MAP

A Syrian man dressed as Santa Claus walks with ballons next to a Christmas tree A Syrian man dressed as Santa Claus walks with ballons next to a Christmas tree  

ʻಸಿರಿಯಾದ ಕ್ರೈಸ್ತ ಸಮುದಾಯಗಳ ಅವನತಿಯು ಒಂದು ದುರಂತದ ನಷ್ಟವಾಗಿದೆ'

ಯುರೋಪಿನ ಒಕ್ಕೂಟದ, (COMECE) ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಆಯೋಗದ ಅಧ್ಯಕ್ಷರು, ಸಿರಿಯಾದಲ್ಲಿನ ಪರಿಸ್ಥಿತಿಯ ಬಗ್ಗೆ ಚಿಂತಿಸುತ್ತಾರೆ ಮತ್ತು ವಿಶೇಷವಾಗಿ ರಾಷ್ಟ್ರದ ಕ್ರೈಸ್ತ ಸಮುದಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ, ರಾಷ್ಟ್ರದಿಂದ ಅವರ ʻಅವನತಿ' ಸಿರಿಯಾಕ್ಕೆ ಮಾತ್ರವಲ್ಲದೆ, ಇದು ಇನ್ನಿತರ ಪ್ರದೇಶ ಮತ್ತು ಪ್ರಪಂಚದ ಸ್ಥಿರತೆಗೆ ʻದುರಂತ ನಷ್ಟ'ವೆಂದು ಎಚ್ಚರಿಸುತ್ತಾರೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

"ಕ್ರೈಸ್ತ ಸಮುದಾಯಗಳ ಅವನತಿಯು ಸಿರಿಯಾಕ್ಕೆ ಮಾತ್ರವಲ್ಲದೆ, ಇನ್ನಿತರ ಪ್ರದೇಶ ಮತ್ತು ಪ್ರಪಂಚದ ಸ್ಥಿರತೆಗೂ ದುರಂತ ನಷ್ಟವಾಗಿದೆ."

ಯುರೋಪಿಯನ್ ಒಕ್ಕೂಟದ (COMECE) ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಆಯೋಗದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ಮರಿಯಾನೊ ಕ್ರೊಸಿಯಾಟಾರವರು ಸಿರಿಯಾದಲ್ಲಿನ ಪರಿಸ್ಥಿತಿಯ ಕುರಿತು ಹೇಳಿಕೆಯಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ.

ಹೋಮ್ಸ್‌ನ ಸಿರಿಯಾದ ಕಥೋಲಿಕ ಮಹಾಧರ್ಮಾಧ್ಯಕ್ಷ, ಮಹಾಧರ್ಮಾಧ್ಯಕ್ಷರಾದ ಯೂಲಿಯನ್ ಜಾಕ್ವೆಸ್ ಮೌರಾಡ್ ರವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಧರ್ಮಾಧ್ಯಕ್ಷರಾದ ಕ್ರೊಸಿಯಾಟಾರವರ ಹೇಳಿಕೆಯನ್ನು ಬರೆಯಲಾಗಿದೆ.

ಒಂದು ದಶಕಕ್ಕೂ ಹೆಚ್ಚು ಕಾಲದ ಸಂಘರ್ಷ, ಹಿಂಸೆ ಮತ್ತು ಸಂಕಟಗಳ ನಂತರ ಸಿರಿಯಾದಲ್ಲಿ ಮುಂದುವರೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮತ್ತು ಪ್ರಸ್ತುತ ಅನಿಶ್ಚಿತತೆಗಳ ಬಗ್ಗೆ ನನ್ನ ಆಳವಾದ ಕಾಳಜಿಯನ್ನು ನಾನು ವ್ಯಕ್ತಪಡಿಸುತ್ತೇನೆ ಎಂದು ಧರ್ಮಾಧ್ಯಕ್ಷರಾದ ಕ್ರೋಸಿಯಾಟಾರವರು ತಮ್ಮ ಪತ್ರವನ್ನು ಪ್ರಾರಂಭಿಸುತ್ತಾರೆ. ತದನಂತರ ಅವರು ದೇಶದ ಈ ಹೊಸ ಅಧ್ಯಾಯದಲ್ಲಿ, ಆ ದೇಶದ ಜನರ ಭವಿಷ್ಯದ ಬಗ್ಗೆ ತಮ್ಮ ಭರವಸೆಯನ್ನು ವ್ಯಕ್ತಪಡಿಸುತ್ತಾರೆ, ಈ ಉದ್ದೇಶಕ್ಕಾಗಿ ಅಥವಾ ಕೋರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾನೆ ಎಂದು ಹೇಳುತ್ತಾರೆ.
ಊಹಿಸಲಾಗದ ಸಂಕಷ್ಟಗಳು

