MAP

Cardinal Charles Maung Bo Cardinal Charles Maung Bo 

ವಿಭಜನೆ ಮತ್ತು ರಕ್ತಪಾತವನ್ನು ಎದುರಿಸಲು ಒಗ್ಗಟ್ಟಿಗೆ ಕರೆ

ಮ್ಯಾನ್ಮಾರ್‌ನ ಯಾಂಗೋನ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ದೇಶದಲ್ಲಿ ನಡೆಯುತ್ತಿರುವ ರಕ್ತಪಾತದ ನಡುವೆಯೂ ಏಕತೆಗೆ ಕರೆ ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ತಮಿಳು ಯಾಜಕರೊಬ್ಬರ ಧರ್ಮಾಧ್ಯಕ್ಷೀಯ ದೀಕ್ಷೆಯ ಪ್ರಬೋಧನೆಯ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿನಲ್ ರವರು, ಜಾತಿ ವ್ಯವಸ್ಥೆಗಳು ಮತ್ತು ವಿಭಜನೆಗಳನ್ನು ಖಂಡಿಸಿದರು.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಸಂದರ್ಭದಲ್ಲಿ, ಯಾಂಗೋನ್‌ನ ಮಹಾಧರ್ಮಾಧ್ಯಕ್ಷರು ಮತ್ತು ದೇಶದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ಈ ಪ್ರದೇಶದಲ್ಲಿ ಮತ್ತು ಈ ಸಮಯದಲ್ಲಿ, ನಮ್ಮೆಲ್ಲರಿಗೂ ಅತಿ ಮುಖ್ಯವಾಗಿ ಬೇಕಾಗಿರುವುದು ಏಕತೆ ಎಂದು ಹೇಳುತ್ತಾರೆ.

ಮಾರ್ಚ್ 19ರಂದು ಸಂತ ಜೋಸೆಫ್ ರವರ ಹಬ್ಬದ ದಿನದಂದು, ಯಾಂಗೋನ್ ಮಹಾಧರ್ಮಕ್ಷೇತ್ರದ ನೂತನ ಸಹಾಯಕ ಧರ್ಮಾಧ್ಯಕ್ಷರು, ಮ್ಯಾನ್ಮಾರ್‌ನ ಮೊದಲ ತಮಿಳು ಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರಾದ ರೇಮಂಡ್ ವೈ ಲಿನ್ ಹ್ಟುನ್ ರವರ ಧರ್ಮಾಧ್ಯಕ್ಷೀಯ ದೀಕ್ಷೆಯ ಸಂದರ್ಭದಲ್ಲಿ ಕಾರ್ಡಿನಲ್ ರವರ ಹೇಳಿಕೆಗಳಿವು.

ಕಾರ್ಡಿನಲ್ ಬೊರವರು ತಮ್ಮ ಹೇಳಿಕೆಗಳಲ್ಲಿ, ನೂತನ ಸಹಾಯಕ ಧರ್ಮಾಧ್ಯಕ್ಷರನ್ನು ಮ್ಯಾನ್ಮಾರ್‌ನ ಗಾಯಗೊಂಡ ಜನರಿಗೆ ಗುಣಪಡಿಸುವ ಭರವಸೆಯನ್ನು ಸೃಷ್ಟಿಸಲು ಒತ್ತಾಯಿಸಿದರು, ಸಾವಿರಾರು ಜನರಿಗೆ ಅವರ ಗುಣಪಡಿಸುವ ಉಪಸ್ಥಿತಿ, ಮಾತುಗಳು ಮತ್ತು ಸೇವೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಇಂದು ನಾವು ಮ್ಯಾನ್ಮಾರ್‌ನಲ್ಲಿ ಅನುಭವಿಸುತ್ತಿರುವಂತೆ, ರಾಜಕೀಯ ಪ್ರಕ್ಷುಬ್ಧತೆ, ಸ್ಥಳಾಂತರ ಮತ್ತು ಸಾಮಾಜಿಕ ದುಃಖದೊಂದಿಗೆ, ಅನಿಶ್ಚಿತತೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ, ಮ್ಯಾನ್ಮಾರ್‌ನ ಕಾರ್ಡಿನಲ್ ರವರು ಒತ್ತಿ ಹೇಳಿದರು, ಒಬ್ಬ ಧರ್ಮಾಧ್ಯಕ್ಷನು ಅಬ್ರಹಾಂನಂತೆ ವಿಶ್ವಾಸದಲ್ಲಿ ದೃಢವಾಗಿ ನಿಲ್ಲಬೇಕು, ಮಾನವನ ಗ್ರಹಿಕೆಗೆ ಎಲ್ಲವೂ ಅಸಾಧ್ಯವೆಂದು ತೋರಿದಾಗಲೂ ದೇವರ ವಾಗ್ದಾನಗಳಲ್ಲಿ ವಿಶ್ವಾಸವಿಟ್ಟಿದ್ದರು.

