MAP

Internally displaced Congolese families take refuge in schools in Sake Internally displaced Congolese families take refuge in schools in Sake 

ಡಿಆರ್‌ಸಿಯ ಗೋಮಾದ ಧರ್ಮಾಧ್ಯಕ್ಷ: ಮಿಲಿಟರಿ ಕ್ರಮ ಪರಿಹಾರವಲ್ಲ

ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಧರ್ಮಾಧ್ಯಕ್ಷರಾದ ವಿಲ್ಲಿ ನ್ಗುಂಬಿ ನ್ಗೆಂಗೆಲೆರವರು "ದೇಶಕ್ಕೆ ಶಾಂತಿ ಮತ್ತು ಏಕತೆಯ ಹಾದಿಯನ್ನು ಕಂಡುಕೊಳ್ಳಲು ಸಂವಾದವನ್ನು ಆರಿಸಿಕೊಂಡು, ಶಾಂತಿಯುತ ನಿರ್ಣಯಗಳಿಗಾಗಿ" ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಶ್ಚಿಯನ್ ಲೊಸಾಂಬೆ, ಎಸ್‌ಜೆ ಮತ್ತು ಕೀಲ್ಸ್ ಗುಸ್ಸಿ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಭಾಗದಲ್ಲಿ ಸರ್ಕಾರಿ ಪಡೆಗಳು ಮತ್ತು ರುವಾಂಡದ ಬೆಂಬಲಿತ M23 ಬಂಡುಕೋರರ ನಡುವೆ ಉದ್ವಿಗ್ನತೆ ಮತ್ತು ಸಂಘರ್ಷ ಮುಂದುವರೆದಿದೆ. ಮಾತುಕತೆಗಳ ಮೂಲಕ ಶಾಂತಿಯ ಮಧ್ಯಸ್ಥಿಕೆ ವಹಿಸಲು ಹಲವಾರು ವಿಫಲ ಪ್ರಯತ್ನಗಳ ಹೊರತಾಗಿಯೂ, ಗೋಮಾದ ಧರ್ಮಾಧ್ಯಕ್ಷರಾದ ವಿಲ್ಲಿ ನ್ಗುಂಬಿ ನ್ಗೆಂಗೆಲೆರವರು ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಜನವರಿ ತಿಂಗಳ ಅಂತ್ಯದಲ್ಲಿ ಸಂಘರ್ಷ ಉಲ್ಬಣಗೊಂಡ ನಂತರ "ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ" ಎಂದು ಹೇಳಿದರು.

ಆದರೂ, ಹಿಂಸಾಚಾರದ ನಡುವೆಯೂ, ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಬಿಕ್ಕಟ್ಟನ್ನು ಜನಸಂಖ್ಯೆಯು ಎದುರಿಸುತ್ತಿರುವ ಧೈರ್ಯ ಮತ್ತು ದೃಢಸಂಕಲ್ಪವನ್ನು ಅವರು ಶ್ಲಾಘಿಸಿದರು.

“ಜನರು ಭಯದ ವಾತವರಣದಲ್ಲಿ ಜೀವಿಸುತ್ತಾರೆ”
ಗೋಮಾವನ್ನು M23 ಬಂಡುಕೋರರು ವಶಪಡಿಸಿಕೊಂಡು ಸುಮಾರು ಎರಡು ತಿಂಗಳುಗಳಾಗಿವೆ ಮತ್ತು ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ ಎಂದು ಧರ್ಮಾಧ್ಯಕ್ಷರಾದ ಎನ್‌ಗೆಂಗೆಲೆರವರು ವಿವರಿಸಿದ್ದಾರೆ. ಒಂದೇ ಒಂದು ವ್ಯತ್ಯಾಸವೆಂದರೆ ಯುದ್ಧವು ಗೋಮಾದಲ್ಲಿರುವುದಿಲ್ಲ, ಆದರೆ ಯುದ್ಧವು ಧರ್ಮಕ್ಷೇತ್ರದ ಇತರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದೆ" ಎಂದು ಅವರು ವಿವರಿಸಿದರು. ಅಪಹರಣ ಮತ್ತು ಹತ್ಯೆಗಳು ಈ "ಹೊಸ ರೂಢಿಯ" ಭಾಗವೇ ಎಂಬ ಭಯದಲ್ಲೇ ಜನರು ಜೀವಿಸುತ್ತಿದ್ದಾರೆ.

ಪ್ರತಿದಿನ ಜೀವನವು ತೀವ್ರವಾಗಿ ಬದಲಾಗಿದೆ ಮತ್ತು "ಶಸ್ತ್ರಸಜ್ಜಿತ ಡಕಾಯಿತರು ಹಣ ಸುಲಿಗೆ ಮಾಡಲು ಮತ್ತು ಲೂಟಿ ಮಾಡಲು ಮನೆಗಳಿಗೆ ಪ್ರವೇಶಿಸುವುದರಿಂದ ರಾತ್ರಿಯಲ್ಲಿ ನಿದ್ರಿಸುವುದು ಅಸಾಧ್ಯವಾಗಿದೆ" ಎಂದು ಧರ್ಮಾಧ್ಯಕ್ಷರಾದ ನ್ಗೆಂಗೆಲೆರವರು ನೆನಪಿಸಿಕೊಂಡರು.

