಿಶ್ವಗುರು ಫ್ರಾನ್ಸಿಸ್ ರವರ ಆರೋಗ್ಯ
‘ಪರಮಪ್ರಸಾದದ ಸರಪಳಿ’ “ಇಡೀ ಯುರೋಪಿನ ಖಂಡಕ್ಕೆ ಸಹಭಾಗಿತ್ವದ ಅನುಭವ ಮತ್ತು ಭರವಸೆಯ ಗೋಚರ ಚಿಹ್ನೆಯನ್ನು” ಒದಗಿಸುವ ಗುರಿಯನ್ನು ಹೊಂದಿದೆ ಎಂದು CCEE ಸೇರಿಸಲಾಗಿದೆ.
ಈ ತಪಸ್ಸುಕಾಲದಲ್ಲಿ "ನಾವೆಲ್ಲರೂ ಸಹೋದರ ಸಹೋದರಿಯರು ಎಂದು ಚೆನ್ನಾಗಿ ಗುರುತಿಸಲು ಮತ್ತು ಯುದ್ಧದ ಅಂತ್ಯಕ್ಕಾಗಿ ದೇವರನ್ನು ಬೇಡಿಕೊಳ್ಳಲು ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮದ ಸಮಯವಾಗಿದೆ" ಎಂದು ಅದು ಮುಂದುವರಿಸಿತು.
ಈ ಯಾತನೆ ಮತ್ತು ಅನಾರೋಗ್ಯದ ದಿನಗಳಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ನಾವು ನಮ್ಮ ಮನವಿಯನ್ನು ನವೀಕರಿಸುತ್ತೇವೆ ಎಂಬ ಮನವಿಯೊಂದಿಗೆ ಹೇಳಿಕೆ ಮುಕ್ತಾಯವಾಯಿತು.
CCEE
ಯುರೋಪಿನ 13 ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರು ತಮ್ಮತಮ್ಮಲ್ಲೇ ಸಹಕರಿಸಲು ನಿರ್ಧರಿಸಿದ ನಂತರ 1971ರಲ್ಲಿ CCEE ನ್ನು ಸ್ಥಾಪಿಸಲಾಯಿತು. ಇಂದು, ಮಂಡಳಿಯು 39 ಸದಸ್ಯರನ್ನು ಒಳಗೊಂಡಿದೆ; ಒಟ್ಟಾಗಿ, ಅವರು ಯುರೋಪಿನ ಖಂಡದ 45 ದೇಶಗಳಲ್ಲಿನ ಕಥೋಲಿಕ ಧರ್ಮಸಭೆಯನ್ನು ಪ್ರತಿನಿಧಿಸುತ್ತಾರೆ.
ಮಂಡಳಿಯು ಹೊಸ ಸುವಾರ್ತಾ ಪ್ರಚಾರಕ್ಕೆ ಬದ್ಧವಾಗಿದೆ ಮತ್ತು ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲಾ ಧರ್ಮಸಭೆಗಳು ರಚನೆಗಳಿಗೆ ತನ್ನ ಬೆಂಬಲವನ್ನು ನೀಡುತ್ತದೆ.
ಯುರೋಪಿನಲ್ಲಿರುವ ಜನರು ಮತ್ತು ಸಮುದಾಯಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಖಂಡದಾದ್ಯಂತ ಸುವಾರ್ತೆಯ ವಿಶ್ವಾಸ ಮತ್ತು ಸತ್ಯವನ್ನು ಸಾಕ್ಷಿಯಾಗಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳನ್ನು ಇದು ಪ್ರೋತ್ಸಾಹಿಸುತ್ತದೆ. ಇತರ ಅಂತರರಾಷ್ಟ್ರೀಯ ಮತ್ತು ಯುರೋಪಿನ ಸಂಸ್ಥೆಗಳೊಂದಿಗೆ, CCEE ದೇವರ ಪ್ರತಿರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗುರುತಿಸುವ ಕ್ರೈಸ್ತ ಧರ್ಮದ ದೃಷ್ಟಿಕೋನಕ್ಕೆ ಅನುಗುಣವಾಗಿ ಮಾನವ ಹಕ್ಕುಗಳ ಗೌರವವನ್ನು ಉತ್ತೇಜಿಸಲು ವಿವಿಧ ಸಾಮಾಜಿಕ ಮತ್ತು ಧರ್ಮಸಭೆಯ ಕ್ಷೇತ್ರಗಳಲ್ಲಿ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ.