ಇಂಡೋನೇಷ್ಯಾದ ಕಥೋಲಿಕ ಶಾಲೆಯಲ್ಲಿ ಅಂತರ್-ಧರ್ಮೀಯ ಸಾಮರಸ್ಯ
ಲಿಕಾಸ್ ಸುದ್ಧಿ
ಮಧ್ಯ ಜಾವಾದ ಉಂಗಾರನ್‌ನ ಗಿರಿಸೊಂಟಾದಲ್ಲಿರುವ ಕಾನಿಸಿಯಸ್ ಜೂನಿಯರ್ ಹೈಸ್ಕೂಲ್, ಧಾರ್ಮಿಕ ಮಿತವ್ಯಯವನ್ನು ಉತ್ತೇಜಿಸುವ ಉಪಕ್ರಮದ ಭಾಗವಾಗಿ ತನ್ನ ವಿದ್ಯಾರ್ಥಿಗಳಿಗಾಗಿ ಇಫ್ತಾರ್ (ಉಪವಾಸ ಮುರಿಯುವ) ಕಾರ್ಯಕ್ರಮವನ್ನು ಆಯೋಜಿಸಿತು.
ಸಂತ ಸ್ಟಾನಿಸ್ಲಾಸ್ ರವರ ಧರ್ಮಕೇಂದ್ರವಾದ ಗಿರಿಸೊಂಟಾದ ಸಹಯೋಗದೊಂದಿಗೆ ಸೆಮರಾಂಗ್ ನ ಮಹಾಧರ್ಮಕ್ಷೇತ್ರವು ನಿರ್ವಹಿಸುತ್ತಿರುವ ಈ ಶಾಲೆಯು, ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ತಿಂಗಳಲ್ಲಿ ಈ ಸಭೆಯನ್ನು ಆಯೋಜಿಸಿತ್ತು.
ಇಫ್ತಾರ್‌ಗೂ ಮುನ್ನ, ಸೆಮರಾಂಗ್ ನ ಶ್ರೇಷ್ಠಗುರು ಅಂತರಧರ್ಮೀಯ ಮತ್ತು ವಿಶ್ವಾಸದ ಸಂಬಂಧಗಳ ಆಯೋಗದ (HAK) ಅಧ್ಯಕ್ಷರಾದ ಧರ್ಮಗುರು ಎಡ್ವರ್ಡಸ್ ದಿದಿಕ್ ಚಾಹ್ಯೊನೊರವರು ಎಸ್‌ಜೆ ಮತ್ತು ಸೆಮರಾಂಗ್ ರೀಜೆನ್ಸಿಯಲ್ಲಿನ ಧಾರ್ಮಿಕ ಸಾಮರಸ್ಯ ವೇದಿಕೆಯ (FKUB) ಅಧ್ಯಕ್ಷರಾದ ಹೆಚ್. ಸಿನ್ವಾನಿರವರ ನೇತೃತ್ವದಲ್ಲಿ ಧಾರ್ಮಿಕ ಮಿತವ್ಯಯದ ಕುರಿತಾದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಿರಿಸೊಂಟಾದ ಧರ್ಮಕೇಂದ್ರದ ಧರ್ಮಗುರು ಅಗಸ್ಟಿನಸ್ ವಿಡಿಸಾನಾರವರು ಎಸ್‌ಜೆ, ಈ ಕಾರ್ಯಕ್ರಮವು ಧರ್ಮಕೇಂದ್ರದಲ್ಲಿರುವ ಯುವಜನರನ್ನು ಗುರಿಯಾಗಿರಿಸಿಕೊಂಡಿದೆ ಎಂದು ಹೇಳಿದರು.
“ಗಿರಿಸೋಂಟಾ ಧರ್ಮಕೇಂದ್ರವು ಹೆಚ್ಚಿನ ಸಂಖ್ಯೆಯ ಯುವಕರನ್ನು ಹೊಂದಿರುವುದರಿಂದ ಇಫ್ತಾರ್ ಮತ್ತು ಧಾರ್ಮಿಕ ಮಿತಗೊಳಿಸುವ ಕಾರ್ಯಾಗಾರವನ್ನು ಕಿರಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಉದ್ದೇಶಪೂರ್ವಕವಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಧರ್ಮಕೇಂದ್ರವು ಹಳೆಯದಾಗಿದ್ದರೂ, ಗಿರಿಸೊಂಟಾದ ಧರ್ಮಕೇಂದ್ರದ ಮುಖಛರ್ಯೆಯು ನೋಡಲು ಯುವ ಧರ್ಮಸಭೆಯಂತಿದೆ. ಇತರ ಧರ್ಮಗಳ ಜನರೊಂದಿಗೆ ಸಹೋದರತ್ವವನ್ನು ಮತ್ತು ಸಹಯೋಗವನ್ನು ಬೆಳೆಸಲು ಯುವಜನರು ಧಾರ್ಮಿಕ ಸಂಯಮದಿಂದ ಸಜ್ಜಾಗಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು ರೆಬಾನಾ (ಇಸ್ಲಾಂ ಧರ್ಮದ ತಾಳವಾದ್ಯ) ವಾದನವನ್ನು ಪ್ರದರ್ಶಿಸಿದರು. ತೆಗಲ್ಪನಾಸ್‌ನ ಎಂಬ ಮುಸ್ಲಿಂ ಯುವಕ ಸದೇವಾ, ವೈವಿಧ್ಯಮಯ ಸಮುದಾಯದಲ್ಲಿ ವಾಸಿಸಲು ಮತ್ತು ತನ್ನ ಸಹಪಾಠಿಗಳನ್ನು ಬೆಂಬಲಿಸಲು ಸಂತೋಷಪಡುತ್ತೇನೆ ಎಂದು ಹೇಳಿದರು.
