ಉತ್ತರ ಥೈಲ್ಯಾಂಡ್‌ನಲ್ಲಿ ಮರೆತುಹೋದ ಹಳ್ಳಿಗಳಿಗೆ ಧರ್ಮಸಭೆಯ ಭರವಸೆಯ ಧ್ಯೇಯ
ಕಮೋಲ್ತಿಪ್ ವೊಂಗ್ಲೀಥನಾಪೋರ್ನ್, ಲಿಕಾಸ್ ಸುದ್ಧಿ
ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲದಿದ್ದರೆ ನೀವು ಏನು ಮಾಡುತ್ತೀರಿ?
ಒಂದು ದೂರದ ಪರ್ವತ ಹಳ್ಳಿಯನ್ನು ಕಲ್ಪಿಸಿಕೊಳ್ಳಿ, ಅಲ್ಲಿ ಮನೆಗಳು ಒಂದು ಬೆಟ್ಟದ ಉದ್ದಕ್ಕೂ ಹರಡಿಕೊಂಡಿವೆ, ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕವಾಗಿವೆ. ಅಲ್ಲಿ ಡಾಂಬರು ರಸ್ತೆಗಳಿಲ್ಲ, ವಿದ್ಯುತ್ ಇಲ್ಲ. ಮೂಲಭೂತ ಅವಶ್ಯಕತೆಗಳನ್ನು ಖರೀದಿಸಲು ಒಂದು ಸಣ್ಣ ಅಂಗಡಿಯೂ ಇಲ್ಲ ಮತ್ತು ಮುಖ್ಯವಾಗಿ ಆಸ್ಪತ್ರೆಗಳಿಲ್ಲ.
ಒಂದು ರಾತ್ರಿ, ನೋವು ಮತ್ತು ಹಸಿವಿನಿಂದ ತುಂಬಿದ ತಂಪಾದ ಗಾಳಿಯನ್ನು ಮಗುವಿನ ಅಳು ಚುಚ್ಚಿತು. ಗ್ರಾಮಸ್ಥರು ಈ ಅಳನ್ನು ಕೇಳಿಸಿಕೊಂಡರು. ಆ ಅಳುವಿನ ಹಿಂದಿನ ನೋವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ, ಆದರೆ ಅವರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಅವರು ಸೂರ್ಯೋದಯಕ್ಕಾಗಿ ಕಾಯುತ್ತಾರೆ, ಬೆಳಗಿನ ಹೊತ್ತಿಗೆ ಯಾರಾದರೂ ನಮ್ಮ ಸಹಾಯಕ್ಕೆ ಬರಬಹುದು ಎಂದು ಆಶಿಸುತ್ತಾ - ಕೇವಲ ಆಶಿಸುತ್ತಾ ಸೂರ್ಯೋದಯಕ್ಕಾಗಿ ಕಾಯುತ್ತಿರುತ್ತಾರೆ.
ಇದು ಭೌತಿಕ ಬಡತನದ ಕಥೆಯಲ್ಲ, ಬದಲಾಗಿ ಅದಕ್ಕಿಂತಲೂ ಕ್ರೂರವಾದ, ಅವಕಾಶದ ಕೊರತೆಯ ಕಥೆ. ವೈದ್ಯಕೀಯ ಆರೈಕೆಗೆ ಸೌಕರ್ಯವಿಲ್ಲ, ಸೌಕರ್ಯವಿಲ್ಲದ ಕಾರಣ ವೈದ್ಯಕೀಯ ಆರೈಕೆಯ ಲಭ್ಯತೆಗೆ ಆಸ್ಪದವಿಲ್ಲ. ಒಂದು ಉತ್ತಮ ಜೀವನಕ್ಕೆ ಅವಕಾಶವಿಲ್ಲ. ಏನಾದರೂ ತಪ್ಪಾದಾಗ ಸುರಕ್ಷತಾ ಸಂಪರ್ಕವಿಲ್ಲ.
ಆದರೆ ಈ ಮರೆತುಹೋದ ಸ್ಥಳಗಳತ್ತಾ ನಡೆಯಲು ಆಯ್ಕೆ ಮಾಡುವ ಕೆಲವರು ಇದ್ದಾರೆ, ಭರವಸೆ ಇಲ್ಲದ ಸ್ಥಳದಲ್ಲಿ ಭರವಸೆಯನ್ನು ತರಲು ಕೆಲವರು ಇದ್ದಾರೆ.
