ಐರ್ಲೆಂಡ್ ಮತ್ತು ಪೋಲೆಂಡ್‌ನ ಧರ್ಮಸಭೆಗಳು ದೌರ್ಜನ್ಯಕ್ಕೊಳಗಾದವರು ಮತ್ತು ಬದುಕುಳಿದವರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತವೆ
ವ್ಯಾಟಿಕನ್ ಸುದ್ದಿ
2016ರಲ್ಲಿ, ವ್ಯಾಟಿಕನ್‌ನ ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ವಿಶ್ವಗುರುಗಳ ಆಯೋಗವು ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು ಮತ್ತು ಸಂತ್ರಸ್ತರುಗಳಿಗಾಗಿ ಸಾರ್ವತ್ರಿಕ ಪ್ರಾರ್ಥನಾ ದಿನವನ್ನು ಸ್ಥಾಪಿಸಿತು. ಅದರ ರಚನೆಯನ್ನು ಘೋಷಿಸುವ ಪತ್ರಿಕಾ ಪ್ರಕಟಣೆಯಲ್ಲಿ, ಆಯೋಗವು "ಯಾಜಕ ವರ್ಗಗಳ ಮಕ್ಕಳ ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು ಪ್ರಾರ್ಥನಾ ದಿನದ ಪ್ರಸ್ತಾಪವನ್ನು ಮಾಡಿದರು" ಎಂದು ವಿವರಿಸಿದೆ.
ಐರ್ಲೆಂಡ್‌ನಲ್ಲಿ ಬೆಳಗಿಸಬೇಕಾದ ಮೇಣದಬತ್ತಿಗಳು
2017ರಿಂದ, ಐರ್ಲೆಂಡ್‌ನ ಧರ್ಮಕ್ಷೇತ್ರಗಳು ಈ ಪ್ರಾರ್ಥನಾ ದಿನವನ್ನು ಆಚರಿಸುತ್ತಿವೆ. ಈ ವರ್ಷ, ದೇಶಾದ್ಯಂತದ ಧರ್ಮಕೇಂದ್ರಗಳು "ಪ್ರಾಯಶ್ಚಿತ್ತ, ಪಶ್ಚಾತ್ತಾಪ ಮತ್ತು ಕತ್ತಲೆಯ ನಡುವೆ ಭರವಸೆಯ ಬೆಳಕಿನ" ಮಹತ್ವವನ್ನು ನೆನಪಿಸಲು ಆಶೀರ್ವದಿಸಿದ ಮೇಣದಬತ್ತಿಗಳನ್ನು ಬೆಳಗಿಸುತ್ತವೆ. ಈ "ಪ್ರಾಯಶ್ಚಿತ್ತದ ಮೇಣದಬತ್ತಿಗಳನ್ನು" ಐರ್ಲೆಂಡ್‌ನಾದ್ಯಂತ ಪ್ರಧಾನಾಲಯಗಳಲ್ಲಿ ಮತ್ತು ದೇವಾಲಯಗಳಲ್ಲಿ ಇರಿಸಲಾಗುತ್ತದೆ.
ಪ್ರಾಯಶ್ಚಿತ್ತದ ಮೇಣದಬತ್ತಿಗಳ ಸಂಪ್ರದಾಯವು 2018ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರ 9ನೇ ವಿಶ್ವ ಕುಟುಂಬಗಳ ಸಭೆಯ ಸಮಯದಲ್ಲಿ ಡಬ್ಲಿನ್‌ಗೆ ಭೇಟಿ ನೀಡಿದ ಸಮಯದಿಂದ ಹುಟ್ಟಿಕೊಂಡಿದೆ. ದಿವ್ಯಬಲಿಪೂಜೆಯ ಮುಕ್ತಾಯದ ಸಮಯದಲ್ಲಿ, ಅವರು ನಿಂದನೆಯ ಅಪರಾಧಗಳಿಗಾಗಿ ದೇವರ ಕರುಣೆಯನ್ನು ಬೇಡಿಕೊಂಡರು ಮತ್ತು ಧರ್ಮಸಭೆಯ ಪರವಾಗಿ ಕ್ಷಮೆಯನ್ನು ಕೇಳಿದರು.
