MAP

 Copertina ps117 suor Dorothy Stang Copertina ps117 suor Dorothy Stang 

ಸಿಸ್ಟರ್‌ ಡೊರೊಥಿ ಸ್ಟಾಂಗ್: ಸಾವಿನಲ್ಲಿ ಅವರ ʻಜೀವನದ ಬೀಜ' ಬಿತ್ತಿ 20 ವರ್ಷಗಳಾಗಿವೆ

ಬ್ರೆಜಿಲ್‌ನಲ್ಲಿ ಫೆಬ್ರವರಿ 12, 2005 ರಂದು ಸಿಸ್ಟರ್ ಡೊರೊಥಿ ಸ್ಟಾಂಗ್ ರವರು ಹತ್ಯೆಯಾದ ಇಪ್ಪತ್ತು ವರ್ಷಗಳ ನಂತರ, ಅಮೇರಿಕದಲ್ಲಿ ಜನಿಸಿದ ಧರ್ಮಪ್ರಚಾರಕರ ಪರಂಪರೆಯು ಅಮೆಜಾನ್ ಮಳೆಕಾಡಿನ ಭೂಮಿಯಲ್ಲಿ ವಾಸಿಸುವವರ ಹಕ್ಕುಗಳಿಗಾಗಿ, ಸಿಸ್ಟರ್ ಡೊರೊಥಿರವರು ತ್ಯಾಗಮಾಡಿದ ತಮ್ಮ ಜೀವವನ್ನು ನೀಡಿದ ಹಕ್ಕುಗಳಿಗಾಗಿ ಅನೇಕ ಪುಟ್ಟ ಹಿಡುವಳಿದಾರ ರೈತರ ಹೃದಯಗಳಲ್ಲಿ ಶಾಶ್ವತವಾಗಿಯೇ ಉಳಿದಿದೆ.

ಕರೋಲಿ ಕೊಲ್ಲರ್ - ಬ್ರೆಜಿಲ್

ದಶಕಗಳ ಕಾಲ, ಸಿಸ್ಟರ್ ಡೊರೊಥಿ ಸ್ಟಾಂಗ್ ರವರು, SNDdeN, ಅಮೆಜಾನ್ ಪ್ರದೇಶದಲ್ಲಿ ಅರಣ್ಯನಾಶದ ವಿರುದ್ಧ, ಪುಟ್ಟ ಸಮುದಾಯದ ರೈತರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದರು.

ಇದರ ಪರಿಣಾಮವಾಗಿ ನೊಟ್ರೆ ಡೇಮ್ ದೇ ನಮೂರ್ ರವರ ಸಭೆಯ ಸಹೋದರಿಯು ಸಂಘರ್ಷದ ಗುಂಡಿನ ಚಕಮಕಿಯಲ್ಲಿ ಸಿಲುಕಿಕೊಂಡರು ಮತ್ತು ಅವರ ಹಿತಾಸಕ್ತಿಗೆ ಪದೇ ಪದೇ ಬೆದರಿಕೆ ಹಾಕಲ್ಪಟ್ಟರು. ಫೆಬ್ರವರಿ 12, 2005 ರಂದು ಕೊಲೆಗಾರನಿಂದ ಕೊಲ್ಲಲ್ಪಟ್ಟಾಗ ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ಕೈಯಲ್ಲಿ ಬೈಬಲ್‌ ಹಿಡಿದುಕೊಂಡು ನಿಧನರಾದರು.

