MAP

 Bishop Earl Fernandes with the seminarians from the Diocese of Columbus OH at the Pontifical College Josephinum_foto don Paweł Rytel-Andrianik Bishop Earl Fernandes with the seminarians from the Diocese of Columbus OH at the Pontifical College Josephinum_foto don Paweł Rytel-Andrianik 

ಅಮೆರಿಕದ ಕೊಲಂಬಸ್ ಧರ್ಮಕ್ಷೇತ್ರದಲ್ಲಿ ಗುರುವಿದ್ಯಾಮಂದಿರದ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ

ಅಮೆರಿಕದ ಕೊಲಂಬಸ್ ಧರ್ಮಕ್ಷೇತ್ರದಲ್ಲಿ, ಧರ್ಮಾಧ್ಯಕ್ಷರಾದ ಅರ್ಲ್ ಫೆರ್ನಾಂಡಿಸ್ ರವರ ನಾಯಕತ್ವ ಮತ್ತು ದೈವಕರೆಯ ಪ್ರೋತ್ಸಾಹದ ಅಡಿಯಲ್ಲಿ ಕೇವಲ ಎರಡೂವರೆ ವರ್ಷಗಳಲ್ಲಿ ಯಾಜಕತ್ವಕ್ಕೆ ಅಭ್ಯರ್ಥಿಗಳ ಸಂಖ್ಯೆ 17 ರಿಂದ 40ಕ್ಕೆ ಏರಿದೆ.

ಧರ್ಮಗುರು ಪಾವೆಲ್ ರೈಟೆಲ್-ಆಂಡ್ರಿಯಾನಿಕ್ ಮತ್ತು ವೊಜ್ಸಿಕ್ ರೋಗಾಸಿನ್

ಮೇ 2022ರಲ್ಲಿ ನಡೆದ ತಮ್ಮ ಧರ್ಮಾಧ್ಯಕ್ಷೀಯ ದೀಕ್ಷೆಯ ಸಮಯದಲ್ಲಿ, ಧರ್ಮಾಧ್ಯಕ್ಷರಾದ ಅರ್ಲ್ ಫೆರ್ನಾಂಡಿಸ್ ರವರು ಕೊಲಂಬಸ್ ಧರ್ಮಕ್ಷೇತ್ರದಲ್ಲಿ, ಆ ವರ್ಷ ಯಾಜಕರಿಗಿಂತ ಅಧಿಕ ಸಂಖ್ಯೆಯಲ್ಲಿ ಧರ್ಮಾಧ್ಯಕ್ಷರುಗಳಿಗೆ ದೀಕ್ಷೆ ನೀಡಲಾಯಿತು ಎಂದು ವ್ಯಂಗ್ಯವಾಡಿದರು.

ಸಭೆಯು ಈ ಮಾತುಗಳನ್ನು ಕೇಳಿ ನಕ್ಕಿತು, ಆದರೆ ಧರ್ಮಾಧ್ಯಕ್ಷರಾದ ಫೆರ್ನಾಂಡಿಸ್ ರವರ ಹೇಳಿಕೆಯು ಪರಿಸ್ಥಿತಿಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ.

"ಆ ಸಮಯದಲ್ಲಿ ಧರ್ಮಕ್ಷೇತ್ರದಲ್ಲಿ, ಹೊಸದಾಗಿ ನೇಮಕಗೊಂಡ ಅಥವಾ ಹೊಸದಾಗಿ ಯಾಜಕ ದೀಕ್ಷೆಯನ್ನು ಸ್ವೀಕರಿಸಿದ ಯಾಜಕರು ಯಾರೂ ಇರಲಿಲ್ಲ ಮತ್ತು ನಾನು ಮೊದಲಿಗೆ ಎರಡು ಸವಾಲುಗಳನ್ನು ಎದುರಿಸಿದೆ: ಸುವಾರ್ತಾಪ್ರಸಾರ ಮತ್ತು ಯಾಜಕತ್ವದ ದೈವಕರೆಗಳನ್ನು ಹೆಚ್ಚಿಸುವ ಪ್ರಯತ್ನಗಳು" ಎಂದು ಧರ್ಮಾಧ್ಯಕ್ಷರಾದ ಫೆರ್ನಾಂಡಿಸ್ ರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು.

ಫೆಬ್ರವರಿ ಅಂತ್ಯದಲ್ಲಿ ಕೊಲಂಬಸ್‌ನ ಧರ್ಮಾಧ್ಯಕ್ಷರು ರೋಮ್‌ಗೆ ಭೇಟಿ ನೀಡಿದ್ದರು, ಆ ತಿಂಗಳಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಧರ್ಮಸಭೆಗಾಗಿ ದೈವಕರೆಗಳು ಅಧಿಕವಾಗುವಂತೆ ಪ್ರಾರ್ಥಿಸಲು ಅವರನ್ನು ಕೇಳಿಕೊಂಡರು.

ದೈವಕರೆ ಸ್ಪಷ್ಟತೆಯ ಕಾರ್ಯಕ್ರಮ
ಧರ್ಮಾಧ್ಯಕ್ಷರಾದ ಫೆರ್ನಾಂಡಿಸ್ ರವರು ತಮ್ಮ ಧರ್ಮಾಧ್ಯಕ್ಷೀಯ ದೀಕ್ಷೆಯ ನಂತರ ತಕ್ಷಣವೇ ದೈವಕರೆಯನ್ನು ದೃಢೀಕರಿಸುವ ಕಾರ್ಯಕ್ರಮವನ್ನು ಜಾರಿಗೆ ತಂದರು, ಇದು ಎರಡೂವರೆ ವರ್ಷಗಳಲ್ಲಿ ಗುರುವಿದ್ಯಾಮಂದಿರದ ವಿದ್ಯಾರ್ಥಿಗಳ ಸಂಖ್ಯೆಯನ್ನು 17 ರಿಂದ 40ಕ್ಕೆ ಹೆಚ್ಚಿಸಿತು.

"ನಮ್ಮಲ್ಲಿ ಮೆಲ್ಕಿಸದೆಕ್ ಯೋಜನೆಯನ್ನು ಕೈಗೊಂಡಿರುವ ಅತ್ಯಂತ ಪರಿಣಾಮಕಾರಿ ದೈವಕರೆಯನ್ನು ನಿರ್ಧರಿಸುವ ನಿರ್ದೇಶಕರಿದ್ದಾರೆ, ಅಂದರೆ ಸಾಧಾರಣ ದಿನಗಳಲ್ಲಿ ಯುವಜನರಿಗೆ ನಿಯಮಿತ ದೈವಕರೆಯನ್ನು ದೃಢೀಕರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದು ಧರ್ಮಾಧ್ಯಕ್ಷರು ಹೇಳಿದರು. "ಇದಲ್ಲದೆ ನಾವು ಸ್ಥಳೀಯ ಗುರುವಿದ್ಯಾಮಂದಿರವಾದ, ಪಾಂಟಿಫಿಕಲ್ ಕಾಲೇಜ್ ಜೋಸೆಫಿನಮ್‌ನಲ್ಲಿ ವಾರಾಂತ್ಯಗಳಲ್ಲಿ ದೈವಕರೆಯ ತರಬೇತಿಯನ್ನು ಆಯೋಜಿಸುತ್ತೇವೆ."

ಕಳೆದ ವರ್ಷ ಐದು ಹೊಸ ಗುರುಗಳು ಯಾಜಕ ದೀಕ್ಷೆಯನ್ನು ಸ್ವೀಕರಿಸಿದರು. "ಇದರರ್ಥ ವಿಭಕ್ತಶ್ವಾಸಿಗಳು ಸಂಸ್ಕಾರಗಳಿಗೆ ಸುಲಭವಾಗಿ ಸ್ವೀಕರಿಸಲು ಲಭ್ಯತೆ ಹೊಂದಿದ್ದಾರೆ" ಎಂದು ಧರ್ಮಾಧ್ಯಕ್ಷರು ಫೆರ್ನಾಂಡಿಸ್ ರವರು ಗಮನಿಸಿದರು.

ಧರ್ಮಕ್ಷೇತ್ರದ ಸ್ಥಿರವಾದ ಕೆಲಸ ಮತ್ತು ಪ್ರಾರ್ಥನೆಯಿಂದಾಗಿ ದೈವಕರೆಯ ಹೆಚ್ಚಳಕ್ಕೆ ಋಣಿಯಾಗಿದೆ ಎಂದು ಅವರು ಗಮನಿಸಿದರು.

ಧರ್ಮಾಧ್ಯಕ್ಷರಾದ ಫೆರ್ನಾಂಡಿಸ್ ರವರು ತಮ್ಮ ಧರ್ಮಕ್ಷೇತ್ರಕ್ಕೆ, ವರ್ಷಕ್ಕೆ ನಾಲ್ಕು ಬಾರಿ "ಆಂಡ್ರ್ಯೂ ಔತಣವನ್ನು" ಆಯೋಜಿಸುತ್ತದೆ ಎಂದು ಹೇಳಿದರು, ಅಲ್ಲಿ ಅವರು ಯಾಜಕತ್ವದ ದೈವಕರೆಯನ್ನು ನಿರ್ಧರಿಸುವ, ಯುವಕರೊಂದಿಗೆ ಭೋಜನ ಮಾಡುತ್ತಾರೆ.

"ಈ ಔತಣದ ಸಮಯದಲ್ಲಿ, ನಾನು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ, ಅದಕ್ಕೆ ಪ್ರತಿಯಾಗಿ ಗುರುವಿದ್ಯಾಮಂದಿರದ ವಿದ್ಯಾರ್ಥಿಗಳು ತಮ್ಮ ಸಾಕ್ಷ್ಯಗಳನ್ನು ಹಂಚಿಕೊಳ್ಳುತ್ತಾರೆ" ಎಂದು ಅವರು ಹೇಳಿದರು, ಇದು ಯುವಕರಿಗೆ, ಧರ್ಮಾಧ್ಯಕ್ಷರು ಮತ್ತು ಗುರುವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕವನ್ನು ನೀಡುತ್ತದೆ ಎಂದು ಹೇಳಿದರು.

ಇದು ಯಾಜಕತ್ವ ಅಥವಾ ಗುರು ಜೀವನವು ಏನನ್ನು ಒಳಗೊಂಡಿದೆ ಎಂಬುದನ್ನು ನೇರವಾಗಿ ನೋಡಲು ಹಾಗೂ ಅದರ ಅನುಭವವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುತ್ತದೆ.

ವಿಶ್ವಗುರು ಮತ್ತು ಧರ್ಮಸಭೆಯ ಮೇಲಿನ ಪ್ರೀತಿಯಿಂದ ತುಂಬಿದ್ದಾರೆ
ಯಾಜಕರಿಗೆ ಮತ್ತು ಗುರುವಿದ್ಯಾರ್ಥಿಗಳ ರಚನೆಗೆ ಧರ್ಮಾಧ್ಯಕ್ಷರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ, ಸಾಮಾನ್ಯ ಜನರೊಂದಿಗೆ ಪರಿಣಾಮಕಾರಿ ಸಂವಾದವನ್ನು ನಡೆಸಲು ಸುಶಿಕ್ಷಿತ ಯಾಜಕರುಗಳ ಅಗತ್ಯವಿದೆ ಎಂದು ಸೂಚಿಸುತ್ತಾರೆ.

ತಮ್ಮ ಧರ್ಮಕ್ಷೇತ್ರದಿಂದ ರೋಮ್‌ನಲ್ಲಿ ಅಧ್ಯಯನ ಮಾಡಲು ಯಾಜಕರನ್ನು ಮತ್ತು ಗುರುವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ.

ಕೊಲಂಬಸ್ ಧರ್ಮಕ್ಷೇತ್ರದಿಂದ ಐದು ಯಾಜಕರನ್ನು ಮತ್ತು ಇಬ್ಬರು ಗುರುವಿದ್ಯಾರ್ಥಿಗಳು ಪ್ರಸ್ತುತವಾಗಿ ಎಟರ್ನಲ್ ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಧರ್ಮಾಧ್ಯಕ್ಷರಾದ ಫೆರ್ನಾಂಡಿಸ್ ರವರು ರೋಮ್‌ನಲ್ಲಿ, ಯಾಜಕರು ಮತ್ತು ಗುರುವಿದ್ಯಾರ್ಥಿಗಳು ಕಳೆಯುವ ಸಮಯವು ಪವಿತ್ರ ತಂದೆಗೆ ಹತ್ತಿರವಾಗಲು, ಸಾರ್ವತ್ರಿಕ ಧರ್ಮಸಭೆಗೆ ಒಡ್ಡಿಕೊಳ್ಳಲು ಮತ್ತು ಧರ್ಮಕ್ಷೇತ್ರದ ಗುರುವಿದ್ಯಾಮಂದಿರದಲ್ಲಿ ಬೋಧಿಸುವ, ಶೈಕ್ಷಣಿಕ ಅರ್ಹತೆಗಳನ್ನು ಪಡೆಯಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಅವರು, ಇಲ್ಲಿ ಸಾರ್ವತ್ರಿಕ ಧರ್ಮಸಭೆ ಮತ್ತು ಪವಿತ್ರ ತಂದೆಯ ಮೇಲೆ ಪ್ರೀತಿಯಿಂದ ತುಂಬಿರುತ್ತಾರೆ ಮತ್ತು ಆ ಪ್ರೀತಿಯನ್ನು ನಮ್ಮ ಧರ್ಮಕ್ಷೇತ್ರಕ್ಕೆ ಮರಳಿ ತರುತ್ತಾರೆ ಎಂದು ಧರ್ಮಾಧ್ಯಕ್ಷರಾದ ಅರ್ಲ್ ರವರು ತೀರ್ಮಾನಿಸಿದರು.
 

28 ಫೆಬ್ರವರಿ 2025, 12:29