MAP

Some South Sudanese faithful with their Bishop, Christian Carlassare of Bentiu Some South Sudanese faithful with their Bishop, Christian Carlassare of Bentiu 

ದಕ್ಷಿಣ ಸುಡಾನ್‌ನ ಧರ್ಮಾಧ್ಯಕ್ಷ: ನಾವೆಲ್ಲರೂ ಜನರಿಗೆ ಭರವಸೆಯನ್ನು ತರಲು ಕರೆಯಲ್ಪಟ್ಟಿದ್ದೇವೆ

ದಕ್ಷಿಣ ಸುಡಾನ್‌ನ ಬೆಂಟಿಯ ಧರ್ಮಾಧ್ಯಕ್ಷರು, ದಕ್ಷಿಣ ಸುಡಾನ್ ಜನರ ವಾಸ್ತವತೆಯನ್ನು ವಿವರಿಸುತ್ತಾರೆ, ಏಕೆಂದರೆ ದೇಶದ ದುರ್ಬಲ ಶಾಂತಿಗೆ ಹಿಂಸೆ, ರಾಜಕೀಯ ಅಸ್ಥಿರತೆ ಮತ್ತು ಅನಿರೀಕ್ಷಿತ ಹವಾಮಾನದ ಬೆದರಿಕೆಯಿದೆ.

ಫ್ರಾನ್ಸೆಸ್ಕಾ ಮೆರ್ಲೊ ಮತ್ತು ಮಾಸ್ಸಿಮಿಲಿಯಾನೊ ಮೆನಿಚೆಟ್ಟಿ

ವಿಶ್ವದ ಅತ್ಯಂತ ಕಿರಿಯ ರಾಷ್ಟ್ರವಾದ ದಕ್ಷಿಣ ಸುಡಾನ್ ಮತ್ತೊಮ್ಮೆ ಹಿಂಸಾಚಾರದ ಅಂಚಿಗೆ ತಲುಪಿದೆ. ಅಧ್ಯಕ್ಷರಾದ ಸಾಲ್ವಾ ಕಿರ್ ರವರಿಗೆ ನಿಷ್ಠರಾಗಿರುವ ದಕ್ಷಿಣ ಸುಡಾನ್ ಪೀಪಲ್ಸ್ ಡಿಫೆನ್ಸ್ ಫೋರ್ಸಸ್ (ದಕ್ಷಿಣ ಸುಡಾನ್‌ ಪ್ರಜೆಗಳ ರಕ್ಷಣಾ ಪಡೆಗಳು-SSPDF) ಮತ್ತು ಮೊದಲ ಉಪಾಧ್ಯಕ್ಷ ರೀಕ್ ಮಾಚರ್ ರವರನ್ನು ಬೆಂಬಲಿಸುವ ವೈಟ್ ಆರ್ಮಿ ಮಿಲಿಟಿಯಾದ ನಡುವಿನ ಘರ್ಷಣೆಗಳು ದೇಶದ ದುರ್ಬಲ ಶಾಂತಿಗೆ ಬೆದರಿಕೆ ಹಾಕುತ್ತಿವೆ.

ಜನರಿಗಾಗಿ ಒಂದು ಧರ್ಮಸಭೆ
ಈ ಬೆಳೆಯುತ್ತಿರುವ ಅಸ್ಥಿರತೆಯ ನಡುವೆ, ಬೆಂಟಿಯುವಿನ ಧರ್ಮಾಧ್ಯಕ್ಷರಾದ ಕ್ರಿಸ್ಟಿಯನ್ ಕಾರ್ಲಸ್ಸರೆರವರು ಶಾಂತಿಯನ್ನು ನಿರ್ಮಿಸಲು ಮತ್ತು ದಕ್ಷಿಣ ಸುಡಾನ್‌ನ ಜನರಿಗೆ ಭರವಸೆಯನ್ನು ನೀಡಲು ಧರ್ಮಸಭೆಯ ಬದ್ಧತೆಯನ್ನು ಪುನರುಚ್ಚರಿಸುತ್ತಾರೆ.