ಪೋಲೆಂಡ್‌ನಲ್ಲಿನ ಧರ್ಮಸಭೆಗಳು ಭರವಸೆಯ ಸಭೆಯ ಸ್ಥಳಗಳಾಗಿವೆ
ಪೋಲೆಂಡ್‌ನಲ್ಲಿ, ಸಂತ ಮತ್ತಾಯರ ಶುಭಸಂದೇಶದ ಒಂದು ಸಾಲು ಈ ಪ್ರಾರ್ಥನಾ ದಿನದ ಧ್ಯೇಯವಾಕ್ಯವಾಗಿ ಕಾರ್ಯನಿರ್ವಹಿಸುತ್ತದೆ. ಮಕ್ಕಳು ಮತ್ತು ಯುವಕರ ರಕ್ಷಣೆಗಾಗಿ ಪೋಲಿಷ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಪ್ರತಿನಿಧಿ, ಮಹಾಧರ್ಮಾಧ್ಯಕ್ಷರಾದ ವೊಜ್ಸಿಕ್ ಪೋಲಾಕ್ ರವರು, ಸಂತ್ರಸ್ತರುಗಳು ಮತ್ತು ಬದುಕುಳಿದವರೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಈ ದಿನವನ್ನು ಬಳಸಿಕೊಳ್ಳುವಂತೆ ಪ್ರತಿಯೊಬ್ಬರನ್ನು ಆಹ್ವಾನಿಸಿದರು.
ಬಾಧಿತರೊಂದಿಗೆ ಪ್ರಾರ್ಥನೆ ಮಾಡಲು ಜನರು ಒಟ್ಟಾಗಿ ಸೇರುವಂತೆ ಪ್ರೋತ್ಸಾಹಿಸಿದರು, ಅಷ್ಟು ಮಾತ್ರವಲ್ಲದೇ ಬಾಧಿತರೊಂದಿಗೆ ಪ್ರಾರ್ಥನೆ ಮಾಡಲು ಗೊತ್ತುಪಡಿಸಿದ ದೇವಾಲಯಗಳಿವೆ ಎಂದು ಅವರು ವಿವರಿಸಿದರು. ಈ ದೇವಾಲಯಗಳು, ಸಂತ್ರಸ್ತರುಗಳು ಮತ್ತು ಬದುಕುಳಿದವರಿಗೆ ಸಭೆಯ ಸ್ಥಳಗಳು ನಾವು ತರಲು ಬಯಸುವ ಭರವಸೆಯಾಗಬೇಕೆಂದು ಮಹಾಧರ್ಮಾಧ್ಯಕ್ಷರು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ಪೋಲೆಂಡ್‌ನ ಧರ್ಮಸಭೆಯು, ನಿಂದನೆಯಿಂದ ಗಾಯಗೊಂಡವರ ಸಾಕ್ಷ್ಯಗಳ ಜೊತೆಗೆ, ಶಿಲುಬೆಯ ಹಾದಿಯನ್ನು ಕುರಿತ ಚಿಂತನೆಗಳನ್ನು ಸಹ ಒದಗಿಸಿದೆ.
ಸಾರ್ವಜನಿಕ ಪ್ರಾರ್ಥನೆಯು, ಧರ್ಮಸಭೆಯಲ್ಲಿ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ, ಅಪ್ರಾಪ್ತ ವಯಸ್ಕರ ರಕ್ಷಣೆಗೆ ಸಹಾಯ ಮಾಡುತ್ತಿದೆ ಮತ್ತು ಭವಿಷ್ಯದ ದೌರ್ಜನ್ಯವನ್ನು ತಡೆಗಟ್ಟುವ ಅಗತ್ಯದ ಬಗ್ಗೆ ಗಮನ ಸೆಳೆಯುತ್ತದೆ, ಆದ್ದರಿಂದ ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ವಿಶ್ವಗುರುಗಳ ಆಯೋಗವು ಎಲ್ಲರನ್ನೂ ಭಾಗವಹಿಸಲು ಆಹ್ವಾನಿಸುತ್ತದೆ.