ಕಾರ್ಡಿನಲ್ ಮ್ಯಾಕ್‌ಎಲ್ರಾಯ್ ರವರು ವಿಶ್ವಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ
ಥ್ಯಾಡಿಯಸ್ ಜೋನ್ಸ್
ವಾಷಿಂಗ್ಟನ್ ಡಿ.ಸಿ.ಯ ಹೊಸ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ರಾಬರ್ಟ್ ಮೆಕ್‌ಎಲ್ರಾಯ್ ರವರು ಫೆಬ್ರವರಿ 27 ರಂದು ಅಮೇರಿಕದ ಸ್ಯಾನ್ ಡಿಯಾಗೋದ ಧರ್ಮಾಧ್ಯಕ್ಷರಾಗಿ ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ವಾಷಿಂಗ್ಟನ್‌ನ ಎಂಟನೇ ಮಹಾಧರ್ಮಾಧ್ಯಕ್ಷರಾಗಿ ಕಾರ್ಡಿನಲ್ ಮೆಕ್‌ಎಲ್ರಾಯ್ ರವರ ಪೀಠಾರೋಹಣದ ಕೃತಜ್ಞತಾ ದೈವಾರಾಧನಾ ವಿಧಿಯು ಮಾರ್ಚ್ 11 ಮಂಗಳವಾರದಂದು ನಡೆಯಲಿದೆ.
ವಿಶ್ವಗುರು ಫ್ರಾನ್ಸಿಸ್ ಮತ್ತು ವಿಶ್ವ ಶಾಂತಿಗಾಗಿ ಪ್ರಾರ್ಥನೆಗಳು
ಕಾರ್ಡಿನಲ್ ರವರು ವಿವಿಧ ವಿಷಯಗಳ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದರು ಆದರೆ ಮೊದಲಿಗೆ ವಿಶ್ವಗುರು ಫ್ರಾನ್ಸಿಸ್ ರವರ ಚೇತರಿಕೆಗಾಗಿ ಪ್ರಾರ್ಥಿಸುವಲ್ಲಿ ಧರ್ಮಕ್ಷೇತ್ರದ ಏಕತೆಯ ಬಗ್ಗೆ ಮಾತನಾಡಲು ಬಯಸಿದರು. ಕಳೆದ ವಾರ ಸ್ಯಾನ್ ಡಿಯಾಗೋನ ಧರ್ಮಕ್ಷೇತ್ರದ ಎಲ್ಲಾ ಯಾಜಕರು ವಿಶ್ವಾದಾದ್ಯಂತದ ಜನರೊಂದಿಗೆ ಆಧ್ಯಾತ್ಮಿಕ ಒಕ್ಕೂಟದಲ್ಲಿ ವಿಶ್ವಗುರುಗಳ ಆರೋಗ್ಯಕ್ಕಾಗಿ ವಿಶೇಷ ದೈವಾರಾಧನಾ ವಿಧಿಯಲ್ಲಿ ಒಟ್ಟುಗೂಡಿದರು.
ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ವಿಶ್ವಗುರುವಿನ ಹುದ್ದೆಯ ಅಧಿಕಾರದುದ್ದಕ್ಕೂ, ಪ್ರಕ್ಷುಬ್ಧತೆ, ಕಷ್ಟ, ಹೋರಾಟ ಮತ್ತು ಸಂಕಟಗಳಿಂದ ಗುರುತಿಸಲ್ಪಟ್ಟ "ವಿಶ್ವದ ಪ್ರತಿಯೊಂದು ಪರಿಸ್ಥಿತಿಯಲ್ಲೂ ಜನರನ್ನು ತಲುಪುವ ಪ್ರಾರ್ಥನೆಯ ಸಂಕೇತ"ವನ್ನು ನೀಡಿದ್ದಾರೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ, ವಿಶ್ವಗುರುವು ಅನಾರೋಗದಿಂದ ಕಷ್ಟ ಪಡುತ್ತಿರುವಾಗ ನಮ್ಮೆಲ್ಲರ ಪ್ರಾರ್ಥನೆಗಳು, ಅವರ ದುಃಖದಲ್ಲಿ ಅವರಿಗೆ ಸಹಾಯ ಮಾಡಲಿ, ಅವರಿಗೆ ಶಾಂತಿಯನ್ನು ನೀಡಲಿ, ಅವರಿಗೆ ಬೇಕಾಗಿರುವ ಶಕ್ತಿ, ಆರೋಗ್ಯದ ಭಾಗ್ಯವನ್ನು ಮತ್ತು ಸೌಖ್ಯವನ್ನು ನೀಡಲಿ" ಎಂದು ಕಾರ್ಡಿನಲ್ ಮೆಕ್‌ಲ್ರಾಯ್ ರವರು ಹೇಳಿದರು.
