ಯೆಹೂದ್ಯ ವಿರೋಧಿತ್ವವನ್ನು ಎದುರಿಸಲು ಸಂಪನ್ಮೂಲಗಳನ್ನು ಒದಗಿಸುವ ಅಮೇರಿಕದ ಯೆಹೂದ್ಯರ ಸಮಿತಿ
ಡೆವಿನ್ ವ್ಯಾಟ್ಕಿನ್ಸ್
“ಬಾವಿಯನ್ನು ವಿಷಪೂರಿತಗೊಳಿಸುವುದು”: ಈ ಮಾತು ಎಲ್ಲಿಂದ ಬಂತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಎದುರಾಳಿಯು ತಮ್ಮ ಪ್ರತಿಕೂಲತೆಯ ಬಗ್ಗೆ ನಕಾರಾತ್ಮಕ ಮಾಹಿತಿಯನ್ನು ಪರಿಚಯಿಸಿ ಅವರನ್ನು ಅಪ್ರಖ್ಯಾತಿಗೊಳಿಸುವುದನ್ನು ನೋಡುವ ಒಂದು ಮಸಿ ತಂತ್ರವನ್ನು ಇದು ಸೂಚಿಸುತ್ತದೆ. ವಾಸ್ತವದಲ್ಲಿ, ಈ ಮಾತು 14ನೇ ಶತಮಾನದ ಬುಬೊನಿಕ್ ಪ್ಲೇಗ್‌ಗೆ ಸಂಬಂಧಿಸಿದೆ, ಆಗ ಯೆಹೂದ್ಯರು ಸಾರ್ವಜನಿಕ ಕುಡಿಯುವ ಬಾವಿಗಳ ಮೂಲಕ ಉದ್ದೇಶಪೂರ್ವಕವಾಗಿ ರೋಗವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಲಾಯಿತು, ಈ ಮಾತು ಯೆಹೂದ್ಯ ವಿರೋಧಿ ಸ್ವರಕ್ಕೆ ನಾಂದಿ ಹಾಡಿತು. ಈ ಪ್ರತಿಕ್ರಿಯೆಯಿಂದಾಗಿ ಸಾವಿರಾರು ಮುಗ್ಧ ಯೆಹೂದ್ಯರನ್ನು ಕೊಲ್ಲಲಾಯಿತು.
"ಭಾಷಾಂತರ ದ್ವೇಷ: ಕಥೋಲಿಕ ಆವೃತ್ತಿ"ಯಲ್ಲಿ ವಿವರಿಸಿರುವ ಡಜನ್ಗಟ್ಟಲೆ ಯೆಹೂದ್ಯ ವಿರೋಧಿ ಪದಗಳು, ನುಡಿಗಟ್ಟುಗಳು, ಪಿತೂರಿಗಳು, ವ್ಯಂಗ್ಯಚಿತ್ರಗಳು, ವಿಷಯಗಳು ಮತ್ತು ಮೀಮ್‌ಗಳಲ್ಲಿ ಇದು ಕೇವಲ ಒಂದು ಉದಾಹರಣೆಯಾಗಿದೆ.
ಡಿಸೆಂಬರ್ 2024ರಲ್ಲಿ ಬಿಡುಗಡೆಯಾದ ಈ ಸಂಪನ್ಮೂಲವನ್ನು ಅಮೇರಿಕದ ಯೆಹೂದ್ಯರ ಸಮಿತಿ (ಎಜೆಸಿ) ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (ಯುಎಸ್‌ಸಿಸಿಬಿ) ಸಾರ್ವತ್ರಿಕ ಮತ್ತು ಅಂತರಧರ್ಮೀಯ ವ್ಯವಹಾರ ಸಮಿತಿಯ ಸಹಭಾಗಿತ್ವದಲ್ಲಿ ರಚಿಸಲಾಗಿದೆ.
ಅಕ್ಟೋಬರ್ 7, 2023 ರಂದು ಗಾಜಾದಲ್ಲಿ ಇಸ್ರೇಯೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕದಲ್ಲಿ ಯೆಹೂದ್ಯ ವಿರೋಧಿ ಘಟನೆಗಳು ತೀವ್ರವಾಗಿ ಏರಿಕೆಯನ್ನು ಕಂಡಿವೆ.
ಆಂಟಿ-ಡಿಫಮೇಷನ್ ಲೀಗ್ ಸೆಂಟರ್ ಫಾರ್ ಎಕ್ಸ್‌ಟ್ರೀಮಿಸಂ (ADL) ವರದಿಯ ಪ್ರಕಾರ, ಮುಂದಿನ ವರ್ಷದಲ್ಲಿ ಸುಮಾರು 10,000 ಯೆಹೂದ್ಯ ವಿರೋಧಿ ಘಟನೆಗಳು ವರದಿಯಾಗಲಿವೆ, ಇದು ವರ್ಷದಿಂದ ವರ್ಷಕ್ಕೆ 200% ಕ್ಕಿಂತ ಹೆಚ್ಚು ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
ಯುಎಸ್‌ಸಿಸಿಬಿ ಸಮಿತಿಯ ಅಧ್ಯಕ್ಷರಾದ ಸ್ಕ್ರ್ಯಾಂಟನ್‌ನ ಧರ್ಮಾಧ್ಯಕ್ಷರಾದ ಜೋಸೆಫ್ ಬಂಬೇರಾರವರು, ಕಥೋಲಿಕ ಆವೃತ್ತಿಯು ಜನರು ಯೆಹೂದ್ಯ ವಿರೋಧಿತ್ವವನ್ನು ಎದುರಿಸುವ ಮೊದಲ ಹೆಜ್ಜೆ ಇಡಲು ಸಹಾಯ ಮಾಡಲು ಪ್ರಯತ್ನಿಸುತ್ತದೆ, ಅದು ಅದನ್ನು ಅರ್ಥಮಾಡಿಸುವುದು ಎಂದು ಹೇಳಿದರು.
"ಕ್ಯಾಥೋಲಿಕ ಸಂದರ್ಭದಲ್ಲಿ ಈ ಯೆಹೂದ್ಯ ವಿರೋಧಿ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ, ನಾವು ಅಂತಹ ದ್ವೇಷಪೂರಿತ ಮತ್ತು ದುಷ್ಟ ವಿಷಯಗಳನ್ನು ತಿಳಿಸುವುದಲ್ಲದೆ, ಹೆಚ್ಚು ಮುಖ್ಯವಾಗಿ ಯೆಹೂದ್ಯ ಜನರೊಂದಿಗೆ ಧರ್ಮಸಭೆಯ ಸಂಬಂಧ, ಮಾನವ ಘನತೆಯ ಬಗ್ಗೆ ನಮ್ಮ ಬೋಧನೆ ಮತ್ತು ಯೆಹೂದ್ಯ ಜನರ ಮೇಲಿನ ನಮ್ಮ ಗೌರವದ ಸ್ಪಷ್ಟ ಅರ್ಥವನ್ನು ತಿಳಿಸುತ್ತೇವೆ.
"ಟ್ರಾನ್ಸ್ಲೇಟ್ ಹೇಟ್" ನ್ನು ಅಕ್ಟೋಬರ್ 28, 1965 ರಂದು ಆರನೇ ವಿಶ್ವಗುರು ಪಾಲ್ ರವರು ಘೋಷಿಸಿದ ಕ್ರೈಸ್ತರಲ್ಲದ ಧರ್ಮಗಳೊಂದಿಗೆ ಧರ್ಮಸಭೆಯ ಸಂಬಂಧದ ಕುರಿತು ಎರಡನೇ ವ್ಯಾಟಿಕನ್ ಸಮ್ಮೇಳನದ ಘೋಷಣೆಯಾದ ನಾಸ್ಟ್ರಾ ಏಟೇಟ್‌ನ 60ನೇ ವಾರ್ಷಿಕೋತ್ಸವದಲ್ಲಿ ಮೊದಲು ಬಿಡುಗಡೆ ಮಾಡಲಾಯಿತು.
"ನಾವು ನಾಸ್ಟ್ರಾ ಏಟೇಟ್‌ನ 60ನೇ ವಾರ್ಷಿಕೋತ್ಸವವನ್ನು ಆಚರಿಸಲು ತಯಾರಿ ನಡೆಸುತ್ತಿರುವಾಗ, ಎಲ್ಲಾ ರೀತಿಯ ಯೆಹೂದ್ಯ ವಿರೋಧಿತ್ವದ ವಿರುದ್ಧ ನಮ್ಮ ಯೆಹೂದ್ಯ ಸಹೋದರ ಸಹೋದರಿಯರೊಂದಿಗೆ ನಿಲ್ಲುವ ನಮ್ಮ ಬದ್ಧತೆಯನ್ನು ನವೀಕರಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ" ಎಂದು ಧರ್ಮಾಧ್ಯಕ್ಷರಾದ ಬ್ರಾಂಬೆರಾರವರು ಹೇಳಿದರು.
ಇದರ ಬಿಡುಗಡೆಯ ಸಂದರ್ಭದಲ್ಲಿ, ಅಮೇರಿಕನದ ಯೆಹೂದ್ಯ ಸಮಿತಿಯ ಅಂತರಧರ್ಮೀಯ ವ್ಯವಹಾರಗಳ ನಿರ್ದೇಶಕ ರಬ್ಬಿ ನೋಮ್ ಮಾರನ್ಸ್ ರವರು ಈ ಸಂಪನ್ಮೂಲವನ್ನು "ಕಥೋಲಿಕ-ಯೆಹೂದ್ಯರ ಸಂಬಂಧಗಳಿಗೆ ಒಂದು ಮುಂಚೂಣಿಯ ಯೋಜನೆ" ಎಂದು ಕರೆದರು.
ಯೆಹೂದ್ಯ ಜನರಿಗೆ ಮಾತ್ರವಲ್ಲದೆ ನಾಗರಿಕ ಸಮಾಜಕ್ಕೂ ಬೆದರಿಕೆಯಾಗಿ ಯೆಹೂದ್ಯ ವಿರೋಧಿತ್ವವನ್ನು ಎದುರಿಸುವಲ್ಲಿ, USCCBಯ ಮೈತ್ರಿ ಮತ್ತು ನಾಯಕತ್ವವು ಯೆಹೂದ್ಯ ವಿರೋಧಿ ದ್ವೇಷವನ್ನು ಎದುರಿಸಲು ನಮಗೆ ಅಗತ್ಯವಿರುವ ರಾಷ್ಟ್ರೀಯ ಇಡೀ ಸಮಾಜದ ವಿಧಾನದ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.