ಭರವಸೆಯ ಪ್ರಯಾಣ
ಅರ್ಧ ಶತಮಾನದ ಹಿಂದೆ, ಬೆತಾರಾಮ್ ಸಭೆಯ ಲೂಸಿಯನ್ ಲಾಕೋಸ್ಟ್ ಎಂಬ ಕಥೋಲಿಕ ಧರ್ಮಾಧ್ಯಕ್ಷರಾದ, ಥಾಯ್ ನ ಯುವ ಯಾಜಕ, ಸ್ಥಳೀಯ ಧರ್ಮಕ್ಷೇತ್ರದ ಧರ್ಮಗುರುವಾದ ನಿಫೋಟ್ ಥಿಯೆನ್ವಿಹಾನ್ ರವರನ್ನು ತಮ್ಮೊಂದಿಗೆ ಮತ್ತು ಇತರ ಬೆತಾರಾಮ್ ಗುರುಗಳೊಂದಿಗೆ ಉತ್ತರ ಥೈಲ್ಯಾಂಡ್‌ನ ಆಳವಾದ ಪರ್ವತಗಳಿಗೆ ಪ್ರಯಾಣಿಸಲು ಕೇಳಿಕೊಂಡರು. ಅವರ ಸೇವಾಕಾರ್ಯದ ಗಮ್ಯಸ್ಥಾನವು ಮೇ ಸರಿಯಾಂಗ್ ಆಗಿತ್ತು, ಆ ಸಮಯದಲ್ಲಿ ಅದು ತುಂಬಾ ದೂರದ ಹಳ್ಳಿಯಾಗಿದ್ದು, ಕೆಲವು ನಗರವಾಸಿಗಳು ಅದರ ಹೆಸರನ್ನೂ ಸಹ ಕೇಳಿರಲಿಲ್ಲ.
ಪ್ರಯಾಣವು ತುಂಬಾ ಕಷ್ಟಕರವಾಗಿತ್ತು. ಬೆಟ್ಟಗಳು ಮತ್ತು ಕಣಿವೆಗಳ ಮೂಲಕ ಅಂತ್ಯವಿಲ್ಲದೆ ಮಣ್ಣಿನ ಹಾದಿಗಳು ಸುತ್ತುತ್ತಿದ್ದವು, ಜನರು ಸರಳ ಜೀವನವನ್ನು ನಡೆಸುವ, ತಮ್ಮದೇ ಆದ ಆಹಾರವನ್ನು ಬೆಳೆಯುವ, ತಮ್ಮ ಕುಟುಂಬಗಳನ್ನು ಶಾಂತ ಸ್ಥಿತಿಸ್ಥಾಪಕತ್ವದಿಂದ ಬೆಳೆಸುವ ಹಳ್ಳಿಗಳಿಗೆ ಕರೆದೊಯ್ಯುತ್ತಿದ್ದವು. ಯಾಜಕರು ತಮ್ಮ ವಿಶ್ವಾಸವನ್ನು ಪಸರಿಸಲು ಪ್ರವಾಸಿಗರು ಅಥವಾ ಧರ್ಮಪ್ರಚಾರಕರಾಗಿ ಬಂದಿರಲಿಲ್ಲ. ಅವರು ಅಲ್ಲಿನ ಸೌಖ್ಯದಾಯಕರಾಗಿ, ಸ್ನೇಹಿತರಾಗಿ, ಬೇರೆ ದಾರಿಯಿಲ್ಲದವರಿಗೆ ಜೀವಸೆಲೆಗಳಾಗಿ ಬಂದರು.
ಅದೊಂದು ದಿನ, ಒಂದು ರಾತ್ರಿ, ಮೇ ಪಾಂಗ್ ಎಂಬ ಹಳ್ಳಿಯಲ್ಲಿ, ಮಗುವಿನ ಅಳು ಮತ್ತೆ ಮೌನವನ್ನು ಮುರಿಯಿತು.