ಕಾರ್ಡಿನಲ್ ಮೆಕ್‌ಲ್ರಾಯ್ ರವರು ವಿಶ್ವಗುರುಗಳ ಪಾಲನಾಸೇವೆಯ ಬದ್ಧತೆಯನ್ನು ಶ್ಲಾಘಿಸಿದರು ಮತ್ತು ಧರ್ಮಸಭೆಯ ಸಂಪರ್ಕವನ್ನು ಎಲ್ಲರಿಗೂ ತಲುಪುವ ಹಾಗೆ ಮಾಡಿದರು, ವಿಶೇಷವಾಗಿ ಬಡವರು, ದುರ್ಬಲರು ಮತ್ತು ದೀನದಲಿತರನ್ನು ಉತ್ತೇಜಿಸುವಲ್ಲಿ ವಿಶ್ವಗುರುಗಳ ಪ್ರಯತ್ನಗಳಿಗೆ ವ್ಯಾಪಕ ಮೆಚ್ಚುಗೆಯ ಬಗ್ಗೆ ಮಾತನಾಡಿದರು. ಇಷ್ಟು ಪ್ರಕ್ಷುಬ್ಧತೆ ಮತ್ತು ಸಂಘರ್ಷಗಳಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ವಿಶ್ವಗುರುಗಳು ಪ್ರೀತಿ, ಸಹಾನುಭೂತಿ ಮತ್ತು ಕಾಳಜಿಯ ಶುಭಸಂದೇಶದ ಸಂದೇಶವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸಲಿ ಎಂದು ಅವರು ಹೇಳಿದರು.
ಸ್ಯಾನ್ ಡಿಯಾಗೋಗೆ ಕೃತಜ್ಞತೆಗಳು
ಸುದ್ದಿಗೋಷ್ಠಿಯಲ್ಲಿ, ಕಾರ್ಡಿನಲ್ ಮೆಕ್‌ಎಲ್ರಾಯ್ ರವರು ಒಂದು ದಶಕದಿಂದ ಸೇವೆ ಸಲ್ಲಿಸುತ್ತಿರುವ ಸ್ಯಾನ್ ಡಿಯಾಗೋದ ಧರ್ಮಕ್ಷೇತ್ರಕ್ಕೆ ತಮ್ಮ ಹೃತ್ಪೂರ್ವಕ ವಿದಾಯ ಹೇಳಿದರು. ಈ ಸಮಯದಲ್ಲಿ ಅವರು, ತಾವು ಸೇವೆ ಸಲ್ಲಿಸಿದ ಸಂತೋಷವನ್ನು ಮತ್ತು ಅವರು ಸ್ವೀಕರಿಸಿದ ಬಲವಾದ ಬೆಂಬಲ ನೀಡಿದ ಸಮುದಾಯವನ್ನು, ಮಹಾನ್ ವೈವಿಧ್ಯತೆ ಮತ್ತು ಚೈತನ್ಯವನ್ನು ಹೆಮ್ಮೆಪಡುವ ಸಾಂಸ್ಕೃತಿಕ ಮೊಸಾಯಿಕ್ ಮತ್ತು ಕುಟುಂಬದವರ ಪ್ರಸನ್ನತೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಅವರು ನೆನಪಿಸಿಕೊಂಡರು.
ವಲಸಿಗರ ಘನತೆಯನ್ನು ಗೌರವಿಸುವುದು
ರೋಮ್‌ನಲ್ಲಿ ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಭೇಟಿಗಳ ಬಗ್ಗೆ ಕೇಳಿದಾಗ, ಕಾರ್ಡಿನಲ್ ಮ್ಯಾಕ್‌ಎಲ್ರಾಯ್ ರವರು, ಅಮೇರಿಕ ಮತ್ತು ಮೆಕ್ಸಿಕೋ ನಡುವಿನ ಗಡಿಯಲ್ಲಿನ ಪರಿಸ್ಥಿತಿ ಮತ್ತು ವಿಶೇಷವಾಗಿ ವಿದ್ಯಮಾನದ ತೀವ್ರತೆಯನ್ನು ಗಮನಿಸಿದರೆ ವಲಸಿಗರು ಹೇಗಿದ್ದಾರೆ ಎಂಬುದರ ಬಗ್ಗೆ ವಿಶ್ವಗುರುಗಳು ಕಾರ್ಡಿನಲ್ ರವರನ್ನು ಆಗಾಗ್ಗೆ ಕೇಳುತ್ತಿದ್ದರು ಎಂದು ಹೇಳಿದರು. ನಂತರ ಅವರು ತಮ್ಮದೇ ಆದ ಧರ್ಮಕ್ಷೇತ್ರದ ಕಥೋಲಿಕ ದತ್ತಿ ಸಂಸ್ಥೆಗಳು ವಲಸಿಗರು ಮತ್ತು ನಿರಾಶ್ರಿತರಿಗೆ ಅಗತ್ಯ ಸೇವೆಗಳನ್ನು ಹೇಗೆ ಒದಗಿಸಿದವು ಎಂಬುದನ್ನು ನೆನಪಿಸಿಕೊಂಡರು, ಒಂದು ವಿಧದಲ್ಲಿ ದಿನಕ್ಕೆ ಸುಮಾರು ಎಂಟು ನೂರು ಜನರಿಗೆ ಆರೋಗ್ಯ ಮತ್ತು ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತಿದ್ದರು.
