MAP

Caritas Internationalis launches Weavers of Hope Award in Rome Caritas Internationalis launches Weavers of Hope Award in Rome 

ಕಾರಿತಾಸ್: ʻವೀವರ್ಸ್ ಆಫ್ ಹೋಪ್ʼ ಪ್ರಶಸ್ತಿಯ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು.

ಸಂಸ್ಥೆಗಳನ್ನು ಹಾಗೂ ಮಹಿಳೆಯರು ತಮ್ಮ ಕುಟುಂಬಗಳು, ಸಮುದಾಯಗಳು ಮತ್ತು ಸಮಾಜಗಳಲ್ಲಿ ಭರವಸೆಯ ಮೂಲಗಳಾಗಿ ಸಬಲೀಕರಣಗೊಳ್ಳಲು ಸಹಾಯ ಮಾಡಲು ಅಂತರರಾಷ್ಟ್ರೀಯ ಕಾರಿತಾಸ್ ʻವೀವರ್ಸ್ ಆಫ್ ಹೋಪ್ʼ ಪ್ರಶಸ್ತಿಯನ್ನು ಪ್ರಾರಂಭಿಸುತ್ತಿದೆ.

ಕೀಲ್ಸ್ ಗುಸ್ಸಿ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ, ಅಂತರರಾಷ್ಟ್ರೀಯ ಕಾರಿತಾಸ್ ತಮ್ಮ ವೀವರ್ಸ್ ಆಫ್ ಹೋಪ್ ಪ್ರಶಸ್ತಿಯನ್ನು ಪ್ರಾರಂಭಿಸಿತು, ಇದು ತಳಮಟ್ಟದಿಂದ ಮಹಿಳೆಯರ ಪರಿವರ್ತನಾತ್ಮಕ ಕೆಲಸವನ್ನು ಎತ್ತಿ ತೋರಿಸುವ ಒಂದು ಹೊಸ ಅನುದಾನ ಉಪಕ್ರಮವಾಗಿದೆ.

ಭರವಸೆಯ ನಿರ್ಮಾಪಕರಿಗೆ ಪ್ರಶಸ್ತಿ
ದುರ್ಬಲ ಮಹಿಳೆಯರು ಮತ್ತು ಹುಡುಗಿಯರನ್ನು ಸಬಲೀಕರಣಗೊಳಿಸುವ, ಯಾವುದೇ ಮತ್ತು ಎಲ್ಲಾ ಸಂಸ್ಥೆಗಳು ಹಾಗೂ ಯೋಜನೆಗಳಿಗೆ ಮುಕ್ತವಾಗಿದೆ, ʻವೀವರ್ಸ್ ಆಫ್ ಹೋಪ್ʼ ಪ್ರಶಸ್ತಿಯು ಭಾಗಶಃ ಭರವಸೆಯ ಜೂಬಿಲಿ ವರ್ಷದ ಪ್ರಯುಕ್ತ ಪ್ರೇರಿತವಾಗಿದೆ. ಅಂತರರಾಷ್ಟ್ರೀಯ ಕಾರಿತಾಸ್ ನ ಹಿರಿಯ ಅಧಿಕಾರಿ ಸ್ಟೆಫನಿ ಮ್ಯಾಕ್‌ಗಿಲ್ಲಿವ್ರೇರವರು ವಿವರಿಸಿದಂತೆ, "ಮಹಿಳೆಯರು, ಪ್ರಪಂಚದಾದ್ಯಂತದ ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಮತ್ತು ಸಮಾಜದಲ್ಲಿ ಹೇಗೆ ಭರವಸೆಯನ್ನು ಬೆಳೆಸುತ್ತಾರೆ ಎಂಬುದರ ಕುರಿತು ಪ್ರತಿಬಿಂಬಿಸುವುದು ಇದರ ಗುರಿಯಾಗಿದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಮಹಿಳೆಯರು ಶಿಕ್ಷಣ ಮತ್ತು ಅವಕಾಶಗಳಿಗೆ, ಸೀಮಿತ ಲಭ್ಯತೆಯನ್ನು ಎದುರಿಸುತ್ತಿದ್ದಾರೆ ಮತ್ತು ಅಪ್ರಾಪ್ತ ವಯಸ್ಸಿನ ವಿವಾಹಗಳಂತಹ ಅನ್ಯಾಯಗಳಿಗೆ ಒಳಗಾಗುತ್ತಲೇ ಇದ್ದಾರೆ. ಮಹಿಳೆಯರು ಎದುರಿಸುತ್ತಿರುವ ಈ ಅಡೆತಡೆಗಳ" ಹಿನ್ನೆಲೆಯಲ್ಲಿ, ಸಂಪನ್ಮೂಲಗಳಿಲ್ಲದೆ ಯಾವುದೇ ಪ್ರಗತಿಯನ್ನು ಸಾಧಿಸುವುದು ಅಸಾಧ್ಯವಾದ್ದರಿಂದ ಮಹಿಳಾ ಸಬಲೀಕರಣದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ ಎಂದು ಮ್ಯಾಕ್‌ಗಿಲ್ಲಿವ್ರೇರವರು ಎತ್ತಿ ತೋರಿಸಿದರು.

ʻವೀವರ್ಸ್ ಆಫ್ ಹೋಪ್ʼ ಪ್ರಶಸ್ತಿಯು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಮತ್ತೊಂದೆಡೆ, ಈಗಾಗಲೇ ನಡೆಯುತ್ತಿರುವ ಯೋಜನೆಗಳನ್ನು ಉಳಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇದು ಕಳೆದ ವರ್ಷ ಅಂತರರಾಷ್ಟ್ರೀಯ ಕಾರಿತಾಸ್ ಪ್ರಕಟಿಸಿದ ಸಮಾನತೆ, ಎದುರುಗೊಳ್ಳುವಿಕೆ, ನವೀಕರಣ ಎಂಬ ಕಿರುಪುಸ್ತಕವನ್ನು ಅನುಸರಿಸುತ್ತದೆ, ಇದು ಮಹಿಳೆಯರ ಸಬಲೀಕರಣಕ್ಕಾಗಿ ಅವರ ಕೆಲಸದ ಸಾಕ್ಷ್ಯಗಳು ಮತ್ತು ಉತ್ತಮ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುತ್ತದೆ. ಹಾಗಾಗಿ, ಈ ಪ್ರಶಸ್ತಿಯು ತಳಮಟ್ಟದಲ್ಲಿ, ಒಂದು ರೀತಿಯ ಸಂಪನ್ಮೂಲ ಮತ್ತು ಸ್ವಲ್ಪ ಸೈದ್ಧಾಂತಿಕವಾಗಿದ್ದ ವಿಷಯದಿಂದ ನಿಜವಾಗಿಯೂ ಪ್ರಾಯೋಗಿಕ ಮಟ್ಟಕ್ಕೆ ಹೋಗಲು ಒಂದು ಮಾರ್ಗವಾಗಿದೆ.

ಹೊಸದೇನಲ್ಲ, ಹಳೆಯದನ್ನು ಆಚರಿಸುವುದು.
ಪ್ರಶಸ್ತಿಯು ಈಗಾಗಲೇ ಪ್ರಪಂಚದಾದ್ಯಂತ ನಡೆಯುತ್ತಿರುವ ಉಪಕ್ರಮಗಳನ್ನು ಆಚರಿಸುವ ಒಂದು ಮಾರ್ಗವಾಗಿದೆ. 2025ರ ಅಂತ್ಯದ ವೇಳೆಗೆ ನಾಲ್ಕು ಸಂಸ್ಥೆಗಳು ಅಥವಾ ಯೋಜನೆಗಳಿಗೆ ಒಂದು ವರ್ಷದ ಅನುದಾನವನ್ನು ನೀಡಲಾಗುತ್ತದೆ. ಇದು ಕೇವಲ ಒಂದು ವರ್ಷದ ಅನುದಾನದ ಯೋಜನೆಯಾಗಿದ್ದರೂ, ಕೆಲವೊಮ್ಮೆ, ನಿಮಗೆ ಸ್ವಲ್ಪ ಹಣ ಅಥವಾ ಸಂಪನ್ಮೂಲಗಳು ಬೇಕಾಗುತ್ತವೆ, ಅದು ನಿಜವಾಗಿಯೂ ಏನನ್ನಾದರೂ ಅಥವಾ ಯಾವುದಾದರೂ ಯೋಜನೆಯನ್ನು ಪ್ರಾರಂಭಿಸಲು ಸಹಕಾರಿಯಾಗಬಹುದು ಎಂದು ಮ್ಯಾಕ್‌ಗಿಲ್ಲಿವ್ರೇರವರು ವಿವರಿಸಿದರು.

ಈ ಧ್ಯೇಯವು ಹೊಸದೇನಲ್ಲ ಎಂದು ಅವರು ಒತ್ತಿ ಹೇಳಿದರು: ಜಾಗತಿಕವಾಗಿ ಜನರು, ಗುಂಪುಗಳು ಮತ್ತು ಸಂಸ್ಥೆಗಳು ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಪ್ರದರ್ಶಿಸಲು ಮತ್ತು ಸಬಲೀಕರಣಗೊಳಿಸಲು ಹಾಗೂ ಭರವಸೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆದರೆ ಮ್ಯಾಕ್‌ಗಿಲ್ಲಿವ್ರೇರವರು, ನಮ್ಮಂತೆಯೇ ಇಂತಹ ಕೆಲಸಗಳನ್ನು ಮಾಡುತ್ತಿರುವ ಮತ್ತು ಹಂಚಿಕೆಯ ಗುರಿಗಳನ್ನು ಹೊಂದಿರುವ ಇತರ ಸಂಸ್ಥೆಗಳನ್ನು ಬೆಂಬಲಿಸುವ ಮತ್ತು ಸಹಯೋಗದ ಮೂಲಕ ಮಾತ್ರ ನಾವು ಮಹಿಳೆಯರಿಗೆ ನಿಜವಾಗಿಯೂ ಬದಲಾವಣೆಯನ್ನು ಸಾಧಿಸಬಹುದು ಎಂದು ಒತ್ತಿ ಹೇಳಿದರು.
 

11 ಮಾರ್ಚ್ 2025, 13:02