ನೈಜೀರಿಯಾದ ಕಥೋಲಿಕ ಶಾಲೆಗಳಲ್ಲಿ ಯುವತಿಯರ ರಚನೆಗೆ ಸಿನೊಡಾಲಿಟಿ ಸಹಾಯ
ಮೈಕೆಲ್ ಮಡುಯೆಕ್ವೆ
ಅಗಸ್ಟಿನಿಯನ್ ಸಿಸ್ಟರ್ಸ್ ಆಫ್ ದಿ ಮರ್ಸಿ ಆಫ್ ಜೀಸಸ್‌ನ (ಯೇಸುವಿನ ಕರುಣೆಯ ಸಂತ ಅಗಸ್ತೀನಿಯರ ಕನ್ಯಾಸ್ತ್ರೀನಿಯರ ಸಭೆ) ಸಿಸ್ಟರ್. ಜಸ್ಟಿನಾ ಅಡೆಜೊರವರು, ಸಭೆಯ ಒಡೆತನದ ಬೋರ್ಡಿಂಗ್ ಮಾಧ್ಯಮಿಕ ಶಾಲೆಯಲ್ಲಿ ಶಾಲಾ ಹುಡುಗಿಯರ ರಚನೆಯಲ್ಲಿ ಸಿನೊಡಾಲಿಟಿಯ ಮನೋಭಾವದಲ್ಲಿ, ಅಲ್ಲಿರುವ ಮಕ್ಕಳು ಮಾತುಗಳಿಗೆ ಕಿವಿಗೊಡುವುದು ಮತ್ತು ಹಂಚಿಕೊಳ್ಳುವುದು ಹೇಗೆ? ಮತ್ತು ಈ ಕ್ರಿಯೆಯು ಹೇಗೆ ಅವರ ರಚನೆಗೆ ಸಹಾಯಕವಾಗಿದೆ ಎಂಬುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
"ಹುಡುಗಿಯರ] ಮಾತುಗಳನ್ನು ಕೇಳುವುದರಿಂದ ಅವರೊಂದಿಗೆ ಸಂವಹನ ನಡೆಸಲು ನಮಗೆ ಹೆಚ್ಚಿನ ಅವಕಾಶ ಸಿಗುತ್ತದೆ ಮತ್ತು ಅವರು ನಮ್ಮೊಂದಿಗೆ ಮನಬಿಚ್ಚಿ ಮಾತನಾಡಲು ಮುಕ್ತರಾಗುತ್ತಾರೆ" ಎಂದು ಅವರು ವ್ಯಾಟಿಕನ್ ಸುದ್ಧಿಗೆ, "ನಮ್ಮ ಸರಳ ವಿಧಾನವು ಹಾಗೂ ಜೀವನವು, ಅವರ ಮಾತುಗಳನ್ನು ಕೇಳಲು, ತೊಂದರೆಗಳಲ್ಲಿ ಅವರಿಗೆ ನೆರವಾಗಲು ನಿಜವಾಗಿಯೂ ಅವರೊಂದಿಗೆ ಜನರಿದ್ದಾರೆ ಎಂದು ಅವರಿಗೆ ಅನಿಸುವಂತೆ ಮಾಡಿದೆ, ಆದ್ದರಿಂದ ಅವರು ಮುಂದೆ ಬಂದು ತಮ್ಮ ಜೀವನದ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ" ಎಂದು ತಿಳಿಸಿದರು.
2011 ರಿಂದ ಸ್ಥಾಪನೆಯಾದ ಮದರ್ ಆಫ್ ಗುಡ್ ಕೌನ್ಸೆಲ್ ಗರ್ಲ್ಸ್ ಸೆಕೆಂಡರಿ ಶಾಲೆಯ ಪ್ರಸ್ತುತ ಪ್ರಾಂಶುಪಾಲರಾಗಿರುವ ಸಿಸ್ಟರ್ ಅಡೆಜೊರವರು, ಈ ವಿಧಾನವು ಹುಡುಗಿಯರು "ಹೆಚ್ಚು ನೈತಿಕವಾಗಿ ನೇರವಾಗಿ, ಹೆಚ್ಚು ಮುಕ್ತವಾಗಿ, ಹೆಚ್ಚು ಸ್ವಾವಲಂಬಿಗಳಾಗಿ ಮತ್ತು ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ಸಿದ್ಧರಾಗಿರಲು ಸಹಾಯ ಮಾಡಿದೆ" ಎಂದು ವಿವರಿಸಿದರು.
