ಪಶ್ಚಿಮ ದಂಡೆಯಲ್ಲಿ, ಶಾಲೆಗಳು ಯುದ್ಧದ ಪರೋಕ್ಷ ಸಂತ್ರಸ್ತರಾಗಿವೆ
ಮರೀನ್ ಹೆನ್ರಿಯಟ್
ಕೈರೋದಲ್ಲಿ ನಡೆದ ಮಧ್ಯಪ್ರಾಚ್ಯ ಕ್ರೈಸ್ತ ಶಾಲೆಗಳ ಸಮ್ಮೇಳನದಲ್ಲಿ ರಾಮಲ್ಲಾ ಮತ್ತು ಬೆತ್ಲೆಹೇಮ್‌ನ ಪ್ಯಾಲಸ್ತೀನಿಯದ ಶಿಕ್ಷಕರು ಮತ್ತು ಶಾಲಾ ನಾಯಕರ ಗುಂಪು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯುತ್ತಾರೆ. ಈಜಿಪ್ಟ್‌ಗೆ ಪ್ರಯಾಣಿಸುವಾಗ ವ್ಯವಸ್ಥಾಪನಾ ಮತ್ತು ಆಡಳಿತಾತ್ಮಕ ಸವಾಲುಗಳ ಹೊರತಾಗಿಯೂ, ಈ ಸಭೆಯು ಮನೆಯಲ್ಲಿನ ಪ್ರಕ್ಷುಬ್ಧತೆಯಿಂದ ಸ್ವಾಗತಾರ್ಹ ವಿರಾಮವಾಗಿದೆ.
"ನಾವು ಸಂಪರ್ಕದ ಒಂದು ಭಾಗವಾಗಿರುವುದು, ಬೆಂಬಲವನ್ನು ಅನುಭವಿಸುವುದು ಒಳ್ಳೆಯದು ಎಂದು ಬೆತ್ಲೆಹೇಮ್‌ನ ಸೇಂಟ್ ಜೋಸೆಫ್ ಸಿಸ್ಟರ್ಸ್ ಗರ್ಲ್ಸ್ (ಸಂತ ಜೋಸೆಫರ ಬಾಲಕಿಯರ ಶಾಲೆ) ಶಾಲೆಯ ಗಣಿತ ಶಿಕ್ಷಕಿ ಸಮಿಯಾ ಅಲಾಮಾರವರು ಹೇಳುತ್ತಾರೆ, ದಣಿದಿದ್ದರೂ, ಅವರು ಮಾನಸಿಕವಾಗಿ ಬಲಶಾಲಿಯಾಗಿದ್ದಾರೆ, ಈ ಕಷ್ಟದ ಸಮಯದಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇವರ ಸಮೀಪದಲ್ಲಿರುವ, ಬೆತ್ಲೆಹೇಮ್‌ನ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಟೀನಾ ಹಜ್ಬೌನ್, "ದುಃಖದ ನಡುವೆಯೂ ನಾವು ನಗುತ್ತಲೇ ಇರಬೇಕು" ಎಂದು ಹೇಳುತ್ತಾರೆ.
ಶಿಕ್ಷಣದ ಲಭ್ಯತೆಗೆ ಅಡ್ಡಿಯಾಗಿದೆ
ಅಕ್ಟೋಬರ್ 7, 2023 ರಂದು ಭುಗಿಲೆದ್ದ ಯುದ್ಧವು, 56 ವರ್ಷಗಳ ಇಸ್ರಯೇಲ್ ಮಿಲಿಟರಿ ಆಕ್ರಮಣದಲ್ಲಿ ಹೋರಾಡುತ್ತಿರುವ ಪ್ಯಾಲಸ್ತೀನಿಯದ ಶಿಕ್ಷಣವನ್ನು ಈಗಾಗಲೇ ದುರ್ಬಲ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಇದಕ್ಕೆ ನಂಬಲಾಗದಷ್ಟು ತಾಳ್ಮೆ ಬೇಕು ಎಂದು ಪ್ಯಾಲಸ್ತೀನಿಯದ ಪ್ರಾಂತ್ಯಗಳಾದ್ಯಂತ ಹತ್ತು ಲತೀನ್ ಶಾಲೆಗಳಲ್ಲಿ ಫ್ರೆಂಚ್ ಭಾಷಾ ಶಿಕ್ಷಣವನ್ನು ನೋಡಿಕೊಳ್ಳುವ ಫ್ರೆಂಚ್ ಸನ್ಯಾಸಿನಿ ಸಿಸ್ಟರ್ ಸಿಲೋಯೇನ್ ರವರು ವಿವರಿಸುತ್ತಾರೆ.
ತರಗತಿಯ ಹೊರಗೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದೆ
ದಶಕಗಳ ಸಂಘರ್ಷ, ಪುನರಾವರ್ತಿತ ಆಕ್ರಮಣಗಳು ಮತ್ತು ಮುಂದುವರೆಯುತ್ತಿರುವ ವಸಾಹತು ವಿಸ್ತರಣೆಯು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. "ನಾವು ಒಂದು ನಿರ್ಣಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ" ಎಂದು ಜೆರುಸಲೆಮ್‌ನ ಮೆಲ್ಕೈಟ್ ಪಿತೃಪ್ರಧಾನದ ಭಾಗವಾಗಿರುವ ರಮಲ್ಲಾದ ಗ್ರೀಕ್-ಕಥೋಲಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನೈಲಾ ರಬಾರವರು ಹೇಳುತ್ತಾರೆ. ಬೋಧನೆ ಎಂದರೆ ಕೇವಲ ಪಾಠಗಳನ್ನು ನೀಡುವುದಲ್ಲ - ನಾವು ನಮ್ಮ ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿಯೂ ಕಾಳಜಿ ವಹಿಸಬೇಕು.
ಅವರ ಧ್ವನಿಯಲ್ಲಿ ಆಯಾಸ ಎದ್ದು ಕಾಣುತ್ತಾ, "ಖಿನ್ನತೆಯು, ಮಕ್ಕಳು ಮತ್ತು ಅವರ ಕುಟುಂಬಗಳ ಮೇಲೆ ಮಾತ್ರವಲ್ಲದೆ ಶಿಕ್ಷಕರ ಮೇಲೂ ಪರಿಣಾಮ ಬೀರುತ್ತದೆ" ಎಂದು ಅವರು ಹೇಳುತ್ತಾರೆ.
ಇದರ ಹೊರತಾಗಿಯೂ, ಅವರು ತಮ್ಮ ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಬದ್ಧರಾಗಿದ್ದಾರೆ. ಅವರ ಮನಸ್ಸಿನಲ್ಲಿ ಹಲವು ವಿರೋಧಾಭಾಸಗಳಿವೆ. ಶಾಲೆಯಲ್ಲಿ, ನಾವು ಅವರಿಗೆ ಅವರ ಭಾವನೆಗಳನ್ನು ವ್ಯಕ್ತಪಡಿಸಲು, ಕೇಳಿಸಿಕೊಂಡಂತೆ ಭಾಸವಾಗಲು ಕಲಿಸುತ್ತೇವೆ ಎಂದು ಅವರು ಹೇಳುತ್ತಾರೆ.
ಆಕೆಯ ಮಾತುಗಳನ್ನು ಬೆತ್ಲಹೇಮ್ ನ ಶಿಕ್ಷಕರು ಪ್ರತಿಧ್ವನಿಸುತ್ತಾರೆ. ನಮ್ಮ ವಿದ್ಯಾರ್ಥಿಗಳು, 'ಭವಿಷ್ಯವಿಲ್ಲದಿದ್ದರೆ ನಾವು ಏಕೆ ಅಧ್ಯಯನ ಮಾಡಬೇಕು?' ಎಂದು ನಮ್ಮನ್ನು ಪ್ರಶ್ನೆಇಸುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. ಆದರೆ ಅವರು ವಿದ್ಯಾಭ್ಯಾಸವನ್ನು ಬಿಟ್ಟುಕೊಡಲು ನಿರಾಕರಿಸುತ್ತಾರೆ. ಈ ಮಕ್ಕಳು ಪ್ಯಾಲಸ್ತೀನಲ್ಲಿಯೇ ಉಳಿಯಲು ಬಯಸುತ್ತಾರೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
ಟೀನಾ ಹಜ್ಬೌನ್ ತಂತ್ರಜ್ಞಾನದಲ್ಲಿ ಮಹಿಳೆಯರಿಗಾಗಿ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ, ಇದು ಯುವತಿಯರಿಗೆ ಪ್ರೇರಣೆ ಮಾತ್ರವಲ್ಲದೆ ಅವರ ತಾಯ್ನಾಡಿನಲ್ಲಿ ಸ್ವಾತಂತ್ರ್ಯಕ್ಕಾಗಿ ಸಾಧನಗಳನ್ನು ಸಹ ನೀಡುತ್ತದೆ.