ಶುಭಸಂದೇಶಕ್ಕೆ ಸಾಕ್ಷಿಯಾಗುವುದು
ಇಂದಿನ ಸಮಾಜದಲ್ಲಿ ಕಥೋಲಿಕ ಧರ್ಮಸಭೆಯ ಪಾತ್ರದ ಬಗ್ಗೆ ಕೇಳಿದಾಗ, ಕಾರ್ಡಿನಲ್ ಮೆಕ್‌ಲ್ರಾಯ್ ರವರು, ನಮ್ಮ ವಿಶ್ವಾಸಕ್ಕೆ ಸಾಕ್ಷಿಯಾಗಬೇಕಾಗಿದೆ ಎಂದು ಹೇಳಿದರು, ಏಕೆಂದರೆ ಧರ್ಮಸಭೆಯ ಪಾತ್ರವು "ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವುದಲ್ಲ ಅಥವಾ ನೀತಿ ಸಮಸ್ಯೆಗಳನ್ನು ಪರಿಹರಿಸುವುದೂ ಅಲ್ಲ" ಏಕೆಂದರೆ ಧರ್ಮಸಭೆಯು ಸಾರ್ವಜನಿಕ ಕ್ರಮದಲ್ಲಿ ನಿರ್ದಿಷ್ಟ ರಾಜಕೀಯ ಪಾತ್ರವನ್ನು ಹೊಂದಿಲ್ಲ, ಬದಲಿಗೆ, ಪ್ರಭುಯೇಸುಕ್ರಿಸ್ತರ ಶುಭಸಂದೇಶ ಮತ್ತು ಕಥೋಲಿಕ ಬೋಧನೆಯ ಬೆಳಕಿನ ಮಾರ್ಗದಲ್ಲಿ, ಸಮಾಜದಲ್ಲಿನ ನೀತಿಗಳ ಬಗ್ಗೆ ಮತ್ತು ನಿರ್ದೇಶನಗಳ ಬಗ್ಗೆ ಪ್ರತಿಕ್ರಿಯಿಸುವ ನೈತಿಕ ಪಾತ್ರವನ್ನು ಹೊಂದಿದೆ ಎಂದು ಹೇಳಿದರು.
ಅಮೇರಿಕ ಮತ್ತು ವಾಸ್ತವವಾಗಿ ಜಗತ್ತು ಇಂದು ಎದುರಿಸುತ್ತಿರುವ ಪ್ರಕ್ಷುಬ್ಧ ಸಮಯವನ್ನು ಅವರು ಒಪ್ಪಿಕೊಂಡರು. ನಮ್ಮ ಸಮಾಜದಲ್ಲಿ ಸಹಾನುಭೂತಿಯ ಸಮಾಜವಾಗಿರುವುದರ ಅರ್ಥವೇನು? ಪ್ರತಿಯೊಬ್ಬ ಮನುಷ್ಯನ ಸಮಾನ ಘನತೆಯನ್ನು ನಾವು ನಂಬುತ್ತೇವೆ ಎಂದು ಹೇಳುವುದರ ಅರ್ಥವೇನು? ಮತ್ತು ನಾವು ಅದನ್ನು ಹೇಗೆ ಜೀವಿಸುತ್ತೇವೆ? ನಮ್ಮ ದೇಶದ ಇತಿಹಾಸದಲ್ಲಿ ನಾವು ಒಂದು ಮಹತ್ವದ ತಿರುವಿನ ಕ್ಷಣದಲ್ಲಿರುವುದರಿಂದ, ನಾವು ಈಗ ನಡೆಸುತ್ತಿರುವ ಚರ್ಚೆಗಳಲ್ಲಿ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸಿ ಧರ್ಮಸಭೆಯು ತರಲು ಕರೆಯಲ್ಪಟ್ಟಿರುವ ಸಾಕ್ಷಿಯ ಕ್ಷೇತ್ರಗಳು ಇವಾಗಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ದಿನದ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಚರ್ಚೆಗಳಲ್ಲಿ ಮತ್ತು ನೀತಿಗಳ ಸೂತ್ರೀಕರಣದಲ್ಲಿ ಶುಭಸಂದೇಶದ ಮೌಲ್ಯಗಳಿಗೆ ಸಾಕ್ಷಿಯಾಗುವುದು ಧರ್ಮಸಭೆಯು ಬಯಸುತ್ತದೆ ಮತ್ತು ಮಾನವ ವ್ಯಕ್ತಿಯ ಘನತೆಯನ್ನು ಯಾವಾಗಲೂ ಕೇಂದ್ರದಲ್ಲಿಟ್ಟುಕೊಳ್ಳುತ್ತದೆ ಎಂದು ಮ್ಯಾಕ್‌ಎಲ್ರಾಯ್ ರವರು ತೀರ್ಮಾನಿಸಿದರು.