"ಕನಿಸಿಯಸ್ ಜೂನಿಯರ್ ಹೈಸ್ಕೂಲ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ರೆಬಾನಾ ನುಡಿಸುವುದನ್ನು ಕಲಿಯಲು ಮತ್ತು ಸಾಮೂಹಿಕ ಇಫ್ತಾರ್ ಸಮಯದಲ್ಲಿ ಅದನ್ನು ಪ್ರದರ್ಶಿಸಲು ಸಹಾಯ ಮಾಡಲು ನನಗೆ ಸಂತೋಷವಾಗಿದೆ" ಎಂದು ಅವರು ಹೇಳಿದರು.
ಕನಿಸಿಯಸ್ ಜೂನಿಯರ್ ಹೈಸ್ಕೂಲ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ರೆಬಾನಾ ನುಡಿಸುವುದನ್ನು ಕಲಿಯಲು ಮತ್ತು ಸಾಮೂಹಿಕ ಇಫ್ತಾರ್ ಸಮಯದಲ್ಲಿ ಅದನ್ನು ಪ್ರದರ್ಶಿಸಲು ಸಹಾಯ ಮಾಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವನು ಹೇಳಿದನು.
ಕಥೋಲಿಕ ಧರ್ಮದ ವಿದ್ಯಾರ್ಥಿನಿ ಫ್ಯಾಬಿಯಾನಸ್ ನಂದನ ಬಾನು ಅಬಿಯಾಸ, ಯುವಕರಲ್ಲಿ ಧಾರ್ಮಿಕ ಮಿತಭಾವನೆಯ ಬಗ್ಗೆ ಇಸ್ಲಾಂ ಧರ್ಮ ಮತ್ತು ಕಥೋಲಿಕ ಧರ್ಮದ, ಧಾರ್ಮಿಕ ವ್ಯಕ್ತಿಗಳಿಂದ ಜ್ಞಾನವನ್ನು ಪಡೆದಿದ್ದಕ್ಕೆ ನನಗೆ ಸಂತೋಷವಾಗಿದೆ. ರೆಬಾನಾಳ ಪ್ರದರ್ಶನ ಮತ್ತು ಗಾಯನ ಗುಂಪಿನ ಪ್ರದರ್ಶನವೂ ನನಗೆ ತುಂಬಾ ಇಷ್ಟವಾಯಿತು." ಮುಸ್ಲಿಂ ವಿದ್ಯಾರ್ಥಿ ರೋಚ್ಮನ್ ರೊಮಾಧೋನಿ ಕೂಡ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು.
ಇತರ ಶಾಲೆಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಶಾಲಾ ಪ್ರಾಂಶುಪಾಲ ಹೆರ್ರಿ ಕ್ರಿಸ್ನಾಂಟೊರವರು ಹೇಳಿದರು. ಈ ಚಟುವಟಿಕೆಯು ಸಹೋದರತ್ವ ಭಾವನೆ ಎಲ್ಲರಲ್ಲಿ ಮೂಡಿಸಲು ನಿಯಮಿತ ಕಾರ್ಯಕ್ರಮವಾಗುತ್ತದೆ ಮತ್ತು ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮವನ್ನು ಏಕತೆಯನ್ನು ಪ್ರೋತ್ಸಾಹಿಸಲು ಒಂದು ಅವಕಾಶವು ಸಿಕ್ಕಿದೆ ಎಂದು ಧರ್ಮಗುರು ದಿದಿಕ್ ರವರು ಬಣ್ಣಿಸಿದರು. ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯುವಕರಲ್ಲಿ ಮನೋಭಾವವನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮವು ಅಸಾಧಾರಣ ಮತ್ತು ಕಾರ್ಯತಂತ್ರವಾಗಿದೆ, ಇದರಿಂದ ನಾವು ಸುವರ್ಣ ಇಂಡೋನೇಷ್ಯಾವನ್ನು ಸಾಧಿಸಬಹುದು ಎಂದು ಅವರು ಹೇಳಿದರು.