ತಲಿತ ಕುಮ್ ಜಿಂಬಾಬ್ವೆ: ಮಾನವ ಕಳ್ಳಸಾಗಣೆ ವಿರುದ್ಧ ಕನ್ಯಾಸ್ತ್ರೀನಿಯರ ಹೋರಾಟ
ಸಿಸ್ಟರ್ .ಮುಫಾರೊ ಚಕುಯಿಂಗಾ, LCBL
ಮಾನವ ಕಳ್ಳಸಾಗಣೆಯ ನೆರಳಿನಲ್ಲಿ ಸಾವಿರಾರು ಜೀವಗಳು ಕಳೆದುಹೋಗುತ್ತಿರುವ ಈ ಜಗತ್ತಿನಲ್ಲಿ, LCBL ಎಂದು ಕರೆಯಲ್ಪಡುವ ಲಿಟಲ್ ಚಿಲ್ಡ್ರನ್ ಆಫ್ ಅವರ್ ಬ್ಲೆಸ್ಡ್ ಲೇಡಿಯ ಕನ್ಯಾಸ್ತ್ರೀನಿಯರು, ಈ ಘೋರ ಅಪರಾಧದ ವಿರುದ್ಧ ಹೋರಾಡಲು ಮುಂದಾಳತ್ವ ವಹಿಸುವುದರೊಂದಿಗೆ, ಜಿಂಬಾಬ್ವೆಯ ತಲಿತ ಕುಮ್ ಕನ್ಯಾಸ್ತ್ರೀನಿಯರು ಭರವಸೆಯ ದೀಪವನ್ನು ಬೆಳಗುತ್ತಿದ್ದಾರೆ.
ಮಾನವ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ಪವಿತ್ರ ಜೀವನದ ಜಾಲದ ಪ್ರಸ್ತುತ ರಾಷ್ಟ್ರೀಯ ಸಂಯೋಜಕರಾದ ಸಿಸ್ಟರ್.ಡಯಾನಾ ಕನ್ಯೆರೆರವರ ನಾಯಕತ್ವದಲ್ಲಿ, ಬದುಕುಳಿದವರಿಗೆ ಸುರಕ್ಷಿತ ತಾಣವನ್ನು ಒದಗಿಸಿದ್ದಾರೆ, ನೀತಿ ಬದಲಾವಣೆಯನ್ನು ಪ್ರತಿಪಾದಿಸಿದ್ದಾರೆ ಮತ್ತು ಮಾನವ ಕಳ್ಳಸಾಗಣೆಯ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಜಾಗತಿಕವಾಗಿ, 40 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಧುನಿಕ ಗುಲಾಮಗಿರಿಯಲ್ಲಿ ಸಿಲುಕಿದ್ದಾರೆ, ಪ್ರತಿದಿನ ಸಾವಿರಾರು ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ. ಜಿಂಬಾಬ್ವೆಯಲ್ಲಿ, ಬಡತನ, ನಿರುದ್ಯೋಗ ಮತ್ತು ಅವಕಾಶಗಳ ಕೊರತೆಯು ದುರ್ಬಲ ವ್ಯಕ್ತಿಗಳನ್ನು ಶೋಷಿಸಲು ಕಳ್ಳಸಾಗಣೆದಾರರಿಗೆ ಫಲವತ್ತಾದ ನೆಲವನ್ನು ಸೃಷ್ಟಿಸಿದೆ. ಮಹಿಳೆಯರು, ಮಕ್ಕಳು ಮತ್ತು ಅನೇಕರನ್ನು ಬಲವಂತದ ಕಾರ್ಮಿಕ, ಲೈಂಗಿಕ ಕಳ್ಳಸಾಗಣೆ ಮತ್ತು ಇತರ ರೀತಿಯ ಶೋಷಣೆಗೆ ಒಳಪಡಿಸಲಾಗುತ್ತಿದೆ.
LCBL ಕನ್ಯಾಸ್ತ್ರೀನಿಯರು, ಧಾರ್ಮಿಕ ಮುಖಂಡರು ಮತ್ತು ಯುವಜನತೆಗೆ ತರಬೇತಿ ನೀಡುತ್ತಿದ್ದಾರೆ. ಮಾನವ ಕಳ್ಳಸಾಗಣೆಯನ್ನು ಎದುರಿಸುವಲ್ಲಿ LCBL ಕನ್ಯಾಸ್ತ್ರೀನಿಯರು ಒಂದು ದಿಟ್ಟ ಕ್ರಮ ಕೈಗೊಂಡಿದ್ದಾರೆ. ತಲಿತ ಕುಮ್ ಜಿಂಬಾಬ್ವೆ ಮೂಲಕ, ಅವರು ಬದುಕುಳಿದವರಿಗೆ ಸಮಾಲೋಚನೆ, ವೈದ್ಯಕೀಯ ಆರೈಕೆ ಮತ್ತು ತರಬೇತಿ ಸೇರಿದಂತೆ ಸಮಗ್ರ ಸೇವೆಗಳನ್ನು ಒದಗಿಸುತ್ತಿದ್ದಾರೆ.
"ಬದುಕುಳಿದ ಪ್ರತಿಯೊಬ್ಬರು ಘನತೆ, ಗೌರವ ಮತ್ತು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಅವಕಾಶವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ" ಎಂದು ಸಿಸ್ಟರ್ ಕನ್ಯೆರೆರವರು ಹೇಳುತ್ತಾರೆ. "ಅವರು ಗುಣಹೊಂದಲು, ಕಲಿಯಲು ಮತ್ತು ಅಭಿವೃದ್ಧಿ ಹೊಂದಲು, ಸುರಕ್ಷಿತವಾದ ಮತ್ತು ಬೆಂಬಲ ನೀಡುವ ವಾತಾವರಣವನ್ನು ಒದಗಿಸುವುದು ನಮ್ಮ ಗುರಿಯಾಗಿದೆ."
ಜಂಟಿ ಕ್ರಮಕ್ಕೆ ಕರೆ
ತಲಿತಾ ಕುಮ್ ಜಿಂಬಾಬ್ವೆ ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಲೇ ಇರುವುದರಿಂದ, ಅವರು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಕ್ರಮ ಕೈಗೊಳ್ಳಲು ಕರೆ ನೀಡುತ್ತಾರೆ. "ನಾವು ಇದನ್ನು ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ, ಮಾನವ ಕಳ್ಳಸಾಗಣೆಯನ್ನು ಇನ್ನು ಮುಂದೆ ಸಹಿಸಲಾಗದ ಜಗತ್ತನ್ನು ಸೃಷ್ಟಿಸಲು ನಮಗೆ, ಎಲ್ಲರ ಬೆಂಬಲ ಬೇಕು" ಎಂದು ಸಿಸ್ಟರ್ ಕಾನ್ಯೆರೆರವರು ಹೇಳುತ್ತಾರೆ.
ತಾನು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ತಲಿತ ಕಮ್ ಜಿಂಬಾಬ್ವೆಯ ಸಭೆಯು ತನ್ನ ಧ್ಯೇಯಕ್ಕೆ ಬದ್ಧವಾಗಿದೆ, ಮಾನವ ಕಳ್ಳಸಾಗಣೆಯನ್ನು ಇನ್ನು ಮುಂದೆ ಸಹಿಸಲಾಗದ ಜಗತ್ತನ್ನು ಸೃಷ್ಟಿಸುವ ಆಳವಾದ ಉದ್ದೇಶ ಮತ್ತು ದೃಢಸಂಕಲ್ಪದಿಂದ ನಡೆಸುತ್ತಿದ್ದಾರೆ