ಸಿಸ್ಟರ್‌ ಡೊರೊಥಿಯವರ ಜೇಬುಗಳು ಯಾವಾಗಲೂ ಬೀಜಗಳಿಂದ ತುಂಬಿರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ, ನಾನು ಎಲ್ಲಿಗೆ ಹೋದರೂ, ಜನರು ಹೇಳುವುದನ್ನು ನಾನು ಕೇಳಿಸಿಕೊಳ್ಳುತ್ತೇನೆ: ʻನಾನು ಈ ಕೋಕೋ ಸಸ್ಯವನ್ನು ಸಿಸ್ಟರ್‌ ಡೊರೊಥಿಯಿಂದ ಪಡೆದುಕೊಂಡೆ.' ಇದು ಸಿಸ್ಟರ್‌ ಡೊರೊಥಿಯವರ ಅಂಗೈ. ಬಡವರು ಅವರನ್ನು ತಮ್ಮ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ ಎಂದು ಅಮೆಜಾನ್ ಪ್ರದೇಶದಲ್ಲಿ ಸಿಸ್ಟರ್‌ ಡೊರೊಥಿ ಸ್ಟಾಂಗ್ ರವರ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಮತ್ತು 84ನೇ ವಯಸ್ಸಿನಲ್ಲಿಯೂ ಆಕೆಯ ಕಾರ್ಯಗಳನ್ನು ಮುಂದುವರಿಸಿದ ಸಿಸ್ಟರ್ ಜೇನ್ ಡ್ವೈಯರ್ ರವರು ಹೇಳಿದ್ದಾರೆ.

ಬೀಜಗಳಿಂದ ತುಂಬಿದ ಜೇಬುಗಳು
SNDdeN ಸಭೆಯ ಸಹೋದರಿಯಾಗಿರುವ ಸಿಸ್ಟರ್ ಕಾಟಿಯಾ ವೆಬ್‌ಸ್ಟರ್ ರವರ ಜೇಬುಗಳಲ್ಲಿಯೂ ಬೀಜಗಳಿವೆ.

ಜನರ ಮೇಲಿನ ಪ್ರೀತಿಯ ಜೊತೆಗೆ, ಪ್ರಕೃತಿಯ ಮೇಲಿನ ಪ್ರೀತಿ ಸಿಸ್ಟರ್ ಡೊರೊಥಿಯವರ ಜೀವನದಲ್ಲಿ ನಿರಂತರವಾಗಿತ್ತು.

ಪ್ರಕೃತಿಯನ್ನು ರಕ್ಷಿಸುವುದು ಮತ್ತು ಎಲ್ಲಾ ಜೀವಿಗಳೊಂದಿಗೆ ಸಂಪರ್ಕ ಸಾಧಿಸುವುದು ಅವರ ಆಧ್ಯಾತ್ಮಿಕತೆಯ ಕೇಂದ್ರಬಿಂದುವಾಗಿತ್ತು ಎಂದು ಸಿಸ್ಟರ್‌ ಕಾಟಿಯಾರವರು ಹೇಳಿದರು. ನಾವು ಈ ಭೂಮಿಯನ್ನು ಉಳುಮೆ ಮಾಡಿದಾಗ, ಬೆಳೆಯ ಫಸಲು ಮೊದಲಿಗಿಂತ ಸಮೃದ್ಧವಾಗಿರಬೇಕು. ನಾವು ಜೀವನದ ಮಾಲೀಕರಲ್ಲ.

ಸಿಸ್ಟರ್ ಡೊರೊಥಿರವರು 1966ರಲ್ಲಿ 35 ವರ್ಷದವರಾಗಿದ್ದಾಗ ಜನರು ಮತ್ತು ಪ್ರಕೃತಿಗೆ ಸೇವೆ ಸಲ್ಲಿಸಲು ಬ್ರೆಜಿಲ್‌ಗೆ ಬಂದರು. ಮೊದಲಿಗೆ, ಅಮೇರಿಕದಲ್ಲಿ ಜನಿಸಿದ ಸಹೋದರಿ ಅಮೆಜಾನ್ ಜಲಾನಯನ ಪ್ರದೇಶದ ಹೊರವಲಯದಲ್ಲಿರುವ ಒಂದು ಪುಟ್ಟ ನಗರದಲ್ಲಿ ಕೆಲಸ ಮಾಡುತ್ತಿದ್ದರು.