ಹಸಿವಿನ ಸದ್ದು
ಮರುದಿನ ಬೆಳಿಗ್ಗೆ ಮತ್ತೊಬ್ಬ ಬೆತಾರಾಮ್ ಧರ್ಮಗುರು ಪಿಯೆಟ್ರೋ, ಧರ್ಮಗುರು ನಿಫೊಟ್ ರವರ ಕಡೆಗೆ ತಿರುಗಿದರು.
ನಿನ್ನೆ ರಾತ್ರಿ ಮಗು ಅಳುತ್ತಿರುವುದನ್ನು ನೀವು ಕೇಳಿಸಿಕೊಂಡಿರಾ? ಎಂದು ಅವರು ಕೇಳಿದರು.
ಅವರ ಆ ಪ್ರಶ್ನೆಗೆ "ಹೌದು," ಎಂದು ಧರ್ಮಗುರು ನಿಫೊಟ್ ರವರು ಉತ್ತರಿಸಿದರು.
ಅವನು ಏಕೆ ಅಳುತ್ತಿದ್ದಾನೆಂದು ನಿಮಗೆ ತಿಳಿದಿದೆಯೇ?
ಅದಕ್ಕೆ ಧರ್ಮಗುರು ಪಿಯೆಟ್ರೋ ದುಃಖದಿಂದ ಭಾರವಾದ ಮುಖದೊಂದಿಗೆ ವಿರಾಮಗೊಳಿಸಿದರು.
ಅವನು ಹಸಿವಿನಿಂದ ಅಳುತ್ತಿದ್ದನು. ಅವನು ನಿನ್ನೆಯಿಂದ ಊಟ ಮಾಡಿಲ್ಲ ಅದಕ್ಕೆ ಅಳುತ್ತಿದ್ದಾನೆಂದು ಎಂದು ಹೇಳಿದರು.
ಧರ್ಮಗುರು ನಿಫೊಟ್ ರವರು ಮೌನವಾದರು. ಆ ಮಾತುಗಳ ಭಾರ ಅವರ ಎದೆಯಲ್ಲಿ ಆಳವಾಗಿ ನೆಲೆಗೊಂಡಿತು. ಕೆಲವರು ಎರಡನೇ ಯೋಚನೆ ಮಾಡದೆ ಆಹಾರವನ್ನು ಎಸೆಯುವ ಈ ಜಗತ್ತಿನಲ್ಲಿ, ಇಲ್ಲೊಂದು ಮಗು ಅಳುತ್ತಾ ಇದೆ, ಉಪವಾಸದಿಂದ ಅದಕ್ಕೆ ಕಾರಣ ಯುದ್ಧ ಅಲ್ಲ, ವಿಪತ್ತು ಅಲ್ಲ, ಆದರೆ ಸುತ್ತಾಡಿದರೂ ಸಾಕಾಗುವಷ್ಟು ಆಹಾರ ಸಿಗದೆ ಇರುವ ಕಾರಣ ಹಸಿವಿನಿಂದ ಬಳಲುತ್ತಿತ್ತು.
ಇಲ್ಲಿ ಬಡತನ ಕೇವಲ ಹಣದ ವಿಷಯವಾಗಿರಲಿಲ್ಲ. ಅದು ಆಯ್ಕೆಯ ಅನುಪಸ್ಥಿತಿಯ ಬಗ್ಗೆ ಹೇಳುತ್ತದೆ. ಇಲ್ಲಿ ಅಂಗಡಿಗಳಿಲ್ಲ. ಆಹಾರ ಸಾಮಗ್ರಿಗಳಿಲ್ಲ. ಹೊರಗಿನ ಸಹಾಯವಿಲ್ಲ. ತಮ್ಮ ಮಗು ಹಸಿವಿನಿಂದಾದರೂ ನಿದ್ರಿಸಬಹುದೆಂದು ಆಶಿಸುವ ಕುಟುಂಬಗಳಿವೆ.
ಸಮಯದ ವಿರುದ್ಧದ ಓಟ
ಮರುದಿನ, ಅವರು ಮತ್ತೊಂದು ದೂರದ ಹಳ್ಳಿಯಾದ ಮಾ ಲಾ ನೋಯ್‌ಗೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅಲ್ಲಿ, ಹತಾಶ ವ್ಯಕ್ತಿಯೊಬ್ಬರು ಅವರ ಬಳಿಗೆ ಬಂದರು.