ಬೆಂಟಿಯ ಧರ್ಮಕ್ಷೇತ್ರವು 38,000 ಚದರ ಕಿಲೋಮೀಟರ್‌ಗಳನ್ನು ಒಳಗೊಂಡಿದೆ ಎಂದು ಅವರು ವಿವರಿಸುತ್ತಾರೆ. ಇದನ್ನು ಏಳು ಧರ್ಮಕೇಂದ್ರಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದಕ್ಕೂ ಧರ್ಮೋಪದೇಶಕರನ್ನು ಮತ್ತು ಸಾಮಾನ್ಯ ಪಾಲನಾ ಸೇವೆಯ ಕೆಲಸಗಾರರು ಬೆಂಬಲ ನೀಡುತ್ತಾರೆ, ಅವರು ಕ್ರೈಸ್ತ ಸಮುದಾಯಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಒಂಬತ್ತು ಧರ್ಮಕ್ಷೇತ್ರದ ಯಾಜಕರುಗಳಿದ್ದಾರೆ. ಆದ್ದರಿಂದ ಅವರು ಸಾಮಾನ್ಯ ನಾಯಕರ ಸಮರ್ಪಣೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ, ಅವರನ್ನು ಧರ್ಮಾಧ್ಯಕ್ಷರಾದ ಕಾರ್ಲಸ್ಸರೆರವರು "ಕ್ರೈಸ್ತ ಸಮುದಾಯಗಳ ಬೆನ್ನೆಲುಬು" ಎಂದು ವಿವರಿಸುತ್ತಾರೆ.

ಬೆಂಟಿಯು ದಕ್ಷಿಣ ಸುಡಾನ್‌ನ ಅತ್ಯಂತ ಬಡ ಪ್ರದೇಶಗಳಲ್ಲಿ ಒಂದಾಗಿದೆ. 2013 ಮತ್ತು 2020ರ ನಡುವಿನ ವರ್ಷಗಳ ಅಂತರ್ಯುದ್ಧವು ಈ ಪ್ರದೇಶವನ್ನು ಹಾಳುಗೆಡವಿದೆ, ಇಂದಿಗೂ ಅನೇಕ ಜನರು ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ. ಎರಡು ಪ್ರಮುಖ ಜನಾಂಗೀಯ ಗುಂಪುಗಳಾದ ನುಯೆರ್ ಮತ್ತು ಡಿಂಕಾಗೆ ಸೇರಿದ ಪ್ರದೇಶದಲ್ಲಿ ಸುಮಾರು 1,130,000 ಜನರು ವಾಸಿಸುತ್ತಿದ್ದಾರೆ. ಧರ್ಮಾಧ್ಯಕ್ಷರಾದ ಕಾರ್ಲಾಸ್ಸರೆರವರು ಹೇಳುತ್ತಾರೆ, ಈ ಎರಡು ಗುಂಪುಗಳ ನಡುವಿನ ಸಂಬಂಧ ನಿಜವಾಗಿಯೂ ಸರಳವಲ್ಲ. ಹೀಗಾಗಿ, ಧರ್ಮಕ್ಷೇತ್ರದ ಆದ್ಯತೆಯು ಸೇತುವೆಗಳನ್ನು ನಿರ್ಮಿಸುವುದಾಗಿದೆ.