ಹತ್ತು ವರ್ಷಗಳ ತೀರ್ಥಯಾತ್ರೆ
ಸಿಸ್ಟರ್‌ ಕಾಟಿಯಾರವರು ನೆನಪಿಸಿಕೊಳ್ಳುತ್ತಾರೆ, ಭೂಮಿ ಇಲ್ಲದ ರೈತರಿಗೆ ಅವರು ಗ್ರಾಮಾಂತರದಲ್ಲಿ ಕೃಷಿ ಭೂಮಿಯನ್ನು ಸಿದ್ಧಪಡಿಸಿದರು. ಮಿಲಿಟರಿ ಸರ್ವಾಧಿಕಾರವು ಭೂಮಿಯ ಭರವಸೆಗಳೊಂದಿಗೆ ಲಕ್ಷಾಂತರ ಜನರನ್ನು ಮಳೆಕಾಡಿನ ಕಲುಷಿತವಲ್ಲದ ಪ್ರದೇಶಗಳಿಗೆ ಆಕರ್ಷಿಸಿದಾಗ, ಸಿಸ್ಟರ್‌ ಡೊರೊಥಿರವರು ವಲಸೆ ಕಾರ್ಮಿಕರನ್ನು ಈ ಕ್ರಮವನ್ನು ಅನುಸರಿಸಲು ನಿರ್ಧರಿಸಿದರು.

ಈ ವಲಸೆಯ ಜೀವನವು 10 ವರ್ಷಗಳ ಕಾಲ ನಡೆದು 1982ರಲ್ಲಿ ರಿಯೊ ಕ್ಸಿಂಗುವಿನಿಂದ ಸ್ವಲ್ಪ ದೂರದಲ್ಲಿರುವ ಅನಪು ಎಂಬ ಪುಟ್ಟ ವಸಾಹತು ಪ್ರದೇಶದಲ್ಲಿ ಕೊನೆಗೊಂಡಿತು. ದೊಡ್ಡ ಯೋಜನೆಗಳಲ್ಲಿ ಕೆಲಸ ಮುಗಿಸಿದ ನಂತರ ಸರ್ಕಾರವು ಕೈಬಿಟ್ಟಿದ್ದ ಕಾರ್ಮಿಕರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಸಿಸ್ಟರ್ ಡೊರೊಥಿರವರು ಮೊದಲಿಗೆ ತುಂಬಾ ಬಡ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ʻಬಡವರ ನಡುವೆ ಬಡವರೊಂದಿಗೆ ಬದುಕುವುದುʼ: ಇದು ನಮ್ಮ ಸಭೆಯ ವರ್ಚಸ್ಸು(Charism) ಎಂದು ಸಿಸ್ಟರ್ ಡ್ವೈಯರ್ ರವರು ಹೇಳಿದರು.

ತನ್ನ ಧಾರ್ಮಿಕ ಸಹೋದರಿಯರೊಂದಿಗೆ, ಸಿಸ್ಟರ್ ಡೊರೊಥಿರವರು ಅನಪುದಲ್ಲಿ ಒಂದು ಸಣ್ಣ ಮಿಷನ್ ಸ್ಟೇಷನ್ ಅನ್ನು ಸ್ಥಾಪಿಸಿದರು ಮತ್ತು ಸರ್ಕಾರವು ಅವರಿಗೆ ಭರವಸೆ ನೀಡಿದ ಎಲ್ಲವನ್ನೂ ಕೇಳುವಲ್ಲಿ ಜನರಿಗೆ ಬೆಂಬಲ ನೀಡಿದರು: ಶಾಲೆಗಳು, ಆರೋಗ್ಯ ನೆರವು ಮತ್ತು ಕೃಷಿ ಮಾಡಲು ಭೂಮಿ.