ಯುನಿಸೆಫ್ ಪ್ರಕಾರ, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ನಲ್ಲಿ 782,000 ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. ಆದಾಗ್ಯೂ, ಅಕ್ಟೋಬರ್ 2023 ರಿಂದ, ಪ್ಯಾಲೇಸ್ಟಿನಿಯನ್ ಶಿಕ್ಷಣ ಸಚಿವಾಲಯವು ಆಕ್ರಮಿತ ಪ್ರದೇಶಗಳಲ್ಲಿ 8% ರಿಂದ 20% ರಷ್ಟು ಶಾಲೆಗಳನ್ನು ಮುಚ್ಚುವಂತೆ ಒತ್ತಾಯಿಸಲಾಗಿದೆ ಎಂದು ಅಂದಾಜಿಸಿದೆ.
ಅಹಿಂಸೆಗಾಗಿ ಶಿಕ್ಷಣ
ರಾಜಕೀಯ ಚರ್ಚೆಗಳನ್ನು ಅಧಿಕೃತವಾಗಿ ತರಗತಿ ಕೋಣೆಗಳಿಂದ ಹೊರಗಿಡಲಾಗಿದ್ದರೂ, ಶಿಕ್ಷಕರು ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಗುಂಪಿನ ಚರ್ಚೆಗಳು ಮತ್ತು ಮುಖಾಮುಖಿ ಸಂಭಾಷಣೆಗಳಲ್ಲಿ, ಸಂಭಾಷಣೆಗೆ ಸ್ಥಳಾವಕಾಶ ಮಾಡಿಕೊಡುತ್ತಾರೆ. ಇತರರನ್ನು ಅರ್ಥಮಾಡಿಕೊಳ್ಳುವುದು, ನಮಗಿಂತ ವಿಭಿನ್ನವಾಗಿ ಯೋಚಿಸುವ ಜನರೊಂದಿಗೆ ಸಂವಹನ ನಡೆಸುವುದು, ವ್ಯತ್ಯಾಸಗಳನ್ನು ಸ್ವೀಕರಿಸುವುದರ ಮೇಲೆ ನಾವು ಹೆಚ್ಚಿನ ಗಮನ ಹರಿಸುತ್ತೇವೆ ಎಂದು ನೈಲಾ ರಬಾರವರು ವಿವರಿಸುತ್ತಾರೆ. ಈ ಪ್ರದೇಶದ ಎಲ್ಲಾ ಕ್ರೈಸ್ತ ಶಾಲೆಗಳಂತೆ, ಆಕೆಯ ಶಾಲೆಯೂ ಸಹ ಎಲ್ಲಾ ಧರ್ಮದ ಮಕ್ಕಳನ್ನು ಸ್ವಾಗತಿಸುತ್ತದೆ.
"ಮಧ್ಯಪ್ರಾಚ್ಯದಾದ್ಯಂತ, ನಾವು ಅಹಿಂಸೆಯನ್ನು ಕಲಿಸಬೇಕು - ಸಂಘರ್ಷಕ್ಕೆ ಹೇಗೆ ಪ್ರತಿಕ್ರಿಯಿಸಬೇಕು, ಶಾಂತವಾಗಿರುವುದು ಹೇಗೆ, ಶಾಂತಿಯುತ ಪರಿಹಾರಗಳನ್ನು ಹೇಗೆ ಕಂಡುಕೊಳ್ಳಬೇಕು, ಪರಸ್ಪರ ಆಲಿಸುವುದು ಮತ್ತು ಬೆಂಬಲಿಸುವುದು ಹೇಗೆ" ಎಂದು ಸಿಸ್ಟರ್ ಸಿಲೋಯೇನ್ ರವರು ಹೇಳುತ್ತಾರೆ.
ಕ್ರೈಸ್ತ ಧರ್ಮದ ಜನ್ಮಸ್ಥಳ ಮತ್ತು ಅಂತರಧರ್ಮೀಯ ಸಹಬಾಳ್ವೆಯ ಸಂಕೇತವಾದ ಬೆತ್ಲಹೇಮ್ ನಲ್ಲಿ, ಸಂತ ಜೋಸೆಫರ ಶಾಲೆಯು 800 ಹುಡುಗಿಯರಿಗೆ ಶಿಕ್ಷಣ ನೀಡುತ್ತದೆ, ಅವರಲ್ಲಿ ಅರ್ಧದಷ್ಟು ಜನರು ಮುಸ್ಲಿಮರು. ಆದರೂ ಯಾವುದೇ ಸಮಸ್ಯೆಗಳಿಲ್ಲ ಎಂದು ಸಮಿಯಾ ಅಲಾಮಾರವರು ಸರಳವಾಗಿ ಹೇಳುತ್ತಾರೆ. ಇಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಪರಸ್ಪರ ಮಾತನಾಡಲು ಒಗ್ಗಿಕೊಂಡಿರುತ್ತಾರೆ.
ಯುದ್ಧದ ಆರ್ಥಿಕ ಪರಿಣಾಮ
ಶಾಲೆಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ; ಅವು ಕೂಡ ಯುದ್ಧದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಭಾರವನ್ನು ಅನುಭವಿಸುತ್ತವೆ.
ಉದಾಹರಣೆಗೆ, ಬೆತ್ಲೆಹೇಮ್ ನಲ್ಲಿ, ತೀರ್ಥಯಾತ್ರೆಗಳು ಬಹುತೇಕ ರಾತ್ರೋರಾತ್ರಿ ನಿಂತುಹೋದವು. ತಮ್ಮ ಜೀವನೋಪಾಯಕ್ಕಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದ ಅನೇಕ ಪೋಷಕರು, ಈಗ ಈಗಾಗಲೇ ಇರುವ ಕನಿಷ್ಠ ಶಾಲಾ ಶುಲ್ಕವನ್ನು ಸಹ ಪಾವತಿಸಲು ಹೆಣಗಾಡುತ್ತಿದ್ದಾರೆ.
ಈ ಆರ್ಥಿಕ ಒತ್ತಡವು ಮಕ್ಕಳು ಮತ್ತು ಹದಿಹರೆಯದವರ ಮೇಲೂ ಬರುತ್ತಿದೆ. ಅವರಿಗೆ ಭವಿಷ್ಯದ ಕನಸುಗಳಿವೆ, ಆದರೆ ಅವರು ವಾಸ್ತವವಾದಿಗಳೂ ಆಗಿದ್ದಾರೆ ಎಂದು ಸಿಸ್ಟರ್ ಸಿಲೋಯೇನ್ ರವರು ಸಹಾನುಭೂತಿಯಿಂದ ಹೇಳುತ್ತಾರೆ. ಅವರಿಗೆ ಅವಕಾಶಗಳನ್ನು ಪೂರೈಸುವ ಎಷ್ಟು ಬಾಗಿಲುಗಳು ಮುಚ್ಚಲ್ಪಟ್ಟಿವೆ ಎಂದು ಅವರು ನೋಡುತ್ತಾರೆ ಮತ್ತು ಹೇಗಾದರೂ, ಈ ವಾಸ್ತವದೊಂದಿಗೆ ಬದುಕಲು ಅವರುಗಳು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಅವರು ಹೇಳುತ್ತಾರೆ.