ಸಂಘರ್ಷ ಮತ್ತು ಹವಾಮಾನದಿಂದ ಸ್ಥಳಾಂತರಗೊಂಡಿದ್ದಾರೆ
ದಕ್ಷಿಣ ಸುಡಾನ್‌ನಲ್ಲಿ ಸ್ಥಳಾಂತರಗೊಂಡ ಜನರಿಗೆ ಇರುವ ಅತಿದೊಡ್ಡ ಶಿಬಿರವಾದ ರುಕೋನಾ ಶಿಬಿರವು ಬೆಂಟಿಯುನಲ್ಲಿದೆ ಎಂದು ಕಾರ್ಲಸ್ಸರೆರವರು ಗಮನಿಸುತ್ತಾರೆ. ಇದು 2014ರಲ್ಲಿ ಸ್ಥಾಪನೆಯಾಯಿತು ಮತ್ತು 140,000 ಜನರಿಗೆ ನೆಲೆಯಾಗಿದೆ. ಇದು ಒಂದು ಅದ್ಭುತ ಸಂಖ್ಯೆ, ಆದರೆ ಹಿಂಸಾಚಾರದಿಂದ ತಮ್ಮ ಮನೆಗಳನ್ನು ಬಿಟ್ಟು ಹೋಗಲಾದ ಅಂದಾಜು 8,00,000, ದಕ್ಷಿಣ ಸುಡಾನ್‌ಗಳಲ್ಲಿ ಕೇವಲ ಒಂದು ಭಾಗ ಮಾತ್ರ. ಇದರ ಜೊತೆಗೆ, ಸುಮಾರು 130,000 ಸುಡಾನಿನ ನಿರಾಶ್ರಿತರು, ಮುಖ್ಯವಾಗಿ ಜನಾಂಗೀಯ ನುಬಾ, ಇಡಾ ಮತ್ತು ಝಮ್ ಝಮ್ ಸುತ್ತಮುತ್ತಲಿನ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ, ಇವು ಧರ್ಮಾಧ್ಯಕ್ಷರಾಧ ಕಾರ್ಲಸ್ಸರೆರವರ ಧರ್ಮಕ್ಷೇತ್ರದ ಪ್ರದೇಶದೊಳಗಿವೆ.

"ಶಾಂತಿ ಒಪ್ಪಂದಗಳು ತಲುಪಿದ್ದರೂ, ಜನರು ಇನ್ನೂ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ.

ಏಕತೆಗೆ ಕರೆ
ದಕ್ಷಿಣ ಸುಡಾನ್ ಜನರ ಭವಿಷ್ಯ ಅನಿಶ್ಚಿತವಾಗಿದೆ, ರಾಜಕೀಯವು ಶಾಂತತೆ ಮತ್ತು ಸ್ಥಿರತೆಯನ್ನು ತರಬಹುದಾದರೂ, ದಕ್ಷಿಣ ಸುಡಾನ್‌ನ ರಾಜಕೀಯ ಭವಿಷ್ಯವು ಏನಾಗುವುದೋ ಎಂಬುದು ತಿಳಿದಿಲ್ಲ, ಇತ್ತೀಚೆಗೆ ಚುನಾವಣೆಗಳು ಎರಡನೇ ಬಾರಿಗೆ ಮುಂದೂಡಲ್ಪಟ್ಟಿವೆ. ದೇಶದ ಸನ್ನದ್ಧತೆಯ ಬಗ್ಗೆ ಧರ್ಮಾಧ್ಯಕ್ಷರಾದ ಕಾರ್ಲಸ್ಸರೆರವರು ಕಳವಳ ವ್ಯಕ್ತಪಡಿಸುತ್ತಾರೆ, ವಿಳಂಬವು ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಗಮನಿಸುತ್ತಾರೆ. ನಾಗರಿಕ ಸಮಾಜ ಮತ್ತು ನಾಯಕರು ಚುನಾವಣೆಗಳಿಗೆ ಸಿದ್ಧರಾಗುವುದು, "ಮತದಾರರಿಗೆ ಶಿಕ್ಷಣ ನೀಡುವುದು ಮತ್ತು ಜನರು ತಮ್ಮ ಬುಡಕಟ್ಟು ಜನಾಂಗದವರ ಹಿತಾಸಕ್ತಿಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರೂಪಿಸುವುದು ಹಾಗೂ ಕೆಲವು ಗುಂಪಿನ ಹಿತಾಸಕ್ತಿಗಾಗಿ ಅವರು ಏನನ್ನು ಸಂರಕ್ಷಿಸುತ್ತಾರೆ ಎಂಬುದನ್ನು ಆಧರಿಸಿ ಅಲ್ಲ, ಬದಲಿಗೆ ಇಡೀ ದೇಶ ಮತ್ತು ರಾಷ್ಟ್ರದ ಸಾಮಾನ್ಯ ಹಿತದೃಷ್ಟಿಯಿಂದ ನೈಜವಾಗಿ ಕೆಲಸ ಮಾಡುವ ರಾಜಕಾರಣಿಗಳನ್ನು ರೂಪಿಸುವುದು" ಬಹಳ ಮುಖ್ಯವಾಗಿದೆ.