ದೊಡ್ಡ ಭೂಮಾಲೀಕರು
ಸಿಸ್ಟರ್ ಡೊರೊಥಿರವರಿಂದ ಪ್ರೇರಿತರಾಗಿ, ಕುಟುಂಬಗಳು ಸಾವಯವ ಕೃಷಿಯನ್ನು ಅಭ್ಯಾಸ ಮಾಡಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದವು. ಅಕ್ರಮ ಅರಣ್ಯನಾಶವನ್ನು ತಡೆಗಟ್ಟಲು ಇಡೀ ಪ್ರದೇಶವನ್ನು ನೈಸರ್ಗಿಕ ಮೀಸಲು ಪ್ರದೇಶವೆಂದು ಘೋಷಿಸಬೇಕಾಯಿತು. ಈ ಕ್ರಮವು 2004ರಲ್ಲಿ ರಾಜ್ಯ ಮಾನ್ಯತೆ ನೀಡಲಾಯಿತು, ಇದು ತುಂಬಾ ಸಂತೋಷ ತಂದಿತು. ಆದಾಗ್ಯೂ, ಈ ಕ್ರಮವು ಪರಿಸ್ಥಿತಿಯ ಉಲ್ಬಣಕ್ಕೂ ಸಹ ಕಾರಣವಾಯಿತು.

ದೊಡ್ಡ ಭೂಮಾಲೀಕರು ಸೋಲಲು ನಿರಾಕರಿಸುತ್ತಾರೆ. ಅವರು ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಡೊರೊಥಿಯವರನ್ನು ಕೊಲ್ಲುವ ಮೂಲಕ ಜನರು ಓಡಿಹೋಗುತ್ತಾರೆ ಎಂದು ಅವರು ಭಾವಿಸಿದ್ದರು ಎಂದು ಸಿಸ್ಟರ್ ಡ್ವೈಯರ್ ರವರು ಹೇಳಿದರು.

ಫೆಬ್ರವರಿ 12, 2025 ರಂದು, ಡೊರೊಥಿ ಸ್ಟ್ಯಾಂಡ್ ರವರು ಹೊಸ ವಸಾಹತು ಪ್ರದೇಶಕ್ಕೆ ಹೋಗುತ್ತಿದ್ದಾಗ ಹಲವಾರು ಬಂದೂಕುಧಾರಿಗಳು ಅವರನ್ನು ತಡೆದರು. ಅವರನ್ನು ಗುಂಡಿಕ್ಕಿ ಕೊಂದು ಹಾಕಿದರು.

ಒಬ್ಬ ಪ್ರತ್ಯಕ್ಷದರ್ಶಿಯ ಪ್ರಕಾರ, ಸಿಸ್ಟರ್ ಡೊರೊಥಿರವರು ತನ್ನ ಕೊಲೆಗಾರರಿಗೆ ʻಬೆಟ್ಟದ ಮೇಲಿನ ಬೋಧನೆʼಯ ವಾಕ್ಯಗಳ ಒಂದು ಭಾಗವನ್ನು ಮೊದಲು ಓದಿದರು: "ನೀತಿಯ ನಿಮಿತ್ತ ಹಿಂಸೆಗೊಳಗಾಗುವವರು ಧನ್ಯರು, ಏಕೆಂದರೆ ಸ್ವರ್ಗಸಾಮ್ರಾಜ್ಯವು ಅವರದು."

ಬೆಳಗಿನ ಜಾವದಲ್ಲಿ ಸಾವು
ಡೊರೊಥಿರವರು ಬೆಳಿಗ್ಗೆ ನಿಧನರಾದರು, ಎಂದು ಸಿಸ್ಟರ್ ಡ್ವೈಯರ್ ರವರು ಹೇಳಿದರು. ಆದರೆ, ಪೊಲೀಸರು ಸಂಜೆಯ ಹೊತ್ತಿಗೆ ಮಾತ್ರ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಬಂದರು. ಆ ಸಮಯದಲ್ಲಿ, ಜನರು ಆಕೆಯನ್ನು ಒಂಟಿಯಾಗಿ ಬಿಡಲಿಲ್ಲ: ಉಷ್ಣವಲಯದ ಮಳೆಯಿಂದ ನೆನೆದು ಪೊದೆಗಳಲ್ಲಿ ಅಡಗಿಕೊಂಡು, ಆಕೆಯನ್ನು ಕಾವಲು ಕಾಯುತ್ತಿದ್ದರು. ಯಾರೂ ಓಡಿಹೋಗಲಿಲ್ಲ.