ತಪಸ್ಸುಕಾಲದಲ್ಲಿ ಬೆಳೆಯುತ್ತಿರುವ ಬಡತನ
ಆದರೂ, ಸಂಘರ್ಷದ ಹೊರತಾಗಿಯೂ, ಮಾರ್ಚ್ 5 ರಂದು ತಪಸ್ಸುಕಾಲದ ಆರಂಭವನ್ನು ಆಚರಿಸಲು ಧರ್ಮಾಧ್ಯಕ್ಷರಾದ ನ್ಗೆಂಗೆಲೆರವರ ದೇವಾಲಯವು ಬೂದಿ ಬುಧವಾರದಂದು ತುಂಬಿತ್ತು. ನಗರದ ಎಲ್ಲಾ ಧರ್ಮಕೇಂದ್ರಗಳಲ್ಲಿ, ಭದ್ರತಾ ಪರಿಸ್ಥಿತಿಯ ಹೊರತಾಗಿಯೂ ವಾತಾವರಣವು ಒಂದೇ ಆಗಿತ್ತು ಎಂದು ಗೋಮಾದ ಧರ್ಮಾಧ್ಯಕ್ಷರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು.

ಸಂಘರ್ಷದ ನಡುವೆಯೂ ತಪಸ್ಸುಕಾಲದ ಜೀವನ
ಈ ಪ್ರದೇಶದಲ್ಲಿ ಬಡತನದ ಮಟ್ಟ ಹೆಚ್ಚಾದಂತೆ, ಕ್ರೈಸ್ತರು ಈ ತಪಸ್ಸುಕಾಲವನ್ನು "ಉತ್ತಮ ಭವಿಷ್ಯಕ್ಕಾಗಿ, ಶಾಂತಿಯ ಭವಿಷ್ಯಕ್ಕಾಗಿ ಆಶಿಸಲು" ಬಳಸಬಹುದು ಎಂದು ಧರ್ಮಾಧ್ಯಕ್ಷರು ಹೇಳಿದರು. ಸಮಾಜದಲ್ಲಿ ಮತ್ತು ಮನಸ್ಸಿನಲ್ಲಿ ಹಲವಾರು ಸವಾಲುಗಳಿದ್ದರೂ ಸಹ, ಅವರು "ಪರಸ್ಪರ ಒಗ್ಗಟ್ಟನ್ನು ತೋರಿಸುತ್ತಲೇ ಇದ್ದಾರೆ, ವಿಶೇಷವಾಗಿ ಬಡವರ ಕಡೆಗೆ, ವಿಶೇಷವಾಗಿ ಯುದ್ಧ-ಸ್ಥಳಾಂತರಗೊಂಡ ಜನರ ಕಡೆಗೆ, ಅವರಲ್ಲಿ ಅನೇಕರು ಮಿಲಿಟರಿ ಕುಟುಂಬಗಳು" ಪರಸ್ಪರ ಒಗ್ಗಟ್ಟನ್ನು ತೋರಿಸುತ್ತಲೇ ಇದ್ದಾರೆ ಎಂದು ಅವರು ಹೇಳಿದರು.

ಮಿಲಿಟರಿ ಕ್ರಮ ಪರಿಹಾರವಲ್ಲ
ಅಂಗೋಲಾದ ಲುವಾಂಗಾದಲ್ಲಿ ಸರ್ಕಾರಿ ಪಡೆಗಳು ಮತ್ತು M23 ಬಂಡುಕೋರರ ನಡುವೆ ಶಾಂತಿ ಮಾತುಕತೆ ಮಾರ್ಚ್ 18, ಮಂಗಳವಾರ ನಿಗದಿಯಾಗಿತ್ತು. ಒಂದು ದಿನ ಮೊದಲು, M23 ಗುಂಪು ತನ್ನ ಸದಸ್ಯರ ವಿರುದ್ಧ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಮಾತುಕತೆಗೆ ಅಡ್ಡಿಯಾಗಿ ಉಲ್ಲೇಖಿಸಿ ತನ್ನ ವಾಪಸಾತಿಯನ್ನು ಘೋಷಿಸಿತು. ಅಂಗೋಲಾ ಎರಡು ಗುಂಪುಗಳ ನಡುವೆ ಮಧ್ಯವರ್ತಿಯಾಗಲು ನಿರ್ಧರಿಸಲಾಯಿತು.

ಈ ಬೆಳವಣಿಗೆಯಿಂದ ಧರ್ಮಾಧ್ಯಕ್ಷರಾದ ನ್ಗೆಂಗೆಲೆರವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. ಅವರಿಗೆ, ಶಾಂತಿಯನ್ನು ಸಾಧಿಸುವಲ್ಲಿ ಸಂಭಾಷಣೆ ಅತ್ಯಗತ್ಯ ಭಾಗವಾಗಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕಾರದಲ್ಲಿರುವವರು ಸಂವಾದಕ್ಕಾಗಿ ಪ್ರತಿಪಾದಿಸಬಹುದು ಉತ್ತಮ ಎಂದು ಅವರು ಆಶಿಸುತ್ತಾರೆ. ಈ ಸಂಘರ್ಷಕ್ಕೆ ಮಿಲಿಟರಿ ಪರಿಹಾರದಲ್ಲಿ ನಮಗೆ ಹೆಚ್ಚಿನ ನಂಬಿಕೆ ಇಲ್ಲ, ಏಕೆಂದರೆ ಯುದ್ಧವು ಸಾವಿರಾರು ಜೀವಗಳನ್ನು ನಾಶಪಡಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಬಡತನದ ಅಂತರವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

 

18 ಮಾರ್ಚ್ 2025, 14:01