ಯುರೋಪಿನ ಧರ್ಮಾಧ್ಯಕ್ಷರುಗಳು: ಉಕ್ರೇನ್‌ನ ಹೋರಾಟವು 'ಯುರೋಪ್ ಮತ್ತು ಪ್ರಪಂಚದ ಭವಿಷ್ಯಕ್ಕೆ ನಿರ್ಣಾಯಕವಾಗಿರುತ್ತದೆ'
ಕೀಲ್ಸ್ ಗುಸ್ಸಿ
ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಆಯೋಗದ ಅಧ್ಯಕ್ಷತೆಯು ಮಾರ್ಚ್ 4 ರಂದು ಬಿಡುಗಡೆ ಮಾಡಿದ ಹೇಳಿಕೆಯು ಉಕ್ರೇನ್‌ನ ಶಾಂತಿಗಾಗಿ ಹೋರಾಟವು ಯುರೋಪ್ ಮತ್ತು ಪ್ರಪಂಚದ ಭವಿಷ್ಯಕ್ಕೂ ನಿರ್ಣಾಯಕವಾಗಿರುತ್ತದೆ ಎಂದು ಒತ್ತಿಹೇಳುತ್ತದೆ.
ಮೂರು ವರ್ಷಗಳಿಗೂ ಅಧಿಕ ಕಾಲ ರಷ್ಯಾದ ಅಸಮರ್ಥನೀಯ ಪೂರ್ಣ ಪ್ರಮಾಣದ ಆಕ್ರಮಣದಿಂದ ಬಳಲುತ್ತಿರುವ, ಉಕ್ರೇನ್ ಮತ್ತು ಅಲ್ಲಿನ ಜನರಿಗೆ ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ ನಿರಂತರ ಬೆಂಬಲವನ್ನು ಸಂದೇಶವು ಪುನರುಚ್ಚರಿಸುತ್ತದೆ.
ಗಡಿಗಳನ್ನು ಮೀರಿ ವಿಸ್ತರಿಸುವ ಒಂದು ವಿಧಿ
ಆಯೋಗದ ಅಧ್ಯಕ್ಷತೆಯು ಮರಣ ಹೊಂದಿದವರು, ಗಾಯಗೊಂಡವರು ಅಥವಾ ತಮ್ಮ ದೇಶಕ್ಕಾಗಿ ಹೋರಾಡುತ್ತಿರುವವರು ಮತ್ತು ಯುದ್ಧದ ಪರಿಣಾಮವಾಗಿ ಸ್ಥಳಾಂತರಗೊಂಡವರಿಗಾಗಿ ಅವರ ನಿರಂತರ ಪ್ರಾರ್ಥನೆಗಳನ್ನು ಹಂಚಿಕೊಳ್ಳುತ್ತದೆ.
ಕಳೆದ ವರ್ಷಗಳಲ್ಲಿ ಉಕ್ರೇನ್ ಮತ್ತು ಅಲ್ಲಿನ ಜನರಿಗೆ ಅಭೂತಪೂರ್ವ ಮಾನವೀಯ, ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಬೆಂಬಲವನ್ನು ಒದಗಿಸಿದ್ದಕ್ಕಾಗಿ ಯುರೋಪಿನ ಒಕ್ಕೂಟವು ನಿರ್ಧಾರ ತೆಗೆದುಕೊಳ್ಳುವವರಿಗೆ ಹೇಳಿಕೆಯು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ.
ತಮ್ಮ ಭಾವನೆಗಳನ್ನು ಸರಳವಾಗಿ ವಿವರಿಸುವುದಕ್ಕಿಂತ ಹೆಚ್ಚಾಗಿ, ಉಕ್ರೇನ್‌ನ ಭವಿಷ್ಯವು ಅದರ ಗಡಿಗಳನ್ನು ಮೀರಿ ಹೇಗೆ ವಿಸ್ತರಿಸುತ್ತದೆ ಮತ್ತು ಇಡೀ ಪ್ರಪಂಚದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಎತ್ತಿ ತೋರಿಸಲು ಧರ್ಮಾಧ್ಯಕ್ಷರುಗಳು ಈ ಹೇಳಿಕೆಯನ್ನು ಬಳಸುತ್ತಾರೆ.
ಯುದ್ಧದ ಹೊಸ ಅಧ್ಯಾಯ
ಕೆಲವು ದೇಶಗಳ ಭೌಗೋಳಿಕ ರಾಜಕೀಯ ಸಂಕೀರ್ಣತೆಗಳು ಮತ್ತು ಕ್ರಮಗಳ ಅನಿರೀಕ್ಷಿತತೆಯನ್ನು ಗುರುತಿಸಿ, ಧರ್ಮಾಧ್ಯಕ್ಷರುಗಳು ಯುರೋಪಿನ ಒಕ್ಕೂಟವು ಮತ್ತು ಅದರ ಸದಸ್ಯ ರಾಷ್ಟ್ರಗಳಿಗೆ "ಉಕ್ರೇನ್ ಮತ್ತು ಅಲ್ಲಿನ ಜನರನ್ನು ಬೆಂಬಲಿಸುವ ಬದ್ಧತೆಯಲ್ಲಿ ಒಗ್ಗಟ್ಟಿನಿಂದ ಇರಲು ಕರೆ ನೀಡುತ್ತಾರೆ.
ಉಕ್ರೇನಿನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಮೂರನೇ ವರ್ಷದ ವಾರ್ಷಿಕೋತ್ಸವದ ನಂತರ, ಆಯೋಗವು ಈ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಲೇಬಲ್ ಮಾಡಿದೆ ಮತ್ತು ಈ ಸಮಯದಲ್ಲಿ ನಾಗರಿಕರ ವಿರುದ್ಧ ನಡೆದ ಕೃತ್ಯಗಳ ಪರಿಣಾಮವಾಗಿ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಅನುಸರಿಸುವ ಅಗತ್ಯವಿದೆ ಎಂದು ಗಮನಸೆಳೆದಿದೆ.