ಅಂತ್ಯಕ್ರಿಯೆಯ ನಂತರ ಜನರು, ನಾವು ಡೊರೊಥಿಯವರನ್ನು ಸಮಾಧಿ ಮಾಡುತ್ತಿಲ್ಲ. ನಾವು ಅವರನ್ನು ನೆಡುತ್ತಿದ್ದೇವೆ ಎಂದು ಹೇಳಿದರು. ಇಪ್ಪತ್ತು ವರ್ಷಗಳ ನಂತರ, ಬೀಜ ಮೊಳಕೆಯೊಡೆದಿದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ವಾಸಿಸುವ ಕುಟುಂಬಗಳು ಇನ್ನೂ ಅನೇಕ ವಸಾಹತುಗಳಿವೆ. ಆದರೆ ಹೋರಾಟ ಮುಂದುವರೆದಿದೆ.

ಭೂಮಿಯ ಕೊನೆಯ ಆಕ್ರಮಣವು ಕಷ್ಟಕರವಾಗಿತ್ತು: ಮನೆಗಳಿಗೆ ಬೆಂಕಿ ಹಚ್ಚಲಾಯಿತು, ಶಾಲೆಯನ್ನು ನಾಶಪಡಿಸಲಾಯಿತು. ರಾತ್ರಿಯಲ್ಲಿ ಗುಂಡಿನ ಚಕಮಕಿ ನಡೆಯಿತು. ಆಕ್ರಮಣ ಕೊನೆಗೊಂಡಾಗ, ನಿವಾಸಿಗಳು ತಮ್ಮ ವಸಾಹತುವನ್ನು 'ಡೊರೊಥಿ ಸ್ಟ್ಯಾಂಗ್' ರವರು ಎಂದು ಕರೆಯಲು ನಿರ್ಧರಿಸಿದರು. ಸಿಸ್ಟರ್‌ ಡೊರೊಥಿರವರು ಅವರಿಗೆ ಭರವಸೆ ನೀಡುತ್ತಾರೆ ಎಂದು ಅವರು ಹೇಳುತ್ತಾರೆ," ಎಂದು ಸಿಸ್ಟರ್ ಡ್ವೈಯರ್ ರವರು ಹೇಳಿದರು."ಇಲ್ಲಿನ ಜನರು ಅವರನ್ನು ಎಂದಿಗೂ ಮರೆಯುವುದಿಲ್ಲ ಏಕೆಂದರೆ ಆಕೆಯು ಅವರಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದರು.

ಸಿಸ್ಟರ್ ಡೊರೊಥಿಯ ಕೊಲೆಗಾರರು ಮತ್ತು ಅವರ ಕಕ್ಷಿದಾರರನ್ನು ಬಂಧಿಸಿ ಆರೋಪ ಹೊರಿಸಲಾಯಿತು, ಆದರೆ ಸ್ವಲ್ಪ ಸಮಯದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಆಕೆಯ ಹಿಂಸಾತ್ಮಕ ಹತ್ಯೆಯ ನಂತರ, ಅನಪುದಲ್ಲಿ ಮಾತ್ರ ಭೂಮಿಯ ಕಾರಣದಿಂದಾಗಿ 19 ಕೊಲೆಗಳು ನಡೆದಿವೆ. ಆಕೆಯ ಪ್ರಕರಣವನ್ನು ಎಂದಿಗೂ ಹೆಚ್ಚಿನ ತನಿಖೆ ನಡೆಸಲಾಗಿಲ್ಲ.
 

03 ಮಾರ್ಚ್ 2025, 13:50