ಸಿರಿಯಾದ ಜನರು, ಅವರ ಧಾರ್ಮಿಕ ಅಥವಾ ಜನಾಂಗೀಯ ಹಿನ್ನೆಲೆಯನ್ನು ಲೆಕ್ಕಿಸದೆ, ಸ್ಥಳಾಂತರ, ಬಡತನ ಮತ್ತು ಅವರ ಮನೆಗಳು, ಜೀವನೋಪಾಯಗಳು ಮತ್ತು ಸಮುದಾಯಗಳ ನಾಶ ಸೇರಿದಂತೆ "ಊಹಿಸಲಾಗದ ಸಂಕಷ್ಟಗಳನ್ನು" ಎದುರಿಸಿದ್ದಾರೆ ಎಂದು COMECEನ ಅಧ್ಯಕ್ಷರು ಗಮನಿಸಿದರು.

ವಿಶೇಷವಾಗಿ, ಶತಮಾನಗಳಿಂದ ಈ ಪ್ರದೇಶದ ಇತಿಹಾಸ, ಸಂಸ್ಕೃತಿಯ ಅವಿಭಾಜ್ಯ ಮತ್ತು ಅಗತ್ಯ ಭಾಗವಾಗಿರುವ ಹಾಗೂ ಈಗ ತಮ್ಮ ತಾಯ್ನಾಡಿನಲ್ಲಿ, ತಮ್ಮ ಐತಿಹಾಸಿಕ ನಿರಂತರತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ಸಿರಿಯಾದಲ್ಲಿನ ಕ್ರೈಸ್ತ ಸಮುದಾಯಗಳ ದುಃಸ್ಥಿತಿಯ ಬಗ್ಗೆ ನಾನು ಗಮನ ಸೆಳೆಯಲು ಬಯಸುತ್ತೇನೆ ಎಂದು ಅವರು ಒತ್ತಿ ಹೇಳಿದರು.

COMECE, ರವರು ಮನವಿ ಮಾಡಿದರು, ಯುರೋಪ್ ಮತ್ತು ಅಂತರರಾಷ್ಟ್ರೀಯ ಸಮುದಾಯವು, ಸಿರಿಯಾದ ಕ್ರೈಸ್ತ ಸಮುದಾಯಗಳ ದುರ್ಬಲತೆಯನ್ನು ಗುರುತಿಸಬೇಕೆಂದು ಒತ್ತಾಯಿಸುತ್ತದೆ.

ಮೂಲಭೂತ ಅಗತ್ಯಗಳನ್ನು ಖಾತರಿಪಡಿಸುವುದು
ಇದಲ್ಲದೆ, ಸಿರಿಯಾದ ಜನರ ಅಗತ್ಯಗಳಿಗೆ, ವಿಶೇಷವಾಗಿ ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಅತ್ಯಂತ ದುರ್ಬಲರ ಅಗತ್ಯಗಳಿಗೆ ಆದ್ಯತೆ ನೀಡುವ ರೀತಿಯಲ್ಲಿ, ಅವರ ರಕ್ಷಣೆ, ಸಂರಕ್ಷಣೆ ಮತ್ತು ಏಳಿಗೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ" COMECE ರವರಿಗೆ ಕರೆ ನೀಡಿತು.