ಅವರು ಕೇವಲ ಭರವಸೆಯನ್ನು ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರ 12 ವರ್ಷದ ಸೊಸೆಯನ್ನು ಹೊತ್ತುಕೊಂಡು ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ್ದರು.
ಹಳ್ಳಿಗರ ನಡುವೆ ವರ್ಷಗಳ ಕಾಲ ವಾಸಿಸುತ್ತಿದ್ದ ಧರ್ಮಗುರು ಪಿಯೆಟ್ರೊಗೆ ತಕ್ಷಣ ಅರ್ಥವಾಯಿತು.
"ಆಕೆಗೆ ಪರಾವಲಂಬಿಗಳಿವೆ," ಅವರು ಹೇಳಿದರು. ಇದಕ್ಕೆ ಪರಿಹಾರ ಸರಳವಾಗಿತ್ತು, 40 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಆಸ್ಪತ್ರೆಗೆ ಪ್ರವಾಸ. ಆದರೆ ಈ ಕುಟುಂಬಕ್ಕೆ, 40 ಕಿಲೋಮೀಟರ್‌ಗಳು ಸಾವಿರ ಕಿಲೋಮೀಟರ್‌ಗಳಿಗೆ ಸಮವಾಗಿತ್ತು. ಅಲ್ಲಿಗೆ ಹೋಗಲು ಅವರಿಗೆ ಯಾವುದೇ ಮಾರ್ಗವಿರಲಿಲ್ಲ.
ಧರ್ಮಗುರುವಾದ ನಿಫೊಟ್ ರವರು ಅವರನ್ನು ಅಲ್ಲಿಗೆ ಕರೆದೊಯ್ಯಲು ಹಿಂಜರಿಯಲಿಲ್ಲ. ಅವರು ತಾಯಿ ಮತ್ತು ಮಗಳನ್ನು ಮೋಟಾರ್ ಸೈಕಲ್ ನ ಸಹಾಯದಿಂದ ಅಲ್ಲಿಗೆ ಕರೆದುಕೊಂಡು ಹೋದರು. ಕಡಿದಾದ ಹಾದಿಗಳಲ್ಲಿ ಅದು ದೀರ್ಘ, ಏರುಪೇರುಗಳಿಂದ ಕೂಡಿದ ಪ್ರಯಾಣವಾಗಿತ್ತು. ಕೊನೆಗೂ ಅವರು ಆಸ್ಪತ್ರೆಯನ್ನು ತಲುಪಿದಾಗ, ವೈದ್ಯರು ಅವಳಿಗೆ ಔಷಧಿ ನೀಡಿದರು. ಕೆಲವೇ ಗಂಟೆಗಳಲ್ಲಿ, ಅವಳಿಗೆ ನೋವು ಕಡಿಮೆಯಾಯಿತು.
ಅವಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರಲಿಲ್ಲ. ದುಬಾರಿ ಚಿಕಿತ್ಸೆಯ ಅಗತ್ಯವಿರಲಿಲ್ಲ. ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಯಾರಾದರೂ ಬೇಕಾಗಿದ್ದರು.
ಧರ್ಮಗುರು ನಿಫೊಟ್ ರವರು ಮತ್ತು ಅವರ ಸಹ ಗುರುಗಳಿಗೆ, ಇದು ಅಸಾಧಾರಣವಾದ ಕಾರ್ಯವಾಗಿರಲಿಲ್ಲ. ಇದು ಅವರ ದೈನಂದಿನ ವಾಸ್ತವವಾಗಿತ್ತು, ಅಂತ್ಯವಿಲ್ಲದ ಮೈಲುಗಳು, ಅಂತ್ಯವಿಲ್ಲದ ಅಗತ್ಯ ಮತ್ತು ಒಂದೇ ಒಂದು ದಯೆಯ ಕ್ರಿಯೆಯು ಇತರರ ಜೀವನವನ್ನು ಬದಲಾಯಿಸಬಹುದು ಎಂಬ ಅಚಲ ವಿಶ್ವಾಸ ಅವರದಾಗಿತ್ತು.