ಶಾಂತಿ ಹೇಗಿರಬೇಕು
ಈ ಹೊಣೆಗಾರಿಕೆಯು ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ರೂಪದಲ್ಲಿ ಬರುತ್ತದೆ. ಜಾಗತಿಕ ಒಗ್ಗಟ್ಟಿನಿಂದ ಬೆಂಬಲಿತವಾದ ಮಾತುಕತೆಗಳ ಮೂಲಕ ಮತ್ತು ಚರ್ಚೆಗಳಲ್ಲಿ ಉಕ್ರೇನ್ ನನ್ನು ಸೇರಿಸುವ ಮೂಲಕ ಮಾತ್ರ ಇದನ್ನು ಸಾಧಿಸಬಹುದು ಎಂದು ಹೇಳಿಕೆ ವಿವರಿಸುತ್ತದೆ. ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳು ಈ ಆಕ್ರಮಣದ ವಾಸ್ತವತೆಯನ್ನು ವಿರೂಪಗೊಳಿಸುವ ಯಾವುದೇ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸುತ್ತಾರೆ.
ಶಾಂತಿ ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿರಬೇಕು ಮತ್ತು ಉಕ್ರೇನಿನ ಕುಟುಂಬಗಳು ಮತ್ತೆ ಒಂದಾಗಲು ಮತ್ತು ತಮ್ಮ ಸಾರ್ವಭೌಮ ಮತ್ತು ಸ್ವತಂತ್ರ ತಾಯ್ನಾಡಿನಲ್ಲಿ ಘನತೆ, ಭದ್ರತೆ ಹಾಗೂ ಸ್ವಾತಂತ್ರ್ಯದಲ್ಲಿ ಜೀವನವನ್ನು ಜೀವಿಸಲು ಅಗತ್ಯವಾದ ವಾತಾವರಣವನ್ನು ಸೃಷ್ಟಿಸಬೇಕು.
ಧರ್ಮಾಧ್ಯಕ್ಷರುಗಳು "ರಷ್ಯಾ ದೇಶದ ಭಾಷೆಯನ್ನು ಮಾತನಾಡುವ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಒತ್ತಿಹೇಳುತ್ತಾರೆ.ಇದು ಉಕ್ರೇನಿನ ಮೂಲಸೌಕರ್ಯದ ಪುನರ್ನಿರ್ಮಾಣದ ಭಾಗವಾಗಿರಬೇಕು ಮತ್ತು ಆಕ್ರಮಣಕಾರ ರಷ್ಯಾ ಈ ಪ್ರಯತ್ನದಲ್ಲಿ ಸಮರ್ಪಕವಾಗಿ ಭಾಗವಹಿಸಬೇಕು. ಇದು ಅಂತರರಾಷ್ಟ್ರೀಯ ಸಹಕಾರ ಮತ್ತು ಒಗ್ಗಟ್ಟಿನ ಮೂಲಕ ಸೃಷ್ಟಿಯಾದ ಶಾಂತಿಯಾಗಿರಬೇಕು ಎಂದು ಹೇಳುತ್ತಾರೆ.
ಸಕಾಲಿಕ ಮತ್ತು ನ್ಯಾಯಯುತ ರೀತಿಯಲ್ಲಿ ಉಕ್ರೇನನ್ನು ಸದಸ್ಯ ರಾಷ್ಟ್ರವಾಗಿ ಸೇರಿಸುವ ಮೂಲಕ ಮುಂದುವರಿಯಲು ಯುರೋಪಿನ ಒಕ್ಕೂಟವನ್ನು ಪ್ರೋತ್ಸಾಹಿಸಲು ಧರ್ಮಾಧ್ಯಕ್ಷರುಗಳು ಹಿಂಜರಿಯುವುದಿಲ್ಲ. ಯುರೋಪಿನ ಒಕ್ಕೂಟವು ತನ್ನ ನೆರೆಹೊರೆಯವರಿಗೆ ಮತ್ತು ಜಗತ್ತಿಗೆ ಶಾಂತಿ ಹಾಗೂ ಸ್ಥಿರತೆಯ ಆಧಾರವಾಗಿ ಅಥವಾ ಪ್ರವರ್ತಕನಾಗಿ ತನ್ನ ವೃತ್ತಿಯನ್ನು ಮುಂದುವರಿಸುತ್ತದೆ ಎಂದು ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ ಆಯೋಗವು ತನ್ನ ಭರವಸೆಯನ್ನು ವ್ಯಕ್ತಪಡಿಸುತ್ತದೆ.
ಮಾರ್ಚ್ 5ರಂದು ಪ್ರಾರಂಭವಾಗಲಿರುವ ತಪಸ್ಸುಕಾಲಕ್ಕೆ ಕ್ರೈಸ್ತರು ತಯಾರಿ ನಡೆಸುತ್ತಿರುವಾಗ, ಧರ್ಮಾಧ್ಯಕ್ಷರುಗಳು ಶಾಂತಿಯ ರಾಣಿಯಾದ ಮಾತೆಮೇರಿಯ ಮಧ್ಯಸ್ಥಿಕೆಯ ಮೂಲಕ ಉಕ್ರೇನ್ ಮತ್ತು ಯುರೋಪನ್ನು ಯೇಸುವಿಗೆ ಒಪ್ಪಿಸುತ್ತಾರೆ.