ದೇಶದ GDP ಯ 85% ರಷ್ಟಿರುವ ತೈಲ ಆದಾಯವನ್ನು ಒಂದು ಕಾಲದಲ್ಲಿ ಸ್ಥಿರತೆಗೆ ಅಡಿಪಾಯವೆಂದು ಪರಿಗಣಿಸಲಾಗಿತ್ತು. ಆದರೆ, ಅದರ ಬದಲಾಗಿ, ಅವರು ಸಂಘರ್ಷ ಮತ್ತು ವಿಭಜನೆಗೆ ಉತ್ತೇಜನ ನೀಡಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಕಾರ್ಲಸ್ಸರೆರವರು ಹೇಳುತ್ತಾರೆ: "ದಕ್ಷಿಣ ಸುಡಾನ್ ತನ್ನ ತೈಲ ಸಂಪತ್ತಿನಿಂದ ಅಭಿವೃದ್ಧಿ ಹೊಂದುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈ ಆದಾಯಗಳು ಹಿಂಸಾಚಾರಕ್ಕೆ ಕಾರಣವಾಗಿವೆ."

ಸರ್ಕಾರಿ ಪಡೆಗಳು ಮತ್ತು ವಿರೋಧ ಪಕ್ಷದ ಬೆಂಬಲಿಗರ ನಡುವೆ ನಾಸರ್‌ನಲ್ಲಿ ನಡೆದ ಇತ್ತೀಚಿನ ಘರ್ಷಣೆಗಳನ್ನು ನೆನಪಿಸುತ್ತಾ, ಧರ್ಮಾಧ್ಯಕ್ಷರು ದೇಶಕ್ಕೆ ಶಾಂತಿ ತರಲು, ಮಾತುಕತೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತಾರೆ. ಬೆಳೆಯುತ್ತಿರುವ ಘರ್ಷಣೆಯಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಸಂಧಾನದ ಸಂವಾದವು ತುಂಬಾ ಕಷ್ಟಕರವಾಗಿದೆ ಮತ್ತು ನಾವು ಸಾಮಾನ್ಯ ತಿಳುವಳಿಕೆಗೆ ಬರಲು ಹಾಗೂ ಅಹಿಂಸಾತ್ಮಕ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ, "ದಕ್ಷಿಣ ಸುಡಾನ್ ನ್ನು ಶಾಂತಿಯಿಂದ ಒಟ್ಟುಗೂಡಿಸಲು" ಏಕತೆಯ ದೃಷ್ಟಿಕೋನವು ನಿರ್ಣಾಯಕವಾಗಿದೆ ಎಂದು ಅವರು ಗಮನಸೆಳೆದರು.

ಧರ್ಮಸಭೆಯ ಭರವಸೆಯ ಧ್ಯೇಯ
ಸವಾಲುಗಳ ನಡುವೆಯೂ, ಧರ್ಮಸಭೆಯು ದಕ್ಷಿಣ ಸುಡಾನ್ ಜನರೊಂದಿಗೆ ನಿಲ್ಲುವುದನ್ನು ಮುಂದುವರೆಸಿದೆ. ಸಂಧಾನದ ಸೇತುವೆಗಳನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಧರ್ಮಾಧ್ಯಕ್ಷರಾದ ಕಾರ್ಲಸ್ಸರೆರವರು ಹೇಳುತ್ತಾರೆ. ದೇಶವು ರಾಜಕೀಯ ಅನಿಶ್ಚಿತತೆ, ಸ್ಥಳಾಂತರ ಮತ್ತು ಪರಿಸರ ವಿಕೋಪಗಳನ್ನು ಎದುರಿಸುತ್ತಿರುವಾಗ, ಧರ್ಮಸಭೆಯು ತನ್ನ ಏಕತೆ, ನ್ಯಾಯ ಮತ್ತು ಶಾಶ್ವತ ಶಾಂತಿಗಾಗಿ ಕರೆಗಳ ಮೂಲಕ ಭರವಸೆಯನ್ನು ತರುವ ಕಾರ್ಯಗಳನ್ನು ಮುಂದುವರೆಸಿದೆ.
 

13 ಮಾರ್ಚ್ 2025, 12:44