ಉದ್ದೇಶಪೂರ್ವಕತೆಯೊಂದಿಗೆ ಸಿನೊಡಲಿಟಿ
ಶಾಲೆಯಲ್ಲಿ ಈ ಸಿನೊಡಲ್ ಸಂಸ್ಕೃತಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಶಾಲೆಯು ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಯಾಣದ ಅನುಭವವನ್ನು ಹಂಚಿಕೊಳ್ಳಲು ಸುಲಭವಾಗುವಂತಹ ವ್ಯವಸ್ಥೆ ಮತ್ತು ವಿಧಾನ, ಎರಡನ್ನೂ ಹೊಂದಿದೆ ಎಂದು ಸಿಸ್ಟರ್. ಅಡೆಜೊರವರು ವಿವರಿಸಿದರು.
"ನಾವು ಅವರೊಂದಿಗೆ ಮಾತನಾಡುತ್ತೇವೆ ಮತ್ತು ಅವರ ಅವಶ್ಯಕತೆಯ ಎಲ್ಲಾ ಸಮಯದಲ್ಲೂ ನಾವು ಅವರಿಗೆ ಲಭ್ಯವಿರುತ್ತೇವೆ" ಎಂದು ಅವರು ಹೇಳಿದರು. "ಶಾಲೆಯಲ್ಲಿ ನಾವು ಮಾರ್ಗದರ್ಶನ ಮತ್ತು ಸಮಾಲೋಚನಾ ವ್ಯವಸ್ಥೆಯನ್ನು ಹೊಂದಿದ್ದೇವೆ, ಅಲ್ಲಿ ವಿದ್ಯಾರ್ಥಿಯು ಮಾರ್ಗದರ್ಶನ ಮತ್ತು ಸಮಾಲೋಚನಾದ ಗುರುವನ್ನು ಭೇಟಿ ಮಾಡಿ ಅವಳೊಂದಿಗೆ ತನ್ನ ಎಲ್ಲಾ ವಿಷಯಗಳನ್ನು ಹಾಗೂ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಏಕೆಂದರೆ ನೀವು ಮುಕ್ತ ಮತ್ತು ಹೆಚ್ಚು ಹೊಂದಿಕೊಳ್ಳುವ ಸ್ವಭಾವದವರಾಗಿದ್ದರೆ ನೀವು ಅವರನ್ನು ನಿಮ್ಮತ್ತ ಆಕರ್ಷಿಸುತ್ತೀರಿ."
"ಶಿಕ್ಷಕರಲ್ಲಿ," ಅವರು ಹೇಳಿದರು, "ನಾವು ಪ್ರತಿ ಸೋಮವಾರ ಸಭೆಗಳನ್ನು ನಡೆಸುತ್ತೇವೆ, ಅಲ್ಲಿ ನಾವು ಕುಳಿತು ಒಬ್ಬರನ್ನೊಬ್ಬರು ಆಲಿಸುತ್ತೇವೆ ಮತ್ತು ಆ ಸವಾಲುಗಳನ್ನು ಎದುರಿಸುವ ಪರಿಹಾರಗಳ ಬಗ್ಗೆ ಚರ್ಚಿಸುತ್ತೇವೆ."
ಸಿಸ್ಟರ್.ಅಡೆಜೊರವರ ಪ್ರಕಾರ, ಈ ವಿಧಾನಗಳು ತಮ್ಮ ಧರ್ಮಪ್ರಚಾರ ಮತ್ತು ಯುವಕರ ಶಿಕ್ಷಣದಲ್ಲಿ ಬೆಳವಣಿಗೆಗೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತವೆ ಎಂದು ಹೇಳಿದರು.
ಶಿಕ್ಷಣದ ಧ್ಯೇಯ
ಶಾಲಾ ಕೆಲಸ ಮತ್ತು ಅಗಸ್ಟಿನಿಯನ್ ಸಿಸ್ಟರ್ಸ್ ಆಫ್ ದಿ ಮರ್ಸಿ ಆಫ್ ಜೀಸಸ್‌ನ (ಯೇಸುವಿನ ಕರುಣೆಯ ಸಂತ ಅಗಸ್ತೀನಿಯರ ಕನ್ಯಾಸ್ತ್ರೀನಿಯರ ಸಭೆ) ಧ್ಯೇಯದ ನಡುವಿನ ಸಂಪರ್ಕದ ಕುರಿತು ಮಾತನಾಡಿದ ಸಿಸ್ಟರ್.ಅಡೆಜೊರವರು, ಸಂತ ಅಗಸ್ತೀನರ ಸಹೋದರಿಯರಾಗಿ ಶಾಲಾ ಕೆಲಸವು, ನಮ್ಮ ಸಭೆಯ ಧ್ಯೇಯದ ತಿರುಳಾಗಿದೆ ಎಂದು ಹೇಳಿದರು, ಏಕೆಂದರೆ ಇದು ಯುವತಿಯರನ್ನು ಕ್ರಿಸ್ತರೆಡೆಗೆ ಕೊಂಡೊಯ್ಯುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.