ಈ ಜವಾಬ್ದಾರಿಯು ತಕ್ಷಣದ ಮಾನವೀಯ ಸಹಾಯವನ್ನು ಮೀರಿ ಶಾಂತಿ ನಿರ್ಮಾಣ, ಪುನರ್ನಿರ್ಮಾಣ ಮತ್ತು ಸಮನ್ವಯಕ್ಕಾಗಿ ದೀರ್ಘಕಾಲೀನ ತಂತ್ರಗಳನ್ನು ಒಳಗೊಂಡಿದೆ ಎಂದು ಧರ್ಮಾಧ್ಯಕ್ಷರಾದ ಕ್ರೋಸಿಯಾಟಾರವರು ಒತ್ತಿ ಹೇಳಿದರು.

ಸಿರಿಯಾದ ಎಲ್ಲಾ ನಾಗರಿಕರಿಗೆ ಆಹಾರ, ಆಶ್ರಯ, ಆರೋಗ್ಯ ರಕ್ಷಣೆ, ಆಘಾತ ಚಿಕಿತ್ಸೆ ಮತ್ತು ಶಿಕ್ಷಣ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ ಪಾಲುದಾರರಿಗೆ ನಿರಂತರ ಮತ್ತು ಸಾಕಷ್ಟು ಹಣವನ್ನು ಒದಗಿಸುವಂತೆ ಯುರೋಪ್‌ ಮತ್ತು ಅದರ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತದೆ.

ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವುದು
ಖಾಸಗಿ ವಲಯವು ದೇಶದಲ್ಲಿ ಸೂಕ್ತ ಸುರಕ್ಷತೆ ಮತ್ತು ಖಾತರಿಗಳೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ರಚಿಸುವಂತೆ ಧರ್ಮಾಧ್ಯಕ್ಷರುಗಳು ಕರೆ ನೀಡಿದರು.

ಈ ನಿಟ್ಟಿನಲ್ಲಿ, ಧರ್ಮಾಧ್ಯಕ್ಷರಾದ ಕ್ರೋಸಿಯಾಟಾರವರು COMECE "ಸಿರಿಯಾದ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಸಡಿಲಗೊಳಿಸುವ ಯುರೋಪಿನ ನಿರ್ಧಾರವನ್ನು ಸ್ವಾಗತಿಸುತ್ತದೆ, ಇದು ಸಿರಿಯಾದ ಜನರ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ಹೇಳಿದರು.

ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳಾಗಿ, ಅವರು ಯುರೋಪ್‌ ಮತ್ತು ಅದರ ಸದಸ್ಯ ರಾಷ್ಟ್ರಗಳು, ಸಿರಿಯಾದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡಲು ಪ್ರೋತ್ಸಾಹಿಸುತ್ತಾರೆ, ಅವುಗಳನ್ನು ಸಾಂವಿಧಾನಿಕ ಪ್ರಕ್ರಿಯೆ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವರನ್ನು ಸಮಾನ ನಾಗರಿಕರಾಗಿ ಗುರುತಿಸಲಾಗುತ್ತದೆ ಮತ್ತು ಪರಿಗಣಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ, ಸಿರಿಯಾದ ವೈವಿಧ್ಯಮಯ ಸಮುದಾಯಗಳಲ್ಲಿ ಸಂವಾದ, ಸಮನ್ವಯ ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸುವ ಉಪಕ್ರಮಗಳನ್ನು ಬೆಂಬಲಿಸುವಂತೆ COMECE, ಯುರೋಪ್‌ ಮತ್ತು ಅದರ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತು.

ಧರ್ಮಸಭೆಯ ಬೆಂಬಲದ ಭರವಸೆ
“ಧರ್ಮಸಭೆಯು,” ಧರ್ಮಾಧ್ಯಕ್ಷರಾದ ಕ್ರೋಸಿಯಾಟಾರವರು, ಸಿರಿಯಾದ ನಿರಾಶ್ರಿತರು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳನ್ನು, ವಿಶೇಷವಾಗಿ ಕಿರುಕುಳದಿಂದ ಪಲಾಯನ ಮಾಡುವವರನ್ನು ಸ್ವಾಗತಿಸುವುದು ಮತ್ತು ತಮ್ಮ ಬೆಂಬಲವನ್ನು ಮುಂದುವರಿಸುತ್ತದೆ. ಅವರನ್ನು ಘನತೆ ಹಾಗೂ ಗೌರವದಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದರು.

ಕೊನೆಯದಾಗಿ, ನಿರಾಶ್ರಿತರು ಮತ್ತು ಅವರ ಕುಟುಂಬಗಳು ತಮ್ಮ ಮನೆಗಳಿಗೆ ಸುರಕ್ಷಿತ ಮತ್ತು ಸ್ವಯಂಪ್ರೇರಿತವಾಗಿ ಮರಳಲು ಅನುವು ಮಾಡಿಕೊಡುವ ಪರಿಸ್ಥಿತಿಗಳನ್ನು ಸೃಷ್ಟಿಸಲು ಯುರೋಪ್‌ ಮತ್ತು ಅದರ ಸದಸ್ಯ ರಾಷ್ಟ್ರಗಳು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳಾಗಿ, COMECE ನಾಯಕ, ಸಿರಿಯಾದಲ್ಲಿರುವ ನಮ್ಮ ಸಹೋದರ ಸಹೋದರಿಯರೊಂದಿಗೆ, ವಿಶೇಷವಾಗಿ ಅಪಾರ ಪ್ರತಿಕೂಲತೆ ಪರಿಸ್ಥಿತಿಯಲ್ಲಿ ನಮ್ಮ ದೇವರಲ್ಲಿ, ತಮ್ಮ ವಿಶ್ವಾಸಕ್ಕೆ ಸಾಕ್ಷಿಯಾಗಿರುವ ಕ್ರೈಸ್ತ ಸಮುದಾಯಗಳೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಹೇಳಿದರು.

ಕೊನೆಯದಾಗಿ, ಧರ್ಮಾಧ್ಯಕ್ಷರುಗಳು ಸಿರಿಯಾದಲ್ಲಿ ಶಾಂತಿ ಮತ್ತು ಪ್ರಾರ್ಥನೆಗಳಿಗಾಗಿ, ಸಿರಿಯಾದ ಎಲ್ಲಾ ನಾಗರಿಕರ ಸ್ವಾತಂತ್ರ್ಯ, ಭದ್ರತೆ ಮತ್ತು ಭರವಸೆಯಲ್ಲಿ ಬದುಕಬಹುದಾದ ಭವಿಷ್ಯಕ್ಕಾಗಿ "ದಣಿವರಿಯಿಲ್ಲದೆ ಕೆಲಸ ಮಾಡುವ" ಕರೆಯೊಂದಿಗೆ ತಮ್ಮ ಪತ್ರವನ್ನು ಮುಕ್ತಾಯಗೊಳಿಸುತ್ತಾರೆ. "ಕರುಣೆಯ ತಾಯಿಯಾದ, ಪೂಜ್ಯ ಕನ್ಯಾ ಮೇರಿಮಾತೆಯ ಮಧ್ಯಸ್ಥಿಕೆಯು, ದೇವರ ಶಾಂತಿಯ ಸಾಧನಗಳಾಗುವ ನಮ್ಮ ಧ್ಯೇಯದಲ್ಲಿ, ನಮಗೆ ಮಾರ್ಗದರ್ಶನ ನೀಡಲಿ" ಎಂದು ಅವರು ಪ್ರಾರ್ಥಿಸಿದರು.

20 ಫೆಬ್ರವರಿ 2025, 12:21