ಧರ್ಮಾಧ್ಯಕ್ಷರ ವಿಶ್ವಾಸವು ಲೌಕಿಕ ಪರಿಹಾರಗಳಲ್ಲಿರಬಾರದು. ಬದಲಿಗೆ ದೇವರ ಅಚಲವಾದ ಅನುಗ್ರಹದಲ್ಲಿ, ಅತ್ಯಂತ ಕರಾಳ ಕಾಲದಲ್ಲಿಯೂ ಇರಬೇಕೆಂದು ಕಾರ್ಡಿನಲ್ ರವರು ಒತ್ತಿ ಹೇಳಿದರು.

ಹತಾಶೆಯ ಸಂದರ್ಭದಲ್ಲಿ, ನಾವು ಏನನ್ನೂ ನೋಡದಿದ್ದರೂ ಮತ್ತು ಸಾಧಿಸಲಾಗದಿದ್ದರೂ ಸಹ, ದೇವರ ನ್ಯಾಯ ಮತ್ತು ಶಾಂತಿ ಎಂದೆಂದಿಗೂ ಮೇಲುಗೈ ಸಾಧಿಸುತ್ತದೆ ಎಂದು ಅವರು ತಮ್ಮ ಜನರಿಗೆ ನೆನಪಿಸಬೇಕು" ಎಂದು ಕಾರ್ಡಿನಲ್ ಬೊರವರು ಹೇಳಿದರು.

ಮ್ಯಾನ್ಮಾರ್‌ನಲ್ಲಿ ಗಂಭೀರ ಮಾನವೀಯ ಬಿಕ್ಕಟ್ಟು
ಗುರುವಾರ, ಜಿನೀವಾದಲ್ಲಿ ನಡೆದ ಅಧಿವೇಶನದಲ್ಲಿ ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಇಟಲಿಯ ಖಾಯಂ ಪ್ರತಿನಿಧಿ, ಇಟಾಲಿಯದ ರಾಯಭಾರಿ ವಿನ್ಸೆಂಜೊ ಗ್ರಾಸ್ಸಿರವರು, ಮಾನವ ಹಕ್ಕುಗಳ ಮಂಡಳಿಯ 58ನೇ ಅಧಿವೇಶನದಲ್ಲಿ ಮ್ಯಾನ್ಮಾರ್‌ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ವಿಶೇಷ ವರದಿಗಾರರೊಂದಿಗಿನ ಸಂವಾದದ ಸಮಯದಲ್ಲಿ, ಮ್ಯಾನ್ಮಾರ್‌ನಲ್ಲಿನ ಗಂಭೀರ ಮಾನವೀಯ ಬಿಕ್ಕಟ್ಟನ್ನು ಖಂಡಿಸಿದರು, ಅದಕ್ಕೆ "ತುರ್ತು ಕ್ರಮದ ಅಗತ್ಯವಿದೆ" ಎಂದು ಹೇಳಿದರು.

ಅನ್ಯಾಯ ಮತ್ತು ಭಯದ ನಡುವೆ ನೈತಿಕ ದಿಕ್ಸೂಚಿ
ನಿನ್ನೆಯ ಪ್ರಬೋಧನೆಯಲ್ಲಿ ಕಾರ್ಡಿನಲ್ ಬೊರವರು ತಮ್ಮ ಜನರು ಎದುರಿಸುತ್ತಿರುವ ಈ ದೊಡ್ಡ ಸವಾಲುಗಳನ್ನು ಗುರುತಿಸಿದರು ಮತ್ತು ಬಳಲುತ್ತಿರುವ ಜನಸಂಖ್ಯೆಗೆ ಸಹಾಯ ಮಾಡಲು ವಿಶ್ವಾಸದಿಂದ ಮುಂದುವರಿಯುವಂತೆ ಹೊಸ ಧರ್ಮಾಧ್ಯಕ್ಷರಿಗೆ ಕರೆ ನೀಡಿದರು.

ಭ್ರಷ್ಟಾಚಾರ, ಅನ್ಯಾಯ ಮತ್ತು ಭಯವು ಮೇಲುಗೈ ಸಾಧಿಸುವ ಜಗತ್ತಿನಲ್ಲಿ, ಒಬ್ಬ ಧರ್ಮಾಧ್ಯಕ್ಷನು ಸತ್ಯ, ನ್ಯಾಯ ಮತ್ತು ಕರುಣೆಗಾಗಿ ನಿಲ್ಲುವ ನೈತಿಕ ದಿಕ್ಸೂಚಿಯಾಗಿರಬೇಕು, ಅವರ ಜೀವನವು ಇತರರಿಗೆ ಸ್ಫೂರ್ತಿಯಾಗಿರಬೇಕು ಎಂದು ಕಾರ್ಡಿನಲ್ ಬೊರವರು ಹೇಳಿದರು.
 

20 ಮಾರ್ಚ್ 2025, 13:40