"ನಾವು ಸಂತ ಅಗಸ್ತೀನರ ಸಹೋದರಿಯರಾಗಿ, ಇದು ನಮ್ಮ ಧ್ಯೇಯಕ್ಕೆ ಅಪಾರ ಕೊಡುಗೆ ನೀಡಿದೆ, ಏಕೆಂದರೆ ಒಂದು ರೀತಿಯಲ್ಲಿ, ನಾವು ಕ್ರಿಸ್ತರನ್ನು ಅವರ ಬಳಿಗೆ ಕರೆದೊಯ್ಯುತ್ತೇವೆ ನಂತರ ಅವರನ್ನು ಕ್ರಿಸ್ತನ ಬಳಿಗೆ ತರುತ್ತೇವೆ" ಎಂದು ಅವರು ವಿವರಿಸಿದರು.
ಸಮುದಾಯದಲ್ಲಿ ಸಿನೊಡಲಿಟಿ
ಸಿನೊಡಲಿಟಿ, ಸಿಸ್ಟರ್. ಅಡೆಜೊರವರು, ಸಮುದಾಯ ಜೀವನದಲ್ಲಿ ನಮಗೆ ಸಹಾಯಕವಾಗಿದೆ, ಏಕೆಂದರೆ ಇದು ಪ್ರತಿಯೊಬ್ಬರಿಗೂ, ಪರಸ್ಪರ ತಮ್ಮ ಹೃದಯದ ಮಾತುಗಳನ್ನು ಕೇಳಲು ಮತ್ತು ಅಂತಹ ಅನುಭವಗಳ ಫಲವನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.
"ಸಂತ ಅಗಸ್ತೀನರ ಸಹೋದರಿಯರಾಗಿ, ನಾವು ನಮ್ಮ ಹೆಚ್ಚಿನ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತೇವೆ, ಸಹೋದರಿಯರಾಗಿ ನಮ್ಮನ್ನು ಒಂದುಗೂಡಿಸುವ ಸಾಮಾನ್ಯ ವಿಷಯಗಳನ್ನು ಹಂಚಿಕೊಳ್ಳಲು ಇದು ನಮಗೆ ಹೆಚ್ಚಿನ ದ್ವಾರಗಳನ್ನು ತೆರೆಯುತ್ತದೆ" ಎಂದು ಅವರು ಹೇಳಿದರು. "ನಾವು ಪವಿತ್ರ ಸಂಸ್ಕಾರದಲ್ಲಿ ಯೇಸುವನ್ನು ಆರಾಧಿಸಲು ಪ್ರಾರ್ಥನಾ ಮಂದಿರದಲ್ಲಿ ಕುಳಿತುಕೊಳ್ಳುತ್ತೇವೆ ಮತ್ತು ನಂತರ ನಾವು ಹೊರಬಂದಾಗ, ಒಂದು ಸಮುದಾಯವಾಗಿ ನಮ್ಮಲ್ಲಿ ಪ್ರತಿಯೊಬ್ಬರನ್ನು ಸ್ಪರ್ಶಿಸುವ ವಿಷಯಗಳನ್ನು ಹಂಚಿಕೊಳ್ಳುತ್ತೇವೆ."
ಮೌನ ಪ್ರಾರ್ಥನೆಯ ಫಲಗಳು ಸೇವೆಯಲ್ಲಿ ಬಹಿರಂಗಗೊಳ್ಳುತ್ತವೆ
ಕಲ್ಕತ್ತಾದ ಮದರ್ ತೆರೇಸಾರವರು ಒಮ್ಮೆ "ಮೌನದ ಫಲ-ಪ್ರಾರ್ಥನೆ, ಪ್ರಾರ್ಥನೆಯ ಫಲ-ವಿಶ್ವಾಸ, ವಿಶ್ವಾಸದ ಫಲ -ಪ್ರೀತಿ, ಪ್ರೀತಿಯ ಫಲ –ಸೇವೆ ಮತ್ತು ಸೇವೆಯ ಫಲ - ಶಾಂತಿ" ಎಂದು ಹೇಳಿದರು.
ಸಿಸ್ಟರ್.ಅಡೆಜೊರವರು ಈ ಅನುಭವವನ್ನು ಯೇಸುವಿನ ಕರುಣೆಯ ಸಂತ ಅಗಸ್ತೀನರ ಸಹೋದರಿಯರು ಈ ಅನುಭವವನ್ನು ಹಂಚಿಕೊಳ್ಳುತ್ತಾರೆ ಎಂದು ವಿವರಿಸಿದರು, ಸಿನೊಡಲ್ ಜೀವನವು ಸಮುದಾಯದ ಹೊರಗಿನ ಇತರರೊಂದಿಗೆ ಹಂಚಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಗಮನಿಸಿದರು.